Breaking News
Home / ರಾಜ್ಯ (page 1500)

ರಾಜ್ಯ

ಗಂಡು ಮಗು ಮಾರಾಟ

ವಿಜಯಪುರ : ಸಾಕಲು ಆಗದ ಕಾರಣಕ್ಕೆ ಗಂಡು ಮಗುವಿನ ಮಾರಾಟ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯ ಮಟ್ಟದ ಕಾಯಕಲ್ಪಪ್ರಶಸ್ತಿ ಪಡೆದ ಜಿಲ್ಲಾಸ್ಪತ್ರೆಯಲ್ಲಿ ಆ.26ರಂದು ಈ ಘಟನೆ ನಡೆದಿರುವುದಾಗಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಸದಾಶಿವ ಕಾಂಬಳೆ ಎಂಬ ಮಹಿಳೆ ಆ.19ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕಸ್ತೂರಿ ಎಂಬ ನರ್ಸ್ ಪರಿಚಯವಾಗಿ ಮಗು ಕೊಡುತ್ತೀಯಾ ಎಂದು ಕೇಳಿದ್ದಾರೆ. ಮನೆಯಲ್ಲಿ …

Read More »

ಎಂಎಲ್‌ಎ ಆದರೂ ಸಹ ಟೋಲ್ ಬೂತ್​ಗಳಲ್ಲಿ ನಮಗೆ ಅವಮಾನ ಆಗುತ್ತಿದೆ

  ವಿಧಾನಸೌಧ: ಎಂಎಲ್‌ಎ ಆದರೂ ಸಹ ಟೋಲ್ ಬೂತ್​ಗಳಲ್ಲಿ ನಮಗೆ ಅವಮಾನ ಆಗುತ್ತಿದೆ. ಪಾಸ್ ಇದ್ದರೂ ಐಡಿ ಕಾರ್ಡ್ ಕೇಳುತ್ತಾರೆ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿಧಾನಸಭಾ ಕಲಾಪದಲ್ಲಿ‌ ಸರ್ಕಾರದ ಗಮನ ಸೆಳೆದರು. ಐಟಿ ಕಾರ್ಡನ್ನು ಟೋಲ್ಗಳಲ್ಲಿ ತೋರಿಸಿದರೆ ಸ್ಕ್ಯಾನ್ ಮಾಡಬೇಕು ಅಂತಾರೆ. ತುರ್ತು ಸಂದರ್ಭದಲ್ಲಿ ನಮಗೆ ಕೂಡಾ ಪ್ರಯಾಣಿಸಲಾಗುತ್ತಿಲ್ಲ. ನಮ್ಮ ಪಾಸ್‌ಅನ್ನು ಅನುಮಾನವಾಗಿ ನೋಡುತ್ತಾರೆ. ವಿಪಿಐ ಲೈನ್​ನಲ್ಲಿಯೂ ಅವಕಾಶ‌ ನೀಡುತ್ತಿಲ್ಲ ಎಂದು ಶಾಸಕ ಅನ್ನದಾನಿ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕ …

Read More »

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ, ಸಾಕಾರಗೊಳಿಸಲು ರಾಜ್ಯ ಸರ್ಕಾರ ಬದ್ಧ: ಕಾರಜೋಳ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ, ಸಾಕಾರಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅದೇರೀತಿ ಅಂತರ ರಾಜ್ಯ ನದೀ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಎಲ್ಲಾ ಕ್ರಮಕೈಗೊಳ್ಳುವುದಾಗಿ ಮಾನ್ಯ ಜಲ ಸಂಪನ್ಮೂಲ ಸಚಿವ ಶ್ರೀ ಗೋವಿಂದ ಎಂ. ಕಾರಜೋಳರವರು ಇಂದು ವಿಧಾನ ಪರಿಷತ್ತಿನಲ್ಲಿ ಘೋಷಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ವಿಧಾನಪರಿಷತ್ತಿನಲ್ಲಿ ಇಂದು ವಿರೋಧ ಪಕ್ಷದ ನಾಯಕ …

Read More »

ಫೋಟೋಗೆ ಪೋಸ್ ಕೊಡಲು ಹೋಗಿ ಸಮುದ್ರದ ಪಾಲಾದ ವ್ಯಕ್ತಿ

ಕಾರವಾರ: ಸಮುದ್ರದ ಅಲೆಗಳ ಮಧ್ಯೆ ಕಲ್ಲುಬಂಡೆಯ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೊಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಸಮುದ್ರ ಪಾಲಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳ್ಳಿ ಕಡಲ ತೀರದಲ್ಲಿ ದುರಂತ ನಡೆದಿದೆ. ಶಿರಸಿಯ ನಿವಾಸಿ 42 ವರ್ಷದ ಸುಬ್ಬುಗೌಡ ಮೃತ ಪ್ರವಾಸಿಗ. ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಸುಬ್ಬುಗೌಡ, ಕಡಲ ತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ಅಲೆಯಲ್ಲಿ ಕೊಚ್ಚಿ …

Read More »

ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ: ಸಿದ್ದರಾಮಯ್ಯ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಇಂದು ಗಗನ ಮುಟ್ಟಿದೆ. ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ. ಗ್ಯಾಸ್, ಪೆಟ್ರೋಲ್, ಡೀಸೆಲ್, ದಿನಸಿ, ಔಷಧ, ಪ್ರಯಾಣ ದರ ಹೀಗೆ ಎಲ್ಲಾ ಜೀವನಾವಶ್ಯಕ ವಸ್ತುಗಳ, ಸೇವೆಗಳ ಬೆಲೆ ಮಿತಿಮೀರಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರು ಜೀವನ ಮಾಡಲು ಕಷ್ಟಪಡಬೇಕಾಗಿದೆ. ಇದನ್ನೇ ನೀವು ಅಚ್ಚೇದಿನ್ ಎಂದು …

Read More »

ಸಿಸಿಟಿವಿ ಧ್ವಂಸಗೊಳಿಸಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ

ಬೀದರ್ : ಬ್ಯಾಂಕ್ ಎಟಿಎಂ ಹಾಗೂ ಸಿಸಿ ಟಿವಿ ಧ್ವಂಸ ಮಾಡಿ ದರೋಡೆಕೋರ ಕಳ್ಳತನಕ್ಕೆ ವಿಫಲ ಯತ್ನ ಮಾಡಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ್ ಗ್ರಾಮದಲ್ಲಿ ಎಸ್.ಬಿಐ ಬ್ಯಾಂಕ್ ನ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ಮಾಡಿ ಹಣ ಸಿಗದೆ ದರೋಡೆಕೋರ ಬರಿಗೈಯಲ್ಲಿ ತೆರಳಿದ್ದಾನೆ. ದರೋಡೆಕೋರ ಎಟಿಎಂ ಒಳಗಡೆ ನುಗ್ಗಿ ದರೋಡೆಗೆ ಯತ್ನ ಮಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಕಳ್ಳತನ ಮಾಡಲು …

Read More »

ಬೈಕ್ ಅಪಘಾತ- ಚಿಕಿತ್ಸೆ ಫಲಿಸದೆ ಸೈನಿಕ ಸಾವು

ಬಾಗಲಕೋಟೆ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈನಿಕನೊಬ್ಬ ಚಿಕಿತ್ಸೆ ಫಲಿಸದೇ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.   ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಹನಮಂತ ಸಿದ್ರಾಮಪ್ಪ ಹಡಪದ(33) ಮೃತಪಟ್ಟ ದುರ್ದೈವಿ. ಬಾದಾಮಿಯಿಂದ ಪಟ್ಟದಕಲ್ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ನಂದಿಕೇಶ್ವರ ಗ್ರಾಮದ ಹತ್ತಿರ ಪಲ್ಸರ್ ಬೈಕ್‍ನಲ್ಲಿ ವೇಗವಾಗಿ ಬಂದ ಮಂಜುನಾಥ ಮಾಗುಂಡಪ್ಪ ಜತ್ತಿ, ಸೈನಿಕ ತೆರಳುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದ್ದ. ಕಳೆದ ಸೆ.8 ರಂದು ಘಟನೆ …

Read More »

ಶ್ರೀಶೈಲ ಜಗದ್ಗುರುಗಳಿಂದ ವೀರಭದ್ರೇಶ್ವರ ಜಯಂತಿ

ಚಿಕ್ಕೋಡಿ: ಭಾದ್ರಪದ ಮಾಸದ ಪ್ರಥಮ ಮಂಗಳವಾರ ಪ್ರತಿ ವರ್ಷ ವೀರಭದ್ರೇಶ್ವರ ಜಯಂತಿಯನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಅತಿ ಸರಳವಾಗಿದೆ ಆಚರಣೆ ಮಾಡಿದರು.   ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ವೀರಭದ್ರ ದೇವಸ್ಥಾನದಲ್ಲಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಮಾಡಿ ವಿಶ್ವ ಶಾಂತಿಗಾಗಿ ದೇವರಲ್ಲಿ ಆರಾಧಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಶೈಲ ಜಗದ್ಗುರುಗಳು, ಕೊರೊನಾ …

Read More »

ಡಿ.ಕೆ. ಶಿವಕುಮಾರ್‌ ಗೆ ಸುಳ್ಯ ಕೋರ್ಟ್‌ ನಿಂದ ವಾರಂಟ್‌ ಜಾರಿ:ಏನಿದು ಪ್ರಕರಣ?

ಸುಳ್ಯ, ಸೆ. 14: ವಿದ್ಯುತ್‌ ಸಮಸ್ಯೆ ಬಗ್ಗೆ ಕರೆ ಮಾಡಿದ ಬೆಳ್ಳಾರೆಯ ಸಾಯಿ ಗಿರಿಧರ್‌ ಮತ್ತು ಇಂಧನ ಖಾತೆಯ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ನಡುವಿನ ಫೋನ್‌ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್‌ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಹಾಜರಾಗದಿರುವ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಸುಳ್ಯ ನ್ಯಾಯಾಲಯ ವಾರಂಟ್‌ ಜಾರಿ ಮಾಡಿದೆ. ಕೋರ್ಟ್‌ಗೆ ಹಾಜರಾಗದಿರುವು ದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿ.ಕೆ. ಶಿವಕುಮಾರ್‌ …

Read More »

ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದಲ್ಲಿ ಪ್ರೇಮಿಗಳ ವಿಹಾರ : ಪೊಲೀಸರಿಂದ ಎಚ್ಚರಿಕೆ

ಶ್ರೀರಂಗಪಟ್ಟಣ : ನಗರದ ಪ್ರವಾಸಿತಾಣ ಕರಿಘಟ್ಟದಲ್ಲಿ ವಿಹರಿಸುತ್ತಿದ್ದ ಪ್ರೇಮಿಗಳಿಗೆ ಶ್ರೀರಂಗಪಟ್ಟಣ ಪೋಲೀಸರು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿ ವಾಪಸ್ಸು ಕಳಿಸಿದ ಘಟನೆ ನಡೆದಿದೆ ಬುಧವಾರ ನಡೆದಿದೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕರಿಘಟ್ಟ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಸಿದ ಶ್ರೀರಂಗಪಟ್ಟಣ ಪೊಲೀಸ್ ಇನ್ಸ್‌ಪೆಕ್ಟರ್ ರೇಖಾ ಹಾಗೂ ಅಪರಾಧ ದಳದ ಇನ್ಸ್‌ಪೆಕ್ಟರ್ ಸುನೀಲ್ ನೇತೃತ್ವದ ಪೊಲೀಸರ ತಂಡ ಬೆಟ್ಟದಲ್ಲಿ ವಿಹರಿಸುತ್ತಿದ್ದ ಪ್ರೇಮಿಗಳಿಗೆ ಎಚ್ಚರಿಕೆ ನೀಡಿ …

Read More »