Breaking News
Home / ಜಿಲ್ಲೆ (page 1040)

ಜಿಲ್ಲೆ

ಕೇಂದ್ರ ಸರ್ಕಾರ ಘೋಷಿಸಿರುವ 21 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಸಾಲಕೊಟ್ಟು ಜನರನ್ನು ಬಡ್ಡಿ ಮಕ್ಕಳನ್ನಾಗಿ ಮಾಡುವಂತಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಮೇ 19- ಕೇಂದ್ರ ಸರ್ಕಾರ ಘೋಷಿಸಿರುವ 21 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಸಾಲಕೊಟ್ಟು ಜನರನ್ನು ಬಡ್ಡಿ ಮಕ್ಕಳನ್ನಾಗಿ ಮಾಡುವಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಜಿ‌ ಪದಾಧಿಕಾರಿಗಳ‌ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಜನರ ನೋವು ನಲಿವಿಗೆ ಸರ್ಕಾರ ಸ್ಪಂದಿಸಲಿಲ್ಲ. ತಮ್ಮ ಪಕ್ಷದ ಮತ ಬ್ಯಾಂಕ್ ಹೆಚ್ಚಿಸಿಕೊಳ್ಳಲು‌ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಕ್ರಮ ನಡೆಸಿವೆ‌ …

Read More »

ಬೆಂಗಳೂರು : 2 ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಲುಕಿ ಇಬ್ಬರ ಸಾವು……….

ಬೆಂಗಳೂರು, ಮೇ 19- ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಒಂದು ಪ್ರಕರಣದಲ್ಲಿ ಚಿಕ್ಕಬಾಣಾವಾರ- ಗೊಲ್ಲಹಳ್ಳಿ ರೈಲ್ವೆ ನಿಲ್ದಾಣಗಳ ಮಧ್ಯೆ ಹಾದು ಹೋಗುವ ರೈಲ್ವೆ ಹಳಿ ಬಳಿ ಸುಮಾರು 40 ವರ್ಷದಂತೆ ಕಾಣುವ ವ್ಯಕ್ತಿ ನಿನ್ನೆ ಮುಂಜಾನೆ ಯಾವುದೋ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿರುವ ಈ ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ. ಮೈಮೇಲೆ …

Read More »

ಮದ್ಯಕ್ಕೆ ಮೊದಲಿದ್ದ ಬೇಡಿಕೆ ಈಗಿಲ್ಲ : ಸಚಿವ ನಾಗೇಶ್

ಕೋಲಾರ, ಮೇ 19- ರಾಜ್ಯದಲ್ಲಿ ಮದ್ಯಕ್ಕೆ ಮೊದಲು ಇದ್ದ ಬೇಡಿಕೆ ಸದ್ಯಕ್ಕಿಲ್ಲ ಹಾಗಾಗಿ ಆದಾಯ ಕಡಿಮೆಯಾಗಿದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ನಂತರ ಮದ್ಯ ಪೂರೈಕೆಗೆ ಅವಕಾಶ ನೀಡಿದ ಮೊದಲ ವಾರದಲ್ಲಿ ಕಲೆಕ್ಷನ್ ಚೆನ್ನಾಗಿ ಆಗಿತ್ತು. ಆದರೆ, ಈಗಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಲಾಡ್ಜ್‍ಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಆದಾಯ ಕಡಿತವಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು

Read More »

ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪಕ್ಷ ನನ್ನನ್ನ ನೇಮಿಸಿದೆ, ನಮ್ಮಲ್ಲಿ ಸಾಂಕೇತಿಕವಾಗಿ ಪದಗ್ರಹಣ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪಕ್ಷ ನನ್ನನ್ನ ನೇಮಿಸಿದೆ, ನಮ್ಮಲ್ಲಿ ಸಾಂಕೇತಿಕವಾಗಿ ಪದಗ್ರಹಣ ಮಾಡುವುದಿದೆ ಕೋವಿಡ್​-19ನಿಂದಾಗಿ ನಮಗೆ ಆ ಭಾಗ್ಯ ಸಿಕ್ಕಿರಲಿಲ್ಲ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಕೇತಿವಾಗಿ ಮಾಡಲಿಲ್ಲ ಅಂತ ಮನೆಯಲ್ಲಿ ಕೂರಲಿಲ್ಲ, ನಾವು ರಸ್ತೆಗಿಳಿದು ಪ್ರತಿಪಕ್ಷವಾಗಿ ವರ್ತಿಸಿದ್ದೇವೆ. ಜನರ ಮಧ್ಯೆಯಿದ್ದು ಪ್ರಾಮಾಣಿಕ ಸೇವೆ ಮಾಡಿದ್ದೇವೆ. ನಮ್ಮ ನಾಯಕರ ಜೊತೆ ಸೇರಿ ಸರ್ಕಾರ ಎಚ್ಚರಿಸಿದ್ದೇವೆ ಎಂದು …

Read More »

ಬೆಳಗಾವಿ-ಸಮೀಕ್ಷೆಗೆ ತೆರಳಿದ ಅಂಗನವಾಡಿ,ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ

ಬೆಳಗಾವಿ- ಸಮೀಕ್ಷೆಗೆ ತೆರಳಿದ ಅಂಗನವಾಡಿ,ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿಯ ಗಣೇಶಪೂರದಲ್ಲಿ ನಡೆದಿದೆ. ಅಂಗನವಾಡಿ,ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಪ್ಯಾರಾ ಮೆಡಿಕಲ್ ವರ್ಕರ್ಸ್ ಗಳು ಇಂದು ಗಣೇಶಪೂರದಲ್ಲಿ ಕೊರೋನಾ ಕುರಿತು ಸಾರ್ವಜನಿಕರು ವಹಿಸಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವಾಗ ರಿಕ್ಷಾ ಚಾಲಕನೊಬ್ಬ ಇವರ ಜೊತೆ ಅಸಭ್ತವಾಗಿ ವರ್ತಿಸಿ ಹಲ್ಲೆ ಮಾಡಿದ್ದಾನೆ ಹಲ್ಲೆ ಮಾಡಿದ ಆರೋಪದ ಮೇಲೆ ಓರ್ವನನ್ನು ಬಂಧಿಸಲಾಗಿದೆ.ಈ ಕುರಿತು ಕ್ಯಾಂಪ್ ಠಾಣೆಯಲ್ಲಿ …

Read More »

ಮನುಷ್ಯತ್ವ,ಮಾನವೀಯತೆ ಗುಣ ಹೊಂದಿರದವರು ಮನುಷ್ಯರೇ ಅಲ್ಲ;ಗವಿಮಠ

ಬೆಳಗಾವಿ: ಪ್ರಸಕ್ತ ಕೊರೋನಾ ಸಂಕಷ್ಟದದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಾನವೀಯತೆಯಿಂದ ನಡೆದುಕೊಳ್ಳಬೇಕು.ಮನುಷ್ಯತ್ವ ,ಮಾನವೀಯತೆ ಬಿಟ್ಟವರು ಮನುಷ್ಯರೇ ಅಲ್ಲ ಎಂದು ಹಿರಿಯ ರಂಗಕರ್ಮಿ ಶ್ರೀ ಬಿ.ಎಸ್.ಗವಿಮಠ ಅವರು ಇಂದಿಲ್ಲಿ ಹೇಳಿದರು.ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಮೂವತ್ತು ಸಂಗೀತ ಕಲಾವಿದರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು. ಖ್ಯಾತ ಕವಿ ಸಿದ್ದಯ್ಯ ಪುರಾಣಿಕರ ” ಏನಾದರೂ ಆಗು ಮೊದಲು ಮಾನವನಾಗು” ಎಂಬ ಕವಿವಾಣಿಯನ್ನು ಉಲ್ಲೇಖಿಸಿದ …

Read More »

ಗ್ರಾಮ ಪಂಚಾಯತ್​ ಚುನಾವಣೆಯನ್ನ ನಡೆಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್.ಕೆ.ಪಾಟೀಲ್ ಪತ್ರ

ಬೆಂಗಳೂರು: ಗ್ರಾಮ ಪಂಚಾಯತ್​ ಚುನಾವಣೆ ನಡೆಸುವಂತೆ ಮಾಜಿ ಸಚಿವ ಹೆಚ್.ಕೆ. ಪಾಟೀಲ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಈಗ ವಿಶ್ವದಲ್ಲಿ ಕೊರೋನಾ ವೈರಸ್​ ಹಾವಳಿಯಿದೆ. ವೈರಸ್ ನಿಂದ ವಿಶ್ವವೇ ತತ್ತರಿಸಿದೆ. ಈ ಸಂಕಷ್ಟದ ಕಾಲದಲ್ಲಿ ಚುನಾವಣೆಗಳು ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಪಂಚಾಯತ್ ಚುನಾವಣೆಗಳನ್ನು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ವಿನಂತಿಸಿಕೊಂಡಿದೆ. ಇದು ಸರಿಯಲ್ಲ. ಸರ್ಕಾರ ಚುನಾವಣೆ ಮುಂದೂಡಿಕೆಗೆ ಪ್ರಯತ್ನ ನಡೆಸಿದೆ ಜೊತೆಗೆ ಡಿಸಿಗಳ …

Read More »

ಜನರನ್ನು ಮೂರ್ಖರನ್ನಾಗಿ ಮಾಡುವುದಷ್ಟೇ ಮೋದಿ ಪ್ಯಾಕೇಜ್………..

ಬೆಂಗಳೂರು: ರಾಜ್ಯಗಳಿಗೆ ಆರ್ಥಿಕ ನೆರವು ನೀಡುವಂತೆ 15ನೇ ಪೇ ಕಮೀಷನ್, ನಾಲ್ಕು ಅಂಶಗಳನ್ನು ಆಧರಿಸಿ​ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ರಾಜ್ಯಗಳಿಗೆ ಯಾವ ರೀತಿ ಹಣ ಸಂದಾಯ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಘೋಷಿಸಿರುವ ವಿಶೇಷ ಪ್ಯಾಕೇಜ್​ನಲ್ಲಿ ಕೇಂದ್ರದ ಪಾಲೆಷ್ಟು(?) ಆರೂವರೆ ಲಕ್ಷ ಕೋಟಿಯಲ್ಲಿ ಕೇಂದ್ರದ ಪಾಲು 2,500 ಕೋಟಿ ಮಾತ್ರ. ಕೇಂದ್ರದ 2,500 ಕೋಟಿಯಿಂದ …

Read More »

ತಾಯಿಯ ಶವದೊಂದಿಗೆ 5 ದಿನ ಮನೆಯಲ್ಲೇ ಕಳೆದ ಮಗಳು………

ಶಿವಮೊಗ್ಗ: ತಾಯಿ ಮೃತಪಟ್ಟು ಐದು ದಿನವಾದರೂ ಮಗಳು ಶವದೊಂದಿಗೆ ಐದು ದಿನಗಳ ಕಾಲ ಕಳೆದಿರುವ ಘಟನೆ ಶಿವಮೊಗ್ಗದ ಬಸವನಗುಡಿಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಬಸವನಗುಡಿ ನಿವಾಸಿ ನಿವೃತ್ತ ಶಾಲಾ ಶಿಕ್ಷಕಿ ರಾಜೇಶ್ವರಿ ಎಂದು ಗುರುತಿಸಲಾಗಿದೆ. ಮೃತ ರಾಜೇಶ್ವರಿ ಪತಿ ಸಹ ಕಳೆದ 20 ವರ್ಷದ ಹಿಂದೆಯೇ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ತಾಯಿ ಮಗಳು ಇಬ್ಬರೇ ವಾಸಿಸುತ್ತಿದ್ದರು. ಆದರೆ ಕಳೆದ ಹಲವು ವರ್ಷಗಳಿಂದ ಮೃತ ರಾಜೇಶ್ವರಿ ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. …

Read More »

ರಾಜ್ಯದಲ್ಲಿ ಇಂದು ಒಂದೇ ದಿನ 127 ಜನರಿಗೆ ಕೊರೋನಾ ಸೋಂಕು……..

ರಾಜ್ಯದಲ್ಲಿ ಇಂದು ಒಂದೇ ದಿನ 127 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟೂ 1373 ಜರಿಗೆ ಸೋಂಕು ತಗುಲಿದಂತಾಗಿದೆ. ಮಂಡ್ಯ 51, ಉತ್ತರ ಕನ್ನಡ 4, ದಾವಣಗೆರೆ 19, ಶಿವಮೊಗ್ಗ 12, ಬೆಂಗಳೂರು 6, ಹಾಸನ 3, ಗದಗ 1, ಚಿಕ್ಕಮಗಳೂರು 2, ಚಿತ್ರದುರ್ಗ1, ಉಡುಪಿ 4, ಕಲಬುರ್ಗಿ 11, ಯಾದಗಿರಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇಂದು ಸೋಂಕು ದೃಢಪಟ್ಟವರ ಪೈಕಿ 59 ಮಹಿಳೆಯರಿದ್ದಾರೆ. ಗ್ರೀನ್ ಝೋನ್ ನಲ್ಲಿದ್ದ ಚಿಕ್ಕಮಗಳೂರಲ್ಲೂ …

Read More »