Breaking News
Home / Uncategorized / ಮಂಡ್ಯದಲ್ಲಿ ಆರಂಭವಾಯ್ತು ಕಾಂಗ್ರೆಸ್-ಜೆಡಿಎಸ್​ ಸೋಲು ಗೆಲುವಿನ ಲೆಕ್ಕಾಚಾರ!

ಮಂಡ್ಯದಲ್ಲಿ ಆರಂಭವಾಯ್ತು ಕಾಂಗ್ರೆಸ್-ಜೆಡಿಎಸ್​ ಸೋಲು ಗೆಲುವಿನ ಲೆಕ್ಕಾಚಾರ!

Spread the love

ರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಹಳೇ ಮೈಸೂರು ಭಾಗದ ಒಟ್ಟು 14 ಕ್ಷೇತ್ರಗಳಿಗೆ ಕಳೆದ ಏಪ್ರಿಲ್ 26ರಂದು ಮತದಾನ ನಡೆದಿದ್ದು, ಇದೀಗ ಉತ್ತರ ಕರ್ನಾಟಕದ ಭಾಗದ 14 ಕ್ಷೇತ್ರಗಳಿಗೆ ಇದೇ ಮೇ 7ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

ಮಂಡ್ಯ, : ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ (Loksabha Elections 2024)ಮುಗಿದಿದೆ. ಅದರಲ್ಲೂ ಹೈವೋಲ್ಟೇಜ್ ಕದನವಾಗಿದ್ದ ಮಂಡ್ಯದಲ್ಲಿ(Manday Loksabha Election) ಶಾಂತಿಯುತವಾಗಿ ಮತದಾನವಾಗಿದೆ. ಸಾಕಷ್ಟು ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದ ಮಂಡ್ಯ ಲೋಕಸಭಾ ಚುನಾವಣೆಗೂ ಮೊದಲು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ, ಘಟಾನುಘಟಿ ನಾಯಕರು ಕ್ಯಾಂಪೇನ್ ನಡೆದಿತ್ತು. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಜೂನ್ 4ರಂದು ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ. ಇದರ ಮಧ್ಯೆ ಸೋಲು ಗೆಲುವಿನ ಲೆಕ್ಕಚಾರ ಶುರುವಾಗಿದೆ ಹೌದು….ಹಲವು ಅಂಶಗಳ ಆಧಾರದ ಮೇಲೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ಅಭ್ಯರ್ಥಿಗಳ ಬೆಂಬಲಿಗರು ಸೋಲು ಗೆಲುವಿನ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಮಧ್ಯೆ ಮಂಡ್ಯದಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಚರ್ಚೆ ದೊಡ್ಡಮಟ್ಟಿಗೆ ಆರಂಭವಾಗಿದೆ. ಅದರಲ್ಲೂ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರ ಗೆಲುವು ಸೋಲಿನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಹೆಚ್ ಡಿ ಕುಮಾರಸ್ವಾಮಿಗೆ ಗೆಲುವಿಗೆ ಯಾವೆಲ್ಲ ಅಂಶಗಳು ಕಾರಣವಾದವೂ, ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ಚರ್ಚೆ ಒಂದು ಕಡೆ, ಮತ್ತೊಂದು ಕಡೆ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎಂದು ಜೆಡಿಎಸ್ ಹೇಳಿಕೊಂಡು ಓಡಾಡುತ್ತಿದ್ದಾರೆ.


Spread the love

About Laxminews 24x7

Check Also

ನೀತಿ ಸಂಹಿತೆ ಸಡಿಲಿಕೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ; 2 ತಿಂಗಳ ಬಳಿಕ ಸಚಿವರು-ಅಧಿಕಾರಿಗಳೊಂದಿಗೆ ಸಭೆ!

Spread the loveನೀತಿ ಸಂಹಿತೆ ಸಡಿಲಿಕೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ; 2 ತಿಂಗಳ ಬಳಿಕ ಸಚಿವರು-ಅಧಿಕಾರಿಗಳೊಂದಿಗೆ ಸಭೆ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ