Breaking News

ಮೂಡಲಗಿ

ವರ್ಷದೊಳಗೆ 2.30 ಕೊಟಿ ರೂಪಾಯಿ ವೆಚ್ಚದ ಅಗ್ನಿಶಾಮಕ ಠಾಣೆ ಕಾಮಗಾರಿ ಪೂರ್ಣ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ 9.09 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮೂಡಲಗಿ- ತಾಲ್ಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿದ್ದು, ವರ್ಷದೊಳಗೆ ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಬುಧವಾರ ಪಟ್ಟಣದ ದನಗಳ ಪೇಟೆಯ ಹತ್ತಿರ ಅಂದಾಜು 2.30 ಕೋಟಿ ರೂಪಾಯಿ ವೆಚ್ಚದಲ್ಲಿ (ಪಟಗುಂದಿ ರಸ್ತೆ) ನಿರ್ಮಾಣಗೊಳ್ಳಲಿರುವ ನೂತನ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ …

Read More »

 ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿರಂತರ ಪರಿಶ್ರಮ ಅಗತ್ಯ

ಗುರ್ಲಾಪುರ: ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿರಂತರ ಪರಿಶ್ರಮ ಅಗತ್ಯ ಎಂದು ಭಗೀರಥ ಯುವತಿ ಮಂಡಲದ ಅಧ್ಯೆ ಕಸ್ತೂರಿ ಹೆಗ್ಗಾನಿ ಹೇಳಿದರು. ಗ್ರಾಮದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ, ಮೈ ಭಾರತ ಕೇಂದ್ರ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂ ಹಾಗೂ ಸಂಗೊಳ್ಳಿ ರಾಯಣ್ಣ ಕ್ರೀಡಾ ಯುವಕ ಸಂ ಹಾಗೂ ಮೈ ಭಾರತ ಯುವ ಮಂಡಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಾಸ್​ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಟನೆ ಜಿಲ್ಲಾಧ್ಯ ಸಿದ್ಧಣ್ಣ ದುರದುಂಡಿ ಮಾತನಾಡಿ, …

Read More »

ಬೆಳಗಾವಿ ಜಿಲ್ಲೆಯ 21 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಕೇಂದ್ರದಿಂದ 1.80 ಕೋಟಿ ರೂ.ಗಳ ಅನುದಾನ: ಸಂಸದ ಈರಣ್ಣ ಕಡಾಡಿ

ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬೆಳಗಾವಿ ಜಿಲ್ಲೆಯ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಬದ್ಧವಾಗಿದ್ದು, ‘10,000 ಎಫ್‌ಪಿಒಗಳ ರಚನೆ ಮತ್ತು ಉತ್ತೇಜನ’ ಯೋಜನೆಯಡಿ ಜಿಲ್ಲೆಯಲ್ಲಿ 21 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಮತ್ತು ಜಿಲ್ಲೆಯ 17 ಎಫ್‌ಪಿಒಗಳಿಗೆ ಒಟ್ಟು 1.80 ಕೋಟಿ ರೂ. ಈಕ್ವಿಟಿ ಗ್ರಾಂಟ್ ನೀಡಲಾಗಿದೆ. ಅಲ್ಲದೆ, 4 ಅರ್ಹ ಎಫ್‌ಪಿಒಗಳಿಗೆ 34.48 ಲಕ್ಷ ರೂ. ಸಾಲದ ಸೌಲಭ್ಯವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಕೃಷಿ …

Read More »

ಉಪ-ನೊಂದಣಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿ ಮೂಡಲಗಿ ಪೊಲೀಸರಿಂದ ಆರೋಪಿ ಬಂಧನ

ಬೆಳಗಾವಿ: ಸರ್ಕಾರಿ ಕರ್ತವ್ಯದ ಮೇಲಿದ್ದ ಉಪ-ನೊಂದಣಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಧಮ್ಕಿ ಹಾಕಿದ್ದ ಆರೋಪಿಯನ್ನು ಮೂಡಲಗಿ ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಗೋಕಾಕ ಸೋಮವಾರ ಪೇಟೆಯ ನಿವಾಸಿ ಹಾಗೂ ಬಾಂಡ್‌ ರೈಟರ್‌ ಆಗಿರುವ ಆನಂದ ಸಿದ್ದಲಿಂಗಪ್ಪಾ ಗೊಟಡಕಿ ( 52) ಬಂಧಿತ ಆರೋಪಿ. ಈತನು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ್ದಾನೆಂದು ಮೂಡಲಗಿ ಉಪ-ನೊಂದಣಿ ಅಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರು ಮೂಡಲಗಿ ಪೊಲೀಸ್‌ ಠಾಣೆಯಲ್ಲಿ ದೂರು …

Read More »

ಮನೆ ಬೆಂಕಿ ಅಹುತಿಯಾದ ಕುಟುಂಬಕ್ಕೆ ಕನ್ನಡ ರಕ್ಷಣಾ ವೇದಿಕೆ ಮತ್ತು ಕನ್ನಡ ಸೇನೆ ಸಂಘಟನೆಯಿಂದ ಆಹಾರ ಕಿಟ್,ಬಟ್ಟೆ ವಿತರಣೆ

ಮೂಡಲಗಿ: ತಾಲೂಕಿನ ಬಡಿಗವಾಡ ಗ್ರಾಮದ ರೈತ ರಂಗಪ್ಪ ಮಾಳಪ್ಪ ಚೂಡಪ್ಪಗೋಳ ಹಾಗೂ ಪತ್ನಿ,ನಾಲ್ಕು ಜನ ಮಕ್ಕಳು ಸೇರಿ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತಿಚ್ಚೇಗೆ ಶನಿವಾರರಂದು ಬೆಳಗ್ಗೆ 10.30 ರ ಸುಮಾರಿಗೆ ಮನೆಯಲ್ಲಿ ಗ್ಯಾಸ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿತ್ತು ಮನೆಯಲ್ಲಿ ಚಿನ್ನಾಭರಣ,ಲಕ್ಷಾಂತರ ನಗದು ಹಣ,ಎರಡು ಎಮ್ಮೆ,ಒಂದು ಆಕಳು,ಗೃಹಬಳಕೆಯ ವಸ್ತುಗಳು,ದವಸ ಧಾನ್ಯಗಳು,ಬಟ್ಟೆ ಬರೆಗಳು,ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿರುವದರಿಂದಾ,ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಮತ್ತು …

Read More »

ಪ್ರವಾಹ ಪೀಡನೆಯಿಂದ ಮುಕ್ತಿ ಕೊಡಿ

ಮೂಡಲಗಿ: ಘಟಪ್ರಭಾ ನದಿಗೆ ಮಸಗುಪ್ಪಿ ಬಳಿಯಲ್ಲಿ ನಿರ್ಮಿಸಿರುವ ಸೇತುವೆಗೆ 200ಮೀ. ರವರೆಗೆ ಉದ್ದವಾದ ಒಡ್ಡವಿದ್ದು (ಅಪ್ರೋಚಿಂಗ ರೋಡ್‌) ಇದರಿಂದ ಪ್ರವಾಹ ಬಂದಾಗ ಸಂಚಾರ ನಿಲ್ಲುವುದು ಮತ್ತು ನದಿ ನೀರಿನ ವಿಸ್ತಾರ ಅಧಿಕವಾಗಿ ಸಾವಿರಾರು ಎಕರೆಯಷ್ಟು ಬೆಳೆ ಹಾನಿಯಾಗುತ್ತದೆ. ನೂರಾರು ಮನೆಗಳು ಜಲಾವೃತಗೊಳ್ಳುತ್ತವೆ. ಸೇತುವೆಯನ್ನು ವಿಸ್ತರಿಸಿ ಕಮಾನುಗಳನ್ನು ನಿರ್ಮಿಸಿದರೆ ಪ್ರವಾಹದಿಂದಾಗುವ ಹಾನಿ ಮುಕ್ತಗೊಳಿಸಲು ಸಾಧ್ಯ. ಇವೆಲ್ಲವನ್ನು ಪ್ರಸಕ್ತ ಆಯವ್ಯಯದಲ್ಲಿ ಪರಿಗಣಿಸಬೇಕಾಗಿದೆ. ಘಟಪ್ರಭಾ ನದಿಗೆ ಪ್ರವಾಹ ಬಂದಾಗೊಮ್ಮೆ ಸುಣಧೋಳಿ ಮತ್ತು ಅವರಾದಿ ಬ್ರಿಡ್ಜ್‌ …

Read More »

ಖಾಲಿ ಹುದ್ದೆಗಳ ನೇಮಕಾತಿ ಕಡ್ಡಾಯವಾಗಿ ಜಾರಿಗೊಳಿಸಬೇಕು: ಸುರೇಶ ಐಹೊಳೆ ಒತ್ತಾಯ

ಹಾರೂಗೇರಿ: ಸಚಿವ ಸಂಪುಟ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಸರ್ಕಾರದ ಆದೇಶದ ಪ್ರಕಾರ ಶೇ.15ರಷ್ಟು ಒಳ ಮೀಸಲಾತಿ ರೋಸ್ಟರ್ ಮಾರ್ಗಸೂಚಿಗಳಂತೆ 56,342 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮಾದಿಗ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಐಹೊಳೆ ಹೇಳಿದರು. ಪಟ್ಟಣದ ಸುರೇಶ ಐಹೊಳೆ ಗೃಹ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನ …

Read More »

ಯುವ ವಿದ್ಯಾವಂತರ ಆಕ್ರೋಶಕ್ಕೆ ಗುರಿಯಾದರೆ ‘ಗ್ಯಾರಂಟಿ’ಗಳ ಸರ್ಕಾರ ಪತನವಾಗುವುದು ಗ್ಯಾರಂಟಿ: ಸಂಸದ ಈರಣ್ಣ ಕಡಾಡಿ ಎಚ್ಚರಿಕೆ

ಮೂಡಲಗಿ: ರಾಜ್ಯ ಸರ್ಕಾರದಿಂದ ಯಾವುದೇ ಹೊಸ ನೇಮಕಾತಿ ನಡೆಯದ ಕಾರಣ ಯುವಜನತೆಯ ವಯೋಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ದಂಗೆ ಎದ್ದಿದ್ದಾರೆ. ರಾಜ್ಯದಲ್ಲಿ ಸುಮಾರು 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಕೂಡ ಸರ್ಕಾರ ನೇಮಕಾತಿ ಮಾಡುವಲ್ಲಿ ನಿರಾಸಕ್ತಿ ವಹಿಸಿದೆ. ಕೇವಲ ಮುಖ್ಯಮಂತ್ರಿ ಕುರ್ಚಿ ಕಾಳಗ ನಡೆದಿದೆ ಹೊರತು ಬೇರೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ರಾಜ್ಯದ ಯುವಜನತೆ ಆಕ್ರೋಶಗೊಂಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕಿಡಿಕಾರಿದರು. ಬುಧವಾರ …

Read More »

ಒಂದು‌ ಕೇಸ್, 200 ವಕೀಲರು ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಮೂಡಲಗಿ ನ್ಯಾಯಾಲಯ

ಬೆಳಗಾವಿ : ಕೋರ್ಟ್ ನಲ್ಲಿ ನಡೆದ ಒಂದು ಪ್ರಕರಣಕ್ಕೆ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲಿಸಿ ಕೋರ್ಟ್ ಕಲಾಪದಲ್ಲಿ ಹಾಜರಾದ ಘಟನೆ ಮೂಡಲಗಿ ನ್ಯಾಯಾಲಯದಲ್ಲಿ ನಡೆದಿದೆ. ಮೂಡಲಗಿ ಪಟ್ಟಣದ ಹಿರಿಯ ವಕೀಲರಾದ ಸುಧೀರ ಗೋಡಿಗೌಡರ ಅವರ ಕುಟುಂಬದ ವೈಯಕ್ತಿಕ ವ್ಯಾಜ್ಯಕ್ಕೆ‌ ಸಂಬಂಧಿಸಿದಂತೆ ನಡೆದ ಕೋರ್ಟ್ ಕಲಾಪದಲ್ಲಿ ಸುಧೀರ್ ಅವರನ್ನು ಬಬಲಿಸಿ ಗೋಕಾಕ್ ಹಾಗೂ ಮೂಡಲಗಿ ನ್ಯಾಯಾಲಯದ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲ ವ್ಯಕ್ತಪಡಿಸಿರುವ ಘಟನೆ ನಡೆದಿದೆ.‌ …

Read More »

ಸರ್ಕಾರದ್ದು ತುಷ್ಟೀಕರಣ ರಾಜಕಾರಣ; ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ: ಸಂಸದ ಈರಣ್ಣ ಕಡಾಡಿ ಆಕ್ರೋಶ

ಮೂಡಲಗಿ: ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರು ಮತ್ತು ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಸಾಲದ ಬಡ್ಡಿ ಮನ್ನಾ ಮಾಡುವ ಮೂಲಕ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. 2013-14 ರಿಂದ 2018-19ರ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೀಡಲಾದ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಒಟ್ಟು 981 ಕೋಟಿ …

Read More »