Breaking News
Home / ರಾಜಕೀಯ / 2021-22ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನ

2021-22ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನ

Spread the love

ಬೆಳಗಾವಿ: ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂಧಿತ ಸಮುದಾಯದವರ ಆರ್ಥಿಕ ಸಬಲೀಕರಣಕ್ಕಾಗಿ 2021-22ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್ ಸಹಯೋಗದೊಂದಿಗೆ), ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ (ಮಹಿಳಾ ಸ್ವ-ಸಹಾಯ ಗುಂಪುಗಳಿಗೆ), ಗಂಗಾ ಕಲ್ಯಾಣ ಯೋಜನೆ (ವೈಯಕ್ತಿಕ) ಮತ್ತು ಭೂ ಒಡೆತನ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 2 ಕೊನೆಯ ದಿನಾಂಕವಾಗಿರುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರತಿಯನ್ನು ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಬೆಳಗಾವಿ ಜಿಲ್ಲೆ. ರೂಮ್ ನಂ.222 ಎರಡನೇ ಮಹಡಿ ಸುವರ್ಣ ವಿಧಾನ ಸೌಧ, ಬೆಳಗಾವಿ-590020 ಈ ಕಚೇರಿಯನ್ನು ಸಂಪರ್ಕಿಸಬಹುದು ಹಾಗೂ ದೂರವಾಣಿ ಸಂ.0831-2471191 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃಧ್ಧಿ ನಿಗಮದ ವತಿಯಿಂದ ೨೦೨೧-೨೨ನೇ ಸಾಲಿಗೆ ೨೧ ರಿಂದ ೬೦ ವರ್ಷದೊಳಗಿನ ಅರ್ಹ ಸಫಾಯಿ ಕರ್ಮಚಾರಿ / ಮ್ಯಾನ್ಯೂಯಲ್ ಸ್ಕ್ಯಾವೇಂಜರ‍್ಸ್ ಮತ್ತು ಅವರ ಅವಲಂಬಿತರರಿಗೆ ಈ ಕೆಳಕಂಡ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
ಯೋಜನೆಗಳು :
ನೇರ ಸಾಲ ಯೋಜನೆ, ಉದ್ಯಮ ಶೀಲತಾ ಯೋಜನೆ (ಐ.ಎಸ್.ಬಿ), ಪ್ರವಾಸಿ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನ ಖರೀದಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ (ಸ್ವ ಸಹಾಯ ಗುಂಪುಗಳಿಗೆ), ಭೂ ಒಡೆತನ ಯೋಜನೆ ಗಳಿಗೆ ಸೆಪ್ಟೆಂಬರ್ ೨೦ರ ವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
ನಿಗಮದ ವೆಬ್‌ಸೈಟ್ ನಲ್ಲಿ ಮೇಲ್ಕಂಡ ಯೋಜನೆಗಳಡಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ಹಿಂದೆ ನಿಗಮದ ಯಾವುದೇ ಯೋಜನೆಗಳಡಿ ಸಫಾಯಿ ಕರ್ಮಚಾರಿ / ಮ್ಯಾನ್ಯೂಯಲ್ ಸ್ಕ್ಯಾವೇಂಜರ‍್ಸ್ ಮತ್ತು ಅವರ ಅವಲಂಬಿತರ ಗರಿಷ್ಠ ರೂ. ೧.೦೦ ಲಕ್ಷಕ್ಕಿಂತ ಮೇಲ್ಪಟ್ಟು ಕಳೆದು ೦೩ ವರ್ಷಗಳಲ್ಲಿ ಸವಲತ್ತುಗಳನ್ನು ಪಡೆದವರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಆದ್ದರಿಂದ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ವಿರುವುದಿಲ್ಲ.
ಸಾಮನ್ಯ ಷರತ್ತುಗಳು:
ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ವೃತ್ತಿಯಲ್ಲಿ ಕನಿಷ್ಠ ೦೫ ವರ್ಷಗಳವರೆಗೆ ಕಾರ್ಯನಿರ್ವಹಿಸಿದ ಬಗ್ಗೆ ದಾಖಲೆ ಹೊಂದಿರಬೇಕು, ಕನಿಷ್ಠ ೨೧ ವಯಸ್ಸಿವರಾಗಿರಬೇಕು ಮತ್ತು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿರೂ. ೩.೦೦ ಲಕ್ಷ ಮತ್ತು ನಗರ ಪ್ರದೇಶದಲ್ಲಿರೂ. ೫.೦೦ ಲಕ್ಷ ಮಿತಿಯಲ್ಲಿರಬೇಕು, ಸಫಾಯಿ ಕರ್ಮಚಾರಿ / ಮ್ಯಾನ್ಯೂಯಲ್ ಸ್ಕ್ಯಾವೇಂಜರ‍್ಸ್ ಮತ್ತು ಅವರ ಅವಲಂಬಿತರ ಗರಿಷ್ಠ ರೂ. ೧.೦೦ ಲಕ್ಷಕ್ಕಿಂತ ಮೇಲ್ಪಟ್ಟು ಸೌಲಭ್ಯವನ್ನು ಕಳೆದು ೦೩ ವರ್ಷಗಳಲ್ಲಿ ಪಡೆದಿರಬಾರದು.
ಕನಿಷ್ಠ ೧೦ ನೇ ತರಗತಿ ವಿದ್ಯಾರ್ಹತೆ ಹೊಂದಿರುವವರಿಗೆಆದ್ಯತೆ ನೀಡಲಾಗುವುದು, ಪೌರಕಾರ್ಮಿಕರು / ಗುರುತಿಸಲ್ಪಟ್ಟ ಮ್ಯಾನ್ಯೂಯಲ್ ಸ್ಕ್ಯಾವೇಂಜರ‍್ಸ್ ಮತ್ತು ಅವರ ಅವಲಂಬಿತರ ಕುಟುಂಬದಲಿ ಒಬ್ಬರಿಗೆ ಮಾತ್ರ ಸವಲತ್ತು ನೀಡಲಾಗುವುದು.
ಯೋಜನೆಗಳ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ಕ್ಕೆ ಭೇಟಿ ನೀಡಿ ಪಡೆಯಬಹುದಾಗಿರುತ್ತದೆ. ಅರ್ಜಿ ಪ್ರತಿ ಹಾಗೂ ಸ್ವೀಕೃತಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃಧ್ಧಿ ನಿಗಮ, ರೂಮ್ ನಂ:೧೨೩ ೧ನೇ ಮಹಡಿ ಸುವರ್ಣ ವಿಧಾನಸೌಧ ಹಲಗಾ ಬೆಳಗಾವಿ-೨೦ ವಿಳಾಸದಲ್ಲಿ ಸಲ್ಲಿಸಲು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ

ಡಾ:ಬಿ.ಆರ್. ಅಂಬೇಡ್ಕರ್ ಅಭಿವೃಧ್ಧಿ ನಿಗಮದ ಮತ್ತು ಅಲೆಮಾರಿ ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದಿಂದ ವತಿಯಿಂದ ೨೦೨೧-೨೨ನೇ ಸಾಲಿಗೆ ಈ ಕೆಳಕಂಡ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ೧೮ ರಿಂದ ೬೦ ವರ್ಷದೊಳಗಿನ ಅರ್ಹ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾಸಲಾಗಿದೆ.
ಯೋಜನೆಗಳು : ನೇರ ಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಐ.ಎಸ್.ಬಿ), ಮೈಕ್ರೋ ಕ್ರೆಡಿಟ್ ಯೋಜನೆ (ಸ್ವ ಸಹಾಯ ಗುಂಪುಗಳಿಗೆ), ಗಂಗಾ ಕಲ್ಯಾಣ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗಮದ ವೆಬ್‌ಸೈಟ್ರ ನಲ್ಲಿ ಮೇಲ್ಕಂಡ ಯೋಜನೆಗಳಡಿ ಆನ್ ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ಈ ಹಿಂದೆ ನಿಗಮದ ಯಾವುದೇ ಯೋಜನೆಗಳಡಿ ಸಾಲ ಸೌಲಭ್ಯ ಪಡೆದಿರುವ ಫಲಾನುಭವಿಗಳು ಅಥವಾ ಅವರ ಕುಟುಂಬದ ಸದಸ್ಯರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಆದ್ದರಿಂದ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ವಿರುವುದಿಲ್ಲ. ಅದೇ ರೀತಿ ಈ ಹಿಂದೆ ಅರ್ಜಿ ಸಲ್ಲಿಸಿ ಸವಲತ್ತು ಪಡೆಯದೇ ಇರುವ ಅರ್ಜಿದಾರರು ಪುನಃ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ಸಪ್ಟೆಂಬರ್ ೦೨ ಕೊನೆಯ ದಿನವಾಗಿದ್ದು, ಅರ್ಜಿ ಪ್ರತಿ ಹಾಗೂ ಸ್ವೀಕೃತಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಾ:ಬಿ.ಆರ್. ಅಂಬೇಡ್ಕರ್ ಅಭಿವೃಧ್ಧಿ ನಿಗಮದ ಮತ್ತು ಅಲೆಮಾರಿ ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶ ಬೆಳಗಾವಿ, ರೂಮ್ ನಂ:೧೨೩ ೧ನೇ ಮಹಡಿ ಸುವರ್ಣ ವಿಧಾನಸೌಧ ಹಲಗಾ, ಬೆಳಗಾವಿ-೨೦ ವಿಳಾಸದಲ್ಲಿ ಸಲ್ಲಿಸಲು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

೨೦೨೧-೨೨ ನೇ ಸಾಲಿನ ಮೆರಿಟ್ ಆಧಾರದ ಮೇಲೆ ಪ್ರವೇಶಾತಿ ವಿಧಾನದ ೨೬ ಸರ್ಕಾರಿ ಮತ್ತು ೦೮ ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿನ ಪೂರ್ಣಾವಧಿಯ ಇಂಜಿನಿಯರಿಂಗ್ ಮತ್ತು ನಾನ್ ಇಂಜಿನಿಯರಿಂಗ್ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಆ.೨೧ ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದ್ದು, ಆ.೨೫ ರವರೆಗೆ ವಿಸ್ತರಿಸಲಾಗಿದೆ.
ಆದರೆ, ಹಲವು ಪಾಲಿಟೆಕ್ನಿಕ್ ಪ್ರಾಂಶುಪಾಲರುಗಳ ಮನವಿ ಮೇರೆಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯ ಮೇರೆಗೆ ಇಲಾಖೆಯ ಅಧೀಕೃತ ವೆಬ್ ಸೈಟ್ ಗಳಿಂದ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿ ಮತ್ತು ಆದ್ಯತಾ ಪಟ್ಟಿಯನ್ನು ಪ್ರವೇಶ ಬಯಸುವ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸುವ ಅವಧಿಯನ್ನು ವಿಸ್ತರಿಸಿ ಅನುಮತಿ ನೀಡಲಾಗಿದೆ.
ವಿಶೇಷ ಗುಂಪಿನಡಿ ಬರುವ ಸ್ಪೋರ್ಟ, ಎನ್.ಸಿ.ಸಿ ಮತ್ತು ಸ್ಕೌಟ್ಸ್ & ಗೈಡ್ಸ್, ಸೈನಿಕ & ಮಾಜಿ ಸೈನಿಕ, ಬಾಲಪರಾಧಿ ಕೋಟಾ, ಹೊರನಾಡ ಕನ್ನಡಿಗ / ಹೊರನಾಡ ಕನ್ನಡಿಗ ಕೋಟಾದ, ಐ.ಟಿ.ಐ, ಜೆ.ಓ.ಸಿ, ಜೆ.ಎಲ್.ಸಿ ಕೋಟಾದ ಮತ್ತು ವಿಶೇಷ ಚೇತನರ ಕೋಟಾ ಪ್ರವರ್ಗಗಳಿಗೆ ಸ್ಥಾನಗಳನ್ನು ಮೀಸಲಿಸಿರುವ ಸಂಸ್ಥೆಗಳ ಪ್ರಾಂಶಪಾಲರುಗಳು ಮಾರ್ಗಸೂಚಿಗಳನ್ನು ಅನುಸರಿಸಿ ಇಲಾಖೆಯು ಒದಗಿಸಿರುವ ತಂತ್ರಾಂಶದಲ್ಲಿ ಆ.೨೭ ರ ಒಳಗೆ ವಿವರಗಳನ್ನು ಕಡ್ಡಾಯವಾಗಿ ತಪ್ಪದೇ ನಮೂದಿಸುವುದು.
ಈ ರೀತಿ ನಮೂದಿಸಿದ ವಿದ್ಯಾರ್ಥಿಗಳಿಗೆ ಆ.೨೮ ರಂದು ಎಲ್ಲಾ ವರ್ಗದ ವಿದ್ಯಾರ್ಥಿಗಳ ಜೊತೆಗೆ ಸೀಟು ಹಂಚಿಕೆ ಮಾಡಲಾಗುವುದು.
ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಪ್ರವೇಶಾತಿ ಪ್ರಕ್ರಿಯೆ ನಡೆಸುವ ಸಂಸ್ಥೆಗಳಲ್ಲಿನ ಎಸ್.ಎಸ್.ಕ್ಯೂ ಕೋಟಾದ ಸೀಟು ಹಂಚಿಕೆಯನ್ನು ನೇರವಾಗಿ ಇಲಾಖೆಯ ತಂತ್ರಾಂಶದ ಮೂಲಕವೇ ನಡೆಸಲಾಗುವುದು. ಆದ್ದರಿಂದ ಈ ಕೋಟಾದಡಿ ಪ್ರವೇಶ ಬಯಸಿ ಕ್ಲೇಮು ಮಾಡುವ ವಿದ್ಯಾರ್ಥಿಗಳ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸುವುದು ಸಂಸ್ಥೆಯ ಪ್ರಾಂಶುಪಾಲರ ಜವಾಬ್ದಾರಿಯಾಗಿರುತ್ತದೆ.
ಉಳಿದಂತೆ ಪ್ರವೇಶಾಧಿಸೂಚನೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬೆಂಗಳೂರು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

 ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ೨೦೨೧-೨೨ನೇ
ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸಲು ಅರ್ಹ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇರ ಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಐ.ಎಸ್.ಬಿ) , ಮೈಕ್ರೋ ಕ್ರೆಡಿಟ್ ಯೋಜನೆ (ಸ್ವ-ಸಹಾಯ ಗುಂಪುಗಳಿಗೆ) , ಗಂಗಾ ಕಲ್ಯಾಣ ಯೋಜನೆ ಮತ್ತು ಭೂ ಒಡೆತನ ಯೋಜನೆಯಡಿ ನಿಗಮದ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಹಿಂದೆ ನಿಗಮದ ಯಾವುದೇ ಯೋಜನೆಗಳಡಿ ಸಾಲ ಪಡೆದಿರುವ ಫಲಾನುಭವಿಗಳು ಅಥವಾ ಅವರ ಕುಟುಂಬದ ಸದಸ್ಯರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.ಆದ್ದರಿಂದ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ವಿರುವುದಿಲ್ಲ. ಅದೇ ರೀತಿ ಈ ಹಿಂದೆ ಅರ್ಜಿ ಸಲ್ಲಿಸಿ ಸವಲತ್ತು ಪಡೆಯದೇ ಇರುವ ಅರ್ಜಿದಾರರು ಪುನಃ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ