Breaking News
Home / ರಾಜ್ಯ (page 1520)

ರಾಜ್ಯ

ಗೋಕಾಕ ನಗರದ ಸಾರ್ವಜನಿಕಕರಿಗೆ ನಗರಸಭೆಯಿಂದ ಸೂಚನೆ?

ಗೋಕಾಕ ನಾಗರಿಕರಲ್ಲಿ ಈ ಮೂಲಕ ತಿಳಿಸುವುದೇನೆಂದರೆ   ಗೋಕಾಕ ನಗರಕ್ಕೆ ನೀರು ಪೂರೈಕೆ ಮಾಡುವ ನಗರದ ನದಿಯ ದಡದಲ್ಲಿರುವ ಜಾಕವೆಲ್ ನಲ್ಲಿರುವ 200 ಎಚ್.ಪಿ ಪಂಪಸೆಟ್ ಮೋಟಾರ್ ರಿಪೇರಿ ಇದ್ದ ಕಾರಣ ಗೋಕಾಕ ನಗರದಲ್ಲಿ  ಶುಕ್ರವಾರ ದಿ.3-9-2021ಮತ್ತು ಶನಿವಾರ ದಿ.4-9-2021 ರಂದು ನೀರು ಸರಬುರಾಜಿನಲ್ಲಿ ವ್ಯತ್ಯಯವಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಲು   ನಗರಸಭೆಯ ಅಧ್ಯಕ್ಷರಾದ ಶ್ರೀ ಜಯಾನಂದ ಹುಣಶ್ಯಾಳಿ,ಪೌರಾಯುಕ್ತರಾದ ಶ್ರೀ ಶಿವಾನಂದ ಹಿರೇಮಠ   ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ …

Read More »

ಗೋಕಾಕ ಸರಣಿ ಮನೆ ಕಳ್ಳತನ ಪ್ರಕರಣ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಗೆ ಸಾಹುಕಾರ ತರಾಟೆ

  ಗೋಕಾಕ ನಗರದಲ್ಲಿ ಸರಣಿ ಮನೆ ಕಳ್ಳತನ ಪ್ರಕರಣಗಳು ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಹಿನ್ನೆಲೆ ಗೋಕಾಕ ಪೊಲೀಸ್ ಇಲಾಖೆ ಡಿ.ಎಸ್.ಪಿ ಮನೋಜಕುಮಾರ ನಾಯಿಕಸಿಪಿಐ ಗೋಪಾಲ ರಾಠೋಡ ಸೇರಿದಂತೆ ಪಿಎಸ್‌ಐ ಗಳ ಸಭೆ ನಡೆಸಿದ ಶಾಸಕರಾದ ಸಾಹುಕಾರ ಶ್ರೀ ರಮೇಶ ಜಾರಕಿಹೊಳಿ ಅವರು ನಗರದಲ್ಲಿ ಸರಣಿ ಮನೆ ಕಳ್ಳತನ,ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ತನಿಖೆಗಾಗಿ ಈ ಕೂಡಲೇ ವಿಶೇಷ ಪೊಲೀಸ್ ತಂಡ ರಚಿಸಿ ಕಳ್ಳರನ್ನು ಬಂಧಿಸಿ   ಹೆಡೆಮುರಿ …

Read More »

ಅಪ್ಪಾ ಕೇಕ್​ ತಿನ್ನಪ್ಪಾ..ಕೋವಿಡ್​ಗೆ ಬಲಿಯಾದ ತಂದೆ ಸಮಾಧಿ ಬಳಿ ಬರ್ತ್​ ​ಡೇ ಆಚರಿಸಿಕೊಂಡ ಬಾಲಕಿ!

ಕೊಪ್ಪಳ: ತಂದೆಯ ಸಮಾಧಿ ಬಳಿ 8 ವರ್ಷದ ಬಾಲಕಿಯೊಬ್ಬಳು ಕೇಕ್​ ಕತ್ತರಿಸಿ ತನ್ನ ಜನ್ಮ ದಿನ ಆಚರಿಸಿಕೊಂಡಿದ್ದಾಳೆ. ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಬಾಲಕಿಯನ್ನ ಕಂಡು ಮರುಕು ವ್ಯಕ್ತಪಡಿಸುತ್ತಿದ್ದಾರೆ. ಕುಷ್ಟಗಿ ಪಟ್ಟಣದ ಬಾಲಕಿ ಸ್ಪಂದನಾ ತನ್ನ 8ನೇ ವರ್ಷದ ಬರ್ತ್ ಡೇ ಪ್ರಯುಕ್ತ ತಂದೆಯ ಸಮಾಧಿ ಮುಂದೆ ಕೇಕ್​ ಕತ್ತರಿಸಿದ್ದಾಳೆ. ಸ್ಪಂದನಾಳ ತಂದೆ ಮಹೇಶ ಕೊನಸಾಗರ ಅವರು ಕಳೆದ ಮೇ ತಿಂಗಳಲ್ಲಿ ಕರೊನಾ ಸೋಂಕಿಗೆ ಬಲಿಯಾಗಿದ್ದರು.     ತಂದೆ ಕೋವಿಡ್​ನಿಂದ …

Read More »

ಪೌರ ಕಾರ್ಮಿಕರಿಗೆ ಸದ್ಯದಲ್ಲೇ ಕೈಮಗ್ಗದ ಸಮವಸ್ತ್ರ; ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹೊಸ ಪ್ರಯೋಗ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪೌರ ಕಾರ್ಮಿಕರಿಗೆ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸಮವಸ್ತ್ರ ಖರೀದಿಸುತ್ತಿರುವ ಮೂರನೇ ಪಾಲಿಕೆಯಾಗಿದೆ. ಸೆಪ್ಟೆಂಬರ್ 10ರೊಳಗೆ ಸಮವಸ್ತ್ರಗಳು ಪೂರೈಕೆಯಾಗಲಿವೆ. ಹುಬ್ಬಳ್ಳಿ: ಕರ್ನಾಟಕದ ಅತಿ ದೊಡ್ಡ ಮಹಾನಗರ ಪಾಲಿಕೆ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತದೆ. ಇಲ್ಲಿ ಏನೇ ನಡೆದರೂ ಅದು ಸುದ್ದಿಯಾಗುತ್ತದೆ. ಈ ಬಾರಿ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ವಿತರಿಸುವ ಸಮವಸ್ತ್ರಗಳನ್ನು ಕರ್ನಾಟಕ ಕೈಮಗ್ಗ …

Read More »

ಹಾಸ್ಟೆಲ್​ನಲ್ಲಿ ಕೇಕ್​ ಕಟ್​ ಮಾಡಿ, ವಿದ್ಯಾರ್ಥಿನಿಯ ಬರ್ಥ್ ​​ಡೆ ಆಚರಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರೋ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವ್ಯವಸ್ಥೆ ಪರಿಶೀಲನೆ ಮಾಡಿದ್ರು. ಗದಗ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗದಗ ಜಿಲ್ಲೆಯಲ್ಲಿ ಇಂದು ಪ್ರವಾಸ ಕೈಗೊಂಡಿದ್ರು. ವಸತಿ ನಿಲಯಗಳಿಗೆ ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿ ಪರಿಶೀಲನೆ ಮಾಡಿದ್ರು. ಈ ವೇಳೆ ಹಾಸ್ಟೆಲ್​ನಲ್ಲಿ ಇರೋ ವಿದ್ಯಾರ್ಥಿಯೊಬ್ಬರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊವಿಡ್ ಭಯದಲ್ಲಿದ್ದ ವಿದ್ಯಾರ್ಥಿನಿಯರಿಗೆ …

Read More »

ಮರು ಬಿಡುಗಡೆಯಾಗುತ್ತಿದೆ ‘ಟಗರು’

ಶಿವರಾಜ್‌ಕುಮಾರ್‌ ಅಭಿನಯದ ಟಗರು ಚಿತ್ರವನ್ನು ಶುಕ್ರವಾರ ಮರು-ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಿಡುಗಡೆಯಾಗಿ ಮೂರೂವರೆ ವರ್ಷಗಳಾದ ಬಳಿಕವೂ ಸಹ ಶಿವಣ್ಣನೊಂದಿಗೆ, ಧನಂಜಯ್‌, ವಸಿಷ್ಠ ಎನ್ ಸಿಂಹ, ಮನ್ವಿತಾ ಕಾಮತ್‌ ಹಾಗೂ ಭಾವನಾ ಮುಖ್ಯ ಪಾತ್ರಗಳಲ್ಲಿ ಅಭಿನಿಯಿಸಿರುವ ಈ ಚಿತ್ರದ ಕಥೆ ಹಾಗೂ ಸಾಹಸ ದೃಶ್ಯಗಳು ಚಿತ್ರ ಪ್ರಿಯರಿಗೆ ಇನ್ನೂ ಇಷ್ಟವಾಗುತ್ತಿದೆ. ‘ಕಡ್ಡಿಪುಡಿ’ ಬಳಿಕ ಎರಡನೇ ಬಾರಿಗೆ ಕೈಜೋಡಿಸಿರುವ ಶಿವರಾಜ್ ಕುಮಾರ್‌ ಹಾಗೂ ನಿದೇರ್ಶಕ ದುನಿಯಾ ಸೂರಿ ‘ಟಗರು’ ಚಿತ್ರ ಮಾಡಿದ್ದಾರೆ. …

Read More »

ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕಳುಹಿಸಿಕೊಟ್ಟು ಸರ್‌ಪ್ರೈಸ್ ನೀಡಿದ ರಾಜಸ್ಥಾನ್ ರಾಯಲ್ಸ್

ಸೆಪ್ಟೆಂಬರ್ 2, ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ. ಸುದೀಪ್ ಅವರ ಹುಟ್ಟುಹಬ್ಬದ ದಿನವನ್ನು ಅವರ ಅಭಿಮಾನಿಗಳು ಹಬ್ಬದ ರೀತಿ ಆಚರಣೆಯನ್ನು ಮಾಡುತ್ತಾರೆ. ತಮ್ಮ ಉತ್ತಮ ಅಭಿನಯ ಮತ್ತು ಒಳ್ಳೆಯ ಗುಣಗಳಿಂದ ಕರ್ನಾಟಕದಲ್ಲಿ ಅಪಾರವಾದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕಿಚ್ಚ ಸುದೀಪ್ ಕನ್ನಡ ಹೊರತುಪಡಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ದೊಡ್ಡ ಮಟ್ಟದಲ್ಲಿಯೇ ಗುರುತಿಸಿಕೊಂಡಿದ್ದಾರೆ. ಹೀಗೆ ದೇಶದ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ …

Read More »

ಸಾಮಾಜಿಕ ಮಾಧ್ಯಮ, ಕೆಲ ವಾಹಿನಿಗಳಲ್ಲಿ ಸುಳ್ಳು, ಸೌಹಾರ್ದ ಕದಡುವ ಸುದ್ದಿ: ಸುಪ್ರೀಂ

ನವದೆಹಲಿ: ಸಾಮಾಜಿಕ ಮಾಧ್ಯಮಗಳು ಹಾಗೂ ವೆಬ್‌ಪೋರ್ಟಲ್‌ಗಳಲ್ಲಿ ಸುಳ್ಳು ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂಥ ಸುದ್ದಿಗಳನ್ನು ಹರಡಲಾಗುತ್ತಿದೆ. ಕೆಲವು ಚಾನೆಲ್‌ಗಳು ತಾವು ಬಿತ್ತರಿಸುವ ಸುದ್ದಿಗಳಿಗೂ ಕೋಮು ಬಣ್ಣ ಬಳಿಯುತ್ತಿವೆ ಎಂದು ಸುಪ್ರೀಂಕೋರ್ಟ್‌ ಗುರುವಾರ ಕಳವಳ ವ್ಯಕ್ತಪಡಿಸಿದೆ. ಜಮಿಯಾತ್‌ ಉಲೇಮಾ-ಐ-ಹಿಂದ್‌ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎ.ಎಸ್‌.ಬೋಪಣ್ಣ ಅವರಿರುವ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ದೆಹಲಿಯ ಮರ್ಕಜ್‌ ನಿಜಾಮುದ್ದೀನ್‌ನಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶಕ್ಕೆ ಸಂಬಂಧಿಸಿದಂತೆ …

Read More »

ಎತ್ತಿನಬಂಡಿ ಓಟ ಸ್ಪರ್ಧೆ: ಷರತ್ತುಗಳೊಂದಿಗೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು: ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ರಾಜ್ಯದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜನೆ ಮಾಡಲು ಹೈಕೋರ್ಟ್‌ ಬುಧವಾರ ಹಸಿರು ನಿಶಾನೆ ತೋರಿದೆ. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸುವುದನ್ನು ಪ್ರಶ್ನಿಸಿ ಮೈಸೂರಿನ ಪೀಪಲ್‌ ಫಾರ್‌ ಅನಿಮಲ್ಸ್‌. ವೆಲ್ಫೇರ್‌ ಆರ್ಗನೈಸೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ …

Read More »

ಎತ್ತಿನ ಬಂಡಿ ಓಟ: ‘ಸುಪ್ರೀಂ’ ಆದೇಶ ಪಾಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು: ಸುಪ್ರೀಂಕೋರ್ಟ್‌ ವಿಧಿಸಿರುವ ಷರತ್ತುಗಳ ಪಾಲನೆಯನ್ನು ಖಾತರಿಪಡಿಸಿಕೊಂಡ ಬಳಿಕವೇ ಎತ್ತಿನ ಬಂಡಿಗಳ ಓಟದ ಸ್ಪರ್ಧೆಗೆ ಅನುಮತಿ ನೀಡುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮೈಸೂರಿನ ಪೀಪಲ್‌ ಫಾರ್‌ ಅನಿಮಲ್‌ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ‘ಪ್ರಾಣಿಗಳ ಹಿಂಸೆ ತಡೆ ಕಾಯ್ದೆ-2017 (ಎರಡನೇ ತಿದ್ದುಪಡಿ ಕಾಯ್ದೆ)ಯ ಪ್ರಕಾರ, ಎತ್ತಿನ ಬಂಡಿ ಓಟದ ಸ್ಪರ್ಧೆಗೆ …

Read More »