Home / ರಾಜಕೀಯ / ಪಂಚಭೂತಗಳಲ್ಲಿ ಲೀನರಾದ ಚಂದ್ರಶೇಖರ್ ಗುರೂಜಿ: ಸುಳ್ಳಾ ಜಮೀನಿನಲ್ಲಿ ನೆರವೇರಿದ ಅಂತ್ಯಕ್ರಿಯೆ

ಪಂಚಭೂತಗಳಲ್ಲಿ ಲೀನರಾದ ಚಂದ್ರಶೇಖರ್ ಗುರೂಜಿ: ಸುಳ್ಳಾ ಜಮೀನಿನಲ್ಲಿ ನೆರವೇರಿದ ಅಂತ್ಯಕ್ರಿಯೆ

Spread the love

ಆಪ್ತ ಸಹಾಯಕರಿಂದಲೇ ಬರ್ಬರವಾಗಿ ಹತ್ಯೆ ಆಗಿರುವ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮಣ್ಣಲ್ಲಿ ಮಣ್ಣಾಗಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳಾ ಗ್ರಾಮದ ಬಳಿಯ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ಅಣ್ಣನ ಮಗ ಸಂತೋμï ಅಂಗಡಿ ಅಂತಿಮ ವಿಧಿವಿಧಾನ ನೆರವೇರಿಸಿದ್ರು. ಗುರೂಜಿ ಮೃತದೇಹಕ್ಕೆ ಪತ್ನಿ ಅಂಕಿತಾ ಅಂತಿಮ ಪೂಜೆ ಸಲ್ಲಿಸಿದ್ರು. ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿದೆ. ಅರ್ಚಕ ಕೋಟ್ರಯ್ಯಶ್ರೀಗಳ ನೇತೃತ್ವದಲ್ಲಿ ಪುತ್ರಿ ಸ್ವಾತಿ, ಅಣ್ಣನ ಮಗ ಸಂತೋಷ ವಿಧಿವಿಧಾನ ನೆರವೇರಿಸಿದರು. 10 ಸ್ವಾಮೀಜಿಗಳು ಅಂತಿಮ ವಿಧಿವಿಧಾನದಲ್ಲಿ ಭಾಗಿಯಾಗಿದ್ರು.

ಹುಬ್ಬಳ್ಳಿಯ ಕಿಮ್ಸ್ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯ್ತು. ಹುಬ್ಬಳ್ಳಿಯಿಂದ ಸುಳ್ಳಾ ಗ್ರಾಮದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಹುಬ್ಬಳ್ಳಿಯಿಂದ ಸುಳ್ಳಾದತ್ತ ಪಾರ್ಥಿವರ ಶರೀರ ಶಿಫ್ಟ್ ಮಾಡ್ತಿದಂತೆ, ಹಾದಿಯುದ್ದಕ್ಕೂ ಜನರು ಕಿಕ್ಕಿರಿದು ನಿಂತಿದ್ರು. ಗುರೂಜಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ರು.

ಚಂದ್ರಶೇಖರ್ ಗುರೂಜಿ ನೆನೆದು ಸಂಬಂಧಿಕರು ಕೂಡ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಬಂದ ಪುತ್ರಿ ಸ್ವಾತಿ ಮತ್ತು ಪತ್ನಿ ಅಂಕಿತಾ ಕಣ್ಣೀರಿಟ್ಟರು. ಇದೇ ವೇಳೆ ಗುರೂಜಿ ಸಹೋದರಿ ಶಾಂತ ಅಸ್ವಸ್ಥರಾಗಿ ಬಿದ್ದ ಘಟನೆ ಕೂಡ ನಡೆಯಿತು. ಚಂದ್ರಶೇಖರ ಗುರೂಜಿ ಸಾಕಿದ್ದ ಶ್ವಾನ ಪ್ರಿನ್ಸ್ ಕೂಡ ಗುರೂಜಿ ಅಂತಿಮ ದರ್ಶನ ಪಡೆಯಿತು. ಮೃತದೇಹದ ಪೆಟ್ಟಿಗೆ ಮೇಲೆ ಕುಳಿತು ಮರುಗಿದೆ. ಅಂತ್ಯಕ್ರಿಯೆಗೆ ಗುರೂಜಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮುಂಬೈ ಸಿಬ್ಬಂದಿ ಕೂಡ ಆಗಮಿಸಿದ್ರು. ಗುರೂಜಿಯನ್ನ ನೆನೆದು ಕಣ್ಣೀರು ಹಾಕಿದ್ರು.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ