Breaking News
Home / ಜಿಲ್ಲೆ / ಉಡುಪಿ (page 7)

ಉಡುಪಿ

ಯುಎಇಯಿಂದ 52 ಮಂದಿ ಉಡುಪಿಗೆ ಆಗಮನ- 9 ಮಂದಿ ಸರ್ಕಾರಿ ಕ್ವಾರಂಟೈನ್……….

ಉಡುಪಿ: ವಿದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕಳೆದ ಐದು ದಿನಗಳಿಂದ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸಿಂದ ಉಡುಪಿಗೆ 52 ಪ್ರಯಾಣಿಕರು ವಾಪಸ್ಸಾಗಿದ್ದಾರೆ. ಮಂಗಳವಾರ ರಾತ್ರಿ 176 ಪ್ರಯಾಣಿಕರು ಮಂಗಳೂರು ಏರ್ ಪೋರ್ಟಿಗೆ ಬಂದಿಳಿದಿದ್ದು , ಈ ಪೈಕಿ 52 ಜನರು ವಿಮಾನ ನಿಲ್ದಾಣದಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಉಡುಪಿ ಜಿಲ್ಲೆಗೆ ಬಂದಿದ್ದಾರೆ. ಈ ಪೈಕಿ 27 ಮಂದಿ ಪುರುಷರು ಮತ್ತು 26 ಮಂದಿ ಮಹಿಳೆಯರಿದ್ದಾರೆ. 41 ಜನ ಹೋಟೆಲ್, …

Read More »

ಉಡುಪಿಯಲ್ಲಿ ನಾಳೆಯಿಂದ ಖಾಸಗಿ, ಸರ್ಕಾರಿ ಬಸ್ ಸಂಚಾರ ಆರಂಭ…..

ಉಡುಪಿ: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಆರಂಭವಾಗಲಿದೆ. ಜನತಾ ಕಫ್ರ್ಯೂ ಘೋಷಣೆಯಾದ ನಂತರ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರ ಇರಲಿಲ್ಲ. ಇದೀಗ ಕೆಲವು ಷರತ್ತುಗಳನ್ನು ವಿಧಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಮೇ 13ರ ಬೆಳಗ್ಗೆಯಿಂದ ಜಿಲ್ಲೆಯೊಳಗೆ ಖಾಸಗಿ ಮತ್ತು ಸರ್ಕಾರಿ ಬಸ್‍ಗಳು ಸಂಚಾರ ಆರಂಭಿಸಲಿವೆ. ಒಂದು ಬಸ್‍ನಲ್ಲಿ ಶೇ.50ರಷ್ಟು ಪ್ರಯಾಣಿಕರು ಮಾತ್ರ ಓಡಾಡಬಹುದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಮಾಸ್ಕ್ ಧರಿಸಿದ …

Read More »

ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್: ಕೋಟ ಶ್ರೀನಿವಾಸ ಪೂಜಾರಿ………

ಉಡುಪಿ: ಕೊರೊನಾ ಲಾಕ್‍ಡೌನ್ ಬಿಸಿ ಎಲ್ಲಾ ಕ್ಷೇತ್ರಕ್ಕೆ ತಟ್ಟಿದೆ. ಅದರಲ್ಲೂ ತಟ್ಟೆ ಕಾಣಿಕೆ ನಂಬಿರುವ ಹಳ್ಳಿಯ ದೇವಸ್ಥಾನದ ಅರ್ಚಕರ ಸ್ಥಿತಿ ಕೇಳೋದೇ ಬೇಡ. ರಾಜ್ಯದ ಮುಜರಾಯಿ ಇಲಾಖೆ ಇದೀಗ ರಾಜ್ಯದ ದೇವಸ್ಥಾನಗಳ ಅರ್ಚಕರು ಸಂಕಷ್ಟಕ್ಕೆ ಪರಿಹಾರ ಕೊಡಲು ಮುಂದಾಗಿದೆ. ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್ ವಿತರಿಸಲು ನಿರ್ಧಾರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ದಿನಸಿ ಕಿಟ್ ವಿತರಣಾ ಜವಾಬ್ದಾರಿ …

Read More »

ಡಬ್ಬಲ್ ಶರ್ಟ್ ಹಾಕೋ ಆಟೋ ಚಾಲಕರಿಗೆ ನಾಳೆಯಿಂದ 500 ರೂ. ದಂಡ

ಉಡುಪಿ: ಪುನೀತ್ ರಾಜ್ ಕುಮಾರ್, ಪ್ರಿನ್ಸ್ ಮಹೇಶ್ ಬಾಬು ಸ್ಟೈಲ್ ಮಾಡಿಕೊಂಡು ಓಡಾಡುವ ಆಟೋ ಚಾಲಕರಿಗೆ ಉಡುಪಿಯಲ್ಲಿ ಫೈನ್ ಬೀಳುತ್ತೆ. ಉಡುಪಿಯ ಪ್ರಮುಖ ಜಂಕ್ಷನ್‍ಗಳಲ್ಲಿ ಇರುವ ಪೊಲೀಸರು ಡಬ್ಬಲ್ ಶರ್ಟ್ ಹಾಕುವ ಆಟೋ ಡ್ರೈವರ್‌ಗಳಿಗೆ ಪಾಠ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಆಟೋ ಚಾಲಕರು ಒಳಗೊಂದು ಶರ್ಟ್ ಹಾಕಿ, ಹೊರಗೆ ಖಾಕಿ ಶರ್ಟ್  ಓಪನ್ ಬಿಟ್ಟುಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಫುಲ್ ಹ್ಯಾಂಡ್ ಶರ್ಟ್ ಮೇಲೆ ಹಾಫ್ ಖಾಕಿ ಶರ್ಟ್ ಹಾಕಿಕೊಂಡು ಅದನ್ನು …

Read More »

ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಎಣ್ಣೆಗೆ ಮಣಿಪಾಲದ ಮಾನಿನಿಯರು ಮುಗಿಬಿದ್ದ ಪ್ರಸಂಗ

ಸಾಮಾಜಿಕ ಅಂತರಕ್ಕೆ ಗೋಲಿ ಮಾರೋ ಉಡುಪಿ: ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಎಣ್ಣೆಗೆ ಮಣಿಪಾಲದ ಮಾನಿನಿಯರು ಮುಗಿಬಿದ್ದ ಪ್ರಸಂಗ ಇಂದು ನಡೆದಿದೆ. ಸಾಮಾಜಿಕ ಅಂತರಕ್ಕೆ ಗೋಲಿ ಮಾರೋ ಅಂತ ಎದ್ದು ಬಿದ್ದು ಮದ್ಯ ಖರೀದಿ ಮಾಡಿದರು. ರೂಲ್ಸ್ & ರೆಗ್ಯುಲೇಶನ್ ಅನ್ನು ಉಡುಪಿಯ ಮಣಿಪಾಲದಲ್ಲಿ ಗಾಳಿಗೆ ತೂರಿ, ಬಿಸಿಲ ದಾಹ ತೀರಿಸಲು ಬಿಯರ್ ಗಾಗಿ ಬಿಸಿಲಿನಲ್ಲೇ ಯುವತಿಯರು ಒಣಗಿದರು. ಮಣಿಪಾಲದಲ್ಲಿ ಮದ್ಯಕ್ಕಾಗಿ ಯುವತಿಯರು ಸರತಿ ಸಾಲು ಕಟ್ಟಿದ್ದರು. ಬಿಸಿಲ …

Read More »

ಉಡುಪಿಯಲ್ಲಿ ಯಥೇಚ್ಛವಾಗಿ ಮದ್ಯ ಸ್ಟಾಕ್ ಇದೆ: ಅಬಕಾರಿ ಉಪ ಆಯುಕ್ತ ಅಭಯ

ಉಡುಪಿ: ಜಿಲ್ಲೆಯಲ್ಲಿ ಯಥೇಚ್ಛ ಮದ್ಯ ಲಭ್ಯವಿದೆ. ಯಾರೂ ನೂಕುನುಗ್ಗಲು ಮಾಡಬೇಡಿ ಅಂತ ಉಡುಪಿ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಮದ್ಯ ಮಾರಾಟ ನಡೆಯಲಿದೆ. ಜಿಲ್ಲೆಯ 103 ವೈನ್ ಸ್ಟೋರ್ ಗಳಲ್ಲಿ ಮದ್ಯ ಲಭ್ಯವಿದೆ. ಈ ಪೈಕಿ 89 ವೈನ್ ಶಾಪ್ಸ್ , 14 ಎಂಎಸ್‍ಐಎಲ್ ಮಳಿಗೆಗಳಲ್ಲಿ ಮಾರಾಟ ನಡೆಯಲಿದೆ ಎಂದು ಹೇಳಿದರು. ಉಡುಪಿ ಜಿಲ್ಲೆಯಲ್ಲಿ …

Read More »

ಸಿಡಿಲು ತಾಗಿ ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಹೆಬ್ರಿಯ ವಂಡರಬೆಟ್ಟಿನಲ್ಲಿ ನಡೆದಿದೆ

ಉಡುಪಿ: ಸಿಡಿಲು ತಾಗಿ ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಹೆಬ್ರಿಯ ವಂಡರಬೆಟ್ಟಿನಲ್ಲಿ ನಡೆದಿದೆ. ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚಾರ ಯಶವಂತ ಕಾಮತ್ ಮನೆ ತೆಂಗಿನ ತೋಟದ ಮರವೊಂದಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಹಸಿ ತೆಂಗಿನ ಮರ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇನ್ನು ಮರಕ್ಕೆ ಬೆಂಕಿ ಹತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಉಡುಪಿಯ ಕುಂದಾಪುರ, ಕಾರ್ಕಳ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಬಿಸಿಲ …

Read More »

ವದಂತಿ ನಂಬಿ ಮಂಗ್ಳೂರು ಟೌನ್‍ಹಾಲ್ ಎದುರು ಜಮಾಯಿಸಿದ ವಲಸೆ ಕಾರ್ಮಿಕರು

ಮಂಗಳೂರು: ಎರಡು ವಾರಗಳ ಹಿಂದೆ ವದಂತಿ ನಂಬಿ ಮುಂಬೈನಲ್ಲಿ ಸಾವಿರಾರು ವಲಸೆ ಕಾರ್ಮಿಕರು ರೈಲ್ವೇ ಸ್ಟೇಷನ್‍ಗೆ ಬಂದಿದ್ದರು. ಆ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹೆಣಗಾಡಿದರು. ಇಂತದ್ದೆ ಸನ್ನಿವೇಶ ಇಂದು ಮಂಗಳೂರಿನಲ್ಲಿ ಕಂಡು ಬಂತು. ಜಿಲ್ಲಾಡಳಿತ ತಮ್ಮನ್ನು ಸ್ವಗ್ರಾಮಗಳಿಗೆ ಕಳಿಸಲಿದೆ ಎಂಬ ವದಂತಿ ನಂಬಿದ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮಂಗಳೂರಿನ ಟೌನ್‍ಹಾಲ್‍ನಲ್ಲಿ ಕಾಣಿಸಿಕೊಂಡರು. ಸಾಮಾಜಿಕ ಅಂತರಪಾಲಿಸದೆ ಗುಂಪು ಸೇರಿದ್ದರು. ಇದು ವದಂತಿ ಹೋಗಿ ಎಂದರೂ ಯಾರೂ ಕೇಳಲಿಲ್ಲ. ಕಾರ್ಮಿಕರು …

Read More »

ಸಾಸ್ತಾನ ಟೋಲ್ ಸಿಬ್ಬಂದಿ ಜೊತೆ ಮಂಡ್ಯದ ಸೋಂಕಿತ ಮಾತು – 6 ಮಂದಿ ಕ್ವಾರಂಟೈನ್

ಉಡುಪಿ: ಮುಂಬೈನಿಂದ ಹೊರಟ ಖರ್ಜೂರ ಸಾಗಿಸುವ ಲಾರಿ ಹತ್ತಿ ಮಂಡ್ಯಕ್ಕೆ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಲಾರಿ ಪಾಸ್ ಆಗಿದ್ದ ಟೋಲ್ ಗೇಟ್‍ನ ಆರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಲಾರಿ ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶಿಸಿದ್ದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಲಾರಿಯ ವಿಡಿಯೋ ಪತ್ತೆಯಾಗಿದೆ. ಲಾರಿ ಒಳಗಿದ್ದ ವ್ಯಕ್ತಿ ತೆಕ್ಕಟ್ಟೆ ಸಮೀಪದ ಶಿವಪ್ರಸಾದ್ ಪೆಟ್ರೋಲ್ ಪಂಪ್ ಬಳಿ ಇಳಿದು ಸ್ನಾನ ಮುಗಿಸಿದ್ದು, ನಂತರ ಅಲ್ಲೇ ತಿಂಡಿ ತಿಂದಿದ್ದಾರೆ. ಆಮೇಲೆ …

Read More »

ಮಂಡ್ಯ ಜಿಲ್ಲೆ ನಾಗಮಂಗಲದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರೋದು ಖಾತ್ರಿ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯ ತೆಕ್ಕಟ್ಟೆಯ ಪೆಟ್ರೋಲ್ ಪಂಪನ್ನು ಸೀಲ್ ಮಾಡಲಾಗಿದೆ.

ಉಡುಪಿ: ಮಂಡ್ಯ ಜಿಲ್ಲೆ ನಾಗಮಂಗಲದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರೋದು ಖಾತ್ರಿ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯ ತೆಕ್ಕಟ್ಟೆಯ ಪೆಟ್ರೋಲ್ ಪಂಪನ್ನು ಸೀಲ್ ಮಾಡಲಾಗಿದೆ. ಖರ್ಜೂರ ತುಂಬಿದ ಗೂಡ್ಸ್ ಲಾರಿ ಹತ್ತಿಕೊಂಡು ಮುಂಬೈನಿಂದ ಮಂಡ್ಯಕ್ಕೆ ಪ್ರಯಾಣಿಸಿದ ವ್ಯಕ್ತಿಗೆ ಕೊರೊನಾ ಆವರಿಸಿತ್ತು. ಆತ ದಾರಿ ನಡುವೆ ಉಡುಪಿಯ ತೆಕ್ಕಟ್ಟೆಯ ಶಿವಪ್ರಸಾದ್ ಪೆಟ್ರೋಲ್ ಸ್ಟೇಷನ್ ನಲ್ಲಿ ಸ್ನಾನ ಮಾಡಿ ಊಟ ಮಾಡಿ ಕೊಂಚ ವಿರಮಿಸಿದ್ದ. ಹೀಗಾಗಿ ಉಡುಪಿಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ತೆಕ್ಕಟ್ಟೆ ಶಿವಪ್ರಸಾದ್ …

Read More »