Breaking News

ರಾಜ್ಯದ ಬಿಜೆಪಿ ಸಂಸದರು ಶೋಕೇಸ್‌ ಪೀಸ್‌ಗಳು: ಲಕ್ಷ್ಮಣ ಸವದಿ

Spread the love

ಅಥಣಿ: ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕುವುದು, ಸಂಸತ್‌ನಲ್ಲಿ ಟೇಬಲ್‌ ಕುಟ್ಟುವುದು ಹಾಗೂ ಮೋದಿ ಮೋದಿ ಎಂದು ಹೇಳುವುದನ್ನು ಬಿಟ್ಟರೆ ಬೇರ್ಯಾವ ಕೆಲಸವನ್ನೂ ಮಾಡಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಬರೀ ಶೋಕೇಸ್‌ ಪೀಸ್‌ ಆಗಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.

 

ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಷಯ ನಾನು ಹೇಳಿದ್ದಲ್ಲ. ಬಿಜೆಪಿ ಸಂಸದರೊಬ್ಬರು ಹಾಗೆಯೇ ಕೂಡಿದಾಗ ಇದನ್ನು ನನ್ನ ಮುಂದೆ ಪ್ರಸ್ತಾವಿಸಿದ್ದಾರೆ. ಯಾವೊಬ್ಬ ಸಂಸದನೂ ಮೋದಿ ಮುಂದೆ ತಲೆ ಎತ್ತಿ ಮಾತನಾಡದೆ ಕೋಲೆ ಬಸವನಂತೆ ಆಗಿದ್ದಾರೆ. ಸಂಸದರು ತಮ್ಮ ಕ್ಷೇತ್ರಕ್ಕೆ ಬೇಕಾಗುವ ಅನುದಾನ ತರದೇ ಒದ್ದಾಡು ಪರಿಸ್ಥಿತಿ ಬಿಜೆಪಿಯಲ್ಲೂ ಇದೆ ಎಂದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನ್ನ ಮಗ ಚಿದಾನಂದ ಸವದಿಯಾಗಲಿ, ನಾನಾಗಲಿ ಸ್ಪರ್ಧಿಸುವುದಿಲ್ಲ. ನಾವಿಬ್ಬರೂ ಟಿಕೆಟ್‌ ಆಕಾಂಕ್ಷಿಗಳಲ್ಲ ಎಂದು ಕಾಂಗ್ರೆಸ್‌ ಮುಖಂಡರಿಗೆ ಸ್ಪಷ್ಟಪಡಿಸಿದ್ದೇನೆ. ಕಾಂಗ್ರೆಸ್‌ ಟಿಕೆಟ್‌ ಪಡೆದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ. ರಾಜ್ಯ ಸರಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದರು.


Spread the love

About Laxminews 24x7

Check Also

ಸಾಗರ | ಬ್ರೇಕ್‌ ಫೇಲ್‌ ಆಗಿ ಮನೆ ಮೇಲೆ ಬಿದ್ದ ಪ್ರವಾಸಿ ಬಸ್ – 8 ಮಹಿಳೆಯರಿಗೆ ಗಾಯ

Spread the loveಶಿವಮೊಗ್ಗ: ಪ್ರವಾಸಕ್ಕೆ ಬಂದಿದ್ದ ಬಸ್ ಬ್ರೇಕ್‌ ಫೇಲ್‌ ಆಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಸಾಗರ  ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ