Breaking News
Home / ಜಿಲ್ಲೆ / ಉಡುಪಿ / ಬೆಂಗ್ಳೂರಿನಿಂದ ಮಂಗ್ಳೂರಿನವರೆಗೂ ಬಂದು ಜೈಲು ಸೇರಿದ ಅಸಾಮಿ…..

ಬೆಂಗ್ಳೂರಿನಿಂದ ಮಂಗ್ಳೂರಿನವರೆಗೂ ಬಂದು ಜೈಲು ಸೇರಿದ ಅಸಾಮಿ…..

Spread the love

ಮಂಗಳೂರು: ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಲಾಯಿಸುತ್ತಿದ್ದ ಮಧ್ಯ ವಯಸ್ಕನೊಬ್ಬ ಮಂಗಳೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನ ಹುಸೈನ್ ಅಲಿ (58) ಬಂಧಿತ ನಕಲಿ ಪತ್ರಕರ್ತ. ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಯಾರು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಆದರೆ ತುರ್ತು ಸೇವೆಯಲ್ಲಿ ಇರುವವರಿಗೆ, ವಿವಿಧ ಮಾಧ್ಯಮಗಳಲ್ಲಿ ವೃತ್ತಿ ಮಾಡುವವರಿಗೆ ವಿನಾಯಿತಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಲಾಯಿಸುತ್ತಿದ್ದ ಹುಸೈನ್ ಅಲಿ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರಿನ ಹುಸೈನ್ ಪ್ರೆಸ್ ಅಂತ ನಕಲಿ ಗುರುತಿನ ಚೀಟಿಯನ್ನು ಇನ್ನೋವಾ ಕಾರ್ ನಲ್ಲಿ ಅಂಟಿಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಮಂಗಳೂರಿನಲ್ಲಿ ತಿರುಗಾಟ ನಡೆಸಿದ್ದ. ಕೂಡಲೇ ಕಂಕನಾಡಿ ನಗರ ಪೊಲೀಸರ ಕಾರ್ಯಾಚರಣೆ ನಡೆಸಿದಾಗ ಹುಸೈನ್ ಯಾವುದೇ ಮಾಧ್ಯಮ ಸಂಸ್ಥೆಗೆ ಸೇರಿದವನಲ್ಲ ನಕಲಿ ಪತ್ರಕರ್ತ ಎನ್ನುವ ವಿಷಯ ಗೊತ್ತಗಿದೆ. ಹೀಗಾಗಿ ಇನ್ನೋವಾ ಕಾರು ವಶಕ್ಕೆ ಪಡೆದು ಆರೋಪಿ ಹುಸೈನ್‍ನನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the loveಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ