Breaking News
Home / Uncategorized / ಪ್ರಧಾನಿ ಮೋದಿ ಸಮಾವೇಶಕ್ಕೆ 1 ಲಕ್ಷ ಜನರ ನಿರೀಕ್ಷೆ: ದತ್ತಾತ್ರೇಯ ಪಾಟೀಲ

ಪ್ರಧಾನಿ ಮೋದಿ ಸಮಾವೇಶಕ್ಕೆ 1 ಲಕ್ಷ ಜನರ ನಿರೀಕ್ಷೆ: ದತ್ತಾತ್ರೇಯ ಪಾಟೀಲ

Spread the love

ಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ 16ರಂದು ಮಧ್ಯಾಹ್ನ 12ಕ್ಕೆ ತೆಲಂಗಾಣದಿಂದ ಕಲಬುರಗಿಗೆ ಬರಲಿದ್ದು, ರಾಜ್ಯದಲ್ಲಿ ಮೊದಲ ಚುನಾವಣಾ ಸಮಾವೇಶವನ್ನು ನಡೆಸಲಿದ್ದಾರೆ. ಎನ್‌.ವಿ. ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಮಾವೇಶಕ್ಕೆ ಪಕ್ಷದ ವತಿಯಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ನಗರದ ಪೊಲೀಸ್ ಪರೇಡ್ ಮೈದಾನದಿಂದ ರೋಡ್ ಶೋ ಮೂಲಕ ಎನ್‌.ವಿ. ಮೈದಾನಕ್ಕೆ ಬರಲಿದ್ದಾರೆ. ನಂತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಅವರ ಸಮಾವೇಶದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದಿಂದ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದಾರೆ’ ಎಂದರು.

ಪ್ರಧಾನಿ ಮೋದಿ ಸಮಾವೇಶಕ್ಕೆ 1 ಲಕ್ಷ ಜನರ ನಿರೀಕ್ಷೆ: ದತ್ತಾತ್ರೇಯ ಪಾಟೀಲ

‘ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಆಡಳಿತವನ್ನು ನಡೆಸಿದ್ದು, ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಮೂರನೇ ಬಾರಿಗೆ ಅವರು ಪ್ರಧಾನಿಯಾಗುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.

ದಕ್ಷಿಣ ಮಂಡಲ ಅಧ್ಯಕ್ಷ ಶ್ರೀನಿವಾಸ ದೇಸಾಯಿ, ಶಿವಯೋಗಿ ನಾಗನಹಳ್ಳಿ, ಅರವಿಂದ ನವಲಿ, ನಾಗರಾಜ ಮಹಾಗಾಂವಕರ್, ಬಾಬುರಾವ ಹಾಗರಗುಂಡಗಿ ಗೋಷ್ಠಿಯಲ್ಲಿದ್ದರು.


Spread the love

About Laxminews 24x7

Check Also

ಹುಬ್ಬಳ್ಳಿ: ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಶ್ರೀನಯಾ ಸೇರ್ಪಡೆ

Spread the love ಹುಬ್ಬಳ್ಳಿ: ಇಲ್ಲಿನ ಬಾಲಕಿ ಶ್ರೀನಯಾ ಹೊಂಗಲ ಸಾಧನೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಿದೆ. 4 ರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ