Breaking News
Home / ರಾಜ್ಯ (page 1532)

ರಾಜ್ಯ

ಅಧಿವೇಶನಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ, : ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಮಂಗಳೂರು: ಸೆಪ್ಟೆಂಬರ್13 ರಿಂದ 24 ರವರೆಗೆ ವಿಧಾನಸಭಾ ಅಧಿವೇಶನ (Karnataka Assembly session 2021) ನಡೆಯಲಿದ್ದು, ಈ ಅಧಿವೇಶನದಲ್ಲಿ ಯಾರೂ ನನ್ನ ಬಳಿ ರಜೆ ಕೇಳುವ ಸ್ಥಿತಿ ಬರಬಾರದು. ಎಲ್ಲಾ ಶಾಸಕರು ಮತ್ತು ಸಚಿವರು ಕಡ್ಡಾಯವಾಗಿ ಪೂರ್ಣಪ್ರಮಾಣದಲ್ಲಿ ಅಧಿವೇಶನದಲ್ಲಿ ಹಾಜರಿರಬೇಕು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Speaker Vishweshwar Hegde Kageri) ಸೂಚನೆ ನೀಡಿದರು. ಮಂಗಳೂರಿನಲ್ಲಿ ಈಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಜನಪ್ರತಿನಿಧಿಗಳ ಸಂಪೂರ್ಣ ಹಾಜರಾತಿಯ ಅಗತ್ಯತೆ …

Read More »

2019 ರಿಂದ 2021 ನಡುವೆ ಕರ್ನಾಟಕದಲ್ಲಿ 1,168 ಅತ್ಯಾಚಾರ ಕೇಸ್ ದಾಖಲು..!

ಬೆಂಗಳೂರು,ಆ.27-ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಬೆನ್ನಲ್ಲೇ ಆತಂಕದ ಮಾಹಿತಿಯೊಂದು ಹೊರಬಿದ್ದಿದೆ. ರಾಜ್ಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019 ಜನವರಿಯಿಂದ ಮೇ 2021ರವರೆಗೆ ಸುಮಾರು 1, 168 ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಪ್ರತಿದಿನ ಸರಾಸರಿ ಒಂದು ಅತ್ಯಾಚಾರ ಘಟನೆ ನಡೆಯುತ್ತಿದೆ. 22 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದ್ದು, ಹೆಚ್ಚು ಭೀತಿ ಹುಟ್ಟಿಸಿವೆ. ರಾಜ್ಯದ ಪೊಲೀಸರಿಂದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಮಾಹಿತಿ ಲಭ್ಯವಾಗಿದ್ದು, ಪ್ರಸಕ್ತ …

Read More »

ಈ ಸರ್ಕಾರದಲ್ಲಿ ಹೆಣ್ಮಕ್ಕಳಾಗಲೀ, ಗಂಡು ಮಕ್ಕಳಾಗಲೀ ಸೇಫ್ ಅಲ್ಲ: ಡಿ.ಕೆ.ಶಿ

ಬೆಂಗಳೂರು: ಈ ಸರ್ಕಾರದಲ್ಲಿ ಹೆಣ್ಮಕ್ಕಳಾಗಲೀ, ಗಂಡು ಮಕ್ಕಳಾಗಲೀ ಸೇಫ್ ಅಲ್ಲ. ಇದಕ್ಕೆ ಮೈಸೂರು ಪ್ರಕರಣವೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿ ನೋಡಿ ಪಾಪ ಗೃಹ ಸಚಿವರು ಹೊಸದಾಗಿ ಮಂತ್ರಿಯಾಗಿದ್ದಾರೆ. ಅವರ ಮೇಲೇನೆ ಮಾತನಾಡುವಂಥದ್ದಲ್ಲ. ಒಂದು ಸರ್ಕಾರ ಕಾರಣವಾಗುತ್ತದೆ. ಓರ್ವ ಗೃಹ ಸಚಿವ ಮಾತ್ರ ಅಲ್ಲ ಎಂದಿದ್ದಾರೆ.ನಾನು ಅವರ ಬಗ್ಗೆ ಕಾಮೆಂಟ್ ಮಾಡಲ್ಲ. …

Read More »

ಆ ಹುಡುಗಿ ಕತ್ತಲಲ್ಲಿ ಹೋಗಲೇ ಬಾರದಿತ್ತು ಎಂದವರಿಗೆ ಉತ್ತರಿಸಿದ ಇಂದ್ರಜಿತ್ ಲಂಕೇಶ್

ಮೈಸೂರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅನೇಕರು ಹುಡುಗಿಯದ್ದೇ ತಪ್ಪು ಎಂಬಂತೆ ಮಾತನಾಡಿದ್ದಾರೆ. ಆಕೆಗೆ ಕತ್ತಲಲ್ಲಿ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ತಲೆ ಎತ್ತಿದ್ದ ಡ್ರಗ್ಸ್​ ಪ್ರಕರಣದಲ್ಲಿ ಹಲವು ಆರೋಪ ಮಾಡಿ ಸುದ್ದಿಯಾಗಿದ್ದ ಅವರು, ಇತ್ತೀಚಿಗಿನ ದರ್ಶನ್​ ಪ್ರಕರಣದಲ್ಲಿ ಕೆಲ ಆರೋಪ ಮಾಡಿ ಗಮನ ಸೆಳೆದಿದ್ದರು. ಈಗ ಮೈಸೂರಿನಲ್ಲಿ ನಡೆದ ಗ್ಯಾಂಗ್​ ರೇಪ್​ ವಿಚಾರವಾಗಿ ಅವರು ಮಾತನಾಡಿದ್ದಾರೆ. ಮೈಸೂರಲ್ಲಿ …

Read More »

ಪೊಲೀಸ್​ ಇಲಾಖೆಯ ಕಣ್ಣು ಕೆಂಪಾಗಿಸಿದ ಬಚ್ಚನ್​ ಬಾಡಿಗಾರ್ಡ್​ ವಾರ್ಷಿಕ ಆದಾಯ: ದಿಢೀರ್​ ವರ್ಗಾವಣೆ..!

ಮುಂಬೈ: ವಾರ್ಷಿಕ ಆದಾಯ ಬರೋಬ್ಬರಿ ಒಂದೂವರೆ ಕೋಟಿ ರೂ. ಇದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಬಾಲಿವುಡ್​ ಹಿರಿಯ ನಟ ಅಮಿತಾಭ್​​ ಬಚ್ಚನ್​ ಅವರ ಪೊಲೀಸ್​ ಬಾಡಿಗಾರ್ಡ್​ ಜೀತೇಂದ್ರ ಶಿಂಧೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ವಿಭಾಗೀಯ ತನಿಖೆಗೂ ಸಹ ಆದೇಶಿಸಲಾಗಿದೆ. ಕಾನ್ಸ್​ಟೇಬಲ್​ ಆಗಿರುವ ಶಿಂಧೆ ಅವರನ್ನು ಮುಂಬೈ ಪೊಲೀಸ್​ ಇಲಾಖೆ ಬಚ್ಚನ್​ ಅವರ ಬಾಡಿಗಾರ್ಡ್​ ಆಗಿ ನೇಮಿಸಿತ್ತು. ಅನೇಕ ವರ್ಷಗಳಿಂದ ಬಿಗ್​ಬಿ ಅವರ ಅಂಗರಕ್ಷಕರಾಗಿ ಸೇವೆ ಸಲ್ಲಿಸಿರುವ ಶಿಂಧೆ ವಿರುದ್ಧ …

Read More »

ಅತ್ಯಾಚಾರದ ಆರೋಪಿಗಳು ಹೊರರಾಜ್ಯದವರೆಂಬ ಶಂಕೆ; ತ.ನಾಡು, ಕೇರಳದತ್ತ ಹೊರಟ ಪೊಲೀಸ್?

ಮೈಸೂರು: ಮೈಸೂರು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಆರೋಪಿಗಳ ಸುಳಿವು ಪತ್ತೆಯಾಗಿದೆ ಎನ್ನಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ದೊರೆತ ಬಿಯರ್ ಬಾಟಲ್​ಗಳು ಮೈಸೂರಿನಲ್ಲಿ ಖರೀದಿಯಾಗಿಲ್ಲ.. ಇನ್ನು ಆರೋಪಿಗಳು ತಮಿಳು ಮಲಯಾಳಂ ಮಾತನಾಡುತ್ತಿದ್ರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾಲೇಜು ವಿದ್ಯಾರ್ಥಿಗಳ ಬೆನ್ನು ಹತ್ತಿದ್ದು ಅತ್ಯಾಚಾರ ಮಾಡಿದವರು ಎಂಜಿನಿಯರ್ ವಿದ್ಯಾರ್ಥಿಗಳಾ ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ ಎನ್ನಲಾಗಿದೆ. ಮೈಸೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ತಮಿಳುನಾಡು ಮೂಲದ ಓರ್ವ ಹಾಗೂ ಕೇರಳ …

Read More »

ಘಟಪ್ರಭಾ : ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ.

ಘಟಪ್ರಭಾ : ಮೊನ್ನೆಯಷ್ಟೇ ಕ್ರೂರಿಗಳು ಮೈಸೂರಿನಲ್ಲಿ ಕಾಲೇಜು ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಮಾಸುವ ಮುನ್ನವೇ ಇಂತಹದೆ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಒಂದು ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.   ಸುಮಾರು 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 5 ಜನ ಕ್ರೂರಿ ಕಾಮುಕರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗುತ್ತಿದೆ. ಗೋಕಾಕ ತಾಲ್ಲೂಕಿನ ಘಟಪ್ರಭಾ ಪೊಲೀಸ್ …

Read More »

ಮೈಸೂರು ಅತ್ಯಾಚಾರ ಪ್ರಕರಣ: ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಸಚಿವ ಆರಗ ಸಭೆ

ಮೈಸೂರು: ಸಾಮೂಹಿಕ ಅತ್ಯಾಚಾರದಂತಹ ಗಂಭೀರ ಪ್ರಕರಣ ನಡೆದಿರುವ ಹೊತ್ತಿನಲ್ಲಿ ಪೊಲೀಸ್‌ ಅಧಿಕಾರಿಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಮಧ್ಯಾಹ್ನದವರೆಗೂ ಯಾವುದೇ ಸಭೆ ನಡೆಸಿರಲಿಲ್ಲ. ನಂತರ ಮಧ್ಯಾಹ್ನ 1 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಆರಂಭಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಹಾಗೂ ಚಿನ್ನದಂಗಡಿ ದರೋಡೆ ಪ್ರಕರಣ ಕುರಿತು ಮೊದಲಿಗೆ ಚರ್ಚೆ ಆರಂಭಿಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಕುರಿತೂ ಅಸಮಾಧಾನ ಹೊರಹಾಕಿದ್ದಾರೆ. ಗುರುವಾರ ರಾತ್ರಿ ನಗರಕ್ಕೆ ಬಂದ ಸಚಿವರು, ಶುಕ್ರವಾರ …

Read More »

ಗ್ಯಾಂಗ್‌ ರೇಪ್‌ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದು ಸುತ್ತಾಟದಲ್ಲೇ ಕಾಲ ಕಳೆದ ಸಚಿವ!

ಮೈಸೂರು: ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ ಮೈಸೂರಿಗೆ ಬಂದು ವಾಸ್ತವ್ಯ ಹೂಡಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಸುತ್ತಾಟ, ಪೂಜೆಗಳಲ್ಲೇ ಕಾಲ ಕಳೆದರು. ಶುಕ್ರವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ, ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ಸುತ್ತಾಟ ನಡೆಸಿದರು. ಅಲ್ಲಿ ಫೈರಿಂಗ್ ಸ್ಟಿಮಿಲೇಟರ್‌ನ್ನು ಉದ್ಘಾಟಿಸಿ, ತಾವೂ ಫೈರಿಂಗ್‌ ನಡೆಸಿ ಖುಷಿಪಟ್ಟರು. ಮಾದರಿ ಪೊಲೀಸ್ ಠಾಣೆ, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ವೀಕ್ಷಿಸಿದರು. ಅತ್ಯಾಚಾರ ಪ್ರಕರಣ ಹಾಗೂ …

Read More »

ಗೃಹ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ: ಸತೀಶ್ ಜಾರಕಿಹೊಳಿ ಆಕ್ರೋಶ

ಗೋಕಾಕ: ಗೃಹಸಚಿವರು ಅತ್ಯಾಚಾರ ಪ್ರಕರಣದ ಬಗ್ಗೆ ಬೇಜವಾಬ್ದಾರಿಯಾಗಿ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರ ಬಾಯಿಂದ ಈ ರೀತಿಯ ಮಾತು ಬರಬಾರದಿತ್ತು. ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜನರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಸಚಿವರು ಅವರ ಸಾಮರ್ಥ್ಯದ ಬಗ್ಗೆ ಅವರೇ ಸವಾಲು ಎತ್ತಿದ್ದಾರೆ ಎಂದರು. ಅತ್ಯಾಚಾರ …

Read More »