Breaking News
Home / ಅಂತರಾಷ್ಟ್ರೀಯ (page 274)

ಅಂತರಾಷ್ಟ್ರೀಯ

ದೆಹಲಿಯಲ್ಲಿ ಗಲಾಟೆ ನಡೆದಿದ್ದು, ಕೇಂದ್ರ ಸರ್ಕಾರದ ಇಂಟಲಿಜೆನ್ಸಿ ವೈಫಲ್ಯವಾಗಿದೆ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು

ಬೆಂಗಳೂರು, ಫೆ.28- ಅಮೆರಿಕ ಅಧ್ಯಕ್ಷರ ಭಾರತ ಭೇಟಿ ಸಂದರ್ಭದಲ್ಲಿ ದೆಹಲಿಯಲ್ಲಿ ಗಲಾಟೆ ನಡೆದಿದ್ದು, ಕೇಂದ್ರ ಸರ್ಕಾರದ ಇಂಟಲಿಜೆನ್ಸಿ ವೈಫಲ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿದೆ. ಟ್ರಂಪ್ ಕಡೆ ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಿತು. ಗಲಾಟೆ ವಿಚಾರದಲ್ಲಿ ಇಂಟೆಲಿಜೆನ್ಸಿ ವಿಫಲವಾಗಿದೆ ಎನಿಸುತ್ತದೆ ಎಂದು ಹೇಳಿದರು ಮಹದಾಯಿ …

Read More »

ಸಬರಮತಿ ಆಶ್ರಮದಲ್ಲಿ ಗಾಂಧಿ ಚರಕದಿಂದ ನೂಲು ನೇಯ್ದ ಟ್ರಂಪ್ ದಂಪತಿ

ಅಹಮದಾಬಾದ್, ಫೆ.24- ಭಾರತ ಪ್ರವಾಸ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮಲೇನಿಯಾ ಟ್ರಂಪ್ ಅಹಮದಾಬಾದ್‍ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಬರ್‍ಮತಿ ಆಶ್ರಮಕ್ಕೆ ಭೇಟಿ ನೀಡಿದರು.ಮೋದಿಯವರೊಂದಿಗೆ ಇಂದು ಮಧ್ಯಾಹ್ನ ಆಶ್ರಮಕ್ಕೆ ತೆರಳಿದ ಟ್ರಂಪ್ ದಂಪತಿ ಬಾಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು ಟ್ರಂಪ್ ದಂಪತಿಗಳಿಗೆ ಮಾರ್ಗದರ್ಶಕರಾಗಿದ್ದ ಟ್ರಂಪ್ ಆಶ್ರಮದ ಮಹತ್ವ ಮತ್ತು ಅಲ್ಲಿ ಗಾಂಧೀಜಿಯವರು ಬಳಸುತ್ತಿದ್ದ ವಸ್ತುಗಳ ಬಗ್ಗೆ ವಿವರಿಸಿದರು.ಆಶ್ರಮದಲ್ಲಿದ್ದ ಗಾಂಧೀಜಿ ಮತ್ತು …

Read More »

ರಾಷ್ಟ್ರಾಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಎರಡೂ ರಾಷ್ಟ್ರಗಳ ಗೆಳೆತನವನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಮುನ್ನುಡಿ ಬರೆದಿದ್ದಾರೆ.

ಅಹಮದಾಬಾದ್, ಫೆ.24-ಉಭಯ ದೇಶಗಳಲ್ಲೂ ಭಾರೀ ಸಂಚಲನ ಸೃಷ್ಟಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯಿಂದಾಗಿ ವಿಶ್ವದ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ಬಾಂಧವ್ಯ ಬಲವರ್ಧನೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಾಷ್ಟ್ರಾಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಎರಡೂ ರಾಷ್ಟ್ರಗಳ ಗೆಳೆತನವನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಮುನ್ನುಡಿ ಬರೆದಿದ್ದಾರೆ. ಭವ್ಯ ಸ್ವಾಗತ : ವಾಷಿಂಗ್ಟನ್‍ನಿಂದ ಏರ್‍ಪೊರ್ಸ್ ಒನ್ ವಿಶೇಷ ವಿಮಾನದಲ್ಲಿ ಗುಜರಾತ್‍ನ ಅಹಮದಾಬಾದ್‍ನ ಸರ್ದಾರ್ ವಲ್ಲಭ್ ಭಾಯಿ ಪಟೇಲ್ …

Read More »

ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆತಂದ ಪೊಲೀಸರು

ಬೆಂಗಳೂರು,ಫೆ.24- ಹಫ್ತಾ ವಸೂಲಿ, ಸುಲಿಗೆ, ಬೆದರಿಕೆ ಸೇರಿದಂತೆ ಭೂಗತ ಚಟುವಟಿಕೆಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ನಟೋರಿಯಸ್ ರವಿ ಪೂಜಾರಿಯನ್ನು ಸ್ವದೇಶಕ್ಕೆ ಕರೆತಂದು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮುಂಜಾನೆ ಸೆನೆಗಲ್‍ನಿಂದ ಬೆಂಗಳೂರಿಗೆ ರವಿ ಪೂಜಾರಿಯನ್ನು ಕರೆತರಲಾಗಿದ್ದು, ಮಡಿವಾಳದಲ್ಲಿರುವ ಇಂಟರಾಗೇಷನ್ ಕಚೇರಿಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗಿದೆ. ಎಡಿಜಿಪಿ ಅಮರ್‍ಕುಮಾರ್ ಪಾಂಡೆ ನೇತೃತ್ವದ ತಂಡ ರವಿ ಪೂಜಾರಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಕರ್ನಾಟಕದಲ್ಲಿ ರವಿಪೂಜಾರಿ ವಿರುದ್ಧ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜಕಾರಣಿಗಳಿಗೆ …

Read More »

ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಹೈ ಡ್ರಾಮಾ ನಡೆಸಿದ್ದು, ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದಾನೆ. ಈ ಕುರಿತು ಜೈಲಿನ ಮೂಲಗಳು ಮಾಹಿತಿ ನೀಡಿದ್ದು, ಫೆಬ್ರವರಿ 16ರಂದು ಈ ಘಟನೆ ನಡೆದಿದೆ. ತಕ್ಷಣವೇ ಜೈಲು ಅಧಿಕಾರಿಗಳು ತಡೆದಿದ್ದಾರೆ. ಗೋಡೆಗೆ ಬಲವಾಗಿ ತಲೆ ಚಚ್ಚಿಕೊಂಡಿದ್ದರಿಂದ ವಿನಯ್ ಶರ್ಮಾಗೆ ಗಾಯವಾಗಿದೆ. ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ನಿರ್ಭಯಾ ಅತ್ಯಾಚಾರಿಗಳ …

Read More »

5ನೇ ಮಗಳ ಜನನದ ಖುಷಿ ಹಂಚಿಕೊಂಡ ಅಫ್ರಿದಿ ಕಾಲೆಳೆದ ನೆಟ್ಟಿಗರು

ಇಸ್ಲಾಮಾಬಾದ್: ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ತಮಗೆ ಐದನೇ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಫ್ರಿದಿ ಅವರು 2018ರಲ್ಲಿ ತಮ್ಮ ತಾಯಿಯ ಸೋದರಸಂಬಂಧಿ ನಾಡಿಯಾ ಅಫ್ರಿದಿ ಅವರೊಂದಿಗೆ ಮದುವೆಯಾಗಿದ್ದು, ಅಫ್ರಿದಿ ದಂಪತಿಗೆ ಅಕ್ಸಾ, ಅನ್‍ಷಾ, ಅಜ್ವಾ ಹಾಗೂ ಅಸ್ಮರಾ ಎಂಬ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಈಗ ನಾಡಿಯಾ ಅವರು 5ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಫೋಟೋ ಟ್ವೀಟ್ ಮಾಡಿರುವ …

Read More »

ತಿಂಗಳಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ ನವದೆಹಲಿ, ಫೆ.12- ತಿಂಗಳಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅವಿಸ್ಮರಣೀಯ ಸ್ವಾಗತ ನೀಡುವುದಾಗಿ ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವುದು ನಮಗೆ ಅತ್ಯಂತ ಸಂತಸ ಉಂಟು ಮಾಡಿದೆ. ಅವರಿಗೆ ನಾವು ಅವಿಸ್ಮರಣೀಯ ಸ್ವಾಗತ ಕೋರುತ್ತೇವೆ. ಟ್ರಂಪ್ ಅವರ ಭೇಟಿಯಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ಬಲವಾಗಲಿದೆ …

Read More »

ರವೀಂದ್ರ ಜಡೇಜಾ ಮತ್ತೊಮ್ಮೆ ತಾನೊಬ್ಬ ಅತ್ಯುತ್ತಮ ಫೀಲ್ಡರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಆಕ್ಲೆಂಡ್: ಟೀಂ ಇಂಡಿಯಾದ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತೊಮ್ಮೆ ತಾನೊಬ್ಬ ಅತ್ಯುತ್ತಮ ಫೀಲ್ಡರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 175 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡಿಗೆ ಜಡೇಜಾ ಫೀಲ್ಡಿಂಗ್ ಮೂಲಕ ಶಾಕ್ ನೀಡಿದ್ದರು. ನವದೀಪ್ ಸೈನಿ ಎಸೆದ 35ನೇ ಓವರಿನ ಎರಡನೇ ಎಸೆತದಲ್ಲಿ ರಾಸ್ ಟೇಲರ್ ಒಂಟಿ ರನ್ ಪಡೆಯಲು ಯತ್ನಿಸಿದರು. ಬ್ಯಾಕ್‍ವರ್ಡ್ ಪಾಯಿಂಟ್ ನತ್ತ ಬರುತ್ತಿದ್ದಂತೆ ಅಲ್ಲಿಂದ ಜಡೇಜಾ ಎಡಗೈಯಲ್ಲಿ ಬಾಲ್ ಹಿಡಿದು ನೇರವಾಗಿ ಸ್ಟ್ರೈಕ್ ನಲ್ಲಿದ್ದ ವಿಕೆಟಿಗೆ ಥ್ರೋ …

Read More »

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 3ನೇ ಬಾರಿ ಗೆಲುವಿನೊಂದಿಗೆ ಹ್ಯಾಟ್ರಿಕ್ ವಿಜಯ ಸಾಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿಶ್ವಾಸ

ನವದೆಹಲಿ, ಫೆ.8-ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 3ನೇ ಬಾರಿ ಗೆಲುವಿನೊಂದಿಗೆ ಹ್ಯಾಟ್ರಿಕ್ ವಿಜಯ ಸಾಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿ.ಆರ್.ಲೈನ್‍ನಲ್ಲಿ ಇಂದು ತಮ್ಮ ಪತ್ನಿ ಸುನೀತಾ ಮತ್ತು ಪ್ರಥಮ ಬಾರಿ ಮತ ಚಲಾಯಿಸಲು ಅರ್ಹತೆ ಪಡೆದಿರುವ ಪುತ್ರ ಪುಳಕಿತ್ ಅವರೊಂದಿಗೆ ಹಕ್ಕು ಚಲಾಯಿಸಿದ ನಂತರ ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಉತ್ತಮ ಆಡಳಿತವನ್ನು ಮೆಚ್ಚಿ ದೆಹಲಿ ಜನತೆ …

Read More »

ಚೀನಾ-ಬೆಂಗಳೂರು ನಡುವೆ ವಿಮಾನ ಸಂಚಾರ ಬಂದ್..!

ಬೆಂಗಳೂರು, ಫೆ.4-ಕೊರೋನಾ ವೈರಸ್ ಭೀತಿಯಿಂದಾಗಿ ಚೀನಾ-ಬೆಂಗಳೂರು ನಡುವೆ ಸಂಚರಿಸುವ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಹಾಂಕಾಂಗ್, ಥೈಲ್ಯಾಂಡ್, ಸಿಂಗಪೂರ್ ನಡುವಿನ ಸಂಚಾರ ಮುಂದುವರೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ ಕೊರೋನಾ ವೈರಸ್ ಪೀಡಿತ ದೇಶಗಳಿಗೆ ಪ್ರಯಾಣ ಬೆಳೆಸುವುದನ್ನು ಕಡಿಮೆ ಮಾಡಲಾಗಿದೆ. ಕಳೆದ ವಾರದವರೆಗೂ ಚೀನಾದಿಂದ ವಿಮಾನಗಳು ಭಾರತಕ್ಕೆ ಆಗಮಿಸುತ್ತಿದ್ದವು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚೀನಾದಿಂದ ನೇರವಾಗಿ ವಿಮಾನಗಳು ಸಂಚರಿಸುತ್ತಿದ್ದವು. ಆದರೆ ಕೊರೋನಾ ವೈರಸ್‍ನ ಹರಡುವಿಕೆ ಹೆಚ್ಚಾಗಿದ್ದರಿಂದಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ.ಚೀನಾದಿಂದ …

Read More »