Breaking News
Home / ರಾಜ್ಯ (page 930)

ರಾಜ್ಯ

ಬಸ್ ಗಳ ಮುಖಾಮುಖಿ ಡಿಕ್ಕಿ; ಎಂಟು ಮಂದಿ ಸಾವು

ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಬಾರಾಬಂಕಿಯ ಪೂರ್ವಂಚಲ ಎಕ್ಸ್ ಪ್ರೆಸ್ ವೇ ನಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.   ಡಬಲ್ ಡೆಕ್ಕರ್ ಬಸ್ ನಿಯಂತ್ರಣ ತಪ್ಪಿದ ವೇಳೆ ಮತ್ತೊಂದು ಬಸ್ಸಿಗೆ ಡಿಕ್ಕಿ ಹೊಡೆದಿದ್ದು, ಈ ಭೀಕರ ಅಪಘಾತಕ್ಕೆ ಕಾರಣವಾಗಿದೆ. …

Read More »

ಇನ್ಮುಂದೆ ಪಿಡಿಓಗಳ ‘ಡಿಜಿಟಲ್ ಸಹಿ’ ಇಲ್ಲದ ಯಾವುದೇ ಪ್ರಮಾಣಪತ್ರಗಳು ಅಮಾನ್ಯ – ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಡಿಜಿಟಲ್ ಕ್ರಾಂತಿ ಉಂಟುಮಾಡುವ ಸಲುವಾಗಿ ಅನೇಕ ಇಲಾಖೆಯನ್ನು ಡಿಜಿಟಲೀಕರಣ ಮಾಡಲಾಗಿದೆ. ಇದೀಗ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳನ್ನು ಇದೇ ಮಾದರಿಯಲ್ಲಿ ಮಾಡಿದೆ. ಹೀಗಾಗಿ ಪಿಡಿಓಗಳ ಡಿಜಿಟಲ್ ಸಹಿ ಇಲ್ಲದ ಯಾವುದೇ ಪ್ರಮಾಣ ಪತ್ರಗಳು ಇನ್ಮುಂದೆ ಅಮಾನಲ್ಯ ಎಂಬುದಾಗಿ ಸರ್ಕಾರ ಆದೇಶ ಹೊರಡಿಸಿದೆ.     ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ತರೋ ನಿಟ್ಟಿನಲ್ಲಿ ನಾಗರೀಕ ಸೇವೆಗಳನ್ನು …

Read More »

BSY ಹೇಳಿದಾಕ್ಷಣ ಸ್ಪರ್ಧೆ ಸುಗಮವಲ್ಲ: ಸಿ.ಟಿ. ರವಿ; ನನಗೂ ರಾಜಕೀಯ ಗೊತ್ತು: ವಿಜಯೇಂದ್ರ

ಬೆಂಗಳೂರು: ಶಿಕಾರಿಪುರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಬಿ.ವೈ. ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ನಂತರ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಅವರು, ವಿಜಯೇಂದ್ರ ಸ್ಪರ್ಧೆ ನಿರ್ಧಾರವನ್ನು ಪಕ್ಷದ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.   ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸುವ ಬಗ್ಗೆ ಯಡಿಯೂರಪ್ಪ ಘೋಷಣೆ ಮಾಡಿರುವುದು ಸಲಹೆ ಅಷ್ಟೇ. ಯಾರಿಗೆ …

Read More »

ಪಂಜಾಬ್: ಹುತಾತ್ಮ ಯೋಧನ ಕುಟುಂಬಕ್ಕೆ 1 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಿದ ಪಂಜಾಬ್ ಸಿಎಂ

ಪಂಜಾಬ್: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂಡೋ-ಚೀನಾ ಗಡಿಯಲ್ಲಿ ರಾಷ್ಟ್ರ ಸೇವೆಯಲ್ಲಿ ಹುತಾತ್ಮರಾದ ಯೋಧ ಕುಲದೀಪ್ ಸಿಂಗ್ ಅವರ ಕುಟುಂಬಕ್ಕೆ ಶುಕ್ರವಾರ 1 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಿದರು.   “ಭಾರತೀಯ ಸೇನೆಯ 21 ಸಿಖ್ ರೆಜಿಮೆಂಟ್ ನ ಕುಲದೀಪ್ ಸಿಂಗ್ ಅವರು ದೇಶದ ಗಡಿಗಳನ್ನು ರಕ್ಷಿಸುವಾಗ ತಮ್ಮ ಜೀವ ತ್ಯಾಗ ಮಾಡಿದ್ದಾರೆ ಮತ್ತು ಪಂಜಾಬ್ ಸರ್ಕಾರವು ಈ …

Read More »

ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ

ರಾಯಚೂರು: ಜಿಲ್ಲೆಯಲ್ಲಿ ಕಾಲೇಜಿಗೆ ತೆರಳಿದ್ದಂತ ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪೋಷಕರು ಮಕ್ಕಳು ನಾಪತ್ತೆಯಾಗಿರೋದ್ರಿಂದ ಆತಂಕಗೊಂಡಿದ್ದಾರೆ.   ರಾಯಚೂರು ಜಿಲ್ಲೆಯ ಸ್ಟೇಷನ್ ರಸ್ತೆಯಲ್ಲಿರುವಂತ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದಂತ ನಾಲ್ವರು ವಿದ್ಯಾರ್ಥಿನಿಯರು, ಕಾಲೇಜಿಗೆ ಹೋಗಿ ಬರೋದಾಗಿ ತೆರಳಿದ್ದರು. ಹೀಗೆ ತೆರಳಿದ್ದಂತ ನಾಲ್ವರು ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಆಗಿಲ್ಲ ಎಂಬುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.   ವಿದ್ಯಾರ್ಥಿನಿಯರ ಪೋಷಕರು ನೀಡಿದಂತ ದೂರನಿಂದಾಗಿ ಸದರಬಜಾರ್ ಠಾಣೆಯ ಪೊಲೀಸರು …

Read More »

ಬುರ್ಖಾ ಧರಿಸಿ ಆಲಮಟ್ಟಿ ಜಲಾಶಯಕ್ಕೆ ನುಗ್ಗಲು ಯತ್ನ: ಹಾಸನ ಮೂಲದ ಯುವಕ ಪೊಲೀಸ್ ವಶಕ್ಕೆ

ಆಲಮಟ್ಟಿ (ವಿಜಯಪುರ): ಸೋಮವಾರ ಬೆಳ್ಳಂಬೆಳಿಗ್ಗೆ ಮಹಿಳೆಯರ ವೇಷದಲ್ಲಿದ್ದ ಶಂಕಿತ ಯುವಕ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಯತ್ನಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಜರುಗಿದೆ. ನಸುಕಿನಲ್ಲಿ ಆಲಮಟ್ಟಿ ಪರಿಸರದಲ್ಲಿ ಕಾಣಿಸಿಕೊಂಡ ಯುವಕ ಬುರ್ಖಾ ಧರಿಸಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ಪ್ರವೇಶಕ್ಕೆ ಮುಂದಾಗಿದ್ದಾನೆ. ಈ ವೇಳೆ ಜಲಾಶಯದ ಪ್ರವೇಶ ದ್ವಾರದಲ್ಲಿ ಭದ್ರತೆಗೆ ಇದ್ದ ಪೊಲೀಸರು ಇಷ್ಟು ಬೇಗ ಜಲಾಶಯ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಈ ವೇಳೆ ನಡೆದ …

Read More »

ಸುಷ್ಮಿತಾ ಸೇನ್ ಕನ್ನಡಕ ‌ʼಝೂಮ್ʼ ಮಾಡಿದಾಗ ಕಂಡಿದ್ದೇನು

ಉದ್ಯಮಿ‌ ಲಲಿತ್ ಮೋದಿ ಜೊತೆಗಿನ ಒಡನಾಟದಿಂದ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಈಗ ಹೆಚ್ಚು ಪ್ರಚಲಿತದಲ್ಲಿದ್ದಾರೆ.ಲಲಿತ್ ಮೋದಿ ಜೊತೆಗೆ ಡೇಟಿಂಗ್ ಇಳಿದಿದ್ದಕ್ಕೆ ಆಕೆಯನ್ನು ‘ಗೋಲ್ಡ್ ಡಿಗ್ಗರ್’ ಎಂದು ಕರೆಯುವುದರಿಂದ ಹಿಡಿದು ಮೀಮ್‌ಗಳನ್ನು ರಚಿಸುವವರೆಗೆ ಸಾಮಾಜಿಕ ಜಾಲತಾಣದಲ್ಲಿ ಗೋಳಾಡಿಸಿದ್ದಾರೆ. ಈಗ ಹೊಸ ವಿಷಯದ ಮೂಲಕ‌ ಪುನಃ ಆಕೆಯನ್ನು ಎಳೆದುತಂದಿದ್ದಾರೆ. ಆಕೆ ಇತ್ತೀಚೆಗೆ ತನ್ನ ಸಾಮಾಜಿಕ ಜಾಲತಾಣದ ಪ್ರೊಫೈಲ್‌ನಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಆ ಫೋಟೋ ಸಾಮಾನ್ಯ ಸೆಲ್ಫಿಯಂತೆ ಕಂಡುಬಂದಿದೆ. …

Read More »

ನಿಮ್ಮ ಅಪ್ಪನ ಆಣೆ ನೀವಿಬ್ಬರೂ ಸಿಎಂ ಆಗುವ ಪ್ರಶ್ನೆಯೇ ಇಲ್ಲ: B.S.Y.

ಶಿಕಾರಿಪುರ :ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಯಾಗುತ್ತೇವೆ ಎಂದು ಓಡಾಡುತ್ತಿದ್ದಾರೆ. ಅವರಿಗೆ ಕಿವಿಮಾತು ಹೇಳಲು ಇಚ್ಚಿಸುತ್ತೇನೆ. ನಿಮ್ಮ ಅಪ್ಪನ ಆಣೆ ನೀವು ಮುಖ್ಯಮಂತ್ರಿಯಾಗುವ ಪ್ರಶ್ನೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರೋಕ್ಷ ವಾಗ್ದಾಳಿ ನಡೆಸಿದರು. ತಾಲ್ಲೂಕಿನ ಆಂಜನಾಪುರ ಗ್ರಾಮ ಸಮೀಪ ಶುಕ್ರವಾರ ನಡೆದ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷ ಸಂಘಟನೆಗೆ …

Read More »

ಸಿಎಂ ಆಗಲು ಬ್ಯಾಕ್ ಗ್ರೌಂಡ್ ಚೆನ್ನಾಗಿರಬೇಕು: ಡಿಕೆಶಿಗೆ HDK ಟಾಂಗ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ವಿರುದ್ಧ ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಮನಗರದಲ್ಲಿ  ವಾಗ್ದಾಳಿ ನಡೆಸಿದರು. ‌ಸಿಎಂ ವಿಚಾರವಾಗಿ ಕಿತ್ತಾಟ ಹಿನ್ನೆಲೆ ವಾಗ್ದಾಳಿ ನಡೆಸಿ ರಾಮನಗರದಲ್ಲಿ ಯಾರೇ ಬಂದರೂ ನಮ್ಮನ್ನ ಏನು‌ ಮಾಡಲು ಸಾಧ್ಯವಿಲ್ಲ. ಕಳೆದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರಲಿಲ್ಲ ಅಷ್ಟೇ.‌ ಉಳಿದ ಎಲ್ಲಾ ಚುನಾವಣೆಯಲ್ಲಿರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (ಇದ್ದರು. ಜನತೆಯ ಆರ್ಶೀವಾದ ಇರುವವರೆಗೆ ಏನು ಆಗಲ್ಲ. ರಾಮನಗರದಲ್ಲಿ (ಶಿವಕುಮಾರ್ ಅವಕಾಶ ಕೇಳಿರುವುದು ತಪ್ಪಿಲ್ಲ. ಆದರೆ ಜನರ ಕಷ್ಟಸುಖಕ್ಕೆ ಕೆಲಸ ಮಾಡಿದ್ದೇನೆ …

Read More »

ಔತಣ ಕೂಟದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಅವಮಾನಿಸಿದರಾ ಪ್ರಧಾನಿ ಮೋದಿ ?

ಇತ್ತೀಚೆಗಷ್ಟೇ ರಾಷ್ಟ್ರಪತಿ ಚುನಾವಣೆ ನಡೆದಿದ್ದು, ಎನ್.ಡಿ.ಎ. ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು, ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಪರಾಭವಗೊಳಿಸಿದ್ದಾರೆ. ದ್ರೌಪದಿ ಮುರ್ಮ ರಾಷ್ಟ್ರದ ನೂತನ ರಾಷ್ಟ್ರಪತಿಯಾಗಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಔತಣಕೂಟ ಏರ್ಪಡಿಸಲಾಗಿದ್ದು, ಈ ವೇಳೆ ರಾಮನಾಥ್ ಕೋವಿಂದ್ ಅವರು ನಮಸ್ಕರಿಸಿದರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ …

Read More »