Breaking News

Uncategorized

ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ – ಪತಿ, ಮಾವ ಪೊಲೀಸರ ವಶಕ್ಕೆ

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾನಗರ  ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿ ಬಳಿ ನಡೆದಿದೆ. ಪ್ರೇರಣ ಮೃತ ಗೃಹಿಣಿ. ಕಳೆದ ಒಂದು ವರ್ಷದ ಹಿಂದಷ್ಟೇ ವಿನಯ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಪತಿ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದು, ಪ್ರೇರಣ ಸದ್ಯ ಬಿಎಸ್ಸಿ ಪದವಿ ಓದುತ್ತಿದ್ದರು ಎಂದು ತಿಳಿದುಬಂದಿದೆ. ದೂಪನಹಳ್ಳಿ ಬಳಿಯಲ್ಲಿ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ …

Read More »

ಕೂಲಿ ವಿಚಾರಕ್ಕೆ ಗಲಾಟೆ, ಮಾಲೀಕನಿಂದ ಫೈರಿಂಗ್‌ – ಮಗುವಿನ ತಲೆಗೆ ಹೊಕ್ಕ ಗುಂಡು

ಚಿಕ್ಕಮಗಳೂರು: ಕೂಲಿ ವಿಚಾರವಾಗಿ ನಡೆದ ಗಲಾಟೆ ವೇಳೆ ಕಾರ್ಮಿಕರನ್ನು ಹೆದರಿಸಲು ಮಾಲೀಕ ಹಾರಿಸಿದ ಗುಂಡು  ಮಗುವಿನ ತಲೆಗೆ ಹೊಕ್ಕು ಗಂಭೀರವಾಗಿ ಗಾಯಗೊಂಡ ಘಟನೆ ಮೂಡಿಗೆರೆ  ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಗದೀಶ್ ಗೌಡ ಗುಂಡು ಹಾರಿಸಿದ ತೋಟದ ಮಾಲೀಕ. ಈತನ ಮನೆಗೆ ಅಸ್ಸಾಂ ಮೂಲದ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಕಾರ್ಮಿಕರು 400 ರೂ. ಕೂಲಿ ಕೇಳಿದ್ದರು. ಆದರೆ ಜಗದೀಶ್‌ ಗೌಡ ಈಗ 350 ರೂ. ಕೊಡ್ತೀನಿ, ಆಮೇಲೆ 50 ರೂ. …

Read More »

ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ – ಬೆಲ್ಟ್‌, ಬಡಿಗೆಯಿಂದ ಹೊಡೆದಾಡಿಕೊಂಡ ಯುವಕರು

ಬೆಳಗಾವಿ: ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ ಎಂದು ಎರಡು ಗ್ರಾಮದ ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಸವದತ್ತಿ ತಾಲೂಕಿನ ಜಕ್ಕಬಾಳದಲ್ಲಿ ನಡೆದಿದೆ. ಬಸ್ ಚಲಿಸುತ್ತಿದ್ದ ವೇಳೆಯೇ ಜಕ್ಕಬಾಳ ಹಾಗೂ ಬಸರಗಿ ಗ್ರಾಮದ ಯುವಕರ ನಡುವೆ ಗಲಾಟೆ ಆರಂಭವಾಗಿತ್ತು. ಬಳಿಕ ಗಲಾಟೆ ತೀವ್ರವಾಗಿ ಬಸ್‌ ನಿಲ್ಲಿಸಲಾಗಿದೆ. ಈ ವೇಳೆ ಬೆಲ್ಟ್, ಕಲ್ಲು, ಕಟ್ಟಿಗೆಯಿಂದ ಯುವಕರು ಹೊಡೆದಾಡಿಕೊಂಡಿದ್ದಾರೆ. ಪೊಲೀಸರಿಗೆ, ವಾಯುವ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಂದಿಲ್ಲ ಎಂದು …

Read More »

ನಾಳೆ ಮಧ್ಯಾಹ್ನ ಸಿಜೆಪಿಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ: ಜೆಪಿ ನಡ್ಡಾ

ನವದೆಹಲಿ: ನಾಳೆ ಮಧ್ಯಾಹ್ನ ಮತ್ತೆ ಕಾಕ್ರೋಚ್‌ ಜನತಾ ಪಾರ್ಟಿ ನಿಯೋಗವನ್ನು ಭೇಟಿ ಮಾಡಿ ಸರ್ಕಾರದ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಕೇಂದ್ರ ಸಚಿವ ಜೆಪಿ ನಡ್ಡಾ  ತಿಳಿಸಿದ್ದಾರೆ ಸಚಿವ ಜೀತೇಂದ್ರ ಸಿಂಗ್‌ ಅವರೊಂದಿಗೆ ದೆಹಲಿಯ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನಲ್ಲಿ ಸಿಜೆಪಿಯ ಮುಖ್ಯ ವಕ್ತಾರ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರೊಂದಿಗೆ ಎರಡನೇ ಸುತ್ತಿನ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಸುಮಾರು 2 ಗಂಟೆಗಳ ಕಾಲ ಸಭೆ …

Read More »

ಮೋದಿ ಸರ್ಕಾರದಿಂದ ಕಠಿಣಾತಿಕಠಿಣ ಕಾನೂನು – ಪ್ರಶ್ನೆಪತ್ರಿಕೆ ಲೀಕಾಸುರರಿಗೆ 10 ವರ್ಷ ಜೈಲು, 10 ಕೋಟಿವರೆಗೆ ದಂಡ

ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿಯುತ್ತಿರುವ ನಡುವೆಯೇ, ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ  ಕಠಿಣಾತಿಕಠಿಣ ಕಾನೂನು ತರಲು ಸಜ್ಜಾಗಿದೆ. ಈ ಪ್ರಸ್ತಾವಿತ ಕಾನೂನಿನ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನ ಮೂರು ತಿಂಗಳೊಳಗೆ ಇತ್ಯರ್ಥಗೊಳಿಸುವ ವಿಶೇಷ ನ್ಯಾಯಾಂಗ ವ್ಯವಸ್ಥೆಯನ್ನು (ಫಾಸ್ಟ್‌ ಟ್ರ್ಯಾಕ್‌ ಕೋರ್ಟ್ ವ್ಯವಸ್ಥೆ – Fast Track Courts) ಜಾರಿಗೆ ತರುವ ಹಾಗೂ 10 ಕೋಟಿ ರೂ.ವರೆಗೆ ದಂಡ ವಿಧಿಸುವ ಉದ್ದೇಶವಿದೆ. ಇದರ …

Read More »

ಕ್ಯಾಂಟರ್, ಬೈಕ್ ಮಧ್ಯೆ ಭೀಕರ ಅಪಘಾತ – ದೇವಾಲಯಕ್ಕೆ ತೆರಳುತ್ತಿದ್ದ ಇಬ್ಬರು ಸ್ನೇಹಿತರು ದುರ್ಮರಣ

ಕೋಲಾರ: ಕ್ಯಾಂಟರ್  ವಾಹನ ಹಾಗೂ ರಾಯಲ್ ಎನ್‌ಫೀಲ್ಡ್  ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ದೇವಾಲಯಕ್ಕೆ ತೆರಳುತ್ತಿದ್ದ ಇಬ್ಬರು ಸ್ನೇಹಿತರು  ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗೇಟ್ ಸಮೀಪ ನಡೆದಿದೆ. ಚಿಂತಾಮಣಿ ತಿಮ್ಮಸಂದ್ರದ ಶಶಿ (25), ಬೆಂಗಳೂರು ನೆಲಮಂಗಲದ ತನುಷ್ (25) ಮೃತ ಸ್ನೇಹಿತರು. ಬೆಳ್ಳಂ ಬೆಳಗ್ಗೆ ಕಾಣಿಪಾಕಂ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಎನ್‌ಫೀಲ್ಡ್‌ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶ್ರೀನಿವಾಸಪುರ ಪೊಲೀಸ್ …

Read More »

ದೇಶದಲ್ಲಿ ಮುಂಗಾರು ಮಳೆ ಜೋರು – ಅಲ್ಲಲ್ಲಿ ಅವಾಂತರ ಸೃಷ್ಟಿ, ಜನಜೀವನ ಅಸ್ತವ್ಯಸ್ತ

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಜೋರಾಗಿದ್ದು, ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿವೆ. ಮಹಾರಾಷ್ಟ್ರದ ನಾಸಿಕ್, ಪಾಲ್‌ಗಡಗಳಲ್ಲಿ ಭಾರಿ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಗುಜರಾತ್‌ನ ವಲ್ಸಾದ್ ಜಿಲ್ಲೆಯ ಉಮರ್ ಗಾಂವ್ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 43 ಇಂಚು ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದ 11 ಜಿಲ್ಲೆಗಳು ಹಾನಿಗೊಳಗಾಗಿದೆ. 6.53 ಲಕ್ಷ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 10 ಜನರು ಸಾವನ್ನಪ್ಪಿದ್ದು, ಆ …

Read More »

ಆ್ಯಸಿಡ್ ದಾಳಿ ಆಗದೆ ಹೋಗಿದ್ರೆ ಅಮ್ಮನಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ – ತಾಯಿ ನೆನೆದು ಬಿಕ್ಕಳಿಸಿ ಅತ್ತ ರೇವಣ್ಣ

ಹಾಸನ: 2001ರಲ್ಲಿ ಆ್ಯಸಿಡ್ ದಾಳಿ ಆಗದೆ ಹೋಗಿದ್ದರೆ ಅಮ್ಮನಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ ಎಂದು ಅಂದಿನ ಘಟನೆ ನೆನೆದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ. ತಾಯಿ ಅಗಲಿದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಅಮ್ಮನನ್ನು ನೆನೆದು ಬಿಕ್ಕಳಿಸಿ ಅತ್ತಿದ್ದಾರೆ. 2001ರಲ್ಲಿ ಆ್ಯಸಿಡ್ ದಾಳಿ ಆಗದೆ ಹೋಗಿದ್ದರೆ ಅಮ್ಮನಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ. ರೇವಣ್ಣನನ್ನ ಮುಗಿಸಲೇಬೇಕು ಎಂದು ಸಂಚು ರೂಪಿಸಿದ್ದರು. ಅಂದು ನಾನು ಇದ್ದಿದ್ದರೆ …

Read More »

ಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿಯಲ್ಲಿ 200 ಎಕರೆ ಸೆಮಿಕಂಡಕ್ಟರ್ ಪಾರ್ಕ್ ಆರಂಭ: ಎಂ.ಬಿ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿರುವ 2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ ಸಮರ ಸಾಧನಗಳು, ಎಂಬೆಡೆಡ್ ತಂತ್ರಾಂಶ, ಇ-ವಿಟಾಲ್ ಸಾಧನಗಳು, ಬಾಹ್ಯಾಕಾಶ ಕ್ಷೇತ್ರದಲ್ಲಿ ಬಳಸಲಾಗುವ ಪೇಲೋಡ್ ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮಗ್ರ ಕ್ಲಸ್ಟರುಗಳನ್ನು ಅಭಿವೃದ್ಧಿಪಡಿಸಲು ಒತ್ತು ಕೊಡಲಾಗಿದೆ. ಜೊತೆಗೆ ಈ ವರ್ಷದ ಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿ ಹಂತ-1ರಲ್ಲಿ 200 ಎಕರೆ ವಿಸ್ತಾರದ ಸೆಮಿಕಂಡಕ್ಟರ್ ಪಾರ್ಕ್ ಕಾರ್ಯಾಚರಣೆ ಆರಂಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ …

Read More »

ಗ್ಯಾಸ್‌ ಸೋರಿಕೆಯಾಗಿ ಹೊತ್ತಿ ಉರಿದ ಅಂಗಡಿ – ಬೆಂಕಿ ನಂದಿಸಲು ಹರಸಾಹಸ

ಆನೆಕಲ್‌: ಗ್ಯಾಸ್ ಸೋರಿಕೆಯಾಗಿ ಹಾಸಿಗೆ ಗೋಡೌನ್ ಹೊತ್ತಿ ಉರಿದ  ಘಟನೆ ಬನ್ನೇರುಘಟ್ಟ  ಸಮೀಪದ ದೊಡ್ಡಕಮ್ಮಮಹಳ್ಳಿಯಲ್ಲಿ ನಡೆದಿದೆ. ಕಟ್ಟಡದ ಕೆಳಮಹಡಿಯಲ್ಲಿ ಹಾಸಿಗೆ ಅಂಗಡಿ ಮಾಡಿಕೊಳ್ಳಲಾಗಿತ್ತು. ಮೇಲಿನ ಮಹಡಿಯಲ್ಲಿ ಗೋಡೌನ್ ಮಾಡಿಕೊಳ್ಳಲಾಗಿತ್ತು. ಕೆಲಸಗಾರರಿಗೆ ಅಡುಗೆ ಮಾಡಿಕೊಳ್ಳಲು ಅಲ್ಲಿಯೇ ಸಿಲಿಂಡರ್ ಇಡಲಾಗಿತ್ತು. ಈ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪರದಾಡಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕೆಲಸಗಾರರು ಹೊರಗೆ ಓಡಿ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಹುಳಿಮಾವು …

Read More »