Breaking News

Uncategorized

ಮಕ್ಕಳಿಂದ ಅಪ್ಪ ಅಮ್ಮನ ಪಾದಪೂಜೆ

ಶಿವಮೊಗ್ಗ: ತಂದೆ – ತಾಯಿ ಪ್ರತ್ಯಕ್ಷ ದೇವರು. ಹೆತ್ತವರ ಮೇಲೆ ಮಕ್ಕಳಿಗೆ ಗೌರವದ ಜೊತೆಗೆ ಪ್ರೀತಿ ಬಾಂಧವ್ಯ ಬೆಸೆಯುವ ದೃಷ್ಟಿಯಿಂದ ಅನುಪಿನಕಟ್ಟೆಯ ರಾಮಕೃಷ್ಣ ವಸತಿ ಶಾಲೆಯಲ್ಲಿ ಮಕ್ಕಳಿಂದ ಹೆತ್ತವರಿಗೆ ಪಾದಪೂಜೆಯನ್ನು ಮಾಡಿಸುವ ಪದ್ಧತಿ ರೂಢಿಯಲ್ಲಿದೆ. ತಮ್ಮ‌ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂದು ಪೋಷಕರು ಮಕ್ಕಳನ್ನು ವಸತಿ ಶಾಲೆಗೆ ದಾಖಲಿಸುತ್ತಾರೆ. ಇದರಿಂದ ಮಕ್ಕಳ ಹಾಗೂ ಪೋಷಕರ ನಡುವೆ ಬಿರುಕು ಬರಬಾರದು ಹಾಗೂ ಪೋಷಕರ ಮೇಲಿನ ಪ್ರೀತಿ ಹಾಗೆ ಮುಂದುವರೆಯಬೇಕೆಂದು ರಾಮಕೃಷ್ಣ ವಸತಿ ಶಾಲೆಯಲ್ಲಿ ಪ್ರತಿ …

Read More »

ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಆಯ್ಕೆ

ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಆಯ್ಕೆ ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಆಯ್ಕೆ ಆರ್ಥಿಕ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಶಿವಲಿಂಗಪ್ರಭು ಹೂಗಾರ ಭರವಸೆ ಅಖಿಲ ಕರ್ನಾಟಕ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶಿವಲಿಂಗಪ್ರಭು ಹೂಗಾರ ಆಯ್ಕೆ ಮಾಡಲಾಗಿದೆ. ವಿಜಯಪುರ: ಇಲ್ಲಿನ ಹೋಟೆಲ್ …

Read More »

48 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮತ್ತು ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ.

ಬೆಂಗಳೂರು: ಹೊಸ ವರ್ಷದ ಮುನ್ನಾದಿನವೇ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರದ ಮಹತ್ವದ ಬದಲಾವಣೆ ಮಾಡಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 28 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದರೆ, 20 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶಿಸಿದೆ. ಐಜಿಪಿಯಾಗಿ ಮುಂಬಡ್ತಿ ಪಡೆದ ಅಧಿಕಾರಿಗಳು: ಡಾ.ಎಂ.ಬಿ.ಬೋರಲಿಂಗಯ್ಯ (ದಕ್ಷಿಣ ವಲಯ), ರಾಮ್‌ನಿವಾಸ್ ಸೆಪಟ್‌ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ಅನುಪಮಾ ಅಗರ್‌ವಾಲ್‌(ಸಿಆರ್‌ಪಿಎಫ್‌), ಅಜಯ್‌ ಹಿಲೋರಿ (ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು), ಡಾ.ರೋಹಿಣಿ …

Read More »

ತಡರಾತ್ರಿ ಸುಖಾಸುಮ್ಮನೆ ಓಡಾಡುತ್ತಿದ್ದ 200ಕ್ಕೂ ಅಧಿಕ ಮಂದಿಯನ್ನು ಹಿಡಿದು ವಾರ್ನ್ ಮಾಡಿದ ಸಿಸಿಬಿ

ಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಡರಾತ್ರಿ ಸುಖಾಸುಮ್ಮನೆ ಅಡ್ಡಾದಿಡ್ಡಿ ಓಡಾಡುವ ಯುವಕರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಆಪರೇಷನ್ ರೋಮಿಯೊ ಹೆಸರಿನಲ್ಲಿ 200ಕ್ಕೂ ಅಧಿಕ ಮಂದಿಯನ್ನು ಹಿಡಿದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ನಗರದ ನಾಗರೀಕರ ಸಂಭ್ರಮಕ್ಕೆ ಧಕ್ಕೆ ಉಂಟು ಮಾಡುವ ಹಾಗೂ ಅಡ್ಡಾದಿಡ್ಡಿ ಓಡಾಡುವ ಯುವಕರ ಮೇಲೆ ನಿಗಾವಹಿಸಲು ಮುಂದಾಗಿರುವ ಸಿಸಿಬಿ ಪೊಲೀಸರು, ಆಪರೇಷನ್ ರೋಮಿಯೋ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿದಿದ್ಧಾರೆ. ಸೋಮವಾರ ರಾತ್ರಿ …

Read More »

ರಾಯಬಾಗ ತಾಲೂಕಿನ 19 ಗ್ರಾಮಗಳ 39 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಾಯೋಗಿಕವಾಗಿ ಚಾಲನೆ

ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಕೈಗೊಳ್ಳಲಾದ, ರಾಯಬಾಗ ತಾಲೂಕಿನ 19 ಗ್ರಾಮಗಳ 39 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಾಯೋಗಿಕವಾಗಿ ಚಾಲನೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಹುಬ್ಬರವಾಡಿ, ಬೂದಿಹಾಳ, ಮೇಖಳಿ ಹಾಗೂ ಮಾಡಲಗಿ ಗ್ರಾಮಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಕೆರೆಗಳ ಪರಿಶೀಲನೆ ನಡೆಸಿದರು. ಬೇಸಿಗೆಯಲ್ಲಿ ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದ್ದ ರಾಯಬಾಗ ತಾಲೂಕಿನ 19 …

Read More »

ಬೆಳಗಾವಿಯ ಮೋದಗಾ ಗ್ರಾಮದಲ್ಲಿಯ ಸಾಂಪ್ರದಾಯಿಕ ಬೆಲ್ಲಕ್ಕೆ ವಿದೇಶಗಳಲ್ಲೂ ಭಾರಿ ಬೇಡಿಕೆ..!

ಬೆಳಗಾವಿಯ ಮೋದಗಾ ಗ್ರಾಮದಲ್ಲಿ ಅಪ್ಪಟ ನೈಸರ್ಗಿಕ ಬೆಲ್ಲದ ಘಮಲು ..! ಸಾಂಪ್ರದಾಯಿಕ ಬೆಲ್ಲಕ್ಕೆ ವಿದೇಶಗಳಲ್ಲೂ ಭಾರಿ ಬೇಡಿಕೆ..! ಮೋದಗಾದಲ್ಲಿ 45 ವರ್ಷದ ಬೆಲ್ಲದ ಪರಂಪರೆ ಜೀವಂತ ಅಮೆರಿಕ, ಇಂಗ್ಲೆಂಡ್’ಗೂ ತಲುಪುತ್ತಿದೆ ಮೋದಗಾ ಬೆಲ್ಲ ಯಾವುದೇ ರಾಸಾಯನಿಕವಿಲ್ಲದ ಅಪ್ಪಟ ನೈಸರ್ಗಿಕ ಬೆಲ್ಲ ಆರೋಗ್ಯ ವೃದ್ಧಿಸುವ ಬೆಲ್ಲಕ್ಕೆ ವಿದೇಶದಲ್ಲೂ ಬೇಡಿಕೆ ಆಧುನಿಕ ಯುಗದಲ್ಲಿ ಸಾಂಪ್ರದಾಯಿಕ ಆಲೆಮನೆಗಳು ಮಾಯವಾಗುತ್ತಿರುವ ಬೆನ್ನಲ್ಲೇ, ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದ ರೈತ ಶಿವಾಜಿ ಅಷ್ಟೇಕರ್ ಅವರು ತಮ್ಮ ಪೂರ್ವಜರ …

Read More »

ಹಂಪಿಯಲ್ಲಿ ಗುಡ್ಡ ಹತ್ತುವಾಗ ಜಾರಿಬಿದ್ದು ಗಾಯಗೊಂಡ ಫ್ರಾನ್ಸ್ ಪ್ರವಾಸಿ; 2 ದಿನಗಳ ಬಳಿಕ ರಕ್ಷಣೆ

ವಿಜಯನಗರ: ವಿಶ್ವವಿಖ್ಯಾತ ಹಂಪಿ ಪ್ರವಾಸಕ್ಕೆ ಆಗಮಿಸಿದ್ದ ವಿದೇಶಿ ಪ್ರವಾಸಿಗನೊಬ್ಬ ಗುಡ್ಡ ಏರಲು ತೆರಳಿ ಕಾಲು ಜಾರಿ ಬಿದ್ದು, ಗಾಯಗೊಂಡ ಘಟನೆ ಮಹಾನವಮಿ ದಿಬ್ಬ ಸಮೀಪ ಡಿ.24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫ್ರಾನ್ಸ್‌ನ ಬ್ರುನೊ ರೋಜರ್ (52) ಗಾಯಾಳು ಎಂದು ತಿಳಿದುಬಂದಿದೆ. ಬ್ರುನೊ ರೋಜರ್ ಅವರು ಮಹಾನವಮಿ ದಿಬ್ಬದ ಬಳಿಯ ಅಷ್ಟಭುಜ ಸ್ನಾನಗುಡ್ಡದ ಹಿಂಭಾಗಕ್ಕೆ ತೆರಳಿದ್ದಾರೆ. ಗುಡ್ಡ ಏರಲು ಮುಂದಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಕಾಲಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ …

Read More »

ಬೆಳಗಾವಿ ಜಿಲ್ಲೆಯ 1200 ಕ್ಕೂ ಹೆಚ್ಚು ಪಿಕೆಪಿಎಸ್ ಸಿಬ್ಬಂದಿ-ಕುಟುಂಬ ಸದಸ್ಯರಿಗೆ ವಿಮೆ:ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ

ಯಕ್ಸಂಬಾದಲ್ಲಿ ಅದ್ದೂರಿಯಾಗಿ ಪ್ರೇರಣಾ ಉತ್ಸವಕ್ಕೆ ಚಾಲನೆ ಚಿಕ್ಕೋಡಿ-“ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1200ಕ್ಕೂ ಹೆಚ್ಚು ಪಿಕೆಪಿಎಸ್‍ಗಳ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗೆ 2 ಲಕ್ಷ ರೂ. ಆರೋಗ್ಯ ವಿಮೆ, 10 ಲಕ್ಷ ರೂ. ಸಹಜ ಸಾವು ವಿಮೆ, 20 ಲಕ್ಷ ರೂ.ಅಪಘಾತ ವಿಮೆ ಮಾಡಿಸುವುದಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ಜೊಲ್ಲೆ …

Read More »

ಭಟ್ಕಳ ಸಿಪಿಐ, ಹೆಡ್ ಕಾನ್ಸ್​ಟೇಬಲ್ ಅಮಾನತು

ಕಾರವಾರ: ಕುಡಿದು ವಾಹನ ಚಲಾಯಿಸಿದ ಪ್ರಕರಣ, ಭ್ರಷ್ಟಾಚಾರ ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಹಾಗೂ ಹೆಡ್ ಕಾನ್ಸ್​ಟೇಬಲ್ ಅಶೋಕ ನಾಯ್ಕ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಆದೇಶ ಹೊರಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಅವರ ವಿರುದ್ಧ ‘ಡ್ರಿಂಕ್ ಆ್ಯಂಡ್ ಡ್ರೈವ್’ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ನಡೆದ ಪ್ರಾಥಮಿಕ …

Read More »

ಹುಬ್ಬಳ್ಳಿ ಗರ್ಭಿಣಿ ಕೊಲೆ ಪ್ರಕರಣ: ಕರ್ತವ್ಯಲೋಪದಡಿ ಇಬ್ಬರು ಪೊಲೀಸ್​ ಸಿಬ್ಬಂದಿ ಅಮಾನತು, ಸಂತ್ರಸ್ತ ಕುಟುಂಬ ಭೇಟಿ ಮಾಡಿದ ಡಿಸಿ, ಶಾಸಕರು

ಹುಬ್ಬಳ್ಳಿ: ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಅನ್ಯಜಾತಿ ಯುವಕನ ಮದುವೆಯಾಗಿದ್ದಕ್ಕೆ ಗರ್ಭಿಣಿ ಮೇಲೆ ಆಕೆಯ ತಂದೆ, ಕುಟುಂಬಸ್ಥರು ಹಲ್ಲೆಗೈದು, ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಠಾಣೆಯ ವಿಶೇಷ ವಿಭಾಗದ ಕಾನ್‌ಸ್ಟೇಬಲ್‌ ಸಂಗಮೇಶ ಸಾಗರ ಮತ್ತು ಬೀಟ್ ಕಾನ್‌ಸ್ಟೇಬಲ್‌ ಚಂದ್ರಕಾಂತ ರಾಥೋಡ ಅಮಾನತಾಗಿರುವ ಪೊಲೀಸ್​ ಸಿಬ್ಬಂದಿ. ಕೃತ್ಯದ ಕುರಿತು ಸರಿಯಾದ ಮಾಹಿತಿ ನೀಡದ ಕಾರಣ ಇಲಾಖೆಯ ಆಂತರಿಕ ತನಿಖೆ …

Read More »