Breaking News
Home / ರಾಜ್ಯ (page 1521)

ರಾಜ್ಯ

ಎತ್ತಿನಬಂಡಿ ಓಟ ಸ್ಪರ್ಧೆ: ಷರತ್ತುಗಳೊಂದಿಗೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು: ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ರಾಜ್ಯದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜನೆ ಮಾಡಲು ಹೈಕೋರ್ಟ್‌ ಬುಧವಾರ ಹಸಿರು ನಿಶಾನೆ ತೋರಿದೆ. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸುವುದನ್ನು ಪ್ರಶ್ನಿಸಿ ಮೈಸೂರಿನ ಪೀಪಲ್‌ ಫಾರ್‌ ಅನಿಮಲ್ಸ್‌. ವೆಲ್ಫೇರ್‌ ಆರ್ಗನೈಸೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ …

Read More »

ಎತ್ತಿನ ಬಂಡಿ ಓಟ: ‘ಸುಪ್ರೀಂ’ ಆದೇಶ ಪಾಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು: ಸುಪ್ರೀಂಕೋರ್ಟ್‌ ವಿಧಿಸಿರುವ ಷರತ್ತುಗಳ ಪಾಲನೆಯನ್ನು ಖಾತರಿಪಡಿಸಿಕೊಂಡ ಬಳಿಕವೇ ಎತ್ತಿನ ಬಂಡಿಗಳ ಓಟದ ಸ್ಪರ್ಧೆಗೆ ಅನುಮತಿ ನೀಡುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮೈಸೂರಿನ ಪೀಪಲ್‌ ಫಾರ್‌ ಅನಿಮಲ್‌ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ‘ಪ್ರಾಣಿಗಳ ಹಿಂಸೆ ತಡೆ ಕಾಯ್ದೆ-2017 (ಎರಡನೇ ತಿದ್ದುಪಡಿ ಕಾಯ್ದೆ)ಯ ಪ್ರಕಾರ, ಎತ್ತಿನ ಬಂಡಿ ಓಟದ ಸ್ಪರ್ಧೆಗೆ …

Read More »

ಕೇಂದ್ರದ ಅನ್ಯಾಯ ಪ್ರಶ್ನಿಸುವ ತಾಕತ್ತು ಬಿಜೆಪಿ ನಾಯಕರಿಗಿದೆಯೇ? ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು: ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಕೊಡದಿರುವ ಕುರಿತ ಚರ್ಚೆಗೆ ಬಿಜೆಪಿ ತಯಾರಿದೆಯೇ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಕೇಂದ್ರ ಪುರಸ್ಕೃತ ಹತ್ತು ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಹಣ ನೀಡಿಲ್ಲ. ರಾಜ್ಯ ಸರ್ಕಾರ ಕೂಡ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಬಹುತೇಕ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿದೆ. ಈ ಬಗ್ಗೆ ‘ಕೈಕೊಟ್ಟ ಕೇಂದ್ರ: ಯೋಜನೆ ಸ್ಥಗಿತ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಜಾವಾಣಿಯ ಗುರುವಾರದ …

Read More »

E-KYC : ಪಡಿತರ ಚೀಟಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕಲಬುರಗಿ : ಸರ್ಕಾರದ ನಿರ್ದೇಶನದಂತೆ ಎಲ್ಲಾ ಪಡಿತರ ಚೀಟಿದಾರರು ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಬಯೋಮೆಟ್ರಿಕ್ ನೀಡಿ ಇ-ಕೆವೈಸಿ (ಜೀವ ಮಾಪಕ/ಹೆಬ್ಬಟ್ಟು ಗುರುತಿನ ದೃಢೀಕರಣ) ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಜಿಲ್ಲೆಯ ಇನ್ನುಳಿದ ಪಡಿತರ ಚೀಟಿದಾರರು 2021ರ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 10 ರೊಳಗಾಗಿ ಇ-ಕೆವೈಸಿ ಮಾಡಿಕೊಳ್ಳಬೇಕೆಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.   ಕಲಬುರಗಿ ಜಿಲ್ಲೆಯ 983 ನ್ಯಾಯಬೆಲೆ …

Read More »

ವಿಜಯಪುರ: ನಿಗೂಢ ಭಾರಿ ಶಬ್ದಕ್ಕೆ ನಿದ್ದೆಗೆಟ್ಟು ಜಾಗರಣೆ ಮಾಡಿದ ಜನ.!

ವಿಜಯಪುರ: ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಮತ್ತೆ ನಿಗೂಢ ಶಬ್ಧ ಕೇಳಿ ಬಂದಿದೆ. ಪರಿಣಾಮ ಭೂಕಂಪನದ ಅನುಭವ ಎಂದುಕೊಂಡ ಜನರು ಭಯದಿಂದ ಇಡೀ ರಾತ್ರಿ ಮನೆಯಿಂದ ಹೊರಗೆ ಓಡಿಬಂದು ನಿದ್ದೆ ಇಲ್ಲದೇ ಜಾಗರಣೆ ಮಾಡಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ಕರಿಭಂಟನಾಳ, ಪಿ.ಬಿ‌.ಹುಣಶ್ಯಾಳ ಗ್ರಾಮದಲ್ಲಿ ಬುಧವಾರ ರಾತ್ರಿ ಭೂಕಂಪದ ಮಾದರಿಯಲ್ಲಿ ಭಾರಿ ಸದ್ದು ಕೇಳಿಬಂದಿದೆ. ಮನೆಯಲ್ಲಿ ಪಾತ್ರೆಗಳು, ಇತರೆ ವಸ್ತುಗಳು ಅಲುಗಾಡಿ ಕೆಳಗೆ ಬಿದ್ದಿವೆ. ಇದರಿಂದ ಭಯಗೊಂಡ ಗ್ರಾಮದ ಜನರು ಮನೆಯಿಂದ ಹೊರಗೆ ಓಡಿ …

Read More »

ಮೋದಿ ಸರ್ಕಾರವು ಬಂಡವಾಳಶಾಯಿ ಕೈಗೊಂಬೆ: ಸಿದ್ದರಾಮಯ್ಯ ಆರೋಪ

ಬೆಂಗಳೂರು: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಉದ್ಯಮಿಗಳ 7 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆ ಪೈಕಿ ಅದಾನಿ ಅವರದ್ದೇ 4.50 ಲಕ್ಷ ಕೋಟಿ ರೂ. ಎನ್ ಪಿಎ ಇದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಜಗತ್ತಿನ ಅಭಿವೃದ್ದಿ ಹೊಂದುವ ವೇಗದ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಈಗ 193 ದೇಶಗಳ …

Read More »

ಪಿಎಚ್‍ಡಿ ವ್ಯಾಸಂಗ ಬೇಡ ಎಂದ ಪಾಲಕರು- ಯುವತಿ ಆತ್ಮಹತ್ಯೆ

ಬಳ್ಳಾರಿ: ಪಿಎಚ್‍ಡಿ ವ್ಯಾಸಂಗ ಮಾಡುವುದು ಬೇಡ ಎಂದು ಪೋಷಕರು ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ನಡೆದಿದೆ. ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಯು.ಎನ್. ಪೂಜಾ(24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪೂಜಾ ಎಂ.ಎಸ್ಸಿ ಮುಗಿಸಿಕೊಂಡು ಬಿ.ಎಡ್ ಮಾಡುತ್ತಿದ್ದರು. ಈಗ ಪಿಎಚ್‍ಡಿ ಮಾಡುವುದದಾಗಿ ತಂದೆಯೊಂದಿಗೆ ತನ್ನ ಅಭಿಪ್ರಾಯ ತಿಳಿಸಿದ್ದಾರೆ. ಅದಕ್ಕೆ ತಂದೆ ನಾಗರಾಜ್, ಪಿಎಚ್‍ಡಿ ಮಾಡುವುದು ಬೇಡ ಎಂದು ಹೇಳಿದ್ದಾರೆ.ತಂದೆ ಪಿಎಚ್‍ಡಿ ಮಾಡುವುದು …

Read More »

ಬೈಕ್​-ಗೂಡ್ಸ್​ ವಾಹನ ಮಧ್ಯೆ ಭೀಕರ ಅಪಘಾತ; ಇಬ್ಬರು ದುರ್ಮರಣ

ಧಾರವಾಡ: ಬೈಕ್ ಮತ್ತು ಗೂಡ್ಸ್​ ವಾಹನದ ಮಧ್ಯೆ ಭೀಕರ ಡಿಕ್ಕಿ ಸಂಭವಿಸಿದ ಘಟನೆ ತಾಲೂಕಿನ ಶಿಂಗನಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಡಿವಾಳೆಪ್ಪ ಬಸಪ್ಪ ಪೂಜಾರ, ಮಹದೇವ ಸಹದೇವಪ್ಪ ಲಕ್ಕಣ್ಣನವರ ಸಾವನ್ನಪ್ಪಿದ ದುರ್ದೈವಿಗಳು. ಇವರೆಲ್ಲ ಧಾರವಾಡ ತಾಲೂಕಿನ ಬೇಲೂರ ಗ್ರಾಮದವರು ಅಂತಾ ತಿಳಿದು ಬಂದಿದೆ. ಗರಗ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

Read More »

ಸೆ.20ಕ್ಕೆ ಸಿಇಟಿ ಫ‌ಲಿತಾಂಶ ಸಾಧ್ಯತೆ?

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫ‌ಲಿತಾಂಶ ಸೆ.20ರಂದು ಹೊರಬೀಳುವ ಸಾಧ್ಯತೆಯಿದೆ. ಎಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಕೀ ಉತ್ತರಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯವೂ ನಡೆಯುತ್ತಿದೆ. ಸೆ.20ರಂದು ಫ‌ಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ …

Read More »

ಪಾನಿಪೂರಿ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಮಹಿಳೆಯೊಬ್ಬಳ ಆತ್ಮಹತ್ಯೆ

ಹುಡುಗಿಯರಿಗೆ ಪಾನಿಪುರಿ ಅಂದ್ರೆ ಪಂಚಪ್ರಾಣ. ಮಹಿಳೆಯೊಬ್ಬಳು ಪಾನಿಪೂರಿ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆಯ ನಿವಾಸಿಯಾಗಿರುವ ಪ್ರತೀಕ್ಷಾ ಸರ್ವಾಡೆ ೨೦೧೯ ರಲ್ಲಿ ಗಹಿನಿನಾಥ್‌ ಸರ್ವಾಡೆ ಎಂಬವರನ್ನು ಮದುವೆಯಾಗಿದ್ದರು. ಗಹಿನಿನಾಥ್‌ ಸರ್ವಾಡೆ ಕೆಲಸದಿಂದ ಬರುವಾಗ ಪತ್ನಿಗೆ ತಿಳಿಸದೇ ಪಾನಿಪೂರಿಯನ್ನು ತಂದಿದ್ದರು. ಅಡುಗೆ ಮಾಡಿಟ್ಟಿದ್ದ ಪತ್ನಿ ಪ್ರತೀಕ್ಷಾ ಇದೇ ಕಾರಣಕ್ಕೆ ಕೋಪ ಮಾಡಿಕೊಂಡಿದ್ದಾಳೆ. ಮರುದಿನ ಪತಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ. …

Read More »