Breaking News
Home / ಜಿಲ್ಲೆ (page 1039)

ಜಿಲ್ಲೆ

ಮಹಾಮಾರಿ ಕೊರೋನಾ ವೈರಸ್ ನಿಂದ ಸಂಕಷ್ಟಗೋಳಲಾದ ಕ್ಷೇತ್ರದ ಜನರಿಗೆ ಸಚಿವರು ವಯಕ್ತಿಕವಾಗಿ ಆಹಾರ ಕೀಟಗಳನ್ನು ನೀಡುತ್ತಿದ್ದಾರೆ.

ಗೋಕಾಕ :ಸಚಿವರಾದ ರಮೇಶ ಜಾರಕಿಹೊಳಿ ಅವರು ವಯಕ್ತಿಕವಾಗಿ ನೀಡಿದ ಆಹಾರದ ಕಿಟಗಳನ್ನು ಇನ್ನೇರೆಡು ದಿನಗಳಲ್ಲಿ ಗೋಕಾಕ ಮತಕ್ಷೇತ್ರದ ಪ್ರತಿ ಮನೆಗಳಿಗೆ ತಲುಪಿಸಲಾಗುವದೆಂದು ನಗರಸಭೆ ಸದಸ್ಯ ಎಸ್.ಎ ಕೊತವಾಲ ಹೇಳಿದರು ಬುಧವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಕರೆದ ಆಹಾರ ಕಿಟ ವಿತರಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಮಹಾಮಾರಿ ಕೊರೋನಾ ವೈರಸ್ ನಿಂದ ಸಂಕಷ್ಟಗೋಳಲಾದ ಕ್ಷೇತ್ರದ ಜನರಿಗೆ ಸಚಿವರು ವಯಕ್ತಿಕವಾಗಿ ಆಹಾರ ಕಿಟಗಳನ್ನು ನೀಡುತ್ತಿದ್ದಾರೆ ಜನಪ್ರತಿನಿಧಿಗಳು , ಕಾರ್ಯಕರ್ತರು ಹಾಗೂ ವಿವಿಧ ಇಲಾಖೆಗಳ …

Read More »

ಇಂದು ಇಬ್ಬರು ಕೊವಿಡ್ ಸೊಂಕೀತರು ಗುಣಮುಖ, ಬಿಡುಗಡೆ: ಕುಡಚಿ ಪಟ್ಟಣ ಈಗ ಕೋರಾನಾ ಮುಕ್ತ

ಬೆಳಗಾವಿ:ಕೋವಿಡ್-೧೯ ಸೋಂಕು ತಗುಲಿದ್ದ  ಮಹಿಳೆಯು ಸೇರಿದಂತೆ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದಬಿಡುಗಡೆಮಾಡಲಾಗಿದೆ. ಈ ಮೂಲಕ ಈಗ ಕುಡಚಿ ಪಟ್ಟಣ ಕೊರೋನಾ ಮುಕ್ತವಾಗಿದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ರಾಯಬಾಗ ತಾಲ್ಲೂಕಿನ ಕುಡಚಿಯ ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಒಟ್ಟು ಹದಿನೆಂಟು ಕೊರೋನಾ ಸೊಂಕೀತರ ಪತ್ತೆಯಾಗಿದ್ದರು. ಇವತ್ತು ಇಬ್ಬರು ಗುಣಮುಖರಾದ ಬಳಿಕ ಮನೆಗೆ ಸೇರಿದ್ದು …

Read More »

ನಾಳೆಯಿಂದ ದ್ವಿತೀಯ ಪಿಯುಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಆರಂಭ

ಬೆಂಗಳೂರು, ಮೇ 20- ನಾಳೆಯಿಂದ ದ್ವಿತೀಯ ಪಿಯುಸಿಯ ಉತ್ತರಪತ್ರಿಕೆಗಳ ಮೌಲ್ಯಮಾಪನವು ಆಯ್ದ ಕೇಂದ್ರಗಳಲ್ಲಿ ಆರಂಭವಾಗಲಿದೆ. ಮೌಲ್ಯಮಾಪನಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದು, ಇಂಗ್ಲೀಷ್ ಹೊರತುಪಡಿಸಿ ಇತರ ಪತ್ರಿಕೆಗಳ ಮೌಲ್ಯಮಾಪನವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಮುಂದಾಗಿದೆ. ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆಯ ದಿನಾಂಕ ಜೂನ್ 18ಕ್ಕೆ ನಿಗದಿಪಡಿಸಲಾಗಿದ್ದು, ಪರೀಕ್ಷೆಗೂ ಮುನ್ನವೇ ಮೌಲ್ಯಮಾಪನ ಪೂರ್ಣಗೊಳಿಸಲು ಇಲಾಖೆ ಉದ್ದೇಶಿಸಿದೆ ಎಂದು ತಿಳಿದುಬಂದಿದೆ. ಆದರೆ, ಶಿಕ್ಷಣ ಇಲಾಖೆ ಅಧಿಕೃತವಾಗಿ ಮೌಲ್ಯಮಾಪನಕ್ಕೆ ಯಾವುದೇ ರೀತಿಯ …

Read More »

ಮಹಾರಾಷ್ಟ್ರ- ಕರ್ನಾಟಕ ಗಡಿಯಲ್ಲಿ ಏಳು ತಿಂಗಳ ಗರ್ಭಿಣಿ ನರಳಾಟ……….

ಉಡುಪಿ: ಮಹಾರಾಷ್ಟ್ರದಿಂದ ಉಡುಪಿಗೆ ಹೊರಟ 7 ತಿಂಗಳ ಗರ್ಭಿಣಿ ಕಳೆದ ಎರಡು ದಿನದಿಂದ ಕರ್ನಾಟಕದ ಗಡಿಯಲ್ಲಿ ನರಳಾಟ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲಾಧಿಕಾರಿಯ ಅನುಮತಿಗಾಗಿ ಬೆಳಗಾವಿ ಪೊಲೀಸರು ಕಾಯುತ್ತಿದ್ದಾರೆ. ಮಹಾರಾಷ್ಟ್ರದಿಂದ ಮೂರು ದಿನದ ಹಿಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 30 ಜನ ಹೊರಟಿದ್ದರು. ಮಹಾರಾಷ್ಟ್ರದ ಪಾಸ್ ಪಡೆದಿದ್ದ ಈ ಗುಂಪು, ಕರ್ನಾಟಕ ಪ್ರವೇಶದ ಸೇವಾಸಿಂಧು ಪಾಸ್ ಪಡೆದಿರಲಿಲ್ಲ. ಹಾಗಾಗಿ ರಾಜ್ಯದೊಳಗೆ ಪ್ರವೇಶ ಸಾಧ್ಯವಾಗುತ್ತಿಲ್ಲ. ನಿಪ್ಪಾಣಿಯಲ್ಲಿ ಕಳೆದ ಎರಡು ದಿನಗಳಿಂದ …

Read More »

ಇಂದು 67 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 1,462ಕ್ಕೆ

ಬೆಂಗಳೂರು: ರಾಜ್ಯದ ಜನರಿಗೆ ಮಂಗಳವಾರ ಆತಂಕ ಸೃಷ್ಟಿಸಿದ್ದ ಕೊರೊನಾ ಸೋಂಕಿತರ ಸಂಖ್ಯೆಯು ಇಂದು ಇಳಿಕೆ ಕಂಡಿದೆ. ಇಂದು ರಾಜ್ಯದಲ್ಲಿ 67 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,462ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಇಂದು ಹಾಸನ 21, ಬೀದರ್ 10, ಮಂಡ್ಯ 8, ಉಡುಪಿ 6, ಕಲಬುರಗಿ 7, ಬೆಂಗಳೂರು, ತುಮಕೂರು, ರಾಯಚೂರಿನಲ್ಲಿ ತಲಾ 4, ಉತ್ತರ ಕನ್ನಡ, ದಕ್ಷಿಣ ಕನ್ನಡ, …

Read More »

ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಹಾವೇರಿಯಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ

ಹಾವೇರಿ: ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಹಾವೇರಿಯಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಪ್ರಯಾಣಿಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಬೆಳಗ್ಗೆ ಏಳೂವರೆಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ ನಸುಕಿನಿಂದಲೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದು, ಬೇರೆ ಜಿಲ್ಲೆಗಳ ಊರುಗಳಿಗೆ ತೆರಳಲು ನೂರಾರು ಜನ ಬಸ್ ನಿಲ್ದಾಣದಲ್ಲಿ ಜಮಾಯಿಸಿ, ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ. ಅಲ್ಲದೆ ಬಸ್ ಬರುತ್ತಿದ್ದಂತೆ ಪ್ರಯಾಣಿಕರು ಸಾಮಾಜಿಕ ಅಂತರ ಮರೆತು …

Read More »

ಇಂದು ಲಾಕ್ ಫ್ರೀ ಎರಡನೇ ದಿನ ಉತ್ತರ ಕರ್ನಾಟಕದ ಭಾಗಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಬೆಂಗಳೂರು: ಇಂದು ಲಾಕ್ ಫ್ರೀ ಎರಡನೇ ದಿನವಾಗಿದ್ದು, ಉತ್ತರ ಕರ್ನಾಟಕದ ಭಾಗಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಮೆಜೆಸ್ಟಿಕ್ ನಿಲ್ದಾಣದತ್ತ ಪ್ರಯಾಣಿಕರು ಅಗಮಿಸುತ್ತಿದ್ದು, ಟಿಕೆಟ್‍ಗಾಗಿ ಸರತಿಯಲ್ಲಿ ನಿಂತಿದ್ದಾರೆ. ಸೋಮವಾರ ರಾತ್ರಿಯೇ ಬಸ್ ವ್ಯವಸ್ಥೆ ಇಂದು ಮೆಜೆಸ್ಟಿಕ್ ನಿಲ್ದಾಣಕ್ಕೆ ಹಲವರು ಬಂದಿದ್ದರು. ಆದ್ರೆ ಬಸ್ ಸಿಗದೇ ಇಡೀ ರಾತ್ರಿಯನ್ನು ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಳೆಯುವಂತಾಗಿತ್ತು. ಇಂದು ಬಸ್ ಸಂಚಾರದಲ್ಲಿ ಕೆಲ ಬದಲಾವಣೆ ತರಲಾಗಿದ್ದು, ಸಂಜೆ 5 ಗಂಟೆ ಬದಲು 7 ಗಂಟೆವರೆಗೂ ಬಸ್‍ಗಳ ವ್ಯವಸ್ಥೆ …

Read More »

ಬೆಂಗಳೂರಿನಲ್ಲಿ ಮಧ್ಯಾಹ್ನವಾಗುತ್ತಿದ್ದಂತೆಯೇ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರ ಸಂಖ್ಯೆ ಇಳಿಮುಖ

ಬೆಂಗಳೂರು(ಮೇ.19): ದೇಶಾದ್ಯಂತ ನಾಲ್ಕನೇ ಹಂತದ ಲಾಕ್​ಡೌನ್​ ಮೇ 18ರಿಂದ ಜಾರಿಯಾಗಿದ್ದು, ಮೇ 31ರವರೆಗೂ ಇರಲಿದೆ. ಲಾಕ್​ಡೌನ್​ 4.0 ನಲ್ಲಿ ಭಾರಿ ಸಡಿಲಿಕೆ ನೀಡಲಾಗಿದ್ದು, ಬಹುತೇಕ ಎಲ್ಲ ವ್ಯಾಪಾರ- ವಹಿವಾಟು, ಸಂಚಾರ ವ್ಯವಸ್ಥೆ ಆರಂಭವಾಗಲಿದೆ. ಬಸ್ ಸಂಚಾರ ನಿರ್ಧಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದ್ದರಿಂದ ಸೋಮವಾರ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದಿನಿಂದ ಸಾರಿಗೆ ಸಂಚಾರ ಆರಂಭಿಸಲು ನಿರ್ಧರಿಸಿದ್ದಾರೆ. ಅದರಂತೆ ಇಂದಿನಿಂದ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ …

Read More »

ರಾಯಚೂರು ಸಂಪೂರ್ಣ ಲಾಕ್‍ಡೌನ್ – ಊಟವಿಲ್ಲದೆ ಪರದಾಡುತ್ತಿರೋ ಭಿಕ್ಷುಕರು

ರಾಯಚೂರು: ಜಿಲ್ಲೆಯಲ್ಲಿ ಪತ್ತೆಯಾದ ಆರು ಜನ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗಾಗಿ ಇಡೀ ನಗರವನ್ನ ಇಂದು ಬಂದ್ ಮಾಡಲಾಗಿದೆ. ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ಹೋಟೆಲ್, ಬೇಕರಿ, ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ ಆಗಿದ್ದು, ಜನರ ಓಡಾಟವೂ ವಿರಳವಾಗಿದೆ. ಇದರಿಂದ ರಸ್ತೆಯ ಬದಿಯ ಭಿಕ್ಷುಕರು ಊಟವಿಲ್ಲದೆ ಪರದಾಡುತ್ತಿದ್ದಾರೆ. ಮೂರನೇ ಹಂತದ ಲಾಕ್‍ಡೌನ್ ಆರಂಭವಾದ ನಂತರ ರಾಯಚೂರಿನಲ್ಲಿ ಲಾಕ್‍ಡೌನ್ ಸಡಲಿಕೆಯಾಗಿತ್ತು. ಭಿಕ್ಷೆ ಬೇಡಿ ಬದುಕುತ್ತಿದ್ದವರು ಕೂಡ ಈಗ ಊಟಕ್ಕಾಗಿ ಪರದಾಡುತ್ತಿದ್ದಾರೆ. ಸಂಪೂರ್ಣ ಲಾಕ್‍ಡೌನ್ …

Read More »

ಎರಡು ವರ್ಷದ ಮಗುವಿಗೆ ಕೊರೊನಾ- ಯಾದಗಿರಿಯಲ್ಲಿ 11ಕ್ಕೇರಿದ ಸೋಂಕಿತರ ಸಂಖ್ಯೆ

ಯಾದಗಿರಿ: ತಾಲೂಕಿನಲ್ಲಿ ಇಂದು ಎರಡು ವರ್ಷದ ಗಂಡು ಮಗುವಿಗೂ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಜಿಲ್ಲೆಯ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 11ಕ್ಕೇರಿದೆ. ತಾಲೂಕಿನ ಚಿನ್ನಕಾರ ಗ್ರಾಮದ ಗುರುಮಿಠಕಲ್‍ನ ರೋಗಿ ನಂ.1,256 ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟದೆ. ಈ ಹಿನ್ನೆಲೆ ಮಗುವಿನ ತಂದೆ, ತಾಯಿಯರ ಸ್ಯಾಂಪಲ್ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮೇ 14ರಂದು ತಂದೆ ತಾಯಿ ಮಗುವಿನೊಂದಿಗೆ ಖಾಸಗಿ ವಾಹನದ ಮೂಲಕ ಮುಂಬೈನಿಂದ ಯಾದಗಿರಿಗೆ ಬಂದಿದ್ದರು. ಇವರೊಟ್ಟಿಗೆ …

Read More »