Breaking News

5ನೇ ಮಗಳ ಜನನದ ಖುಷಿ ಹಂಚಿಕೊಂಡ ಅಫ್ರಿದಿ ಕಾಲೆಳೆದ ನೆಟ್ಟಿಗರು

Spread the love

ಇಸ್ಲಾಮಾಬಾದ್: ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ತಮಗೆ ಐದನೇ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅಫ್ರಿದಿ ಅವರು 2018ರಲ್ಲಿ ತಮ್ಮ ತಾಯಿಯ ಸೋದರಸಂಬಂಧಿ ನಾಡಿಯಾ ಅಫ್ರಿದಿ ಅವರೊಂದಿಗೆ ಮದುವೆಯಾಗಿದ್ದು, ಅಫ್ರಿದಿ ದಂಪತಿಗೆ ಅಕ್ಸಾ, ಅನ್‍ಷಾ, ಅಜ್ವಾ ಹಾಗೂ ಅಸ್ಮರಾ ಎಂಬ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಈಗ ನಾಡಿಯಾ ಅವರು 5ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಕುರಿತು ಫೋಟೋ ಟ್ವೀಟ್ ಮಾಡಿರುವ ಅಫ್ರಿದಿ, ಸರ್ವಶಕ್ತ ಅಲ್ಲಾನ ಅನಂತ ಆಶೀರ್ವಾದ ಮತ್ತು ಕರುಣೆ ನನ್ನ ಮೇಲೆ ಇದೆ. ಈಗಾಗಲೇ 4 ಅದ್ಭುತ ಹೆಣ್ಣುಮಕ್ಕಳನ್ನು ನೀಡಿರುವ ಅಲ್ಲಾ ನನಗೆ ಈಗ 5ನೇ ಹೆಣ್ಣು ಮಗುವನ್ನು ಕರುಣಿಸಿ ಆಶೀರ್ವದಿಸಿದ್ದಾನೆ. ಈ ಖುಷಿ ವಿಚಾರವನ್ನು ನನ್ನ ಹಿತೈಷಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕೆಲ ನೆಟ್ಟಿಗರು ರಿಟ್ವೀಟ್ ಮಾಡಿ, ಅಲ್ಲಾನ ಕರುಣೆ ನಿಮ್ಮ ಮೇಲೆ ಇದ್ದೇ ಇರುತ್ತದೆ. ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಆದರೆ ಕೆಲ ನೆಟ್ಟಿಗರು ಅಫ್ರಿದಿ ಕಾಲೆಳೆದು ಗೇಲಿ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ನೀವು ಯಾವಾಗ ನಿಯಂತ್ರಣಕ್ಕೆ ತರುತ್ತೀರಾ? ನಿಮಗೆ ನಾಲ್ಕು ಹೆಣ್ಣು ಮಕ್ಕಳು ಸಾಕು ಅನಿಸಲಿಲ್ಲವೇ? ಅಥವಾ ಗಂಡು ಸಂತಾನಕ್ಕಾಗಿ ಈ ಪ್ರಯತ್ನವೇ ಎಂದು ಕೆಲ ನೆಟ್ಟಿಗರು ಕಟುಕಿದ್ದಾರೆ.

ಗಂಡು ಮಗು ಜನಿಸುವವರೆಗೂ ಅಫ್ರಿದಿ ಅವರು ಬಿಡುವುದಿಲ್ಲ. ಅವರಿಗೆ ಗಂಡು ಮಗುವು ಆಗುವ ವೇಳೆಗೆ ಅಂಡರ್ 19 ಮಹಿಳಾ ಕ್ರಿಕೆಟ್ ತಂಡವೇ ಸಿದ್ಧವಾಗಿರುತ್ತದೆ ಎಂದು ನೆಟ್ಟಿಗರೊಬ್ಬರು ಗೇಲಿ ಮಾಡಿದ್ದಾರೆ.

 


Spread the love

About Laxminews 24x7

Check Also

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ: ಅಭಿವೃದ್ಧಿ ಯೋಜನೆಗಳ ಅವಲೋಕನ

Spread the love ಸುಬ್ರಹ್ಮಣ್ಯ, ದಕ್ಷಿಣ ಕನ್ನಡ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ