Breaking News
Home / ರಾಜ್ಯ (page 950)

ರಾಜ್ಯ

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಜಾ ಕೋರಿ ಪ್ರಧಾನಿ ಮೋದಿಗೆ ಖಾಸಗಿ ಶಾಲೆಗಳ ಪತ್ರ

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ( Textbook revision controversy ) ಸದ್ಯಕ್ಕೆ ಮುಗಿಯುವಂತಿಲ್ಲ. ಪಠ್ಯಪುಸ್ತಕ ಪರಿಷ್ಕರಣಾ ವಿಚಾರ ಸೇರಿದಂತೆ ಶಿಕ್ಷಣ ಇಲಾಖೆಯ ಸಾಲು ಸಾಲು ಆಡಳಿತ ವೈಫಲ್ಯಗಳ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ವಜಾಗೊಳಿಸುವಂತೆ ಸೂಚಿಸಬೇಕು ಎಂದು ರುಪ್ಸಾ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ.   ಈ ಬಗ್ಗೆ ನೋಂದಾಯಿತ ಅನುದಾನ ರಹಿತ ಖಾಸಗಿ …

Read More »

ಯುವತಿಯ ಸೌಂದರ್ಯಕ್ಕೆ ಸೋತು ಬೆತ್ತಲಾದವನಿಗೆ 5 ಲಕ್ಷ ರೂಪಾಯಿಗು ಅಧಿಕ ಹಣ ವಸೂಲಿ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಸ್ನೇಹ ಬೆಳೆಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಹಣದ ಜೊತೆ ಮಾನ-ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಕೆಲ ಯುವತಿಯರ ಸೌಂದರ್ಯಕ್ಕೆ ಮರುಳಾಗಿ ಅವರ ಬಲೆ ಬಿದ್ದರಂತೂ ಅದರಿಂದ ಹೊರಬರಲು ಹೆಣಗಾಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ.   ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವವತಿಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ಹಣ ಕಳೆದುಕೊಂಡು ಪರದಾಡುತ್ತಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ಸುಂದರವಾಗಿರುವುದನ್ನು ನೋಡಿ ಮರುಳಾದ ಸಂತ್ರಸ್ತ ಆಕೆಯೊಂದಿಗೆ …

Read More »

ಇದೇ ಮೊದಲು: ರಾಜ್ಯದ ವಿವಿ, ಪದವಿ ಕಾಲೇಜಲ್ಲಿ ಇಂದಿನಿಂದ ‘ಆನ್ ಲೈನ್’ ಮೂಲಕ ಪ್ರವೇಶಾತಿ ಆರಂಭ

ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳಿಗೆ ಇಂದಿನಿಂದ ಏಕರೂಪದ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ಪ್ರವೇಶಾತಿ ನಡೆಯಲಿದೆ. ಆಗಸ್ಟ್ 17ರಿಂದ ತರಗತಿಗಳು ಆರಂಭವಾಗಲಿವೆ.   ದ್ವಿತೀಯ ಪಿಯು ಫಲಿತಾಂಶ ಪ್ರಕಟದ ಬಳಿಕ, ಅನೇಕ ವಿವಿಗಳು, ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದವು. ಆದ್ರೇ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ …

Read More »

ಮಹಿಳಾಮಣಿಗಳೇ, ಮೋದಿ ಸರ್ಕಾರ ಉಚಿತವಾಗಿ ‘ಹೊಲಿಗೆ ಯಂತ್ರ’ ವಿತರಿಸ್ತಿದೆ ; ಅರ್ಜಿ ಪ್ರಕ್ರಿಯೆ ಆರಂಭ, ಇಂದೇ ಅಪ್ಲೈ ಮಾಡಿ

ದೇಶದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಮತ್ತು ಸ್ವಾವಲಂಬಿಗಳಾಗಲು ಸರ್ಕಾರ ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆ (Free Silai Machine Scheme). ಸರ್ಕಾರ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನ ಉಚಿತವಾಗಿ ನೀಡುತ್ತದೆ. ಈ ಯೋಜನೆಯ ಸಹಾಯದಿಂದ ಮಹಿಳೆಯರು ತಮ್ಮ ಆರ್ಥಿಕ ಅಗತ್ಯಗಳನ್ನ ಪೂರೈಸಿಕೊಳ್ಳಲು ಬೇರೆಯವರ ಮೇಲೆ ಅವಲಂಬಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಅವ್ರು ತಮ್ಮ ಪ್ರತಿಯೊಂದು ಅಗತ್ಯವನ್ನ ತಾವಾಗಿಯೇ ಪೂರೈಸಿಕೊಳ್ಳಲು ಸಮರ್ಥರಾಗಿರಬೇಕು ಮತ್ತು ಅಧಿಕಾರ ಹೊಂದಿರಬೇಕು. …

Read More »

ಇಷ್ಟೆಲ್ಲಾ ಮಳೆಯಾಗುತ್ತಿದ್ದರೂ ಮಹಾರಾಷ್ಟ್ರ ಅಥವಾ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಜಲಾಶಯಗಳು ಅರ್ಧದಷ್ಟೂ ಭರ್ತಿ ಆಗಿಲ್ಲ.

ಬೆಳಗಾವಿ: ಕಳೆದೊಂದು ವಾರದಿಂದ ಮಹಾರಾಷ್ಟ್ರ‌ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ, ಚಿಕ್ಕೋಡಿ ಉಪವಿಭಾಗದಲ್ಲಿರುವ ನಿಪ್ಪಾಣಿ ತಾಲೂಕಿನ ಜತ್ರಾಟ-ಭೀವಶಿ‌ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿರುವ ಮಾಂಜರಿ-ಭಾವನ‌ಸೌಂದತ್ತಿ ಸೇತುವೆ ಪ್ರವಾಹ ನೀರಿನಲ್ಲಿ ಮುಳುಗಿವೆ. ಸೇತುವೆ ಮೇಲೆ ಯಾರೂ ಓಡಾಡದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ನೀಡಿದ್ದಾರೆ. ಚಿಕ್ಕೋಡಿ ಉಪವಿಭಾಗದಲ್ಲಿ ಈಗಾಗಲೇ ನಾಲ್ಕು ಕೆಳಹಂತದ ಸೇತುವೆ ಮುಳುಗಿವೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ದೂದಗಂಗಾ, ವೇದಗಂಗಾ ನದಿಗಳ …

Read More »

ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಶಿಶು ಮಾರಾಟ ದಂಧೆ

ರಾಜ್ಯದಲ್ಲಿ ಶಿಶು ಮಾರಾಟ ಜಾಲ ಸಕ್ರಿಯವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಕದ್ದ ಮಕ್ಕಳನ್ನು ಭಿಕ್ಷಾಟನೆ ದಂಧೆಗೆ ಬಳಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಧ್ಯವರ್ತಿಗ‌ಳು ಇದನ್ನು ನಿರ್ವಹಿಸುತ್ತಿದ್ದು, ಇದೊಂದು ಕೋಟ್ಯಂತರ ರೂ. ವಹಿವಾಟಿನ ಜಾಲ ಎಂಬ ಸ್ಫೋಟಕ ಸಂಗತಿ ಬಹಿರಂಗಗೊಂಡಿದೆ. ಆಸ್ಪತ್ರೆ, ಮಾರುಕಟ್ಟೆ, ಬಸ್‌ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಶಿಶು ಮತ್ತು ಮಕ್ಕಳನ್ನು ಕದ್ದು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡುವುದು ಮತ್ತು ಭಿಕ್ಷಾಟನೆ ದಂಧೆಗೆ ಇಳಿಸುತ್ತಿರುವುದು ಪೊಲೀಸ್‌ ತನಿಖೆಯಲ್ಲಿ ಪತ್ತೆಯಾಗಿದೆ. ಕದ್ದ …

Read More »

ರಾಜ್ಯಾದ್ಯಂತ ಇಂದು ಮುಸ್ಲಿಂ ಸಮುದಾಯದ `ಬಕ್ರೀದ್ ಹಬ್ಬ’ : ಈ ನಿಯಮ ಪಾಲನೆ ಕಡ್ಡಾಯ

ಬೆಂಗಳೂರು: ಮುಸ್ಲಿಂ ಜನಾಂಗದ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಇಂದು ರಾಜ್ಯದಾದ್ಯಂತ ಆಚರಿಸಲಾಗುವುದು. ಹಬ್ಬವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಕೆಲ ಕಾನೂನು ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಸರ್ಕಾರ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯಮ 2020ರ ನಿಯಮಗಳು ಉಲ್ಲಂಘನೆಯಾಗದಂತೆ ಖುರ್ಬಾನಿ ನೆರವೇರಿಸಬೇಕು. ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ ಕಾಲೇಜು, ಆಸ್ಪತ್ರೆ …

Read More »

ಈ ‘ಮೇಕೆ’ ಬೆಲೆ ಬರೋಬ್ಬರಿ 77 ಲಕ್ಷ ರೂಪಾಯಿ.. ವಿಶೇಷತೆ ಏನು ಗೊತ್ತಾ!?

ರಾಯ್ಪುರ್​(ಛತ್ತೀಸ್​​ಗಢ): ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್​​ ಆಚರಣೆಗೆ ದಿನಗಣನೇ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಮೇಕೆಗಳ ವ್ಯಾಪಾರ ಬಲು ಜೋರಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಶೇಷತೆ ಹೊಂದಿರುವ ಮೇಕೆಗಳನ್ನ ಖರೀದಿ ಮಾಡಲಾಗುತ್ತಿದೆ. ಇದರ ಮಧ್ಯೆ ಕೆಲವೊಂದು ಮಾರುಕಟ್ಟೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೇಕೆಗಳು ಜನರ ಗಮನ ಸೆಳೆಯುತ್ತಿವೆ. ಮಾರುಕಟ್ಟೆಗಳಲ್ಲಿ ಮೇಕೆಗಳಿಗೆ ಇನ್ನಿಲ್ಲದ ಬೇಡಿಕೆಸದ್ಯ ಛತ್ತೀಸ್​​ಗಢದ ರಾಯ್ಪುರ್​​ ಬಕ್ರಿ ಮಂಡಿ ಮಾರುಕಟ್ಟೆಯಲ್ಲಿ ಬರೋಬ್ಬರಿ 70 ಲಕ್ಷ ರೂಪಾಯಿ ಮೇಕೆ ಎಲ್ಲರ ಗಮನ …

Read More »

ಶೀಘ್ರವೇ ಜೆಡಿಎಸ್-ಕಾಂಗ್ರೆಸ್ ನ ಪ್ರಮುಖ ನಾಯಕರು ಬಿಜೆಪಿಗೆ :ಲಕ್ಷ್ಮಣ ಸವದಿ

ಹಾಸನ : ಶೀಘ್ರವೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 2 ತಿಂಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅನೇಕರು ಬಿಜೆಪಿಗೆ ಸೇರಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಯಾವಾಗ ಮಾಡಬೇಕೆಂಬುದು ರಾಜ್ಯ ಮತ್ತು ಕೇಂದ್ರದ ನಾಯಕರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.   ಸಚಿವ ಉಮೇಶ್ ಕತ್ತಿ ಅವರ ಪ್ರತ್ಯೇಕ …

Read More »

P.S.I. ನೇಮಕಾತಿ ಪ್ರಕರಣ ಅಕ್ರಮ: ಪೌಲ್ ಡೈರಿಯಲ್ಲಿ ಪ್ರಭಾವಿಗಳ ಹೆಸರು

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಎಡಿಜಿಪಿ ಅಮ್ರಿತ್ ಪೌಲ್‌ ಅವರಿಗೆ ಸೇರಿದ್ದು ಎನ್ನಲಾದ ಡೈರಿಯನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.   ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮ್ರಿತ್ ಪೌಲ್, ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಅಂಶಗಳನ್ನು ಡೈರಿಯಲ್ಲಿ ದಾಖಲಿಸುತ್ತಿದ್ದರೆಂಬ ಮಾಹಿತಿ ಗೊತ್ತಾಗಿದೆ. ಕೆಲವುಅಧಿಕಾರಸ್ಥರು, ರಾಜಕೀಯ ಪಕ್ಷಗಳ ಮುಖಂಡರು, ಐಪಿಎಸ್ ಅಧಿಕಾರಿಗಳು, ಡಿವೈಎಸ್ಪಿಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಭಾವಿಗಳ ಹೆಸರು ಡೈರಿಯಲ್ಲಿರುವುದಾಗಿ ಸಿಐಡಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ‘ಪೌಲ್ …

Read More »