Breaking News
Home / ಜಿಲ್ಲೆ / ಬೆಳಗಾವಿ / ಆರ್ಡಿನರಿ ಇದ್ದ ಸರ್ಕಾರಿ ಆಸ್ಪತ್ರೆ ಯನ್ನಾ ಹಾಯ್ ಟೆಕ ಮಾಡಿದ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ..

ಆರ್ಡಿನರಿ ಇದ್ದ ಸರ್ಕಾರಿ ಆಸ್ಪತ್ರೆ ಯನ್ನಾ ಹಾಯ್ ಟೆಕ ಮಾಡಿದ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ..

Spread the love

ಬೆಳಗಾವಿ ಉತ್ತರ ಕ್ಷೇತ್ರ ಬದಲಾಗುತ್ತಿದೆ.ಒಂದು ಕಡೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಜನಪರ ಕೆಲಸಗಳು ಸದ್ದು ಮಾಡುತ್ತಿವೆ.ಇಲ್ಲಿನ ಶಾಸಕರಾದ ಅನಿಲ ಬೆನಕೆ ಅವರ ವಿಶೇಷ ಕಾಳಜಿಯಿಂದ ಬೆಳಗಾವಿ ಹೈಟೆಕ್ ಟಚ್ ಪಡೆದುಕೊಳ್ತಿದೆ.ಇದಕ್ಕೆ ಒಂದು ಉತ್ತಮ ಉದಾಹರಣೆ ಇಲ್ಲಿದೆ ನೋಡಿ…

ಹೌದು..!! ನಿಜಕ್ಕೂ ಕುಂದಾನಗರಿ ಬದಲಾಗ್ತಿದೆ.ಇಲ್ಲಿನ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಟಾಪ್ ಸ್ಪೀಡ್ ನಲ್ಲಿ ಓಡುತ್ತಿದ್ದರೆ ಸರ್ಕಾರಿ ಸಂಸ್ಥೆಗಳು ಹೈಟೆಕ್ ಟಚ್ ಪಡೆದುಕೊಳ್ತಿವೆ.ಜನರಿಗೆ ಅತ್ಯಂತ ಮಹತ್ವವಾದ ಸೇವೆ ನೀಡುವ ಬೀಮ್ಸ್ ಆಸ್ಪತ್ರೆ ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳು ಜಿಲ್ಲಾ ಆಸ್ಪತ್ರೆಯಲ್ಲಿ ಸಿಗಲು ಹೇಗೆ ಸಾಧ್ಯ ಅಂತ ನೀವು ಅನ್ಕೊಂಡ್ರೆ ಅದು ನಿಮ್ಮ ತಪ್ಪು ಕಲ್ಪನೆ.ಇಲ್ಲಿನ ಚಿಕ್ಕ ಮಕ್ಕಳ ವಿಭಾಗಕ್ಕೆ ನೀವು ಒಂದು ಬಾರಿ ಭೇಟಿ ಕೊಟ್ಟರೆ ನೀವು ಆಶ್ಚರ್ಯಚಕಿತರಾಗೊದ್ರಲ್ಲಿ ಸಂಶಯವೇ ಇಲ್ಲ.ಚಿಕ್ಕ‌ ಮಕ್ಕಳ ಆಸ್ಪತ್ರೆ ಅಂದರೆ ಅಲ್ಲಿ ಮಕ್ಕಳು ಹೋಗಲು ಇಷ್ಟ ಪಡುವುದಿಲ್ಲ.ಅದ್ರಲ್ಲಿ ಒಂದು ವೇಳೆ ಅಡ್ಮಿಟ್ ಆಗುವ ಸಂಭವ ಬಂದ್ರೆ ಪೋಷಕರಿಗೆ ದೊಡ್ಡ ತಲೆನೋವಾಗುತ್ತದೆ.ಯಾಕೆಂದರೆ ಮಕ್ಕಳಲ್ಲಿರುವ ಹೇದರಿಗೆ ಮನೋಭಾವ ಪೋಷಕರಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ.ಆದರೆ ಈಗ ಈ ಸಮಸ್ಯೆಗಳಿಗೆ ಶಾಸಕರು ಬ್ರೇಕ್‌ ಹಾಕಿದ್ದಾರೆ.ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರ ಇಚ್ಛಾಶಕ್ತಿ ಹಾಗೂ ಶಾಸಕರ ಅನುದಾನ ನಿಧಿಯಿಂದ ಚಿಕ್ಕ ಮಕ್ಕಳ ಆಸ್ಪತ್ರೆ ಹೈಟೆಕ್ ಟಚ್ ಪಡೆದುಕೊಂಡಿದೆ.ಮಕ್ಕಳಿಗೆ ಚಿಕಿತ್ಸೆ ಎಷ್ಟು ಮುಖ್ಯವಾಗಿದೆಯೋ ಅಷ್ಟೆ ಅಲ್ಲಿನ ವ್ಯವಸ್ಥೆ ಕೂಡ ಪ್ರಮುಖವಾಗಿರುತ್ತೆ ಎಂಬುದನ್ನ ಅರಿತ ಶಾಸಕರು ಆಕರ್ಷಣೆಗಾಗಿ ಸಾಕಷ್ಟು ಮಹತ್ವವಾದ ಕಾಮಗಾರಿಗಳನ್ನ ಮಾಡಿಸಿದ್ದಾರೆ.ಅದಲ್ಲದೇ ಪೌಷ್ಟಿಕ ಆಹಾರ ವ್ಯವಸ್ಥೆ ಕೂಡ ಕಲ್ಪಿಸಿದ್ದಾರೆ.ಇನ್ನು ಮುಂದೆ ಪೋಷಕರು ತಮ್ಮ‌ ಮಕ್ಕಳನ್ನು ನಿಶ್ಚಿಂತೆಯಾಗಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಪೆಡಿಯಾಟ್ರಿಕ್ ವಾರ್ಡ್ ಗೆ ಕರೆದುಕೊಂಡು ಹೊಗಬಹುದಾಗಿದೆ.

 

ಅದೇ ರೀತಿ ಶಾಸಕರು ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತೊಂದು ವಿಶೇಷ ಕಾರ್ಯಕ್ಕೆ ಕೈ ಹಾಕಿದ್ದಾರೆ.ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿಗಳ ಮಕ್ಕಳಿಗಾಗಿ ಶಿಶು ವಿಹಾರ ಕೇಂದ್ರವನ್ನು ಇದೇ ಜುಲೈ 8 ರಂದು ಉದ್ಘಾಟನೆ ಮಾಡಲಿದ್ದಾರೆ.ಇಲ್ಲಿಯೂ ಕೂಡ ಹೈಟೆಕ್ ಆಗಿಯೇ ಕಾಮಗಾರಿ ನಡೆಯುತ್ತಿದೆ.ಇಲ್ಲಿರುವ ನೂರಾರು ಮಹಿಳಾ ಸಿಬ್ಬಂದಿಗಳ ಮಕ್ಕಳಿಗೆ ಆಟ,ಪಾಠದ ಜೊತೆ ಬೌಧಿಕ ಮಟ್ಟ ಹೆಚ್ಚಿಸುವ ಚಟುವಟಿಕೆಗಳು ಸೇರಿದಂತೆ ಚಿತ್ರಕಲೆ,ಕ್ರಾಫ್ಟ್ ವರ್ಕ್ ಹಾಗೂ ಮನೋರಂಜನಾ ಕಾರ್ಯಕ್ರಮಗಳ ವ್ಯವಸ್ಥೆ ಕಲ್ಪಿಸಲಾಗಿದೆ.6 ತಿಂಗಳಿನ ಶಿಶು ದಿಂದ 6 ವರ್ಷದ ಮಕ್ಕಳು ಈ ಕೇಂದ್ರದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.ಯಾವುದೇ ಬೇದಬಾವ ಇಲ್ಲದೆ
ವೈದ್ಯರಿಂದ ಹಿಡಿದು ಪೌರಕಾರ್ಮಿಕರಾಗಿ ಕೆಲಸ ಮಾಡುವ ಸಿಬ್ಬಂದಿಗಳ ಮಕ್ಕಳಿಗೆ ಒಳ್ಳೆ ಆಹಾರ ಜೊತೆಗೆ ಇನ್ನಿತರ ಚಟುವಟಿಕೆಗಳು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ತರಹದ ವ್ಯವಸ್ಥೆ ಶಾಸಕರು ಕಲ್ಪಿಸಿ ಕೊಟ್ಟಿದ್ದಾರೆ.

ಇನ್ನು ಜುಲೈ 8 ರಂದು ಉದ್ಘಾಟನೆ ಆಗಲಿರುವ ಈ ಶಿಶುವಿಹಾರ ಕೇಂದ್ರದ ಜೊತೆಗೆ ಇನ್ನು ಹಲವಾರು ಜನೋಪಯೋಗಿ ಕೆಲಸಗಳಿಗೆ ಶಾಸಕ ಅನಿಲ ಬೆನಕೆ ಅವರು ಅಂದು ಚಾಲನೆ ನೀಡಲಿದ್ದಾರೆ.ಅವುಗಳಲ್ಲಿ ಸಹಾಯವಾಣಿ ಕೇಂದ್ರ, ಆನಲೈನ್ ಪೇಮೆಂಟ್ ವ್ಯವಸ್ಥೆ, ವಿಶೇಷ ಚೇತನರಿಗಾಗಿ ಪ್ರತ್ಯೇಕ ಕೌಂಟರ್,ಸೇರಿದಂತೆ ವೈದ್ಯಕೀಯ ವಿಧ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಒಳಗೊಂಡಿವೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಂದೆ ದೇಶದ ಜೊತೆಗೆ ಬೆಳಗಾವಿ ಬದಲಾಗುತ್ತಿದೆ.ನರೇಂದ್ರ ಮೋದಿ‌ ಅವರ ಮಾರ್ಗದರ್ಶನದಂತೆ ಶಾಸಕ‌ ಅನಿಲ ಬೆನಕೆ ಅವರು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತ ಬೆಳಗಾವಿಗರ ಮನಸ್ಸನ್ನು ಗೆದ್ದು ಮುನ್ನಡೆಯುತ್ತಿದ್ದಾರೆ. ಶಾಸಕರು ಕೈಗೆತ್ತಿಕೊಳ್ಳುತ್ತಿರುವ ಇಂತಹ ಮಹತ್ವವಾದ ಕೆಲಸಗಳಿಂದ ಕುಂದಾನಗರಿ ಜನರಿಂದ ಪ್ರಶಂಸೆಗಳ ಮಾತುಗಳು ಕೇಳಿಬರುತ್ತಿವೆ.ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ಬೆಳಗಾವಿ ನಗರ ಈಗ ಹೈಟೆಕ್ ಟಚ್ ಪಡೆದುಕೊಳ್ಳುತ್ತ ಮುಂದೆ ಸಾಗುತ್ತಿದೆ.ಮೋದಲನೇ ಅವದಿಯಲ್ಲಿ ಬೀಡುವಿಲ್ಲದೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಶಾಸಕ ಅನಿಲ ಬೆನಕೆ ಅವರು ಕುಂದಾನಗರಿ ಜನರಿಂದ ಸೈ ಎನಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ