Breaking News
Home / ರಾಜ್ಯ (page 957)

ರಾಜ್ಯ

ರಾಜ್ಯಸಭೆಗೆ ನಾಲ್ವರ ನೇಮಕ: ಏನಿದೆ ವಿಶೇಷ, ಏನೇನಕ್ಕೆ ಆದ್ಯತೆ?

ನವದೆಹಲಿ: ರಾಜ್ಯಸಭೆಗೆ ನಾಲ್ವರು ಖ್ಯಾತ ಗಣ್ಯವ್ಯಕ್ತಿಗಳನ್ನು ನೇಮಕ ಮಾಡಿರುವ ಆಡಳಿತಾರೂಢ ಬಿಜೆಪಿ ಈ ಮೂಲಕ ಬಹುತೇಕ ಭೇಷ್ ಎನಿಸಿಕೊಂಡಿದೆ. ಇದು ಕೂಡ ಅಚ್ಚರಿ ಮೂಡಿಸುವಂಥ ನೇಮಕವೇ ಆಗಿದ್ದರೂ, ಬಹುತೇಕ ಎಲ್ಲರೂ ಒಪ್ಪುವಂಥ ನೇಮಕವೂ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.   ದಕ್ಷಿಣ ಭಾರತಕ್ಕೇ ಆದ್ಯತೆ ಸಾಮಾನ್ಯವಾಗಿ ಕೇಂದ್ರ ಸರ್ಕಾರ ಉತ್ತರ ಭಾರತೀಯರಿಗೇ ಮಣೆ ಹಾಕುತ್ತದೆ, ದಕ್ಷಿಣ ಭಾರತವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪ ಅಲ್ಲಲ್ಲಿ ಕೇಳಿ ಬಂದಿದೆ. ಆದರೆ ಈ …

Read More »

ನಾನು ಯಾವತ್ತು ಯಾವುದರ ಹಿಂದೆಯೂ ಹೋದವನಲ್ಲ: ಡಾ.ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು: ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮನಿದೇರ್ಶನ ಮಾಡಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದ್ದಾರೆ. ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ನಮ್ಮ ಅನೇಕ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬಹುಶಃ ಇದು ವಿಸ್ತಾರವಾಗಿ ಇಡೀ ದೇಶಕ್ಕೆ ತಲುಪುವ ಸಾಧ್ಯತೆ ಇದೆ ಎಂದರು. ಕಸ್ಟಮರ್ಸ್ ಸರ್ವಿಸ್ ಸೆಂಟರ್ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಏಜೆನ್ಸಿ ಇದೆ. ಈಗಾಗಲೇ ನಾವು 6 ಸಾವಿರ …

Read More »

ಇಂದು ಪಂಜಾಬ್​ ಸಿಎಂ ಮದುವೆ: ವಧು ಗುರುಪ್ರೀತ್​ ಕೌರ್​ ವಯಸ್ಸೆಷ್ಟು? ಇಲ್ಲಿದೆ ಅವರ ಸಂಪೂರ್ಣ ಪರಿಚಯ​

ಚಂಡೀಗಢ: ಇಂದು ಪಂಜಾಬ್ ಜನರ​ ಪಾಲಿಗೆ ವಿಶೇಷ ದಿನ. ಏಕೆಂದರೆ, ಇಡೀ ರಾಜ್ಯವನ್ನು ಪ್ರತಿನಿಧಿಸುವ ಹಾಗೂ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರ ವಿವಾಹದ ದಿನ. ಅಂದಹಾಗೆ ಪಂಜಾಬ್​ ಸಿಎಂಗೆ ಇದು ಎರಡನೇ ಮದುವೆ. ಇಷ್ಟು ಕೇಳಿದ ಮೇಲೆ ನಿಮ್ಮ ಮನಸ್ಸಿನಲ್ಲಿ ವಧು ಯಾರು? ಮತ್ತು ವಧುವಿನ ವಯಸ್ಸೆಷ್ಟು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ನಿಮ್ಮ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರವನ್ನು ನಾವು ಕೊಡುತ್ತೇವೆ. ಹೀಗಾಗಿ ಓದುವುದನ್ನು ಮುಂದುವರಿಸಿ… 48 …

Read More »

ಶಿವಲಿಂಗೇಶ್ವರ್ ಸ್ವಾಮೀಜಿ ಅಪಘಾತಅದೃಷ್ಟವಶಾತ್​ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿ: ಬರ್ಬರವಾಗಿ ಹತ್ಯೆಯಾದ ಸರಳ ವಾಸ್ತು ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ತೆರಳಿದ್ದ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ್ ಸ್ವಾಮೀಜಿ ಕಾರು ಅಪಘಾತವಾಗಿದೆ. ಅದೃಷ್ಟವಶಾತ್​ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಶಿವಲಿಂಗೇಶ್ವರ್ ಸ್ವಾಮೀಜಿ ಅವರು,ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ಪ್ರಸಿದ್ಧ ದುರದುಂಡೇಶ್ವರ ಮಠದ ಸ್ವಾಮೀಜಿಯಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿಯೇ ಪ್ರಖ್ಯಾತಿ ಹೊಂದಿರುವ ಸಂಸ್ಥಾನ ಮಠವಿದು. ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ಹುಬ್ಬಳ್ಳಿಗೆ ವಾಪಸ್​ ಬರುವ ವೇಳೆ ತೇಗುರ ಕ್ರಾಸ್ ಬಳಿ ಸ್ವಾಮೀಜಿ ಕಾರು …

Read More »

ಆರ್ಡಿನರಿ ಇದ್ದ ಸರ್ಕಾರಿ ಆಸ್ಪತ್ರೆ ಯನ್ನಾ ಹಾಯ್ ಟೆಕ ಮಾಡಿದ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ..

ಬೆಳಗಾವಿ ಉತ್ತರ ಕ್ಷೇತ್ರ ಬದಲಾಗುತ್ತಿದೆ.ಒಂದು ಕಡೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಜನಪರ ಕೆಲಸಗಳು ಸದ್ದು ಮಾಡುತ್ತಿವೆ.ಇಲ್ಲಿನ ಶಾಸಕರಾದ ಅನಿಲ ಬೆನಕೆ ಅವರ ವಿಶೇಷ ಕಾಳಜಿಯಿಂದ ಬೆಳಗಾವಿ ಹೈಟೆಕ್ ಟಚ್ ಪಡೆದುಕೊಳ್ತಿದೆ.ಇದಕ್ಕೆ ಒಂದು ಉತ್ತಮ ಉದಾಹರಣೆ ಇಲ್ಲಿದೆ ನೋಡಿ… ಹೌದು..!! ನಿಜಕ್ಕೂ ಕುಂದಾನಗರಿ ಬದಲಾಗ್ತಿದೆ.ಇಲ್ಲಿನ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಟಾಪ್ ಸ್ಪೀಡ್ ನಲ್ಲಿ ಓಡುತ್ತಿದ್ದರೆ ಸರ್ಕಾರಿ ಸಂಸ್ಥೆಗಳು ಹೈಟೆಕ್ ಟಚ್ ಪಡೆದುಕೊಳ್ತಿವೆ.ಜನರಿಗೆ ಅತ್ಯಂತ ಮಹತ್ವವಾದ ಸೇವೆ ನೀಡುವ ಬೀಮ್ಸ್ …

Read More »

ಧಾರಾವಾಹಿ ನೋಡಿ ತಂದೆ ಮೇಲೆಯೇ ರೇಪ್​ ಕೇಸ್ ಹಾಕಿದ ಬಾಲಕಿ! 7 ವರ್ಷ ಜೈಲಲ್ಲಿದ್ದ ಅಪ್ಪನ ಕಣ್ಣೀರ ಕಥೆಯಿದು.

ಮುಂಬೈ: 10 ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುತ್ತದೆ ನಮ್ಮ ಕಾನೂನು. ಆದರೆ ಅದೇ ಇನ್ನೊಂದೆಡೆ, ಸುದೀರ್ಘ ವಿಚಾರಣೆಯಿಂದ ಒಬ್ಬ ಅಮಾಯಕ ನಿರಪರಾಧಿ ಎಂದು ಕೋರ್ಟ್​ ಹೇಳುವುದರೊಳಗೆ ಅದೆಷ್ಟೋ ವರ್ಷ ಜೈಲಿನಲ್ಲಿ ಕೊಳೆಯುವ ಸನ್ನಿವೇಶಗಳು ನಡೆಯುತ್ತವೆ. ಅಂಥದ್ದೇ ಘಟನೆ ಮುಂಬೈನಲ್ಲಿ ನಡೆದಿದೆ. ಮಗಳಿಂದಲೇ ಮೋಸ ಹೋಗಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿರುವ ಅಪ್ಪನ ಕಣ್ಣೀರ ಕಥೆಯಿದು! ವಿಪುಲ್ ನರ್ಕರ್ ಎಂಬ ವ್ಯಕ್ತಿ 28 ವರ್ಷ ವಯಸ್ಸಿನ ಯುವಕ …

Read More »

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸದ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಕಳೆದೆರಡು ಶೈಕ್ಷಣಿಕ ವರ್ಷಗಳಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದ ಸೈಕಲ್, ಶೂ ಮತ್ತು ಸಾಕ್ಸ್ ಗಳನ್ನು ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಿದೆಯಂತೆ. ಹಿಂದಿನ ವರ್ಷಗಳಲ್ಲಿ ಕೊರೊನಾ ಕಾರಣ ನೀಡಿದ್ದ ಸರ್ಕಾರ ಈ ವರ್ಷ 40% ಕಮಿಷನ್ ನಿಂದಾಗಿ ಖಾಲಿಯಾಗಿರುವ ಖಜಾನೆ ತೋರಿಸುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.   ‘ಒಂದೆಡೆ ರಾಜ್ಯಬಿಜೆಪಿ ಸರ್ಕಾರದ ಸಚಿವರು, ಆಡಳಿತ ಪಕ್ಷದ ನಾಯಕರು ಮತ್ತು ಅಧಿಕಾರಿಗಳ ದುಷ್ಟಕೂಟ ಕಮಿಷನ್ ದಂಧೆಯಲ್ಲಿ ತೊಡಗಿಕೊಂಡು ರಾಜ್ಯದ ಖಜಾನೆಯನ್ನು …

Read More »

ಕೇಂದ್ರ ಸರ್ಕಾರದಿಂದ ಬಡಜನತೆಗೆ ಬಿಗ್‌ ಶಾಕ್‌: ‘ಗರೀಬ್ ಕಲ್ಯಾಣ್’ ಅನ್ನ ಯೋಜನೆಗೆ ಬ್ರೇಕ್‌.!?

ನವದೆಹಲಿ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ಸೌಲಭ್ಯವನ್ನುವನ್ನು ಕೊರೊನಾ ಅವಧಿಯಲ್ಲಿ, ದೇಶದ ಬಡ ಕುಟುಂಬಗಳಿಗೆ ನೀಡಲಾಗುತಿತ್ತು. ಈ ಇದನ್ನು ಸೆಪ್ಟೆಂಬರ್ ನಂತರ ನಿಲ್ಲಿಸಬಹುದು ಎನ್ನಲಾಗಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿನ ವೆಚ್ಚಗಳ ಇಲಾಖೆ ಈ ಯೋಜನೆಯನ್ನು ಸೆಪ್ಟೆಂಬರ್ ನಂತರ ವಿಸ್ತರಿಸಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದೆ ಎನ್ನಲಾಗಿದೆ. ‘ಈ ಯೋಜನೆಯು ದೇಶದ ಮೇಲೆ ಆರ್ಥಿಕ ಹೊರೆಯನ್ನು ತುಂಬಾ ಹೆಚ್ಚಿಸುತ್ತಿದೆ. ಇದು ದೇಶದ ಆರ್ಥಿಕ …

Read More »

ಪಂಚಭೂತಗಳಲ್ಲಿ ಲೀನರಾದ ಚಂದ್ರಶೇಖರ್ ಗುರೂಜಿ: ಸುಳ್ಳಾ ಜಮೀನಿನಲ್ಲಿ ನೆರವೇರಿದ ಅಂತ್ಯಕ್ರಿಯೆ

ಆಪ್ತ ಸಹಾಯಕರಿಂದಲೇ ಬರ್ಬರವಾಗಿ ಹತ್ಯೆ ಆಗಿರುವ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮಣ್ಣಲ್ಲಿ ಮಣ್ಣಾಗಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳಾ ಗ್ರಾಮದ ಬಳಿಯ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ಅಣ್ಣನ ಮಗ ಸಂತೋμï ಅಂಗಡಿ ಅಂತಿಮ ವಿಧಿವಿಧಾನ ನೆರವೇರಿಸಿದ್ರು. ಗುರೂಜಿ ಮೃತದೇಹಕ್ಕೆ ಪತ್ನಿ ಅಂಕಿತಾ ಅಂತಿಮ ಪೂಜೆ ಸಲ್ಲಿಸಿದ್ರು. ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿದೆ. ಅರ್ಚಕ ಕೋಟ್ರಯ್ಯಶ್ರೀಗಳ ನೇತೃತ್ವದಲ್ಲಿ ಪುತ್ರಿ ಸ್ವಾತಿ, …

Read More »

ಬೆಳಗಾವಿಯ ಪೊಲೀಸ್ ಮ್ಯೂಸಿಯಂ ವೀಕ್ಷಿಸಿ, ಕೈಯಲ್ಲಿ ಗನ್ ಹಿಡಿದ ಗೃಹ ಸಚಿವರು

ಬೆಳಗಾವಿಯ ಪೊಲೀಸ್ ಮ್ಯೂಸಿಯಂನಲ್ಲಿ ಹಳೆ ಪಿಸ್ತೂಲ್ ಸೇರಿ ಇನ್ನಿತರ ವಸ್ತುಗಳನ್ನು ನೋಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಶ್ಚರ್ಯ ವ್ಯಕ್ತಪಡಿಸಿದರು. ಇದನ್ನು ದೆಹಲಿ ರಾಷ್ಟ್ರೀಯ ಮಟ್ಟದ ಪೊಲೀಸ್ ಮ್ಯೂಸಿಯಂನ್ನಾಗಿ ಮಾಡೋಣ ಎಂದು ಭರವಸೆ ನೀಡಿದರು. ಬೆಳಗಾವಿ ಜಿಲ್ಲಾ ಪೊಲೀಸ್ ಹೆಡ್ ಕ್ವಾಟರ್ಸ ಆವರಣಕ್ಕೆ ಆಗಮಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಜಿಲ್ಲಾ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಗೌರವ ವಂದನೆ ಸ್ವೀಕರಿಸಿದ ಬಳಿಕ ಪೊಲೀಸ್ ಸಮುದಾಯ ಭವನದಲ್ಲಿರುವ ಪೊಲೀಸ್ …

Read More »