Breaking News

ಲೋಕಸಭಾ ಚುನಾವಣೆ: ಸಂಜೆ 5 ಗಂಟೆಯವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ

Spread the love

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಮುಗಿಯಲು ಕೆಲವೇ ಹೊತ್ತು ಬಾಕಿಯಿದೆ. ಮತದಾರರು ಕೊನೇ ಕ್ಷಣದವರೆಗೂ ಮತಗಟ್ಟೆಯತ್ತ ಧಾವಿಸಿ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.66.05ರಷ್ಟು ಮತದಾನವಾಗಿದೆ.ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

 

ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನವಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.72.75ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರ ಶೇ. 65.67
ಉತ್ತರ ಕನ್ನಡ ಶೇ.69.75
ಬಳ್ಳಾರಿ ಕ್ಷೇತ್ರ ಶೇ.68.94
ಬೀದರ್ ಕ್ಷೇತ್ರ ಶೇ.60.17
ದಾವಣಗೆರೆ ಕ್ಷೇತ್ರ ಶೇ.70.90
ಶಿವಮೊಗ್ಗ ಕ್ಷೇತ್ರ ಶೇ.72.07
ರಾಯಚೂರು ಕ್ಷೇತ್ರ ಶೇ.59.48
ಬಾಗಲಕೋಟೆ ಶೇ.65.55
ವಿಜಯಪುರ ಶೇ.60.95
ಕಲಬುರ್ಗಿ ಶೇ.57.20
ಕೊಪ್ಪಳ ಶೇ.66.05
ಹಾವೇರಿ ಶೇ.71.90
ಧಾರವಾಡ ಶೇ.67.15ರಷ್ಟು ಮತದಾನವಾಗಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ