Breaking News

ರಾಜ್ಯ

ಹೊಸ ವರ್ಷದ ದಿನದಂದು* *ಅರಭಾವಿ ಆಂಜನೇಯ ಮತ್ತು ಕಲ್ಲೊಳ್ಳಿ ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.*

  *ಮೂಡಲಗಿ*- ಹೊಸ ವರ್ಷದ ದಿನದಂದು ಕ್ಷೇತ್ರದ ಜನ ಕಲ್ಯಾಣ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯ ಸಂಕಲ್ಪದ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾನುವಾರ ಸಂಜೆ ಕ್ಷೇತ್ರದ ಅಧಿದೇವತೆ ಅರಭಾವಿಯ ಆಂಜನೇಯ ಮತ್ತು ಕಲ್ಲೋಳ್ಳಿ ಮಾರುತೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಮ್ಮ ಕ್ಷೇತ್ರ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ಜನತೆಯು ಸುಖ, ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಬೇಕು. ಎಲ್ಲರಿಗೂ ದೇವರು …

Read More »

2023 ರಲ್ಲಿ ವಿಧಾನಸಭಾ ಚುನಾವಣೆಗಳ ಸರಣಿ ; 2024ಕ್ಕೆ ಒಂದು ರೀತಿ ಸೆಮಿಫೈನಲ್

ನವದೆಹಲಿ : 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈ ವರ್ಷ ನಡೆಯಲಿರುವ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಪ್ರಮುಖ ರಾಜ್ಯಗಳಾದ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ.   ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯದಲ್ಲಿ ಮೊದಲಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಶಾಸಕಾಂಗ ಸಭೆಗಳ ಅವಧಿಯು ಮಾರ್ಚ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ಕೊನೆಗೊಳ್ಳುತ್ತಿದೆ. …

Read More »

ಹೊಸ ವರ್ಷಕ್ಕೆ ಬಂತು ಮಾತೃ ಭೂಮಿ ಫೌಂಡೇಶನ್, ಲಖನ ಜಾರಕಿಹೊಳಿ ಅವರ್ ಸಹಕಾರ ದೊಂದಿಗೆ ಸಮಾಜ ಸೇವೆಗೆ ಸಿದ್ಧ್

ಗೋಕಾಕ : ಗೋಕಾಕ ನಗರದ ಯುವಕರ ತಂಡ ಸಮಾಜ ಸೇವೆ, ಯುವಕರ ಹಲವಾರು ಕಾರ್ಯಕ್ಕೆ ಪ್ರೋತ್ಸಾಹ. ದಿನ ದಲಿತರ, ಬಡ ಬಂದುಗಳ ಸೇವೆಯನ್ನು ಮಾಡುತ್ತೇವೆ ಎಂದು ಲಖನ ಜಾರಕಿಹೊಳಿ ಅವರ ಸಹಕಾರದೊಂದಿಗೆ ಒಂದು ಯುವಕರ ತಂಡ ಹೊಸ ವರ್ಷಕ್ಕೆ ಈ ಒಂದು ಫೌಂಡೇಶನ್ ಅನ್ನು ಪ್ರಾರಂಭ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಲಖನ ಜಾರಕಿಹೊಳಿ ಅವರು ಹಾಗೂ ಯುವನಾಯಕ ಪತ್ರ ಕರ್ತರ ಸಂಘದ ಗೌರವಾಧ್ಯಕ್ಷ ರಾದ ಶ್ರೀ ಸರ್ವೋತ್ತಮ ಭೀಮಶಿ …

Read More »

ಹೈದರಾಬಾದ್: ಸಾರ್ವಜನಿಕ ಸಭೆಯೊಂದರಲ್ಲಿ ಹಿಂದೂಗಳ ಆರಾಧ್ಯ ದೇವರಾದ ಅಯ್ಯಪ್ಪ, ಶಿವ ಮತ್ತು ವಿಷ್ಣು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ದಲಿತ ಮುಖಂಡ ಮತ್ತು ಭಾರತ ನಾಸ್ತಿಕ ಸಮಾಜದ ಮುಖ್ಯಸ್ಥ ಬೈರಿ ನರೇಶ್ ವಿರುದ್ಧ ಪೊಲೀಸ್ ಸೈಬರ್ ಕ್ರೈಂ ಸೆಲ್ ಪ್ರಕರಣ ದಾಖಲಿಸಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲವಾರು ದಲಿತ ಸಂಘಟನೆಗಳ ಸಭೆಯಲ್ಲಿ ನರೇಶ್ ಅವರು ಅಯ್ಯಪ್ಪ ದೇವರ ಜನ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಮತ್ತು ಇತರ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಹೈದರಾಬಾದ್‌ನಲ್ಲಿ ಪ್ರತಿಭಟನೆಗಳು ನಡೆದಿದ್ದು, ನರೇಶ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಅಯ್ಯಪ್ಪ ಸ್ವಾಮಿಯ ಹಲವಾರು ಭಕ್ತರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕರಾಟೆ ಕಲ್ಯಾಣಿ ಎಂಬ ಮಹಿಳೆ ದೂರು ದಾಖಲಿಸಿದ್ದು, ಪ್ರಚಾರಕ್ಕಾಗಿ ಹಿಂದೂ ದೇವರನ್ನು ಅವಮಾನಿಸುವುದು ಫ್ಯಾಶನ್ ಆಗಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ನರೇಶ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಿಂದೂಗಳ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸುವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಸರ್ಕಾರದ ವಿರುದ್ಧ ಕಿಡಿಕಾರಿ ಅಪರಾಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹೈದರಾಬಾದ್: ಸಾರ್ವಜನಿಕ ಸಭೆಯೊಂದರಲ್ಲಿ ಹಿಂದೂಗಳ ಆರಾಧ್ಯ ದೇವರಾದ ಅಯ್ಯಪ್ಪ, ಶಿವ ಮತ್ತು ವಿಷ್ಣು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ದಲಿತ ಮುಖಂಡ ಮತ್ತು ಭಾರತ ನಾಸ್ತಿಕ ಸಮಾಜದ ಮುಖ್ಯಸ್ಥ ಬೈರಿ ನರೇಶ್ ವಿರುದ್ಧ ಪೊಲೀಸ್ ಸೈಬರ್ ಕ್ರೈಂ ಸೆಲ್ ಪ್ರಕರಣ ದಾಖಲಿಸಿದೆ.   ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲವಾರು ದಲಿತ ಸಂಘಟನೆಗಳ ಸಭೆಯಲ್ಲಿ ನರೇಶ್ ಅವರು ಅಯ್ಯಪ್ಪ ದೇವರ …

Read More »

R.S.S. ಕೇಂದ್ರ ಕಚೇರಿಗೆ ಬಾಂಬ್ ಬೆದರಿಕೆ : ಭದ್ರತೆ ಹೆಚ್ಚಳ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೇಂದ್ರ ಕಚೇರಿಯನ್ನು ಶನಿವಾರ ಅಪರಿಚಿತರು ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   “ಪೊಲೀಸ್ ಕಂಟ್ರೋಲ್ ರೂಂಗೆ ಮಧ್ಯಾಹ್ನ 1 ಗಂಟೆಗೆ ಫೋನ್ ಕರೆ ಬಂದಿದ್ದು, ಮಹಲ್ ಪ್ರದೇಶದಲ್ಲಿನ ಆರ್‌ಎಸ್‌ಎಸ್ ಕೇಂದ್ರ ಕಚೇರಿಯನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ ಎಂದು ವಲಯ ಡಿಸಿಪಿ ಗೋರಖ್ ಭಮ್ರೆ ಹೇಳಿದ್ದಾರೆ. ಬಾಂಬ್ ಪತ್ತೆ ಮತ್ತು …

Read More »

ಮದುವೆಗೆ ಹೆಣ್ಣು ಸಿಗಲಿಲ್ಲವೆಂದು ವ್ಯಕ್ತಿಯೋರ್ವ ಮನನೊಂದು ಸ್ಮಶಾನದಲ್ಲಿಯೇ ಬೆಂಕಿ ಹಚ್ಚಿಕೊಂಡ

ಮದುವೆಗೆ ಹೆಣ್ಣು ಸಿಗಲಿಲ್ಲವೆಂದು ವ್ಯಕ್ತಿಯೋರ್ವ ಮನನೊಂದು ಸ್ಮಶಾನದಲ್ಲಿಯೇ ಬೆಂಕಿ ಹಚ್ಚಿಕೊಂಡ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ಸಂತೋಷ ಕೊರಡಿ (೩೦) ಎಂಬಾತನೇ ಬೆಂಕಿಹಚ್ಚಿಕೊಂಡಾತ. ತನಗೆ ವಯಸ್ಸಾದರೂ ಮದುವೆಗೆ ಕನ್ಯೆ ಸಿಗಲಿಲ್ಲವೆಂದು ಮನನೊಂದಿದ್ದು, ಅಲ್ಲದೇ ಮಾನಸಿಕ ಅಸ್ವಸ್ಥನಾಗಿದ್ದ ಯುವಕ ಅಮ್ಮಿನಬಾವಿ ಗ್ರಾಮದ ಸ್ಮಶಾನದಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆನ್ನಲಾಗಿದೆ. ಸಂತೋಷನಿಗೆ ದೇಹದ ಶೇಕಡಾ ಅರ್ಧದಷ್ಟು ಭಾಗ ಬೆಂಕಿಗೆ ಆಹುತಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ಗಾಯಗೊಂಡ ಹಿನ್ನಲೆ ಹುಬ್ಬಳ್ಳಿ ಕಿಮ್ಸ್ …

Read More »

ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಚಾಲಕನಿಂದ ಅತ್ಯಾಚಾರ

ಪಣಜಿ: ರಜೆಯ ನಿಮಿತ್ತ ಗೋವಾಕ್ಕೆ ಕ್ರಿಸ್​ಮಸ್​ ಪಾರ್ಟಿ ಮಾಡಲು ಸ್ನೇಹಿತರ ಜೊತೆ ತೆರಳಿದ್ದ 18 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಬಸ್​ ಚಾಲಕನೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಮುಂಬೈ ಮೂಲದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರದಂದು ಆರೋಪಿಯ ಬಸ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿಯು ವಾಸ್ಕೋದ ಜುವಾರಿನಗರದ ನಿವಾಸಿಯಾಗಿದ್ದಾನೆ. ಸಂತ್ರಸ್ತೆ 14 ಜನ ಸ್ನೇಹಿತರ ಜತೆಗೂಡಿ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಆಕೆಯ …

Read More »

ಪ್ರತಿ ಟನ್‌ ಕಬ್ಬಿಗೆ ಹೆಚ್ಚುವರಿ ₹150 | ಪ್ರತಿಭಟನೆ ಕೈಬಿಟ್ಟ ಕಬ್ಬು ಬೆಳೆಗಾರರು

ಬೆಂಗಳೂರು: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಜತೆಗೆ ಹೆಚ್ಚುವರಿಯಾಗಿ ₹ 150 ನೀಡಲು ರಾಜ್ಯ ಸರ್ಕಾರವು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 39 ದಿನಗಳಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಕಬ್ಬು ಬೆಳೆಗಾರರು ಶುಕ್ರವಾರ ಸ್ಥಗಿತಗೊಳಿಸಿದರು.‌ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಎಫ್‌ಆರ್‌ಪಿ ಜತೆಗೆ ಪ್ರತಿ ಟನ್‌ಗೆ …

Read More »