Breaking News

ಉಡುಪಿ:ಮೀನು ಸಿಗುವ ಮೀನಿನಂಗಡಿಯಲ್ಲಿ ಈಗ ಕಿಲೋ ಮೀಟರ್‌ಗಟ್ಟಲೇ ಉದ್ದದ ಕ್ಯೂ

Spread the love

ಉಡುಪಿ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಈ ಟೈಮ್‍ನಲ್ಲಿ ನಾನ್‍ವೆಜ್ ಪ್ರಿಯರ ಪಾಡು ಕೇಳುವುದೇ ಬೇಡ. ಅದರಲ್ಲೂ ಮೀನಿನೂಟ ಇಲ್ಲದೇ ಬಹುತೇಕ ಕರಾವಳಿಯವರಿಗೆ ಊಟ ಸಪ್ಪೆ ಸಪ್ಪೆ. ಈಗ ಲಾಕ್‍ಡೌನ್ ಎಫೆಕ್ಟ್ ಇರುವ ಹಿನ್ನೆಲೆಯಲ್ಲಿ ಮೀನು ಸಿಗುವುದೆ ಅಪರೂಪ.

ಮೀನು ಸಿಗುವ ಮೀನಿನಂಗಡಿಯಲ್ಲಿ ಈಗ ಕಿಲೋ ಮೀಟರ್‌ಗಟ್ಟಲೇ ಉದ್ದದ ಕ್ಯೂ ಇರುತ್ತದೆ. ಹೆಬ್ರಿ ಮುದ್ರಾಡಿಯ ಮೀನಿನಂಗಡಿಯಲ್ಲಿ ಪ್ರತಿನಿತ್ಯವೂ ಜನ ಮೀನುಕೊಳ್ಳಲು ಸೋಷಿಯಲ್ ಡಿಸ್ಟೆನ್ಸ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಲ್ಲುತ್ತಾರೆ. ಮೀನು ಬಂದ ಒಂದು ಗಂಟೆಯೊಳಗೆ ಖಾಲಿ ಖಾಲಿಯಾಗುತ್ತದೆ.

ಮೀನಿನಂಗಡಿ ತೆರೆಯುವ ಮುನ್ನವೇ ಗಂಟೆಗಟ್ಟಲೆ ಜನ ಕ್ಯೂನಲ್ಲಿ ಕಾದುನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಡಿಮ್ಯಾಂಡ್‍ಗೆ ತಕ್ಕಂತೆ ರೇಟ್ ಕೂಡ ಕೊಂಚ ಜಾಸ್ತಿಯಾಗಿದೆ.


Spread the love

About Laxminews 24x7

Check Also

ನಗರಸಭೆಯ ಆಸ್ತಿ ತೆರಿಗೆ ಹಣ ದುರ್ಬಳಕೆ: ಇಬ್ಬರ ಬಂಧನ

Spread the loveಉಡುಪಿ: ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ