Breaking News
Home / ಜಿಲ್ಲೆ / ಉಡುಪಿ (page 8)

ಉಡುಪಿ

ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಶೇವಿಂಗ್ ಕಿಟ್ ವಿತರಿಸಿದಸಮಾಜಸೇವಕ, ನಿತ್ಯಾನಂದ

ಉಡುಪಿ: ಕಳೆದ ಒಂದು ತಿಂಗಳಿಂದ ಉಡುಪಿಯಲ್ಲಿ ಸೆಲೂನ್‍ಗಳು ಬಂದ್ ಆಗಿರುವುದರಿಂದ ಹೇರ್ ಕಟ್ಟಿಂಗ್, ಶೇವಿಂಗ್ ಮಾಡದೆ ಜನಕ್ಕೆ ಕಿರಿಕಿರಿಯಾಗುತ್ತಿದೆ. ಮನೆಯಲ್ಲಿ ಲಾಕ್ ಆಗಿರೋರು ತಮ್ಮ ಹೇರ್ ಕಟ್ಟಿಂಗ್ ತಾವೇ ಮಾಡಿಕೊಳ್ತಾ ಇದ್ದಾರೆ. ಹೊರ ಜಿಲ್ಲೆಯಿಂದ ಬಂದು ಉಡುಪಿಯ ನಿರಾಶ್ರಿತರ ಕೇಂದ್ರದಲ್ಲಿ ಇರುವವರು ಕಟ್ಟಿಂಗ್, ಶೇವಿಂಗ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಸಂಕಷ್ಟವನ್ನು ಅರಿತುಕೊಂಡ ಉಡುಪಿಯ ಸಮಾಜಸೇವಕ, ನಿತ್ಯಾನಂದ ಒಳಕಾಡು ಶೇವಿಂಗ್ ಕಿಟ್ ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಉಡುಪಿಯ ಇಂದಿರಾ ಕ್ಯಾಂಟೀನ್, …

Read More »

ಆಶಾ ಕಾರ್ಯಕರ್ತೆಗೆ ಕೊಲೆ ಬೆದರಿಕೆ- ಇಬ್ಬರ ಬಂಧನ…….

ಉಡುಪಿ: ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೊನಾ ವಾರಿಯರ್ಸ್ ಮೇಲೆ ಬೆದರಿಕೆ ಪ್ರಕರಣ ಮರುಕಳಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯನ್ನ ಬೆದರಿಸಿದ ಘಟನೆ ನಡೆದಿದೆ. ಕೊರೊನಾ ಲಾಕ್‍ಡೌನ್ ನಡುವೆ ಬೆಂಗಳೂರಿಂದ ಬಂದಿರುವ ಯುವಕ ಸಂದೀಪ್ ಮೇಸ್ತ ಎಂಬಾತನಿಗೆ ಆಶಾ ಕಾರ್ಯಕರ್ತೆ ಲಕ್ಷ್ಮೀ ಹೋಂ ಕ್ವಾರಂಟೈನ್ ವಿಧಿಸಿದ್ದರು. ಆದರೆ ಸಂದೀಪ್ ಕ್ವಾರಂಟೈನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದ. ಹೀಗಾಗಿ ಸಂದೀಪ್ ನನ್ನ ಮನೆಯಲ್ಲಿರುವಂತೆ ಸೂಚನೆ ನೀಡಿದ್ದೇ ತಡ ಸಂದೀಪ್ ಹಾಗೂ ಆತನ ಗೆಳೆಯ …

Read More »

ಉಡುಪಿ:ನರ್ಸ್‍ಗೆ ಜೀವ ಬೆದರಿಕೆ ಹಾಕಿದ ಪುಂಡರು……

ಉಡುಪಿ: ಕೋವಿಡ್-19ಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ನರ್ಸ್‍ಗಳಿಗೆ ವಿದೇಶದಲ್ಲಿ ವಿಭಿನ್ನ ರೀತಿಯ ಧನ್ಯವಾದ, ಶುಭಾಶಯ ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಕೆಲವು ಕಡೆಗಳಲ್ಲಿ ಆರೋಗ್ಯ ಕಾರ್ಯಕರ್ತರು, ಡಾಕ್ಟರ್‌ಗಳಿಗೆ ಧಮ್ಕಿ ಹಾಕುವ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಾಪು ತಾಲೂಕಿನ ಪಡುಬಿದ್ರೆಯ ಆರೋಗ್ಯ ಸಹಾಯಕಿ ಶ್ಯಾಮಲಾ ಅವರಿಗೆ ಧಮ್ಕಿ ಹಾಕಲಾಗಿದೆ. ನಿನ್ನನ್ನು ಫೀಲ್ಡ್ ನಲ್ಲಿ ನೋಡಿಕೊಳ್ಳುತ್ತೇನೆ. ಹೇಗೆ ಕೆಲಸ ಮಾಡುತ್ತೀಯಾ ನೋಡ್ಕೋತೇವೆ ಎಂದು ಮಮ್ತಾಜ್ ಮತ್ತು ಮನ್ಸೂರ್ ಎಂಬ ಕಿಡಿಗೇಡಿಗ ಜೀವ ಬೆದರಿಕೆ …

Read More »

ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ

ಮಂಗಳೂರು: ಲಾಕ್‍ಡೌನ್ ಹಿನ್ನೆಲೆ ಜನದಟ್ಟಣೆ ಕಡಿಮೆಯಾಗಿರುವುದರಿಂದ ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ನಂತರ ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಘಟನೆ ನಡೆದಿದ್ದು, ಮಜಿ ಮೋನಪ್ಪ ಅವರ ಜಮೀನಿನಲ್ಲಿರುವ ಸುಮಾರು 6 ಅಡಿ ಆಳದ ಬಾವಿಗೆ ಚಿರತೆ ಬಿದ್ದು ಆತಂಕ ಸೃಷ್ಟಿಸಿತ್ತು. ಬಾವಿಯಿಂದ ಮೇಲಕ್ಕೆ ಬರಲು ಸಾಧ್ಯವಾಗದೆ ಹೊರಳಾಡುತ್ತಿತ್ತು. ರಾತ್ರಿ ವೇಳೆ ಕಾಣದೆ ಚಿರತೆ ಬಾವಿಯಲ್ಲಿ ಬಿದ್ದಿದ್ದು, …

Read More »

ಉಡುಪಿ:ಸಿರಪ್ ಬಾಟಲ್ ಹಿಡಿದು ಜಾಲಿ ರೈಡ್- ಯುವಕನ ಬೈಕ್ ಸೀಜ್

ಉಡುಪಿ: ದೇಶಾದ್ಯಂತ ಕೊರೊನಾ ಲಾಕ್ ಡೌನ್ ಘೋಷಣೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಆದರೂ ಜನ ಸುತ್ತಾಡುತ್ತಿದ್ದು, ಹೀಗಾಗಿ ಸುತ್ತಾಡುವವರ ವಾಹನ ಸೀಜ್ ಮಾಡಿ ಜಿಲ್ಲಾಧಿಕಾರಿ ಕೇಸ್ ದಾಖಲು ಮಾಡಿದ್ದಾರೆ. ಬೆಳಗ್ಗೆ 7 ಗಂಟೆಯಿಂದ 11 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ವಿನಾಯಿತಿ ಕೊಟ್ಟಿದೆ. ಆದರೂ ಆ ಸಂದರ್ಭ ಮತ್ತು ಆ ಬಳಿಕ ಅನಗತ್ಯವಾಗಿ ನಗರದಾದ್ಯಂತ ಜನ ಓಡಾಡುತ್ತಿದ್ದಾರೆ. ಈ ಬಗ್ಗೆ ಎಸ್ಪಿ ಮತ್ತು ಡಿಸಿಗೆ …

Read More »

ಉಡುಪಿ:ಮೀನು ಸಿಗುವ ಮೀನಿನಂಗಡಿಯಲ್ಲಿ ಈಗ ಕಿಲೋ ಮೀಟರ್‌ಗಟ್ಟಲೇ ಉದ್ದದ ಕ್ಯೂ

ಉಡುಪಿ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಈ ಟೈಮ್‍ನಲ್ಲಿ ನಾನ್‍ವೆಜ್ ಪ್ರಿಯರ ಪಾಡು ಕೇಳುವುದೇ ಬೇಡ. ಅದರಲ್ಲೂ ಮೀನಿನೂಟ ಇಲ್ಲದೇ ಬಹುತೇಕ ಕರಾವಳಿಯವರಿಗೆ ಊಟ ಸಪ್ಪೆ ಸಪ್ಪೆ. ಈಗ ಲಾಕ್‍ಡೌನ್ ಎಫೆಕ್ಟ್ ಇರುವ ಹಿನ್ನೆಲೆಯಲ್ಲಿ ಮೀನು ಸಿಗುವುದೆ ಅಪರೂಪ. ಮೀನು ಸಿಗುವ ಮೀನಿನಂಗಡಿಯಲ್ಲಿ ಈಗ ಕಿಲೋ ಮೀಟರ್‌ಗಟ್ಟಲೇ ಉದ್ದದ ಕ್ಯೂ ಇರುತ್ತದೆ. ಹೆಬ್ರಿ ಮುದ್ರಾಡಿಯ ಮೀನಿನಂಗಡಿಯಲ್ಲಿ ಪ್ರತಿನಿತ್ಯವೂ ಜನ ಮೀನುಕೊಳ್ಳಲು ಸೋಷಿಯಲ್ ಡಿಸ್ಟೆನ್ಸ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಕ್ಯೂ …

Read More »

ನಾವು ವಾರದಲ್ಲಿ ಮೂರು ಹೊತ್ತು ಉಪವಾಸ ಮಾಡೋಣ,ಆಹಾರವನ್ನು ತ್ಯಾಗ ಮಾಡಿದರೆ ದೇಶದಲ್ಲಿ ಆಹಾರ ವಸ್ತುಗಳನ್ನು ಉಳಿಸಿದಂತಾಗುತ್ತದ : ಉಡುಪಿ ಅದಮಾರು ಸ್ವಾಮೀಜಿ

ಉಡುಪಿ: ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಜಾಸ್ತಿಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದಲ್ಲಿ ಆಹಾರ ವಸ್ತುಗಳ ಲಭ್ಯತೆ ಕಷ್ಟವಾಗಲಿದೆ ಎಂದು ಉಡುಪಿ ಅದಮಾರು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶಕ್ಕೋಸ್ಕರ, ಭಾರತದಲ್ಲಿ ಜೀವಿಸುವ ಮನುಷ್ಯರಿಗೋಸ್ಕರ ನಾವು ತ್ಯಾಗ ಮಾಡಲು ಇದು ಸೂಕ್ತ ಸಮಯ. ಹಾಗಾಗಿ ನಾವು ವಾರದಲ್ಲಿ ಮೂರು ಹೊತ್ತು ಉಪವಾಸ ಮಾಡೋಣ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಸ್ವಾಮೀಜಿ ಕರೆ ನೀಡಿದ್ದಾರೆ. ವಾರಕ್ಕೆ ಮೂರು ಹೊತ್ತು ಆಹಾರವನ್ನು ತ್ಯಾಗ ಮಾಡಿದರೆ …

Read More »

ಪಡುಕೋಣೆ ಚರ್ಚಿನಲ್ಲಿ ಪ್ರಾರ್ಥನೆ- ಧರ್ಮಗುರು ಸೇರಿ 7 ಮಂದಿ ಮೇಲೆ ಕೇಸ್

ಉಡುಪಿ: ಗುಡ್ ಫ್ರೈಡೇ ದಿನವೇ ಚರ್ಚಿನ ಧರ್ಮಗುರು ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡವರ ಮೇಲೆ ಕೇಸು ದಾಖಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಪಡುಕೋಣೆಯಲ್ಲಿ ಗುಡ್ ಫ್ರೈಡೇ ಹಿನ್ನೆಲೆಯಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ನಡೆದಿದೆ. ಧರ್ಮಗುರು ಮತ್ತು ಆರು ಜನರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಪಡುಕೋಣೆಯ ಸಂತ ಅಂತೋನಿ ಚರ್ಚ್‍ನಲ್ಲಿ ಇಂದು ಗುಡ್ ಫ್ರೈಡೇ ಪ್ರಾರ್ಥನೆ ನಡೆದಿತ್ತು. ಬೈಂದೂರು ತಾಲೂಕು ನಾಡ ಗ್ರಾಮದಲ್ಲಿರುವ ಚರ್ಚ್ ಧರ್ಮಗುರು …

Read More »

ಬೆಂಗ್ಳೂರಿನಿಂದ ಮಂಗ್ಳೂರಿನವರೆಗೂ ಬಂದು ಜೈಲು ಸೇರಿದ ಅಸಾಮಿ…..

ಮಂಗಳೂರು: ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಲಾಯಿಸುತ್ತಿದ್ದ ಮಧ್ಯ ವಯಸ್ಕನೊಬ್ಬ ಮಂಗಳೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಹುಸೈನ್ ಅಲಿ (58) ಬಂಧಿತ ನಕಲಿ ಪತ್ರಕರ್ತ. ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಯಾರು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಆದರೆ ತುರ್ತು ಸೇವೆಯಲ್ಲಿ ಇರುವವರಿಗೆ, ವಿವಿಧ ಮಾಧ್ಯಮಗಳಲ್ಲಿ ವೃತ್ತಿ ಮಾಡುವವರಿಗೆ ವಿನಾಯಿತಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ …

Read More »

ಕ್ವಾರಂಟೈನ್‍ಗಳಿಂದ ಬ್ರಾಂಡೆಡ್ ಬೇಡಿಕೆ – ಉಡುಪಿಯಲ್ಲಿ ಹೊಸ ತಲೆನೋವು ಶುರು

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಕ್ವಾರಂಟೈನ್‍ನಲ್ಲಿರುವ ಜನರ ಕಿರಿಕ್ ಜಾಸ್ತಿಯಾಗುತ್ತಿದೆ. ನಮಗೆ ಬ್ರಾಂಡೆಡ್ ಐಟಂ ಬೇಕು ಅಂತ ಸಿಬ್ಬಂದಿಗೆ ಒತ್ತಡ ಹಾಕುತ್ತಿದ್ದಾರೆ. ಉಡುಪಿ ಜಿಲ್ಲೆಯ ನರ್ಸ್, ಆಶಾ ಕಾರ್ಯಕರ್ತರಿಗೆ ಕ್ವಾರಂಟೈನ್‍ಗಳು ದುಂಬಾಲು ಬೀಳುತ್ತಿದ್ದಾರೆ. ವಿದೇಶದಿಂದ ಬಂದ ವ್ಯಕ್ತಿಗಳ ಕುಟುಂಬಕ್ಕೆ ಜಿಲ್ಲಾಡಳಿತ ಒಂದು ತಿಂಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಿತ್ತು. ಕುಟುಂಬದ ಯಾವ ಸದಸ್ಯರು ಹೊರಗೆ ಬಾರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಕಾರ್ಯಕರ್ತರು ದಿಗ್ಬಂಧನ ಹಾಕಿದ್ದರು. ಒಂದು ಕುಟುಂಬಕ್ಕೆ ಬೇಕಾದ …

Read More »