Breaking News
Home / Uncategorized / ಜಗದೀಶ್ ಶೆಟ್ಟರ್ ಬೆನ್ನಿಗೆ ನಿಂತ ‘ವೀರಶೈವ ಲಿಂಗಾಯತ ಮಹಾಸಭಾ’: ಬಿಜೆಪಿಗೆ ಬುದ್ಧಿ ಕಲಿಸುವ ಖಡಕ್ ಎಚ್ಚರಿಕೆ

ಜಗದೀಶ್ ಶೆಟ್ಟರ್ ಬೆನ್ನಿಗೆ ನಿಂತ ‘ವೀರಶೈವ ಲಿಂಗಾಯತ ಮಹಾಸಭಾ’: ಬಿಜೆಪಿಗೆ ಬುದ್ಧಿ ಕಲಿಸುವ ಖಡಕ್ ಎಚ್ಚರಿಕೆ

Spread the love

ಹುಬ್ಬಳ್ಳಿ, ಮಾರ್ಚ್ 18: ಎರಡು ಕ್ಷೇತ್ರಗಳ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಇದೀಗ ಬೆಳಗಾವಿ ಟಿಕೆಟ್ ಪಡೆಯಲು ಪರದಾಡುತ್ತಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಬೆನ್ನಿಗೆ ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ’ ನಿಂತಿದೆ. ಜೊತೆಗೆ ಟಿಕೆಟ್ ವಿಚಾರವಾಗಿ ಬಿಜೆಪಿಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಿಧಾನಸಭೆಯಲ್ಲಿ ಅವರಿಗೆ ಟಿಕೆಟ್ ತಪ್ಪಿಸಲು ಮುಂದಾಗಿದ್ದ ಕಾಣದ ಕೈಗಳು ಈ ಭಾರಿಯು ಕೆಲಸ ಮಾಡುತ್ತಿವೆ ಎನ್ನಲಾಗಿದೆ. ಉತ್ತರ ಕರ್ನಾಟಕದ ಲಿಂಗಾಯತ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಪರ ಹುಬ್ಬಳ್ಳಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧ್ವನಿ ಎತ್ತಿದೆ. ಶೆಟ್ಟರ್ ಅವರಿಗೆ ಲೋಕಸಭಾ ಟಿಕೆಟ್ ತಪ್ಪಿಸುವ ಕುತಂತ್ರ ನಡೆದಿದೆ. ಒಂದು ವೇಳೆ ಬೆಳಗಾವಿ ಕ್ಷೇತ್ರದ ಟಿಕೆಟ್ ತಪ್ಪಿದ್ದೇ ಆದರೇ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಮಹಾಸಭಾದ ಉಪಾಧ್ಯಕ್ಷ ಪ್ರೋ.ವಿ.ಸಿ.ಸವಡಿ ಅವರು ಎಚ್ಚರಿಕೆ ನೀಡಿದರು.ಬೆಳಗಾವಿ ಭಿನ್ನಮತ ಸ್ಪೋಟ? ಟಿಕೆಟ್ ಕೈ ತಪ್ಪುವ ಭೀತಿಯಲ್ಲಿ ಜಗದೀಶ್ ಶೆಟ್ಟರ್ ದೆಹಲಿಗೆ ದೌಡುಬೆಳಗಾವಿ ಟಿಕೆಟ್ ತಪ್ಪಿಸಲು ಕುತಂತ್ರಸೋಮವಾರ ಈ ಕುರಿತು ಮಹಾಸಭಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.

ಈ ಹಿಂದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸುವ ಹುನ್ನಾರ ನಡೆಯಿತು. ಧಾರವಾಡ, ಹಾವೇರಿ ಲೋಕಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಎರಡೂ ಕ್ಷೇತ್ರಗಳಲ್ಲೂ ಅವರಿಗೆ ಟಿಕೆಟ್ ನೀಡಲಿಲ್ಲ ಎಂದರು.ಈಗ ಅವರ ಹೆಸರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆದ್ರೆ ಶೆಟ್ಟರ್‌ಗೆ ಆಗದ ಕೆಲವರು ಕುತಂತ್ರ ಮಾಡಿ ವ್ಯವಸ್ಥಿತವಾಗಿ ಅವರಿಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆದಿದೆ.

ಬಿಜೆಪಿ ವರಿಷ್ಠರು ಅವರ ಕುತಂತ್ರಕ್ಕೆ ಒಳಗಾದಗೆ ಶೆಟ್ಟರ್‌ಗೆ ಟಿಕೆಟ್ ನೀಡಬೇಕು. ಚುನಾವಣೆಯಲ್ಲಿ ಮಹಾಸಭಾ ಬುದ್ಧಿ ಕಲಿಸುವ ಎಚ್ಚರಿಕೆಒಂದು ವೇಳೆ ಟಿಕೆಟ್ ನೀಡದೆ ಹೋದಲ್ಲಿ ಮಹಾಸಭಾ ವತಿಯಿಂದ ಬೀದಿಗಿಳಿದು ಉಗ್ರವಾದ ಹೋರಾಟ ಮಾಡಲಾಗುವುದು. ಅಲ್ಲದೇ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸಲಾಗುವುದು ಎಂದು ಅವರು ಎಚ್ಚರಿಕೆ ಸಂದೇಶ ಕೇಸರಿಪಡೆಗೆ ರವಾನಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರಾದ ಶೇಖರ ಕವಳಿ, ರಾಜಶೇಖರ ಉಪ್ಪಿನ, ಪರಮೇಶ್ವರ ನಿಗದಿ ಮತ್ತಿತರರು ಪಾಲ್ಗೊಂಡಿದ್ದರು.DV Sadanand Gowda: ಕೈತಪ್ಪಿದ ಟಿಕೆಟ್, ಬಿಜೆಪಿ ಬಿಟ್ಟು ‘ಕೈ’ ಹಿಡಿತಾರಾ ಮಾಜಿ ಸಿಎಂ: ನಾಳೆ ನಿರ್ಧಾರಅಧಿಕೃತ ಘೋಷಣೆ ಬಾಕಿ: ಶೆಟ್ಟರ್ ಸ್ಪರ್ಧೆಗೆ ಅಪಸ್ವರಹಾವೇರಿ, ಧಾರವಾಡ ಕ್ಷೇತ್ರದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಜಗದೀಶ್ ಶೆಟ್ಟರ್, ರಾಜ್ಯ ಮತ್ತು ರಾಷ್ಟ್ರ ನಾಯಕರ ಮನವೊಲಿಸಿ ಬೆಳಗಾವಿ ಟಿಕೆಟ್ ನೀಡಲು ಒಪ್ಪಿಗೆ ಪಡೆಯುವಲ್ಲಿ ಸಫಲರಾಗಿದ್ದರು. ಆದರೆ ಇನ್ನೂ ಟಿಕೆಟ್ ಅಧಿಕೃತ ಘೋಷಣೆ ಆಗಿಲ್ಲ.

ಅದಕ್ಕು ಮೊದಲೇ ಬೆಳಗಾವಿಯಲ್ಲಿ ಶೆಟ್ಟರ್ ಸ್ಪರ್ಧೆಗೆ ವಿರೋಧ ಕೇಳಿ ಬಂದಿದೆ. ಬಿಎಲ್ ಸಂತೋಷ್ ಬಣದ ಕೆಲ ಸ್ಥಳೀಯ ನಾಯಕರು ಟಿಕೆಟ್ ತಪ್ಪಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಶೆಟ್ಟರ್ ಬೆನ್ನಿಗೆ ವೀರಶೈವ ಮಹಾಸಭಾ ನಿಂತಿದೆ. 


Spread the love

About Laxminews 24x7

Check Also

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Spread the love ಬೀದರ್: ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ