Breaking News
Home / ಅಂತರಾಷ್ಟ್ರೀಯ / ಸಬರಮತಿ ಆಶ್ರಮದಲ್ಲಿ ಗಾಂಧಿ ಚರಕದಿಂದ ನೂಲು ನೇಯ್ದ ಟ್ರಂಪ್ ದಂಪತಿ

ಸಬರಮತಿ ಆಶ್ರಮದಲ್ಲಿ ಗಾಂಧಿ ಚರಕದಿಂದ ನೂಲು ನೇಯ್ದ ಟ್ರಂಪ್ ದಂಪತಿ

Spread the love

ಅಹಮದಾಬಾದ್, ಫೆ.24- ಭಾರತ ಪ್ರವಾಸ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮಲೇನಿಯಾ ಟ್ರಂಪ್ ಅಹಮದಾಬಾದ್‍ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಬರ್‍ಮತಿ ಆಶ್ರಮಕ್ಕೆ ಭೇಟಿ ನೀಡಿದರು.ಮೋದಿಯವರೊಂದಿಗೆ ಇಂದು ಮಧ್ಯಾಹ್ನ ಆಶ್ರಮಕ್ಕೆ ತೆರಳಿದ ಟ್ರಂಪ್ ದಂಪತಿ ಬಾಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು

ಟ್ರಂಪ್ ದಂಪತಿಗಳಿಗೆ ಮಾರ್ಗದರ್ಶಕರಾಗಿದ್ದ ಟ್ರಂಪ್ ಆಶ್ರಮದ ಮಹತ್ವ ಮತ್ತು ಅಲ್ಲಿ ಗಾಂಧೀಜಿಯವರು ಬಳಸುತ್ತಿದ್ದ ವಸ್ತುಗಳ ಬಗ್ಗೆ ವಿವರಿಸಿದರು.ಆಶ್ರಮದಲ್ಲಿದ್ದ ಗಾಂಧೀಜಿ ಮತ್ತು ಕಸ್ತೂರಿಬಾಯಿಯವರು ಬಳಸುತ್ತಿದ್ದ ಚರಕ ಟ್ರಂಪ್ ದಂಪತಿಗಳ ವಿಶೇಷ ಗಮನ ಸೆಳೆಯಿತು. ಮೋದಿ ಈ ಚರಕದ ವಿಶೇಷತೆಯನ್ನು ವಿವರಿಸಿದರು.ನಂತರ ಕುತೂಹಲ ಭರಿತರಾದ ಟ್ರಂಪ್ ಚರಕದ ಮುಂದೆ ಆಸೀನರಾಗಿ ಆಶ್ರಮದಲ್ಲಿದ್ದ ಸಹಾಯಕಿಯೊಬ್ಬರ ಸಹಾಯದಿಂದ ನೂಲು ತೆಗೆದು ಪುಳಕಗೊಂಡರು.

ನಂತರ ಟ್ರಂಪ್ ಮತ್ತು ಮಲೇನಿಯಾ ಅತಿಥಿಗಳ ಪುಸ್ತಕದಲ್ಲಿ ಆಶ್ರಮಕ್ಕೆ ತಾವು ಭೇಟಿ ನೀಡಿದ್ದ ಅನುಭವವನ್ನು ದಾಖಲಿಸಿದರು. ನಂತರ ಅಲ್ಲಿದ್ದ ಅಮೃತ್‍ಶಿಲೆಯ ಮೂರು ಮಂಗಗಳ ಉದಾತ್ತ ಸಂದೇಶವನ್ನು ವಿವರಿಸಿದರು. ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾತನಾಡಬಾರದು ಎಂಬ ತತ್ವವನ್ನು ಪ್ರಧಾನಿ ಟ್ರಂಪ್‍ಗೆ ವಿವರಿಸಿದಾಗ ಅಮೆರಿಕಾ ಅಧ್ಯಕ್ಷರು ತಲೆದೂಗಿದರು. ನಂತರ ಮೋದಿಯವರ ಜತೆ ಸನಿಹದಲ್ಲೇ ಇದ್ದ ಮೊಟೇರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ತೆರಳಿದರು.


Spread the love

About Laxminews 24x7

Check Also

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the loveಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ