Breaking News
Home / ಅಂತರಾಷ್ಟ್ರೀಯ (page 250)

ಅಂತರಾಷ್ಟ್ರೀಯ

ಲಾಕ್ ಡೌನ್ : ಎಣ್ಣೆಗಾಗಿ ಮಗುಬಿದ್ದ ಮದ್ಯಪ್ರಿಯರು..

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೇ, ಜನರು ಮಾತ್ರ ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ. ಭಾನುವಾರದ ದಿನವಾದ ನಾಳೆ ಸಂಪೂರ್ಣ ಲಾಕ್ ಡೌನ್ ಇರುವ ಕಾರಣದಿಂದಾಗಿ, ಮದ್ಯಪ್ರಿಯರು ಮಾತ್ರ ನಾಳೆ ಎಲ್ಲಿ ಎಣ್ಣೆ ಸಿಗೋದಿಲ್ಲವೋ ಎನ್ನುವಂತೆ ಬಾರ್, ವೈನ್ ಶಾಪ್ ಗಳ ಮುಂದೆ ಕ್ಯೂ ನಿಂತು ಮದ್ಯ ಖರೀದಿಸಲು ಮುಗಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೆಡೆ ಆದ್ರೇ.. ಸೋಂಕಿನ ಭೀತಿಯಿಂದ ತಮ್ಮ ಊರುಗಳತ್ತ ಗುಳೇ …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರನನು…

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರನನು ಪಕ್ಷದ ಪದಾಧಿಕಾರಿಗಳು, ಬೆಂಬಲಿಗರು ಅದ್ದೂರಿಯಾಗಿ ಬರ ಮಾಡಿಕೊಂಡು, ಸತ್ಕರಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಿಂದ ನೇವರಾಗಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರಿಗೆ ಮಾಜಿ ಶಾಸಕ ರಾಜುಗೌಡ ಕಾಗೆ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ರಾಜು ಸೇಠ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ …

Read More »

ತೈಲ ಬೆಲೆ ಏರಿಕೆ ಖಂಡಿಸಿ ಎತ್ತಿನ ಮೂಲಕ ಕೈ ಪ್ರತಿಭಟನೆ…..?

    ಅಥಣಿ: ಕೇಂದ್ರದಲ್ಲಿ ಅಂದು ಕಾಂಗ್ರೆಸ್ ಸರಕಾರದ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಒಂದೆರಡು ರುಪಾಯಿ ತೈಲ ಬೆಲೆ ಹೆಚ್ಚಳ ಮಾಡಿದಾಗ ಬಿಜೆಪಿಯ ಸ್ಮೃತಿ ಇರಾಣಿ ಅವರು ಬಳೆಗಳನ್ನು ಕಳುಹಿಸಿಕೊಟ್ಟಿದ್ದರು. ಆದರೆ ಸುಮಾರು ೭-೪ ರುಪಾಯಿಗಳಷ್ಟು ತೈಲ ಬೆಲೆ ಏರಿಕೆಯಾಗಿದೆ. ಈಗೆಲ್ಲಿದ್ದಾರೆ ಎಂದು ಸ್ಮೃತಿ ಇರಾಣಿಗೆ ಕಾಂಗ್ರೆಸ್ ಮುಖಂಡ ಗಜಾನನ್ ಮಂಗಸೂಳೆ ಪ್ರಶ್ನೆ ಮಾಡಿದ್ದಾರೆ.. ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ತೈಲ ಬೆಲೆ ಖಂಡಿಸಿ ಚಕ್ಕಡಿ ಗಾಡಿಯಲ್ಲಿ ದ್ವೀಚಕ್ರವಾಹನ ಇಟ್ಟುಕೊಂಡು …

Read More »

ರಾಜ್ಯಾದ್ಯಂತ ಜುಲೈ 4 ರಿಂದ 7 ರವರೆಗೆ ಭಾರೀ ಮಳೆ: ಹವಾಮಾನ ಇಲಾಖೆ

ಹವಾಮಾನ ಇಲಾಖೆ ರಾಜ್ಯದ ಜನತೆಗೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜುಲೈ 4 ರಿಂದ 7 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇನ್ನೂ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಉತ್ತರ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, …

Read More »

ಕೊರೋನಾದಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ.

ಬೆಂಗಳೂರು(ಜು.04): ಕೊರೋನಾದಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ. ವೈದ್ಯಕೀಯ ಸಲಕರಣೆಗಳ ದರ ಆರಂಭದಲ್ಲಿ ಹೆಚ್ಚಿತ್ತು. ಈಗ ಸಲಕರಣೆಗಳ ದರ ಇಳಿಕೆಯಾಗಿದೆ. ಮೊದಲಿನ ದರಗಳಿಗೆ ಹೋಲಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ. 2200 ಕೋಟಿ ಭ್ರಷ್ಟಾಚಾರ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ …

Read More »

ದೇಶದಲ್ಲಿ 6.40 ಲಕ್ಷ ಮಂದಿಗೆ ಕೊರೋನಾ: 3.92 ಲಕ್ಷ ಜನರು ಗುಣಮುಖ!

ನವದೆಹಲಿ(ಜು.04): ದೇಶಾದ್ಯಂತ ಹೊಸ ಸೋಂಕು ಬೆಳಕಿಗೆ ಬರುವ ಪ್ರಮಾಣದ ನಾಗಾಲೋಟ ಮುಂದುವರೆದಿದ್ದು, ಶುಕ್ರವಾರ 23010 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇದು ಈವರೆಗಿನ ದೈನಂದಿನ ಗರಿಷ್ಠವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 640843 ಮುಟ್ಟಿದೆ. ಇನ್ನು ನಿನ್ನೆ 449 ಜನರು ವೈರಸ್‌ಗೆ ಬಲಿಯಾಗುವುದರೊಂದಿಗೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 18653ಕ್ಕೆ ತಲುಪಿದೆ. ಇದೇ ವೇಳೆ ಈವರೆಗೆ 392403 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 6364 ಹೊಸ …

Read More »

ಊಟ ಬಡಿಸುವುದು ತಡವಾಯಿತೆಂದು ತಾಯಿಗೇ ಗುಂಡಿಟ್ಟ ಭೂಪ!

ನವದೆಹಲಿ: ರಾತ್ರಿ ತನಗೆ ಊಟ ಬಡಿಸಲು ತಡಮಾಡಿದಳು ಎಂದು ಪುತ್ರನೊಬ್ಬ ಗುಂಡಿಟ್ಟು ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ. ಬಾವಾನಾ ಕೈಗಾರಿಕಾ ಪ್ರದೇಶದ ನಿವಾಸಿ ಬಾಲಾ ದೇವಿ (60) ಹತಳಾದ ತಾಯಿ. ಸೂರಜ್​ (26) ಹತ್ಯೆ ಮಾಡಿದವನು. ಆತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಅಕ್ರಮ ಪಿಸ್ತೂಲ್​ ಅನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರಜ್​ ಶುಕ್ರವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದ. ಬಾಲಾದೇವಿ ಇನ್ನೂ ಅಡುಗೆ ಮಾಡುತ್ತಿದ್ದಳು. ಮನೆಗೆ …

Read More »

GST ತೆರಿಗೆದಾರರಿಗೆ ಭರ್ಜರಿ ಸಿಹಿಸುದ್ದಿ

ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ರಿಟರ್ನ್ ಸಲ್ಲಿಕೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮಾಸಿಕ ಮತ್ತು ತ್ರೈಮಾಸಿಕ ಮಾರಾಟ ರಿಟರ್ನ್ ಮತ್ತು ತೆರಿಗೆ ಪಾವತಿ ಅರ್ಜಿ GSTR-3B ವಿಳಂಬ ಸಲ್ಲಿಕೆ ಶುಲ್ಕವನ್ನು ಗರಿಷ್ಠ 500 ರೂಪಾಯಿಗಳಿಗೆ ಮಿತಿಗೊಳಿಸಲಾಗಿದೆ. 2017ರ ಜುಲೈನಿಂದ 2020ರ ಜುಲೈ ವರೆಗಿನ ಅವಧಿಯ ರಿಟರ್ನ್ ಗಳಿಗೆ ಈ ನಿಯಮ ಅನ್ವಯವಾಗಲಿದ್ದು, ತೆರಿಗೆ ಬಾಕಿ ಉಳಿಸಿಕೊಂಡಿರದಿದ್ದರೆ ವಿಳಂಬ ಶುಲ್ಕ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ತೆರಿಗೆದಾರರಿಗೆ ಈ …

Read More »

ಪ್ರತಿಭಟನೆಯಲ್ಲಿ ಸಮಾಜಿಕ ಅಂತರ ಪಾಲಿಸದೇ ನಿರ್ಲಕ್ಷತೆಯನ್ನ ವಹಿಸಿದ್ದಾರೆ.

ಕೋಲಾರ: ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರಿಂದ ಪ್ರತಿಭಟನೆಯನ್ನು ಮಾಡುತ್ತಿದ್ದು, ಪ್ರತಿಭಟನೆಯಲ್ಲಿ ಕೋವಿಡ್ ನಿಯಮಗಳು ಉಲ್ಲುಂಘನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಸಮಾಜಿಕ ಅಂತರ ಪಾಲಿಸದೇ ನಿರ್ಲಕ್ಷತೆಯನ್ನ ವಹಿಸಿದ್ದಾರೆ. ಮಾರುಕಟ್ಟೆಯ ಸೆಸ್ ಪಾವತಿಸುವುದಕ್ಕೆ ವಿರೋಧಿಸಿ ಪ್ರತಿಭಟನೆ ಮಾಡಿತ್ತಿದ್ದು, ಕೃಷಿ ಉತ್ಪನ್ನಗಳ ಖರೀದಿಗಾಗಿ ವರ್ತಕರು ಸಮಿತಿಗೆ ಪಾವತಿಸುವ ಸೆಸ್ ಶುಲ್ಕ ಮಾಡಿದ್ದಾರೆ. ಕೋವಿಡ್ ಸಮಸ್ಯೆ ಬಗೆಹರಿಯುವರೆಗು ಸೆಸ್ ಪಾವತಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸೆಸ್ ಸಂಗ್ರಹ ನಿಲ್ಲಿಸಿದ್ದ ಎಪಿಎಂಸಿ ಕೊರೋನಾ ಮುಂದುವರೆದಿದ್ದರೂ …

Read More »

ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಧುಗಿರಿ: ತಾಲ್ಲೂಕಿನಲ್ಲಿ 12 ಜನರಿಗೆ ಶುಕ್ರವಾರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 38 ವರ್ಷದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಎಲ್ಲರ ನಿದ್ದೆಗೆಡಿಸಿದೆ. ತಾಲ್ಲೂಕಿನ ಶ್ರಾವಂಡನಹಳ್ಳಿಯ 26 ವರ್ಷದ ಮಹಿಳೆ, ಗೊಂದಿಹಳ್ಳಿಯ 65 ವರ್ಷದ ವೃದ್ದ, ಚಿಕ್ಕದಾಳವಟ್ಟದ 63 ವರ್ಷದ ವೃದ್ಧ, ಅಮರಾವತಿಯ 22 ವರ್ಷ ಯುವಕ, ಆಚೇನಹಳ್ಳಿಯ 8 ವರ್ಷದ ಬಾಲಕ, ಮಧುಗಿರಿ …

Read More »