ಉಡುಪಿ: ಕೋವಿಡ್-19ಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ನರ್ಸ್‍ಗಳಿಗೆ ವಿದೇಶದಲ್ಲಿ ವಿಭಿನ್ನ ರೀತಿಯ ಧನ್ಯವಾದ, ಶುಭಾಶಯ ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಕೆಲವು ಕಡೆಗಳಲ್ಲಿ ಆರೋಗ್ಯ ಕಾರ್ಯಕರ್ತರು, ಡಾಕ್ಟರ್‌ಗಳಿಗೆ ಧಮ್ಕಿ ಹಾಕುವ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಕಾಪು ತಾಲೂಕಿನ ಪಡುಬಿದ್ರೆಯ ಆರೋಗ್ಯ ಸಹಾಯಕಿ ಶ್ಯಾಮಲಾ ಅವರಿಗೆ ಧಮ್ಕಿ ಹಾಕಲಾಗಿದೆ. ನಿನ್ನನ್ನು ಫೀಲ್ಡ್ ನಲ್ಲಿ ನೋಡಿಕೊಳ್ಳುತ್ತೇನೆ. ಹೇಗೆ ಕೆಲಸ ಮಾಡುತ್ತೀಯಾ ನೋಡ್ಕೋತೇವೆ ಎಂದು ಮಮ್ತಾಜ್ ಮತ್ತು ಮನ್ಸೂರ್ ಎಂಬ ಕಿಡಿಗೇಡಿಗ ಜೀವ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಶ್ಯಾಮಲಾ ಅವರು ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಮ್ತಾಜ್ ಮತ್ತು ಮನ್ಸೂರ್ ನನ್ನು ಠಾಣೆಗೆ ಕರೆಸಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಮಮ್ತಾಜ್ ಮತ್ತು ಶ್ಯಾಮಲಾ ಅಕ್ಕಪಕ್ಕದ ಮನೆಯವರಾಗಿದ್ದು, ಮನ್ಸೂರು ಮನೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹತ್ತಾರು ಜನ ಬಂದು ತಂಗುತ್ತಿದ್ದರು. ಮನೆಗೆ ಕಳೆದ ಕೆಲ ದಿನಗಳಿಂದ ನೆಂಟರು ಬರುವ ಸಂಖ್ಯೆ ಜಾಸ್ತಿಯಾಗಿತ್ತು. ಶ್ಯಾಮಲಾ ಮತ್ತು ಆಶಾ ಕಾರ್ಯಕರ್ತೆಯರು ಈ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದರು. ಇದನ್ನು ಅವಮಾನ ಎಂದು ಪರಿಗಣಿಸಿದ ಮಮ್ತಾಜ್, ಶ್ಯಾಮಲಾರಿಗೆ ಧಮ್ಕಿ ಹಾಕಿದ್ದಾರೆ. ಆತಂಕಕಾರಿ ಬೆಳವಣಿಗೆ ಇದಾಗಿದ್ದು, ಪೊಲೀಸರು ರಕ್ಷಣೆ ನೀಡಬೇಕೆಂದು ಶ್ಯಾಮಲಾ ವಿನಂತಿ ಮಾಡಿದ್ದಾರೆ.