Breaking News
Home / Uncategorized (page 40)

Uncategorized

ರೈತರು ದೇವರ ಸಮಾನ,ರೈತರ ಹಣ ತಿಂದ್ರೆ ಪ್ಯಾರಾಲಿಸಿಸ್‌ ಬರುತ್ತೆ : ಲಕ್ಷ್ಮಣ ಸವದಿ

    ಬೆಳಗಾವಿ : ರೈತರು ದೇವರ ಸಮಾನ. ಶಿವಸ್ವರೂಪಿಗಳು ಅವರ ಹಣ ತಿಂದ್ರೆ ಪ್ಯಾರಾಲಿಸಿಸ್‌ ಬರುತ್ತೆ ಅಂತ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ ಮಾತನಾಡಿರುವ ಶಾಸಕ ಲಕ್ಷ್ಮಣ ಸವದಿ ರೈತರು ದೇವರ ಸಮಾನ. ಶಿವಸ್ವರೂಪಿಗಳು ಅವರ ಹಣ ತಿಂದ್ರೆ ಪ್ಯಾರಲಿಸಿಸ್‌ ಬರುತ್ತೆ. ರೈತರ ಹಣ ತಿಂದ ಮಾಲಿಕರು ಉದ್ದಾರ ಆಗಲ್ಲ. ಅನ್ನದಾತರಿಗೆ ಮೋಸ ಮಾಡಬೇಡಿ ಎಂದಿದ್ದಾರೆ. ನಿಯಮ 69 ರ ಅಡಿಯಲ್ಲಿ …

Read More »

ಗುಡ್ಡಾಪುರ ದಾನಮ್ಮದೇವಿ ಜಾತ್ರೆ: ಪಾದಯಾತ್ರೆ ಮೂಲಕ ದೇವಿಯ ದರ್ಶನಕ್ಕೆ ತೆರಳುತ್ತಿರುವ ಭಕ್ತರು

ವಿಜಯಪುರ: ಕರ್ನಾಟಕದ ಗಡಿಗೆ ಸಮೀಪವಿರುವ ಗುಡ್ಡಾಪುರದಲ್ಲಿ ಶ್ರೀ ದಾನಮ್ಮದೇವಿಯ ಜಾತ್ರಾ ಮಹೋತ್ಸವದ ಕಳೆಗಟ್ಟಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಪಾದಯಾತ್ರೆ ಮೂಲಕ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ.   ಬೆಳಗಿನ ಜಾವದಿಂದಲೇ ವಿಜಯಪುರ ನಗರದ ದರ್ಗಾ ಕ್ರಾಸ್‌ ರಸ್ತೆ ಮೂಲಕ ಮತ್ತು ತಿಕೋಟಾ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಗುಡ್ಡಾಪುರಕ್ಕೆ ತೆರಳುತ್ತಿರುವುದು ಕಂಡುಬಂದಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೇ ದಾನಮ್ಮ ದೇವಿ ನಾಮಸ್ಮರಣೆ ಮಾಡುತ್ತ ಗುಡ್ಡಾಪುರದತ್ತ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ. …

Read More »

ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ; ಶಬರಿಗಿರಿ ದರ್ಶನದ ಸಮಯ ಒಂದು ಗಂಟೆ ವಿಸ್ತರಣೆ

(ಕೇರಳ) : ತಿರುವಾಂಕೂರು ದೇವಸ್ಥಾನಂ ಮಂಡಳಿ ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ ನೀಡಿದೆ. ಶಬರಿಗಿರಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದರ್ಶನ ಸಮಯವನ್ನು ಇನ್ನೂ ಒಂದು ಗಂಟೆ ಕಾಲ ವಿಸ್ತರಿಸಲಾಗಿದೆ. ಪ್ರತಿದಿನ ಸಂಜೆ 4 ರಿಂದ ರಾತ್ರಿ 11ರ ವರೆಗೆ ಭಕ್ತರು ದೇಗುಲಕ್ಕೆ ಭೇಟಿ ನೀಡುವ ಸಮಯವಾಗಿತ್ತು. ಆದ್ರೆ ಈಗ ಮಧ್ಯಾಹ್ನ 3 ರಿಂದ ದೇಗುಲಕ್ಕೆ ಭೇಟಿ ನೀಡಬಹುದು ಎಂದು ಅವರು ಹೇಳಿದರು. ದರ್ಶನಕ್ಕಾಗಿ ಸರತಿ …

Read More »

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಡಿಸೆಂಬರ್​ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

ಚಿಕ್ಕೋಡಿ (ಬೆಳಗಾವಿ) : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಹಿಂದಿನ ಸರ್ಕಾರ ನಮಗೆ 2ಡಿ ಮೀಸಲಾತಿ ಘೋಷಣೆ ಮಾಡಲಾಗಿತ್ತು. ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಜೊತೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಮಾಜದ ಮುಖಂಡರ ಸಭೆ ಕರೆದು ತೀರ್ಮಾನ ಮಾಡುತ್ತೇವೆ ಎಂದು ಮಾತು ಕೊಟ್ಟು ತಪ್ಪಿದ್ದಾರೆ. ಈ ಸಂಬಂಧ ಸರ್ಕಾರವನ್ನು ಎಚ್ಚರಿಸಲು ಡಿಸೆಂಬರ್​ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು …

Read More »

ಕಿತ್ತೂರು ಅರಮನೆ ಕೋಟೆ ಅಭಿವೃದ್ಧಿ ಅಕ್ಟೋಬರ್‌ನೊಳಗೆ ಮುಗಿಯಬೇಕು

ಬೆಳಗಾವಿ: ಕಿತ್ತೂರು ಅರಮನೆ ಹಾಗೂ ಕೋಟೆ ಅಭಿವೃದ್ಧಿಯನ್ನು ಅಕ್ಟೋಬರ್ 2024ರ ಕಾಲಮಿತಿಯೊಳಗೆ ಮುಗಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಿತ್ತೂರ ಐತಿಹಾಸಿಕ ವಿಜಯಕ್ಕೆ 200 ವರ್ಷ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಸೇನೆ ಮೊದಲ ಗೆಲುವು ಸಾಧಿಸಿದ್ದ ಐತಿಹಾಸಿಕ ವಿಜಯಕ್ಕೆ ಅಕ್ಟೋಬರ್‌ಗೆ 200 …

Read More »

ಗೌರಿ ಲಂಕೇಶ್ ಕೊಲೆ ಪ್ರಕರಣ 11 ನೇ ಆರೋಪಿ ಮೋಹನ್ ನಾಯಕ್​ಗೆ ಷರತ್ತುಬದ್ಧ ಜಾಮೀನು

ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಆರೋಪಕ್ಕೆ ಗುರಿಯಾಗಿರುವ ಎನ್. ಮೋಹನ್ ನಾಯಕ್ ಅಲಿಯಾಸ್ ಸಂಪಾಜೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇವರು ಇಡೀ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮೊದಲ ಆರೋಪಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಎನ್ ಮೋಹನ್ ನಾಯಕ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ …

Read More »

ಟಾಟಾ ಏಸ್ ​- ಲಾರಿ ನಡುವೆ ಭೀಕರ ಅಪಘಾತ: ನಾಲ್ವರು ಸಾವು, ಒಬ್ಬನಿಗೆ ಗಾಯ

ರಾಯಚೂರು: ಟಾಟಾ ಏಸ್​ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.   ಇಸ್ಮಾಯಿಲ್ ರಷೀದ್ (25), ರವಿ ರಾಜಪ್ಪ (20), ರಮೇಶ ನಿಂಗಪ್ಪ ಕಣೇಕಲ್ಲೂರು (28), ಅಂಬರೀಶ್​ ಸೂಗಪ್ಪ ಕಣೇಕಲ್ಲೂರು (28) ಮೃತದುರ್ದೈವಿಗಳು ಎಂದು ಗುರುತಿಸಲಾಗಿದೆ. ಸದ್ಯ ಮೃತ ದೇಹಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ …

Read More »

ತೃತೀಯ ಲಿಂಗಿಗಳು, ಮಾಜಿ ದೇವದಾಸಿಯರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾದ ಶ್ರೀ ಕೃಷ್ಣದೇವರಾಯ ವಿವಿ

ಬಳ್ಳಾರಿ: ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತೃತೀಯ ಲಿಂಗಿಗಳಿಗೆ ಹಾಗೂ ಮಾಜಿ ದೇವದಾಸಿಯರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಸಮಾಜದಲ್ಲಿ ತೃತೀಯ ಲಿಂಗಿಗಳು ಗೌರವದ ಜೀವನ ನಡೆಸಲು ಸರಿಯಾದ ಸೌಕರ್ಯ ಸಿಗುತ್ತಿಲ್ಲ, ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮನಗಂಡು ವಿಶ್ವವಿದ್ಯಾಲಯದ ಆಡಳಿತವರ್ಗ ಮುಂದಿನ ಶೈಕ್ಷಣಿಕ ವರ್ಷದಿಂದ ಅವರಿಗೆ ಉಚಿತ ಶಿಕ್ಷಣ ನೀಡಲು …

Read More »

ಧಾರವಾಡ ಜಿಲ್ಲೆಗೆ 50.298 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಮಂಜೂರು

ಧಾರವಾಡ: ಜಿಲ್ಲೆಯ 63,566 ಜನ ರೈತರಿಗೆ 50.298 ಕೋಟಿ ರೂ.ಗಳ ಮಧ್ಯಂತರ ವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗರುದತ್ತ ಹೆಗಡೆ ತಿಳಿಸಿದ್ದಾರೆ. 2023 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ ಧಾರವಾಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಆಲೂಗಡ್ಡೆ ಬೆಳೆಗಳಡಿ ನೋಂದಾಯಿಸಿಕೊಂಡ ರೈತರಿಗೆ ಮಧ್ಯಂತರ ವಿಮೆ ಜಮಾವಣೆ ಪ್ರಾರಂಭವಾಗಿದೆ. ಅಳ್ನಾವರ ತಾಲೂಕಿನ 3,052 …

Read More »

ಕಾಂಗ್ರೆಸ್ ಪಕ್ಷ​ ಅಧಿಕಾರಕ್ಕೆ ಬಂದಾಗಲೆಲ್ಲ ಗೂಂಡಾ ಪ್ರವೃತ್ತಿ ತೋರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ

ಬೆಳಗಾವಿ: “ಕಾಂಗ್ರೆಸ್​ ಗೂಂಡಾ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ” ಎಂದು ವಿಪಕ್ಷ ನಾಯಕ ಆರ್​.ಅಶೋಕ್ ಆರೋಪಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಈ ಹಿಂದೆ 2013ರಿಂದ 2018ರವರೆಗೆ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಸುಮಾರು 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿತ್ತು” ಎಂದರು. ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ಆರ್​. …

Read More »