Breaking News
Home / ಜಿಲ್ಲೆ

ಜಿಲ್ಲೆ

ಚಿಕ್ಕೊಳಿ ಪರಸಿ ರೊಡ ಬ್ರಿಡ್ಜ್ ಕಾಮಗಾರಿ ಸರಿಯಾಗಿದೆ ,ಸತೀಶ್ ಜಾರಕಿಹೊಳಿ ಅವರನ್ನ ಬ್ರಿಡ್ಜ್ ಮೇಲೆ ನೋಡಿ ಯುವಕರ ಗುಂಪು ಸೆಲ್ಫಿ ಹಾಗೂ ಅವರ್ ಭೇಟಿ ಗಾಗಿಗಿ ಮುಗಿಬಿದ್ದಿದ್ದಾರೆ..

ಗೋಕಾಕ : ಗೋಕಾಕ ನಗರದಲ್ಲಿ ಸತತ ಸುರಿಯುತ್ತಿದ್ದ ಮಳೆಯಿಂದ ಗೋಕಾಕ ನಗರ ಮಿನಿ ದ್ವೀಪ ದಂತೆ ಆಗಿತ್ತು ಕಳೆದ ಎರಡು ದಿನದಿಂದ ಸ್ವಲ್ಪ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಜನರು ಸ್ವಲ್ಪ ನಿರಾಳ ವಾಗಿದ್ದರೆ ಇಂದು ಚಿಕ್ಕೊಳಿ ಪರಸಿ ರೊಡ ಅಥವಾ ಗೋಕಾಕ ಫಾಲ್ಸ್ ಗೆ ಹೋಗುವ ಬ್ರಿಜ ಅಂತಾರೆ ಇದರ ಪರಿಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮಳೆಯಿಂದ ಕೆಟ್ಟಿದ್ದ ರಸ್ತೆಯನ್ನು ಇಂದು ಪ್ಯಾಚ್ ಅಪ್ ಮಾಡಿಸುವ ಮೂಲಕ ಸರಿಪಡಿಸಿದ್ದಾರೆ …

Read More »

ರಾಜ್ಯಪಾಲರನ್ನು ಭೇಟಿಯಾದ ಸ್ಪೀಕರ್

ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು. ಈ ಭೇಟಿಯ ವೇಳೆ, ಸ್ಪೀಕರ್ ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಧಾನಸಭಾ ಸಚಿವಾಲಯ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತಂತೆ ವಿವರಿಸಿದ್ದಾರೆ. ಅಲ್ಲದೆ ಇದೊಂದು ಸೌಹಾರ್ದಯುತ ಭೇಟಿ ಎನ್ನಲಾಗಿದೆ. ಭೇಟಿ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ, ಭಾರತದ ಸಂವಿಧಾನ ಕುರಿತ ಚರ್ಚೆ, ಸಂಸದೀಯ ನಡೆವಳಿಕೆಯಲ್ಲಿ ಮೌಲ್ಯಗಳು ಮತ್ತು ತತ್ವ, ಸಿದ್ಧಾಂತಗಳು …

Read More »

ಳೆದ 4 ದಿನಗಳಿಂದ ಪ್ರವಾಹದಿಂದಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ನಂ 4 ಈಗ ಸಂಚಾರಕ್ಕೆ ಮುಕ್ತವಾಗಿದೆ.

ಬೆಳಗಾವಿ – ಕಳೆದ 4 ದಿನಗಳಿಂದ ಪ್ರವಾಹದಿಂದಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ನಂ 4 ಈಗ ಸಂಚಾರಕ್ಕೆ ಮುಕ್ತವಾಗಿದೆ. ಬೆಳಗಾವಿ -ಕೊಲ್ಲಾಪುರ ಮಧ್ಯೆ ಸಂಕೇಶ್ವರ ಬಳಿ ವೇದಗಂಗಾ ನದಿ ಉಕ್ಕಿ ಹರಿದು ಸಂಚಾರ ಬಂದ್ ಆಗಿತ್ತು, ಅಲ್ಲದೆ ಮಧ್ಯೆ ಮಧ್ಯೆ ಕೆಲವು ಹಳ್ಳಗಳೂ ರಸ್ತೆಯ ಮೇಲೆ ಹರಿದು ಸಂಚಾರ ತಡೆದಿದ್ದವು. ಇಂದು ಮಧ್ಯಹ್ನ 12 ಗಂಟೆ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ ಮೇಲಿನ ನೀರು ಖಾಲಿಯಾಗಿದ್ದು, ವಾಹನ ಸಂಚಾರಕ್ಕೆ ಅನುಮತಿ …

Read More »

ಬಿಎಸ್ ವೈ ಕಣ್ಣೀರು ಪದತ್ಯಾಗ’ ವಲ್ಲ ‘ಪದಚ್ಯುತಿ’ ಎಂದು ಸಾರಿ ಹೇಳುತ್ತಿದೆ : ಕಾಂಗ್ರೆಸ್

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ” ಬಿಎಸ್ ವೈ ಕಣ್ಣೀರು ಪದತ್ಯಾಗ’ ವಲ್ಲ ‘ಪದಚ್ಯುತಿ’ ಎಂದು ಸಾರಿ ಹೇಳುತ್ತಿದೆ” ಎಂದು ವ್ಯಂಗ್ಯವಾಡಿದೆ. ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಘೋಷಣೆ ಮಾಡುವ ಮೂಲಕ ಒಪ್ಪಿಕೊಂಡಂತಾಗಿದೆ. ಅವರೇ ಹೇಳಿಕೊಳ್ಳುವಂತೆ ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ ಬಿಜೆಪಿಯ ಹೈಕಮಾಂಡ್ …

Read More »

ಬಿಎಸ್​ವೈ ರಾಜೀನಾಮೆ ನಿರ್ಧಾರ: ಕಾರು ಚಾಲಕನ ಕಣ್ಣೀರು

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಜನಸ್ನೇಹಿ ಆಡಳಿತ ಕಾರ್ಯಕ್ರಮದಲ್ಲಿ ಭಾವುಕರಾಗಿ ಯಡಿಯೂಪ್ಪ ತಮ್ಮ ನಿರ್ಧಾರ ತಿಳಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ವಿಧಾನ ಸೌಧದ ಹೊರಗೆ ನಿಂತಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಕಾರು ಚಾಲಕನ ಕಣ್ಣೀರು ಹಾಕಿದ್ದಾರೆ. ಯಡಿಯೂರಪ್ಪ ಅವರ ನಿರ್ಧಾರ ನೆನೆದು ಕಾರು ಚಾಲಕ ರವಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Read More »

ನಾಳೆಯೇ ಕರ್ನಾಟಕಕ್ಕೆ ಹೊಸ ಸಿಎಂ ಘೋಷಣೆ…?

ಬೆಂಗಳೂರು: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಘೋಷಿಸಿರುವ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ನಡುವೆ ನಾಳೆಯೇ ಮುಂದಿನ ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ನವದೆಹಲಿಯಲ್ಲಿ ಬೆಳಿಗ್ಗೆ 9:30ಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಸಿಎಂ ರೇಸ್ ನಲ್ಲಿ ಹಲವರ ಹೆಸರು ಕೇಳಿಬಂದಿದ್ದು, ಸ್ಪೀಕರ್ ವಿಶ್ವೇಶ್ವರ …

Read More »

4 ಬಾರಿ ಸಿಎಂ ಆದ್ರೂ ಅವಧಿ ಪೂರೈಸಿಲ್ಲ; BSY ಹೋದರೂ ಮತ್ತೋರ್ವ ಭ್ರಷ್ಟ ಸಿಎಂ ಬರ್ತಾರೆ; ಯಡಿಯೂರಪ್ಪ ರಾಜೀನಾಮೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಅಧಿಕಾರದಲ್ಲಿತ್ತು, ಯಡಿಯೂರಪ್ಪ ಮಾತ್ರವಲ್ಲ ಇಡೀ ಬಿಜೆಪಿಯೇ ರಾಜ್ಯದಿಂದ ತೊಲಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಯಡಿಯೂರಪ್ಪಗೆ ಸರಿಸಾಟಿಯಾದ ನಾಯಕ ಬೇರೆ ಯಾರೂ ಇಲ್ಲ. ಆದರೆ ಯಡಿಯೂರಪ್ಪ ಓರ್ವ ಭ್ರಷ್ಟ ಸಿಎಂ ಆಗಿದ್ದರು. ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು 6 ತಿಂಗಳ ಹಿಂದೆಯೇ ನಾನು ಹೇಳಿದ್ದೆ. ಇದು ಗೊತ್ತಿರುವ ವಿಚಾರ. …

Read More »

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆಂದು ಕಣ್ಣೀರಿಟ್ಟ ಬಿ.ಎಸ್. ಯಡಿಯೂರಪ್ಪ ಮುಂದಿನ ಸಿಎಂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ?

ಬೆಂಗಳೂರು : ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಸಾಧನಾ ಸಮಾವೇಶದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಹಿಂದಿನ ಹೋರಾಟ ನೆನಪುಗಳನ್ನು ನೆನದು ಕಣ್ಣೀರಿಟ್ಟಿದ್ದಾರೆ. ನಿಮ್ಮ ಅಪ್ಪಣೆ ಪಡೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ. ತಮ್ಮ ಹೋರಾಟದ ದಿನಗಳನ್ನು ಭಾಷಣದ ವೇಳೆ ನೆನಪಿಸಿದ ಸಿಎಂ ಬಿಎಸ್‌ವೈ ಅವರು, ನಾನೊಬ್ಬನೇ ವಿಧಾನಸಭೆಯೊಳಗೆ ಹೋರಾಡಿದ್ದೇನೆ. ನನ್ನ ಕರ್ತವ್ಯವನ್ನ ಮಾಡಿದ್ದೇನೆ.. ನನಗೆ …

Read More »

ಬೆಂಗಳೂರಿನಲ್ಲಿ ಮಠಾಧೀಶರ ಸಮಾವೇಶ: ಪ್ರಹ್ಲಾದ್ ಜೋಷಿ, ಬಿ.ಎಲ್.ಸಂತೋಷ್ ವಿರುದ್ಧ ಘೋಷಣೆ

ಬೆಂಗಳೂರು,ಜು.25: ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಮಠಾಧೀಶರ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿ.ಎಸ್.ಯಡಿಯೂರಪ್ಪರ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸುವಂತಿಲ್ಲ ಎಂದು ಕೆಲವು ಮಠಾಧೀಶರು, ಬಿಜೆಪಿ ನಾಯಕರು ಘೋಷಣೆ ಕೂಗಿ, ಒತ್ತಾಯಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಮಧ್ಯಪ್ರವೇಶ …

Read More »

ಗರ್ಭಿಣಿ ನಿಧನದ ನೋವಲ್ಲೇ ಅಂತ್ಯ ಸಂಸ್ಕಾರ ಮುಗಿಸಿ ಬಂದವರಿಗೆ ಪ್ರವಾಹಕ್ಕೆ ಬಲಿಯಾಗಿತ್ತು ಮನೆ..!

ಬಾಗಲಕೋಟೆ: ಇಷ್ಟು ದಿನ ಕೊರೊನಾ ತನ್ನ ಅಟ್ಟಹಾಸ ಮೆರೆದಿತ್ತು. ಸಾಕಷ್ಟು ಸಾವು ಸಂಭವಿಸಿ ಅದೆಷ್ಟೋ ಜನರ ಬದುಕಲ್ಲಿ ನೋವನ್ನೇ ಉಳಿಸಿ ಹೋಗಿದೆ. ಇದೀಗ ಆರಂಭದ ಮಳೆಯೇ ಪ್ರವಾಹ ಸೃಷ್ಟಿಸಿ ಮತ್ತೆ ಸಾವನ್ನ ಹೆಚ್ಚು ಮಾಡಿದೆ. ಹೌದು ಜಿಲ್ಲೆಯ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಿರ್ಜಿ ಗ್ರಾಮದ ಲಕ್ಷ್ಮೀ ಎಂಬಾಕೆ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಜೋರು ಮಳೆಯ ನಡುವೆಯೇ ಹೇಗೋ ಕಷ್ಟಪಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಆ ಬಳಿಕ …

Read More »