Breaking News

ರಾಜ್ಯ

ಕಾಂಗ್ರೆಸ್ ಮುಖಂಡ ಧರ್ಮಸ್ಥಳ ಚಂದನ್ ಕಾಮತ್ ಬಿಜೆಪಿ ಸೇರ್ಪಡೆ

ಧರ್ಮಸ್ಥಳ : ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಚಂದನ್ ಪ್ರಸಾದ್ ಕಾಮತ್ ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಅವರ ಆಪ್ತರಾಗಿರುವ ಚಂದನ್ ಕಾಮತ್ ಅವರು ಸೋಮವಾರ ಬೈರತಿ ಬಸವರಾಜ್ ಅವರ ಆಶಯದಂತೆ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದಾರೆ.   ಪಕ್ಷ ಸೇರ್ಪಡೆ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಂಗಳೂರು ಬೃಹತ್ ಮಹಾನಗರ ಕಾರ್ಪೋರೇಟರ್ ಗಳಾದ ಶ್ರೀಕಾಂತ್, …

Read More »

ಕೊಪ್ಪಳ ನಗರಸಭೆ ಮುಂದೆ ಮಹಿಳೆ ಶವವಿಟ್ಟು ಪ್ರತಿಭಟನೆ

ಕೊಪ್ಪಳ: ಕೊಪ್ಪಳ ನಗರದ 30ನೇ ವಾರ್ಡಿನಲ್ಲಿ ಬಿಡಾಡಿ ದನಗಳ ದಾಳಿಯಿಂದಾಗಿ ರಮಿಜಾ ಬೇಗಂ ಎನ್ನುವ ಮಹಿಳೆ ಮೃತಪಟ್ಟಿದ್ದು, ಶವವನ್ನು ನಗರಸಭೆ ಮುಂದಿಟ್ಟು ಸೋಮವಾರ ಪ್ರತಿಭಟನೆ ನಡೆಸಲಾಗಿದೆ. ಕೊಪ್ಪಳ ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದ್ದು, ಇದರಿಂದ ಜನರು ರಸ್ತೆಯ ಮೇಲೆ ಸಂಚಾರ ಮಾಡದಂತ ಸ್ಥಿತಿ ಎದುರಾಗಿದೆ. ಹಗಲು ರಾತ್ರಿ ಎನ್ನದೇ ಬಿಡಾಡಿ ದನಗಳು ರಸ್ತೆ ಮೇಲೆ ಮಲಗಿ ಪ್ರಯಾಣಿಕರಿಗೆ ತುಂಬಾ ತೊಂದರೆ ಮಾಡುತ್ತಿವೆ. ಈ ಮಧ್ಯೆ …

Read More »

ಸದ್ದು ಮಾಡುತ್ತಿದೆ ‘ವಿಜಯಾನಂದ’ ಚಿತ್ರದ ಟ್ರೇಲರ್‌

ಉದ್ಯಮಿ ವಿಜಯ್‌ ಸಂಕೇಶ್ವರ ಜೀವನಾಧಾರಿತ “ವಿಜಯಾನಂದ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರದ ಕನ್ನಡ ಟ್ರೇಲರ್‌ ಬಿಡುಗಡೆ ಮಾಡಿದರೆ, ಆರೋಗ್ಯ ಸಚಿವ ಸುಧಾಕರ್‌ ಹಿಂದಿ ಟ್ರೇಲರ್‌ ಬಿಡುಗಡೆಗೊಳಿಸಿದರು.   ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ವಿಜಯ ಸಂಕೇಶ್ವರ ಅವರನ್ನು 1980ರಿಂದ ನೋಡಿದ್ದೇನೆ. ಸಂಕೇಶ್ವರ ಕೇವಲ ವೆಂಚರ್‌ ಅಲ್ಲ, ಅವರು ಅಡ್ವೆಂಚರ್‌ ವ್ಯಕ್ತಿ. ಯಾರು ಆಗಲ್ಲ ಆ ದಾರಿ ಸುಲಭ ಅಲ್ಲ ಅಂತ ಹೇಳುತ್ತಾರೋ …

Read More »

3ನೇ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿಯೇ ನಡೆಸಿ

ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ಬೆಳಗಾವಿಯಲ್ಲಿಯೇ ನಡೆಸಲು ಚಳಿಗಾಲ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ಕರ್ನಾಟಕ ಯುವ ವೇದಿಕೆ ಸಂಘಟನೆ ಒತ್ತಾಯಿಸಿದೆ. ಸೋಮವಾರ ನಗರದ ರಾಣಿ ಚನ್ನಮ್ಮ ವೃತ್ತದ ಮುಂಭಾಗದಲ್ಲಿ ಧರಣಿ ನಡೆಸಿದ ಕರ್ನಾಟಕ ಯುವ ವೇದಿಕೆ ಪದಾಧಿಕಾರಿಗಳು ಬೆಳಗಾವಿಯಲ್ಲಿಯೇ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಬಳಿಕ ಡಿಸಿ ಕಚೇರಿವರೆಗೂ ರ್ಯಾಲಿ ನಡೆಸಿದ ಕನ್ನಡ ಹೋರಾಟಗಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ …

Read More »

ಬೊಮ್ಮಾಯಿ ಮತ್ತೆ ಜೆಡಿಎಸ್ ಪಕ್ಷಕ್ಕೆ ಬಂದರೆ ಸ್ವಾಗತ: ಸಿ.ಎಂ.ಇಬ್ರಾಹಿಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಜೆಡಿಎಸ್ ಪಕ್ಷಕ್ಕೆ ಬಂದರೆ ಅವರನ್ನು ಆದರದಿಂದ ಸ್ವಾಗತಿಸುತ್ತೇನೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಈದ್ಗಾ ಮೈದಾನ ವಿಚಾರವಾಗಿ ನಾನು ಮತ್ತು ಬಸವರಾಜ ಬೊಮ್ಮಾಯಿ ಅವರು ಸೂಕ್ತ ನಿರ್ಧಾರ ಕೈಗೊಂಡಿದ್ದೇವು, ಇದೀಗ ಪಾಪ ಬೊಮ್ಮಾಯಿ ಅವರು ಬಿಜೆಪಿ ಸೇರಿ ತಬ್ಬಲಿ ಆಗಿದ್ದಾರೆ ಎಂದರು. ಸದ್ಯ ಬಸವರಾಜ ಬೊಮ್ಮಾಯಿ ಅವರ ಸ್ಥಿತಿ 2ಎ, ಎಸ್ ಸಿ ಎಸ್ ಟಿ, ಹಾಗೂ …

Read More »

ಎಸ್.ಟಿ ಮೀಸಲಾತಿಗೆ ಆಗ್ರಹಿಸಿ ಕುರುಬ ಸಮುದಾಯದವರ ಪ್ರತಿಭಟನೆ

ಬೆಂಗಳೂರು: ‘ಎಸ್.ಟಿ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿ ಕುರುಬ ಸಮುದಾಯದವರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಸೋಮವಾರ ಬೆಳಿಗ್ಗೆ ಉದ್ಯಾನಕ್ಕೆ ಆಗಮಿಸಿರುವ ಸಮುದಾಯದ ಜನ, ‘ಎಸ್.ಟಿ ಮೀಸಲಾತಿ ಬೇಕು’ ಎಂದು ಘೋಷಣೆ ಕೂಗುತ್ತಿದ್ದಾರೆ. ಕುರುಬ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ‘ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ನೀಡುವ ಸಂಬಂಧ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರವು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು …

Read More »

ಮೀಸಲಾತಿ ಪರ ಹೇಳಿಕೆ ನೀಡುವಾಗ ಎಚ್ಚರದಿಂದ ಇರಿ: ಕಾಂಗ್ರೆಸ್ ವರಿಷ್ಠರ ಸೂಚನೆ

ನವದೆಹಲಿ: ‘ಪಂಚಮಸಾಲಿ ಲಿಂಗಾಯತರು, ಒಕ್ಕಲಿಗರು, ಕುರುಬರು ಹೀಗೆ ವಿವಿಧ ಸಮುದಾಯದವರ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ಹೇಳಿಕೆ ನೀಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು’ ಎಂದು ಕಾಂಗ್ರೆಸ್‌ ವರಿಷ್ಠರು ಕರ್ನಾಟಕದ ನಾಯಕರಿಗೆ ಸೂಚನೆ ನೀಡಿದ್ದಾರೆ.   ಭ್ರಷ್ಟಾಚಾರ, ಶೇ 40 ಕಮಿಷನ್ ಆರೋಪ, ನೇಮಕಾತಿ ಹಗರಣ, ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿನ ವೈಫಲ್ಯ, ದುರಾಡಳಿತ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟು ಕೊಂಡು ರಾಜ್ಯ ನಾಯಕರು ಆಡಳಿತಾರೂಢ ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಇದನ್ನು ಮುಂದುವರಿಸುವಂತೆ …

Read More »

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಶಾರೀಕ್ ಕಾರಣ ಎಂದ ಪೊಲೀಸರು

ಮಂಗಳೂರು: ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದಾಗ ನಡೆದ ಸ್ಪೋಟದಲ್ಲಿ ಗಾಯಗೊಂಡು ನಗರದ ಫಾದರ್ ಮಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಶಾರೀಕ್ ಎಂಬುದನ್ನು ಆತನ ಕುಟುಂಬದವರು ಖಚಿತ ಪಡಿಸಿದ್ದಾರೆ ಎಂದು ಹೇಳಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.   ನಗರದಲ್ಲಿ ಬಾಂಬ್ ಸ್ಪೋಟ ನಡೆಸುವ ಉದ್ದೇಶದಿಂದ ಕುಕ್ಕರ್ ಬಾಂಬ್ ಸಾಗಿಸಿದ್ದ. ಮೈಸೂರಿನಲ್ಲಿ ಬಾಂಬ್ ತಯಾರಿಸಿ ತಂದಿದ್ದ. ನ.10ರಂದು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೈಸೂರಿಗೆ …

Read More »

ಕಾಮಿಡಿ ನಟಿ ನಯನಾ ವಿರುದ್ಧ ನಿಂದನೆ ಆರೋಪ, ಕೇಸ್‌ ದಾಖಲು

ಕಾಮಿಡಿ ನಟಿ ನಯನಾ ವಿರುದ್ಧ ಕೇಸ್ ದಾಖಲಾಗಿದೆ. ಜೀವ ಬೆದರಿಕೆ ಮತ್ತು ನಿಂದನೆ ಆರೋಪದಲ್ಲಿ ಕೇಸ್ ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ನಯನಾ ಅವರು ಮತ್ತೊಬ್ಬ ಕಾಮಿಡಿ ನಟ ಸೋಮಶೇಖರ್‌ಗೆ ಬೆದರಿಕೆ ಹಾಕಿದ್ದಾರೆ (Crime news) ಎಂದು ಆರೋಪಿಸಲಾಗಿದೆ. ಸೋಮಶೇಖರ್ ರಿಂದ ದೂರು ದಾಖಲಾಗಿದೆ. ಕಾಮಿಡಿ ಕಿಲಾಡಿ ಗ್ಯಾಂಗ್ಸ್ ನಲ್ಲಿ ಸೋಮಶೇಖರ್ ತಂಡ ಭಾಗವಹಿಸಿತ್ತು. ಖಾಸಗಿ ಚಾನಲ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಕಾರ್ಯಕ್ರಮದಲ್ಲಿ ಬಹುಮಾನದ ಹಣವಾಗಿ 3 ಲಕ್ಷ ಹಣ …

Read More »

ಗಂಗಾವತಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಿಸಿಯೇ ಬಿಟ್ಟ ಸಿದ್ದರಾಮಯ್ಯ

ಗಂಗಾವತಿ :ಮುಂದಿನ 2023 ರ ವಿಧಾನಸಭೆಯ ಗಂಗಾವತಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯನ್ನು ಗೆಲ್ಲಿಸುವ ಮೂಲಕ ನನಗೆ ಬಲ ನೀಡಿ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. . ಅವರು ಭಾನುವಾರ ವಳಬಳ್ಳಾರಿಯಲ್ಲಿ ಕಾಂಗ್ರೆಸ್‌ ಕಾರ್ತಕರ್ತ ಅರಸಿನಕೇರಿ ಹನುಮಂತಪ್ಪ ನಿವಾಸದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನೆರೆದ ಜನರಿಗೆ ಮನವಿ ಮಾಡಿದರು. ಬಿಜೆಪಿಯವರ ಭ್ರಷ್ಟಾಚಾರಕ್ಕೆ ರಾಜ್ಯದ ಜನರು ರೋಸಿ ಹೋಗಿದ್ದು ಜೆಡಿಎಸ್- ಬಿಜೆಪಿಗೆ …

Read More »