ಹಾವೇರಿ: ಬೆಳಗಾವಿಯ ಶಿವಂ ಅಸೋಶಿಯೇಟ್ಸ್ ಹಗರಣದ ಮಾದರಿಯಲ್ಲೇ ಹಾವೇರಿಯಲ್ಲೂ ಭಾರೀ ವಂಚನೆ ನಡೆದಿರುವ ಆರೋಪ ಕೇಳಿಬಂದಿದೆ. ಸ್ವಯಂ ಉದ್ಯೋಗ ಹಾಗೂ ಮನೆಯಲ್ಲೇ ಕೆಲಸ ಮಾಡಿ ಆದಾಯ ಗಳಿಸುವ ಭರವಸೆ ನೀಡಿ ಸಾವಿರಾರು ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಕಂಪನಿ ಮಾಲೀಕರು ನಾಪತ್ತೆಯಾಗಿದ್ದಾರೆ ಎಂದು ನೊಂದವರು ಆರೋಪಿಸಿದ್ದಾರೆ. ಹಾವೇರಿ ನಗರದ ಅಶ್ವಿನಿ ನಗರದಲ್ಲಿರುವ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್ ಸಂಸ್ಥೆಯ ವಿರುದ್ಧ ಈ ಆರೋಪ ಕೇಳಿಬಂದಿದೆ. ಕಂಪನಿಯ ಪ್ರಮುಖರಾದ ವಿನಾಯಕ …
Read More »ಬಂಧನ ಮಗಳು ವೆನ್ನೆಲಾಳನ್ನು ಕೊಂದು ಓಡುತ್ತಿದ್ದ ಪಾಪಿ ತಾಯಿ ಪ್ರಿಯಾಂಕ ಕೊನೆಗೂ ಸಕಲೇಶಪುರದಲ್ಲಿ ಅರೆಸ್ಟ್!
ಬೆಂಗಳೂರು: ರಾಜಧಾನಿಯ ಕಾಡುಗೋಡಿಯಲ್ಲಿ ಸ್ವಂತ ಮಗಳು ವೆನ್ನೆಲಾಳನ್ನು ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕಲ್ಲೆದೆಯ ತಾಯಿ ಪ್ರಿಯಾಂಕಳನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದ ಈಕೆಯನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suwarna News) ವರದಿ ಮಾಡಿದೆ. ಮಾರ್ಚ್ ತಿಂಗಳಲ್ಲೇ ನಡೆದಿದ್ದ ಈ ಘೋರ ಹತ್ಯೆ ತಡವಾಗಿ ಬೆಳಕಿಗೆ ಬಂದಿದ್ದು, ಇಡೀ ರಾಜ್ಯವನ್ನೇ …
Read More »ಶಾಕಿಂಗ್ ರೇಡ್: ಇಂಜಿನಿಯರ್ ಮನೆಯಲ್ಲಿ ₹200 ಕೋಟಿ ಅಕ್ರಮ ಆಸ್ತಿ ಪತ್ತೆ! ಜನಸಾಮಾನ್ಯರ ರಕ್ತ ಹೀರುವ ಭ್ರಷ್ಟ ‘ರಾಜ’ನ ಕಥೆ ಇದು!
ಸರ್ಕಾರಿ ಕೆಲಸ ಅಂದರೆ ಸಾಕು, ಅದು ಕೆಲವರಿಗೆ ಅಕ್ಷಯ ಪಾತ್ರೆ ಇದ್ದಂತೆ ಆಗಿಬಿಟ್ಟಿದೆ! ಹೈದರಾಬಾದ್‌ನ ಆರ್ ಅಂಡ್ ಬಿ (R&B) ಇಂಜಿನಿಯರ್-ಇನ್-ಚೀಫ್ ಮೋಹನ್ ನಾಯಕ್ ಅವರ ಮನೆಯ ಮೇಲೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳು ನಡೆಸಿರುವ ದಾಳಿ ಈಗ ಇಡೀ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ನೋಟುಗಳು, ಚಿನ್ನದ ರಾಶಿ ಪತ್ತೆಯಾಗಿದ್ದು, ಇವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ ₹200 ಕೋಟಿಗೂ ಅಧಿಕ …
Read More »ಚಿಕ್ಕೋಡಿಯಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ದಾಳಿ
ಚಿಕ್ಕೋಡಿಯಲ್ಲಿ ರೌಡಿಶೀಟರ್‌ಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುತಿಸಲ್ಪಟ್ಟ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. DySP ಅವರ ಮಾರ್ಗದರ್ಶನದಲ್ಲಿ ಸಿಪಿಐ, ನೇತೃತ್ವದಲ್ಲಿ ಪಿಎಸ್‌ಐ, ಹಾಗೂ ಪೊಲೀಸ್ ಸಿಬ್ಬಂದಿಇಂದ ಈ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 7 ರೌಡಿಶೀಟರ್‌ಗಳ ಮನೆಗಳಿಗೆ ಭೇಟಿ ನೀಡಿ ಅವರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಹೊಂದಿರುವ ರೌಡಿಶೀಟರ್‌ಗಳ ಮೇಲೆ ನಿಗಾ …
Read More »ಜೂನ್ ತಿಂಗಳಲ್ಲಿ ಸಾಲು ಸಾಲು ಖಗೋಳ ವಿಸ್ಮಯ: ಆಗಸದಲ್ಲಿ ಮೂಡಲಿದೆ ಕೌತುಕ!
ಬೆಂಗಳೂರು: ಖಗೋಳ ಆಸಕ್ತರಿಗೆ ಹಾಗೂ ಸಾರ್ವಜನಿಕರಿಗೆ ಜೂನ್ ತಿಂಗಳು ವಿಶೇಷ ರಸದೌತಣ ನೀಡಲು ಸಜ್ಜಾಗಿದೆ. ಈ ತಿಂಗಳಲ್ಲಿ ಬ್ಯಾಕ್-ಟು-ಬ್ಯಾಕ್ ಎಂಬಂತೆ ಸಾಲು ಸಾಲು ಖಗೋಳ ವಿಸ್ಮಯಗಳು ಜರುಗಲಿದ್ದು, ಆಕಾಶದಲ್ಲಿ ಅಪರೂಪದ ಕೌತುಕಗಳು ಸೃಷ್ಟಿಯಾಗಲಿವೆ. ವಿಶೇಷವೆಂದರೆ, ಈ ಅದ್ಭುತ ವಿದ್ಯಮಾನಗಳನ್ನು ಯಾವುದೇ ವಿಶೇಷ ಉಪಕರಣಗಳಿಲ್ಲದೆ ಬರಿಗಣ್ಣಿನಿಂದಲೇ ವೀಕ್ಷಿಸಿ ಕಣ್ತುಂಬಿಕೊಳ್ಳಬಹುದು. ಇತ್ತೀಚೆಗಷ್ಟೇ ನಡೆದ ‘ಗುರು-ಶುಕ್ರ ಸಂಯೋಗ’ದ ಅಪರೂಪದ ಘಟನೆ ಜನರಲ್ಲಿ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರೋಮಾಂಚಕ ವಿದ್ಯಮಾನಗಳು ಸಂಭವಿಸಲಿವೆ. ಜೂನ್ …
Read More »ತಾಯಿಗೆ ಮಗಳ ಅಶ್ಲೀಲ ಫೋಟೋ ಕಳಿಸಿ ಬ್ಲ್ಯಾಕ್‌ಮೇಲ್ – ಆರೋಪಿ ಅರೆಸ್ಟ್
ಚಿಕ್ಕಮಗಳೂರು: ತರಿಕೆರೆ ತಾಲೂಕಿನ ಲಕ್ಕವಳ್ಳಿ ಮೂಲದ ಮಹಿಳೆಗೆ ಆಕೆಯ ಮಗಳ ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಯೋಗೀಶ್ ಬಂಧಿತ ಆರೋಪಿ. ಈತ 25 ವರ್ಷದ ಯುವತಿಯ ಅಶ್ಲೀಲ ಫೋಟೋವನ್ನು ಆಕೆಯ ತಾಯಿಗೆ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಲ್ಲದೇ ಹಣ ಕೊಡದಿದ್ರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ರಾತ್ರಿ ವೇಳೆ ಫೋನ್ ಮಾಡಿ ಹಣ ಕೊಡುವಂತೆ ಆರೋಪಿ …
Read More »ನನ್ನ, ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಇಲ್ಲ: ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಂಗಳೂರು: ಸಿದ್ದರಾಮಯ್ಯ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ನನ್ನ, ಸಿದ್ದರಾಮಯ್ಯ ನಡುವಿನ ಸಂಬಂಧದ ಬಗ್ಗೆ ಚರ್ಚೆ ಅನವಶ್ಯಕ. ಅವರ, ನನ್ನ ಸಂಬಂಧ ಹಾಳಾಗಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ನಡುವೆ ಭಿನ್ನಮತ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಾನೂ ಹೇಳಿದ್ದೇನೆ. ನಮ್ಮ ನಡುವೆ ಗೊಂದಲವೇ ಇಲ್ಲ. ಕೆಲವು ಐಟಿ ಸೆಲ್‌ನವರು ಸ್ವಲ್ಪ ಹೆಚ್ಚಿನ ಪ್ರಚಾರ ಮಾಡಿದರು. ನಮಗೆ ಗೊತ್ತಿರುವ …
Read More »ಬೆಂಗಳೂರಲ್ಲಿ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು
ಬೆಂಗಳೂರು: ಇಲ್ಲಿನ ಗೊರಗುಂಟೆಪಾಳ್ಯದ ಟಿಎಂಟಿ ಜಂಕ್ಷನ್ ಬಳಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಗ್ಯಾಸ್ ಸಿಲಿಂಡರ್ ತುಂಬಿದ್ದ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿದ್ದ ಓರ್ವ ಮಹಿಳೆ, ಪುರುಷ ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಯಶವಂತಪುರ ಸಂಚಾರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
Read More »ದುಡ್ಡು ಕೊಟ್ರೆ SSLC, PUC, ಡಿಗ್ರಿ ಮಾರ್ಕ್ಸ್ ಕಾರ್ಡ್ ರೆಡಿ – ಬೆಂಗಳೂರಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ!
ಬೆಂಗಳೂರು: ಓದದೇ ಇದ್ದರೂ ಪದವಿ ಕೊಡಿಸುವುದಾಗಿ ನಂಬಿಸಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನ ಬೆಂಗಳೂರು ಸಿಸಿಬಿ ಪೊಲೀಸರು ಪತ್ತೆಮಾಡಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ತೆರೆದು ನಕಲಿ ಅಂಕಪಟ್ಟಿಗಳನ್ನ ಸಿದ್ಧಪಡಿಸುತ್ತಿದ್ದ ಪ್ರಮುಖ ಆರೋಪಿ ರಾಜಾರೆಡ್ಡಿ ಎಂಬಾತನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ದಂಧೆಯ ಪ್ರಮುಖ ಸೂತ್ರಧಾರ ಎನ್ನಲಾದ ಆರ್ಯನ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ರಾಜಾರೆಡ್ಡಿ ಕೋರಮಂಗಲದಲ್ಲಿ ‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ʼ ಹೆಸರಿನಲ್ಲಿ …
Read More »ಹಲ್ಲಿ ಬಿದ್ದ ಸಾಂಬಾರ್ ಸೇವನೆ – 15 ವಿದ್ಯಾರ್ಥಿನಿಯರು ಅಸ್ವಸ್ಥ
ಹಾಸನ: ಹಲ್ಲಿ ಬಿದ್ದ ಸಾಂಬಾರ್‌ನಲ್ಲಿ ಊಟ ಸೇವನೆ ಮಾಡಿದ 15 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಹಾಸನ ತಾಲೂಕಿನ, ಸಾರಾಪುರದಲ್ಲಿರುವ ಕೃಷಿ ವಿಜ್ಞಾನ ಕಾಲೇಜಿನಲ್ಲಿ ನಡೆದಿದೆ. ಬುಧವಾರ ರಾತ್ರಿ ಊಟ ಮಾಡುವಾಗ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆಯಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಆರು ವಿದ್ಯಾರ್ಥಿಗಳಿಗೆ ಹಾಸನದ ಹಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಲಿಂಡರ್ ಕೊರತೆಯಿಂದ ಹೊರಗೆ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿರುವುದರಿಂದ ಅಚಾತುರ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಸುಮಾರು 400 ವಿದ್ಯಾರ್ಥಿನಿಯರು ಇರುವ ಹಾಸ್ಟಲ್‌ಗೆ ಸಿಲಿಂಡರ್ …
Read More »
Laxmi News 24×7