Breaking News
Home / ಜಿಲ್ಲೆ / ಉಡುಪಿ (page 6)

ಉಡುಪಿ

ತಂದೆ ಸತ್ತಾಗ ಅವರ ಮುಖವನ್ನು ಕೊನೆಯದಾಗಿ ನೋಡಲು ಸಾಧ್ಯವಾಗಿಲ್ಲ

ಉಡುಪಿ: ತಂದೆ ಸತ್ತಾಗ ಅವರ ಮುಖವನ್ನು ಕೊನೆಯದಾಗಿ ನೋಡಲು ಸಾಧ್ಯವಾಗಿಲ್ಲ. ಈಗ ಅವರ ಅಪರ ಕರ್ಮಾಧಿಗಳನ್ನಾದರೂ ಮಾಡಲು ಬಿಡಿ ಎಂದು ಉಡುಪಿಯ ವ್ಯಕ್ತಿ ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾನೆ. ನಾನು ಉಡುಪಿಗೆ ಬಂದದ್ದೇ ವೇಸ್ಟ್ ಆಯ್ತು. ಯಾವ ಧಾರ್ಮಿಕ ಪ್ರಕ್ರಿಯೆಗಳನ್ನು ಮಾಡಲು ಸಾಧ್ಯವಾಗಿಲ್ಲ. ನನ್ನ ಟೆಸ್ಟ್ ರಿಪೋರ್ಟ್ ಇನ್ನೂ ಬಂದಿಲ್ಲ ಎಂದು ತಂದೆಯ ತಿಥಿ ಮಾಡಲು ಮುಂಬೈನಿಂದ ಬಂದಾತ ತನ್ನ ನೋವು ತೋಡಿಕೊಂಡಿದ್ದಾನೆ. ಉಡುಪಿಯ ಇಂದಿರಾ ನಗರ ಕ್ವಾರಂಟೈನ್ ಸೆಂಟರ್ ಗೆ …

Read More »

ಕೊರೊನಾಗೆ ಡಯಾಬಿಟೀಸ್ ಟೈಪ್ 2 ಮದ್ದು ? ಕೆನಡಾದಲ್ಲಿ ಕರುನಾಡ ವೈದ್ಯರಿಗೆ ಆರಂಭಿಕ ಯಶಸ್ಸು

ಉಡುಪಿ: ವಿಶ್ವಾದ್ಯಂತ ಮಾರಣ ಹೋಮವನ್ನೇ ನಡೆಸುತ್ತಿರುವ ಮಹಾಮಾರಿ ಕೊರೊನಾ ತೊಲಗಿಸಲು ವಿಶ್ವದ ಬಹುತೇಕ ರಾಷ್ಟ್ರಗಳ ವಿಜ್ಞಾನಿಗಳ ತಂಡ ಹರಸಾಹಸಪಡುತ್ತಿದೆ. ಇದೆಲ್ಲದ ಮಧ್ಯೆ ಉಡುಪಿ ಮೂಲದ ಕೆನಡಾ ಕನ್ನಡಿಗ ವೈದ್ಯರಿಗೆ ಕೊರೊನಾ ಔಷಧಿ ಸಂಶೋಧನೆಯಲ್ಲಿ ಆರಂಭಿಕ ಯಶಸ್ಸು ಸಿಕ್ಕಿದೆ.   ಕೆನಡಾದಲ್ಲಿ ಫಾರ್ಮಸಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಉಡುಪಿಯ ಪೆರಂಪಳ್ಳಿಯ ನೆಕ್ಕಾರ್ ನಿವಾಸಿ ಡಾ.ಪ್ರವೀಣ್ ರಾವ್ ಈ ಸಂಶೋಧನೆ ನಡೆಸಿದ್ದಾರೆ. ಮಹಾಮಾರಿ ಕರೊನಾ ತೊಲಗಿಸಲು ಟೈಪ್ 2 ಡಯಾಬಿಟೀಸ್‍ಗೆ ನೀಡುವ …

Read More »

ಉಡುಪಿಯಲ್ಲಿ ಕೊರೊನಾ ಆತಂಕ- 950 ವರದಿಗಳ ನಿರೀಕ್ಷೆಯಲ್ಲಿ ಜಿಲ್ಲಾಡಳಿತ

ಉಡುಪಿ: ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇಂದು ಫುಲ್ ಆತಂಕದಲ್ಲಿದೆ. ಜಿಲ್ಲೆಯಲ್ಲಿ ಏಕಾಏಕಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುವ ಆತಂಕವಿದೆ. ಮುಂಬೈ ಜೊತೆ ಇಂದು ದುಬೈ ಪ್ರಯಾಣಿಕರ ವರದಿಯನ್ನು ಜಿಲ್ಲಾಡಳಿತ ನಿರೀಕ್ಷೆ ಮಾಡುತ್ತಿದೆ. ಡಿಎಚ್‍ಒ ಕೊಡುವ ಮಾಹಿತಿ ಪ್ರಕಾರ ಇಂದು 950ಕ್ಕೂ ಹೆಚ್ಚು ಮಂದಿಯ ವೈದ್ಯಕೀಯ ವರದಿ ಕೈಸೇರಲಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 22 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಓರ್ವ ಸೋಂಕಿತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ದುಬೈನಿಂದ ಬಂದಿದ್ದ 49 …

Read More »

ಮಹಾರಾಷ್ಟ್ರ- ಕರ್ನಾಟಕ ಗಡಿಯಲ್ಲಿ ಏಳು ತಿಂಗಳ ಗರ್ಭಿಣಿ ನರಳಾಟ……….

ಉಡುಪಿ: ಮಹಾರಾಷ್ಟ್ರದಿಂದ ಉಡುಪಿಗೆ ಹೊರಟ 7 ತಿಂಗಳ ಗರ್ಭಿಣಿ ಕಳೆದ ಎರಡು ದಿನದಿಂದ ಕರ್ನಾಟಕದ ಗಡಿಯಲ್ಲಿ ನರಳಾಟ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲಾಧಿಕಾರಿಯ ಅನುಮತಿಗಾಗಿ ಬೆಳಗಾವಿ ಪೊಲೀಸರು ಕಾಯುತ್ತಿದ್ದಾರೆ. ಮಹಾರಾಷ್ಟ್ರದಿಂದ ಮೂರು ದಿನದ ಹಿಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 30 ಜನ ಹೊರಟಿದ್ದರು. ಮಹಾರಾಷ್ಟ್ರದ ಪಾಸ್ ಪಡೆದಿದ್ದ ಈ ಗುಂಪು, ಕರ್ನಾಟಕ ಪ್ರವೇಶದ ಸೇವಾಸಿಂಧು ಪಾಸ್ ಪಡೆದಿರಲಿಲ್ಲ. ಹಾಗಾಗಿ ರಾಜ್ಯದೊಳಗೆ ಪ್ರವೇಶ ಸಾಧ್ಯವಾಗುತ್ತಿಲ್ಲ. ನಿಪ್ಪಾಣಿಯಲ್ಲಿ ಕಳೆದ ಎರಡು ದಿನಗಳಿಂದ …

Read More »

ಉದ್ದುದ್ದ ಕೂದಲು, ಕುರುಚಲು ಗಡ್ಡಕ್ಕೆ ಮುಕ್ತಿ- ಎಲ್ಲಾ ಸಲೂನ್ ಓಪನ್…..

ಉಡುಪಿ: ಜಿಲ್ಲೆಯಲ್ಲಿ 54 ದಿನಗಳ ನಂತರ ಸಲೂನ್ ಓಪನ್ ಆಗಿದೆ. ಲಾಕ್‍ಡೌನ್ ಆರಂಭದಿಂದ ಕೂದಲು ಗಡ್ಡ ಬಿಟ್ಟು ಟೆನ್ಷನ್ ಮಾಡಿಕೊಂಡಿದ್ದ ಪುರುಷರು ಫುಲ್ ರಿಲೀಫ್ ಆಗಿದ್ದಾರೆ. ಉಡುಪಿಯಲ್ಲಿ ಹೇರ್ ಕಟ್ಟಿಂಗ್ ಸಲೂನ್‍ಗಳು ಬಂದ್ ಆಗಿ 54 ದಿನ ಕಳೆದಿದೆ. ಲಾಕ್‍ಡೌನ್ ಘೋಷಣೆ ಆಗುವ ಮೊದಲೇ ಸಲೂನ್ ಗಳನ್ನು ಉಡುಪಿಯಲ್ಲಿ ಬಂದ್ ಮಾಡಲಾಗಿತ್ತು. ಒಟ್ಟು ನಾಲ್ಕು ಹಂತಗಳಲ್ಲಿ ಲಾಕ್‍ಡೌನ್ ರಿಲೀಸ್ ಆಗುತ್ತಾ ಬಂದರೂ ಹೇರ್ ಕಟ್ಟಿಂಗ್ ಗೆ ಅವಕಾಶ ಸರ್ಕಾರ ಕೊಟ್ಟಿರಲಿಲ್ಲ. …

Read More »

ಸಿಡಿಲು ಬಡಿದು ಮನೆಯಲ್ಲಿ ಕುಳಿತಿದ್ದ ಯುವಕ ಸಾವು……….

ಉಡುಪಿ: ಭಾನುವಾರ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲೂ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಪರಿಣಾಮ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.   ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಈ ಘಟನೆ ನಡೆದಿದ್ದು, ಕಟಪಾಡಿ ಏಣಗುಡ್ಡೆ ನಿವಾಸಿ ಭರತ್ (22) ಮೃತ ಯುವಕ. ಮೃತ ಭರತ್ ಸಿಡಿಲು ಸಹಿತ ಮಳೆ ಬರುವಾಗ ಮನೆಯಲ್ಲಿ ಕುಳಿತಿದ್ದನು. ಆದರೂ ಸಿಡಿಲು ಬಡಿದು ಯುವಕ …

Read More »

ಮುಂಬೈನಿಂದ ಬಂದು ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ

ಉಡುಪಿ: ಮುಂಬೈನಿಂದ ಬಂದು ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರೋದು ಇಂದು ದೃಢಪಟ್ಟಿದೆ. ಸಾವನ್ನಪ್ಪಿದ 54 ವರ್ಷದ ಸೋಂಕಿತ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನಿವಾಸಿಯಾಗಿದ್ದು, ಮೇ 13ರಂದು ಹೃದಯಾಘಾತವಾಗಿತ್ತು. ಆರಂಭದಲ್ಲಿ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನೋವು ಉಲ್ಬಣಗೊಂಡು ಮಣಿಪಾಲ ಕೆಎಂಸಿಗೆ ಶಿಫ್ಟ್ ಮಾಡಲಾಗಿತ್ತು. ಮೇ 13ರ ರಾತ್ರಿಯೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. ಮೇ 14ರ ಬೆಳಗ್ಗೆ ವ್ಯಕ್ತಿ ನಿಧನರಾಗಿದ್ದರು. ವ್ಯಕ್ತಿ ಮುಂಬೈನಿಂದ …

Read More »

ಕಾರ್ಕಳ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ತಾಲೂಕಿನಾದ್ಯಂತ ಕಷಾಯ ವಿತರಣೆ

ಉಡುಪಿ: ವಿಶ್ವಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೋವಿಡ್-19ಗೆ ಇನ್ನೂ ಚುಚ್ಚು ಮದ್ದು ಸಿಕ್ಕಿಲ್ಲ. ವಿಶ್ವದ ಎಲ್ಲಾ ದೇಶಗಳು ಕೊರೊನಾ ಚುಚ್ಚು ಮದ್ದನ್ನು ಕಂಡು ಹುಡುಕುವಲ್ಲಿ ಹಗಲು ರಾತ್ರಿ ಶ್ರಮಿಸುತ್ತಿವೆ. ಈ ನಡುವೆ ಕೊರೊನಾ ವೈರಸ್ ದೇಹಕ್ಕೆ ಬಾಧಿಸದಂತೆ ಆಯುರ್ವೇದದಲ್ಲಿ ಚಿಕಿತ್ಸೆ ಇದೆ ಎಂದು ಆಯುಷ್ ಇಲಾಖೆ ಹೇಳಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಇದನ್ನು ಪ್ರಯೋಗ ಮಾಡಲಾಗುತ್ತಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ತಾಲೂಕಿನಾದ್ಯಂತ ಕಷಾಯ ವಿತರಣೆ …

Read More »

ಯುಎಇಯಿಂದ ಉಡುಪಿಗೆ ಬಂದ ಐವರಿಗೆ ಕೊರೊನಾ……..

ಉಡುಪಿ: ಯುಎಇಯಿಂದ ಉಡುಪಿಗೆ ಬಂದ 49 ಮಂದಿ ಪೈಕಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇನ್ನಿಬ್ಬರ ವರದಿ ಬರುವುದು ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. 47 ದಿನದಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ, ಹೀಗಾಗಿ ಜಿಲ್ಲೆ ಗ್ರೀನ್ ಝೋನ್‍ನಲ್ಲಿ ಇತ್ತು. ಆದರೆ ವಿದೇಶಿ ನೆಲದಲ್ಲಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಕ್ಕೆ ಭಾರತ ಮುಂದಾಗಿದ್ದು, ಉಡುಪಿ ಜಿಲ್ಲೆಗೆ 49 ಮಂದಿ ಯುಎಇಯಿಂದ ಬಂದಿದ್ದು, ಅವರಲ್ಲಿ …

Read More »

ಬಸ್ ಬಂದರೂ ಜನ ಬರುತ್ತಿಲ್ಲ……….

ಉಡುಪಿ: ಜಿಲ್ಲೆಯೊಳಗೆ ಇಂದಿನಿಂದ ಖಾಸಗಿ ಸರ್ಕಾರಿ ಬಸ್‍ಗಳು ಓಡಾಡುತ್ತಿವೆ. ಕುಂದಾಪುರ ರೂಟ್‍ನಲ್ಲಿ ಪ್ರತಿ ಅರ್ಧಗಂಟೆಗೊಂದು ಬಸ್, ಉಡುಪಿ-ಮಣಿಪಾಲ ನಗರದಲ್ಲಿ ನರ್ಮ್ ಬಸ್ ಸಂಚಾರ ಆರಂಭವಾಗಿದೆ. ಉಡುಪಿ ಜಿಲ್ಲೆಯನ್ನು ಕೇಂದ್ರ ಸರ್ಕಾರ ಗ್ರೀನ್ ಝೋನ್ ಎಂದು ಘೋಷಿಸಿದೆ. ನಿರ್ಬಂಧಿತ ವಿನಾಯಿತಿಗಳು ಜಿಲ್ಲೆಗೆ ಸಿಕ್ಕಿದೆ. ಹೀಗಾಗಿ ಜಿಲ್ಲೆಯ ಒಳಗೆ ಖಾಸಗಿ ಮತ್ತು ಸರ್ಕಾರಿ ಬಸ್‍ಗಳ ಓಡಾಟ ಆರಂಭಿಸಬಹುದು ಎಂದು ಜಿಲ್ಲಾಡಳಿತ ಹೇಳಿತ್ತು. ಬೆರಳೆಣಿಕೆಯ ಬಸ್‍ಗಳು ಮಾತ್ರ ಇಂದು ರಸ್ತೆಗೆ ಇಳಿದಿವೆ. ಆದರೆ ಜನ …

Read More »