Breaking News
Home / Uncategorized (page 30)

Uncategorized

ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣ -ಚೈತ್ರಾ ಗ್ಯಾಂಗ್‌ ಮೇಲೆ ಜೈಲಿನಲ್ಲಿನ ಹಲ್ಲೆ!

ಬೆಂಗಳೂರು : ಬಿಜೆಪಿ (BJP) ಟಿಕೆಟ್ ನೀಡುವುದಾಗಿ ಆಮಿಷ ತೋರಿ ಕೋಟ್ಯಂತರ ರೂ. ವಂಚನೆ ನಡೆಸಿದ್ದ ಚೈತ್ರಾ (Chaitra) ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಆರೋಪಿಯ ಮೇಲೆ ಸಹಕೈದಿಗಳು ಹಲ್ಲೆ (Assault) ನಡೆಸಿದ್ದಾರೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಚನ್ನಾ ನಾಯ್ಕ್ (Chenna naik) ಮೇಲೆ ಸಹ ಕೈದಿಗಳು ಹಲ್ಲೆ ಮಾಡಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ (Parappana agrahara police station) ಪ್ರಕರಣ ದಾಖಲಾಗಿದೆ.   ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ …

Read More »

ನಕಲಿ ದಾಖಲೆ ಸೃಷ್ಟಿಸಿ 12 ಕೋಟಿ ರೂ. ಸಾಲ – ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಸಿಬಿಐ ಎಫ್‌ಐಆರ್‌

ಬೆಂಗಳೂರು : ನಕಲಿ ದಾಖಲೆಗಳನ್ನು ಸಲ್ಲಿಸಿ ಕೋಟ್ಯಾಂತರ ರೂ. ಸಾಲ (Bank loan) ಪಡೆದು ವಂಚಿಸಿರುವ ಆರೋಪದ ಮೇಲೆ ಮಾಜಿ ಸಂಸದ ಶಿವರಾಮೇಗೌಡ (L R Shivaramegowda) ವಿರುದ್ಧ ಸಿಬಿಐ (CBI) ಎಫ್‌ಐಆರ್‌ (FIR) ದಾಖಲಿಸಿಕೊಂಡಿದೆ. ಶಿವರಾಮೇಗೌಡರ ಪತ್ನಿ ಸೇರಿದಂತೆ ಏಳು ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.   ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (Punjab National bank) ನಿಂದ 12.48 ಕೋಟಿ ರೂ. ಸಾಲ ಪಡೆದಿದ್ದ ಶಿವರಾಮೇಗೌಡ ಮತ್ತು ಅವರ ಕುಟುಂಬ …

Read More »

ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್‌!

ಬೆಂಗಳೂರು: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ (ಡಿ. 4) ಅಧಿವೇಶನ (Belagavi Winter Session) ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ವಿಪಕ್ಷಗಳಿಂದ ನಿಲುವಳಿ ನೋಟಿಸ್ (Adjournment notice) ಜಾರಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಜಂಟಿ ನೋಟಿಸ್ ನೀಡಿದ್ದು, ಸದನದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ರಾಜ್ಯ ಸರ್ಕಾರದ (Congress Government) ವೈಫಲ್ಯ ಚರ್ಚಿಸಲು ಆಗ್ರಹಿಸಿವೆ.   ರಾಜ್ಯವು ಬರಗಾಲಕ್ಕೆ ತುತ್ತಾಗುವ ಸ್ಪಷ್ಟ ಸೂಚನೆ ಇದ್ದರೂ ಬರ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾಗಿದ್ದ ಮುಂಜಾಗ್ರತೆ …

Read More »

ಸಿ.ಪಿ.ಯೋಗೇಶ್ವರ್ ಭಾವ ನಾಪತ್ತೆ ಕೇಸ್: ಹನೂರಿನ ರಾಮಪುರದಲ್ಲಿ ಕಾರು ಪತ್ತೆ

ಚಾಮರಾಜನಗರ: ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದ ತೋಟದ ಮನೆಯಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಸಂಬಂಧಿಯ ಕಾರು ಹನೂರು ತಾಲೂಕಿನ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ದೊರೆತಿದೆ. ಯೋಗೇಶ್ವರ್ ಅವರ ಭಾವ ಚಕ್ಕರೆ ಗ್ರಾಮದ ಮಹದೇವಯ್ಯ ಮೂರು ದಿನಗಳ ಹಿಂದೆ ಬಿಳಿ ಬಣ್ಣದ ಬ್ರಿಜಾ ಕಾರುಸಮೇತ (KA-42 N0012) ಕಾಣೆಯಾಗಿದ್ದರು. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ …

Read More »

2024ರ ಲೋಕಸಭೆಯ ಹ್ಯಾಟ್ರಿಕ್ ಗೆಲುವಿಗೆ ಗ್ಯಾರಂಟಿ ಸಿಕ್ಕಿದೆ : ಪ್ರಧಾನಿ ಮೋದಿ ವಿಶ್ವಾಸ

ನವದೆಹಲಿ : ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದರು. ಬಳಿಕ ಚುನಾವಣಾ ಫಲಿತಾಂಶ ಮತ್ತು ಇದಕ್ಕಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭೆ ಚುನಾವಣೆಯ ಗೆಲುವು ಐತಿಹಾಸಿಕ ಮತ್ತು ಅಭೂತಪೂರ್ವ ಗೆಲುವು. ಸಬ್ಕಾ ಸಾಥ್​ ಸಬ್ಕಾ ವಿಕಾಸ್​ ಎಂಬ ಭಾವನೆ ಇಂದು ಗೆದ್ದಿದೆ. ಈ ಗೆಲುವು ಸ್ವಾವಲಂಬಿ …

Read More »

ಛಲವಿದ್ದರೆ ಏನೆಲ್ಲ ಸಾಧಿಸಬಹುದು’ ಎನ್ನುವುದಕ್ಕೆ ಮೂಡಲಗಿ ರೈತ ಹೊನ್ನಪ್ಪ ಸಾವಳಗೆಪ್ಪ ಬೂದಿಹಾಳ ಮಾದರಿ

ಮೂಡಲಗಿ: ‘ಮನಸ್ಸಿದ್ದರೆ ಏನೆಲ್ಲ ಮಾಡಬಹುದು, ಛಲವಿದ್ದರೆ ಏನೆಲ್ಲ ಸಾಧಿಸಬಹುದು’ ಎನ್ನುವುದಕ್ಕೆ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಯುವ ರೈತ ಹೊನ್ನಪ್ಪ ಸಾವಳಗೆಪ್ಪ ಬೂದಿಹಾಳ ಮಾದರಿಯಾಗಿದ್ದಾರೆ. 2008ರಲ್ಲಿ ಬಿಎ ಪದವಿ ಮುಗಿಸಿ ನೌಕರಿ ದೊರೆಯದಿದ್ದಾಗ ಒಂದೇ ಆಕಳು ಸಾಕಿ ಹೈನುಗಾರಿಕೆ ಆರಂಭಿಸಿ ಹೊನ್ನಪ್ಪ ಅವರ ಹೊಲದಲ್ಲಿ ಇಂದು 20ಕ್ಕೂ ಅಧಿಕ ಎಚ್‌ಎಫ್‌ ತಳಿಯ ಹಸುಗಳು ಇವೆ. ಪ್ರತಿ ದಿನ ಬೆಳಿಗ್ಗೆ 100 ಲೀಟರ್‌, ಸಂಜೆ 100 ಲೀಟರ್‌ ಹೀಗೆ ನಿತ್ಯ 200 …

Read More »

ಸಾರಾಯಿ ಬಾಟಲಿಗಳಿಂದ ಕೂಡಿದ ಕಡಬಗಟ್ಟಿ ರಸ್ತೆ ?ಕಿಡಿಗೇಡಿಗಳ ಕೆಲಸಕ್ಕೆ ಬೆಸತ್ತ ವಾಯುವಿಹಾರಕ್ಕೆ ಬರುವ ವೃದ್ದರು..! ಕಣ್ಮುಚ್ಚಿ ಕುಳಿತ ಅರಣ್ಯ ಅಧಿಕಾರಿಗಳು?

ಸಾರಾಯಿ ಬಾಟಲಿಗಳಿಂದ ಕೂಡಿದ ಕಡಬಗಟ್ಟಿ ರಸ್ತೆ ?ಕಿಡಿಗೇಡಿಗಳ ಕೆಲಸಕ್ಕೆ ಬೆಸತ್ತ ವಾಯುವಿಹಾರಕ್ಕೆ ಬರುವ ವೃದ್ದರು..! ಕಣ್ಮುಚ್ಚಿ ಕುಳಿತ ಅರಣ್ಯ ಅಧಿಕಾರಿಗಳು? ಗೋಕಾಕ: ನಗರದ ಕಡಬಗಟ್ಟಿ ರಸ್ತೆಯಲ್ಲಿ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದ್ದು ರಸ್ತೆಯಲ್ಲಿ ಭಾಗಶಃ ರಾಶಿ ಸಾರಾಯಿ ಬಾಟಲಿ ಮತ್ತು ಕಸದಿಂದ ತುಂಬಿ ತುಳುಕುತ್ತಿದೆ.   ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕಾದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ಅರಣ್ಯ ಪ್ರದೇಶ ಮದ್ಯದ ಬಾಟಲಿಗಳಿಂದ ತುಂಬಿ ತುಳಕುತ್ತಿದೆ. ಇದರಿಂದ ವಾಯುವಿಹಾರಕ್ಕೆ ಹೋಗುವ ಜನರಿಗೆ ಸಾಕಷ್ಟು …

Read More »

ರಿಸಲ್ಟ್​ ಬಳಿಕ ತೆಲಂಗಾಣ ಕಾಂಗ್ರೆಸ್​ ಶಾಸಕರು ಬೆಂಗ್ಳೂರಿಗೆ ಸ್ಥಳಾಂತರ ಸಾಧ್ಯತೆ! ಡಿಸಿಎಂ ಡಿಕೆಶಿ

ಹೈದರಾಬಾದ್: ತೆಲಂಗಾಣದಲ್ಲಿ ನಿನ್ನೆಯಷ್ಟೇ (ನ.30) ಮತದಾನ ಮುಕ್ತಾಯವಾಗಿದ್ದು, ಈ ಬಾರಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸುಳಿವನ್ನು ವಿವಿಧ ಮತಗಟ್ಟೆಗಳ ಸಮೀಕ್ಷೆ ತಿಳಿಸಿವೆ. ಆಡಳಿತಾರೂಢ ಬಿಆರ್​ಎಸ್​ ಮತ್ತು ಕಾಂಗ್ರೆಸ್​ ನಡುವೆ ಪ್ರಬಲ ಪೈಪೋಟಿ ಇದ್ದು, ಕುದುರೆ ವ್ಯಾಪಾರ ಸಂಭವವನ್ನು ತಡೆಗಟ್ಟಲು ಡಿ.3ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತೆಲಂಗಾಣದ ಕಾಂಗ್ರೆಸ್​ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವತ್ತ ಕಾಂಗ್ರೆಸ್​ ಹೈಕಮಾಂಡ್​ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.   ತೆಲಂಗಾಣ ಕಾಂಗ್ರೆಸ್​ ಘಟಕದ ಮುಖ್ಯಸ್ಥ ರೇವಂತ್​ ರೆಡ್ಡಿ …

Read More »

ಸಿಲಿಂಡರ್ ಬೆಲೆಯಲ್ಲಿ 21 ರೂ.ಹೆಚ್ಚಳ

ನವದೆಹಲಿ : ಪಂಚ ರಾಜ್ಯಗಳ ಚುನಾವಣೆ ಮುಗಿದ ಕೂಡಲೇ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳು ದುಬಾರಿಯಾಗಿವೆ. ಡಿಸೆಂಬರ್ 1, 2023 ರಿಂದ 19 ಕೆಜಿ ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 21 ರೂ. ಹೆಚ್ಚಳ ಮಾಡಲಾಗಿದೆ. ಇಂದು 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯ ನ್ನು 21 ರೂ.ಗೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ, 19 ಕೆಜಿ ಎಲ್ಪಿಜಿ ಸಿಲಿಂಡರ್ 1775.50 ರೂ.ಗಳ ಬದಲು 1796.50 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ, ಇದು 1885.50 …

Read More »

ಸುವರ್ಣ ವಿಧಾನಸೌಧದ ಅಂದ ಹೆಚ್ಚಿಸಲಿವೆ ಚನ್ನಮ್ಮ, ರಾಯಣ್ಣ, ಅಂಬೇಡ್ಕರ್ ಪ್ರತಿಮೆಗಳು!

ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಶುರುವಾಗಿದ್ದು, ಸುವರ್ಣ ವಿಧಾನಸೌಧದ ಮುಂದೆ ತಲೆ ಎತ್ತಿರುವ ಮೂರು ಮಹನೀಯರ ಪ್ರತಿಮೆಗಳ ಸೌಂದರ್ಯೀಕರಣ ಕಾಮಗಾರಿ ಭರದಿಂದ ಸಾಗಿದೆ.   ಹೌದು ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕ‌ರ್ ಅವರ ಪ್ರತಿಮೆಗಳನ್ನು ಈ ಹಿಂದಿನ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ತರಾತುರಿಯಲ್ಲಿ ನಿಲ್ಲಿಸಿ ಲೋಕಾರ್ಪಣೆಗೊಳಿಸಿತ್ತು. ಪ್ರತಿಮೆಗಳ ಸುತ್ತಲೂ ಯಾವುದೇ ರೀತಿ ರಕ್ಷಣಾ ಗೋಡೆ, ಹುಲ್ಲುಹಾಸು, ಬೆಳಕಿನ ವ್ಯವಸ್ಥೆ …

Read More »