Breaking News
Home / ಅಂತರಾಷ್ಟ್ರೀಯ (page 273)

ಅಂತರಾಷ್ಟ್ರೀಯ

ತಾನು ಬಂದರೆ ಭಾರತದಲ್ಲಿ ಕೊರೊನಾ ಹರಡಬಹುದೆಂದು ಚೀನಾದಲ್ಲೇ ಉಳಿದ ಕನ್ನಡಿಗ

ತಾನು ಬಂದರೆ ಭಾರತದಲ್ಲಿ ಕೊರೊನಾ ಹರಡಬಹುದೆಂದು ಚೀನಾದಲ್ಲೇ ಉಳಿದ ಕನ್ನಡಿಗ! ಕೊರೊನಾ ವೈರಸ್‌ಗೆ ಇಡೀ ಚೀನಾ ದೇಶ ತತ್ತರಿಸಿದ್ದು, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅಲ್ಲಿ ನೆಲೆಸಿದ್ದ ವಿವಿಧ ದೇಶಗಳ ಪ್ರಜೆಗಳು ಜೀವ ಭಯದಿಂದ ಸ್ವದೇಶಕ್ಕೆ ಮರಳುತ್ತಿದ್ದಾರೆ. ಅಂತಹದರಲ್ಲಿ ತಾನು ಸ್ವದೇಶಕ್ಕೆ ಮರಳಿದರೆ ತನ್ನೊಂದಿಗೆ ವೈರಸ್‌ ಕೂಡ ತನ್ನ ದೇಶಕ್ಕೆ ಬರಬಹುದು ಎಂಬ ಭೀತಿಯಿಂದ ತನ್ನ ಪ್ರಾಣವನ್ನೂ ಲೆಕ್ಕಿಸದೇ ಕನ್ನಡಿಗನೊಬ್ಬ ಚೀನಾದಲ್ಲೇ ಉಳಿದುಕೊಂಡಿದ್ದಾನೆ! ತುಮಕೂರಿನ ಶಿಕ್ಷಕ ಹೊಸಕೆರೆ ರಿಜ್ವಾನ್‌ …

Read More »

ಇರಾನ್‍ನಿಂದ ಸ್ವದೇಶಕ್ಕೆ ವಾಪಸ್ಸಾದ 234 ಭಾರತೀಯರು

ನವದೆಹಲಿ,ಮಾ.15- ಕೊರೋನ ಭೀತಿ ಹಿನ್ನೆಲೆಯಲ್ಲಿ ಇರಾನ್‍ನಿಂದ 234 ಭಾರತೀಯರನ್ನು ವಾಪಸ್ ಕರೆಸಿಕೊಂಡಿದ್ದು, ಈ ಪೈಕಿ 131 ವಿದ್ಯಾರ್ಥಿಗಳು, 103 ಯಾತ್ರಾರ್ಥಿಗಳು ಇದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಇಂದು ತಿಳಿಸಿದ್ದಾರೆ. ಕೊರೋನ ಪೀಡಿತ ಪ್ರದೇಶ ಇರಾನ್‍ನಲ್ಲಿರುವ ಭಾರತೀಯರನ್ನು ಆರೋಗ್ಯವಾಗಿ ವಾಪಸ್ ಕರೆಸಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿದೆ. ಇದಕ್ಕೆ ಸಹಕರಿಸಿದ ರಾಯಭಾರಿ ಧಾಮು ಗಡ್ಡಮ್ ಮತ್ತು ಆಟ್‍ಇಂಡಿಯಾ… ಇನ್… ಇರಾನ್ ತಂಡಕ್ಕೆ ಹಾಗೂ ಇರಾನಿನ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಅವರು …

Read More »

ಕೊರೊನಾ ಶಂಕೆ : ಬೆಂಗಳೂರಿನ ಇನ್ಫೋಸಿಸ್ ಕಚೇರಿ ಸ್ಥಳಾಂತರ

ಬೆಂಗಳೂರು, ಮಾ.14- ಕೊರೊನಾ ವೈರಸ್‍ನ ಪರಿಣಾಮ ಬಹುರಾಷ್ಟ್ರೀಯ ಕಂಪೆನಿ ಇನ್ಫೋಸಿಸ್‍ಗೂ ತಟ್ಟಿದ್ದು, ಬೆಂಗಳೂರಿನಲ್ಲಿರುವ ಐಐಪಿಎಂ ಇನ್ಫೋಸಿಸ್ ಕಚೇರಿಯ ಕಟ್ಟಡವನ್ನು ತಾತ್ಕಾಲಿಕವಾಗಿ ಖಾಲಿ ಮಾಡಲಾಗಿದೆ. ಇನ್ಫೋಸಿಸ್‍ನ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಸಂಸ್ಥೆ ಹೈ ಅಲರ್ಟ್ ಆಗಿದ್ದು, ಸದರಿ ಉದ್ಯೋಗಿ ಕೆಲಸ ಮಾಡುತ್ತಿದ್ದ ಕಚೇರಿಯ ಐಐಪಿಎಂ ಕಟ್ಟಡವನ್ನು ಖಾಲಿ ಮಾಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಇನ್ಫೋಸಿಸ್‍ನ ಅಧಿಕಾರಿಗಳು, ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್‍ನ ಲಕ್ಷಣಗಳು ಕಂಡು ಬಂದಿರುವುದರಿಂದ …

Read More »

ಕೊರೊನಾ ಆತಂಕದಿಂದ ಶೇಕ್ ಹ್ಯಾಂಡ್ ಬದಲು ‘ನಮಸ್ತೆ’ಗೆ ಹೊರೆಹೋದ ಟ್ರಂಪ್

ವಾಷಿಂಗ್ಟನ್, ಮಾ.13- ವಿಶ್ವವನ್ನು ಕಂಗೆಡಿಸಿರುವ ಮಾರಕ ಕೊರೊನಾ ಆತಂಕದಿಂದ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಹೆದರಿ ಕಂಗಾಲಾಗಿದೆ. ಇದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹೊರತಾಗಿಲ್ಲ. ತಮ್ಮನ್ನು ಭೇಟಿ ಮಾಡುವ ವಿವಿಧ ದೇಶಗಳ ಅಧಿಪತಿಗಳು ಮತ್ತು ಗಣ್ಯಾತಿಗಣ್ಯರನ್ನು ಟ್ರಂಪ್ ಹಸ್ತಲಾಂಘವ ಮಾಡಿ ಆಲಂಗಿಸಿಕೊಳ್ಳುವ ಪರಿಪಾಠವಿತ್ತು. ಆದರೆ, ಕೊರೊನಾ ವೈರಾಣು ಆತಂಕದಿಂದಾಗಿ ಟ್ರಂಪ್ ಮಹಾಶಯರು ಈಗ ಶೇಕ್‍ಹ್ಯಾಂಡ್ ಮಾಡುವ ಬದಲು ಭಾರತೀಯ ಶೈಲಿಯ ನಮಸ್ತೆ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ನಿನ್ನೆ ತಮ್ಮನ್ನು ಭೇಟಿ …

Read More »

ವೀಸಾ ನಿರ್ಬಂಧ : ಏ.15ರ ವರೆಗೆ ವಿದೇಶಿ ಆಟಗಾರರು ಅಲಭ್ಯ, ಐಪಿಎಲ್ ಮೇಲೆ ಅನಿಶ್ಚಿತತೆ ಕಾರ್ಮೋಡ

ವೀಸಾ ನಿರ್ಬಂಧ : ಏ.15ರ ವರೆಗೆ ವಿದೇಶಿ ಆಟಗಾರರು ಅಲಭ್ಯ, ಐಪಿಎಲ್ ಮೇಲೆ ಅನಿಶ್ಚಿತತೆ ಕಾರ್ಮೋಡ ಮುಂಬೈ/ನವದೆಹಲಿ – ಕೊರೋನಾ ವೈರಸ್ ಕಾಟದಿಂದಾಗಿ ಕೇಂದ್ರ ಸರ್ಕಾರವು ಏ.15ರ ವರೆಗೆ ವೀಸಾ ನಿರಾಕರಿಸಿರುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಕ್ರಿಕೆಟ್ ಪಂದ್ಯಾವಳಿ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಏ.15ರ ವರೆಗೆ ವಿವಿಧ ದೇಶಗಳ ಕ್ರಿಕೆಟ್ ಪಟುಗಳು ಐಪಿಎಲ್‍ಗೆ ಅಲಭ್ಯವಾಗಿರುವುದರಿಂದ ಈ ಪಂದ್ಯಾವಳಿ ನಡೆಯುವುದು …

Read More »

ಚಂದನ್-ನಿವೇದಿತಾರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ – ಡಿಸಿಗೆ ಮನವಿ

ಚಂದನ್-ನಿವೇದಿತಾರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ – ಡಿಸಿಗೆ ಮನವಿ ಮೈಸೂರು: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‍ಗೂ ಕೊರೊನಾ ಬಿಸಿ ತಟ್ಟುತ್ತಿದೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ನವದಂಪತಿಗಳಿಗೆ ಕಡ್ಡಾಯ ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾದ ಅಧ್ಯಕ್ಷ ರಫೀಕ್ ಅಲಿ ಮನವಿ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಈವರೆಗೆ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ …

Read More »

ನಮ್ಮ ಆಸ್ಪತ್ರೆಗೆ ಕೊರೊನಾ ಶಂಕಿತನೊಬ್ಬ ಬಂದಿದ್ದ ಎಂದು ಹೇಳಿ ಕೆಲಸ ಕಳೆದು ಕೊಂಡ ವೈದ್ಯೆ

ತ್ರಿಶೂರ್: ನಮ್ಮ ಆಸ್ಪತ್ರೆಗೆ ಕೊರೊನಾ ಶಂಕಿತನೊಬ್ಬ ಬಂದಿದ್ದ ಎಂದು ಹೇಳಿದ್ದ ವೈದ್ಯೆಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ತಳಿಕುಳಂ ನಲ್ಲಿ ನಡೆದಿದೆ. ಡಾ.ಶಿನು ಶ್ಯಾಮಲನ್ ಕೆಲಸ ಕಳೆದುಕೊಂಡಿರುವ ವೈದ್ಯೆಯಾಗಿದ್ದು, ಈಕೆ ಕೊರೊನಾ ವೈರಸ್ ಇದೆ ಎಂದು ಶಂಕಿತ ವ್ಯಕ್ತಿಯೋರ್ವ ನಮ್ಮ ಆಸ್ಪತ್ರೆಗೆ ಬಂದಿದ್ದ. ಬಳಿಕ ಆ ವ್ಯಕ್ತಿ ಕತಾರ್ ಗೆ ಹೋಗಿದ್ದ ಎಂದು ಶಿನು ಶ್ಯಾಮಲನ್ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದೆ, …

Read More »

ಫೋನ್​ ಮಾಡಿದ ತಕ್ಷಣ ಕೆಮ್ಮುವ ಧ್ವನಿ ಕೇಳ್ತಿದ್ದೀರಾ..? ಅದು ಕೊರೊನಾ ಕಾಲರ್​ಟ್ಯೂನ್..!

ನಿನ್ನೆ ಮೊನ್ನೆಯಿಂದ ಯಾರಿಗಾದ್ರೂ ಫೋನ್​ ಮಾಡಿದ ತಕ್ಷಣ ಆ ಕಡೆಯಿಂದ ಕೆಮ್ಮುವ ಧ್ವನಿಯನ್ನ ಹಲವರು ಕೇಳಿರಬಹುದು. ಇದನ್ನ ಕೇಳಿದ ಅನೇಕರು ಅರೇ ಇದೇನಪ್ಪಾ ಇನ್ನೂ ರಿಂಗ್​ ಆಗಿಲ್ಲ ಆಗ್ಲೇ ಯಾರೋ ಕೆಮ್ಮುತ್ತಿದ್ದಾರಲ್ಲ ಅಂತಲೂ ಅಂದುಕೊಂಡಿರಬಹುದು.? ಇದಕೆಲ್ಲಾ ಕಾರಣ ಬೇರೇನೂ ಅಲ್ಲ. ಸದ್ಯ, ವಿಶ್ವಕ್ಕೇ ತಲೆನೋವಾಗಿ ಪರಿಣಮಿಸಿರೋ ಕೊರೊನಾವೈರಸ್ ಹೌದು. ಕೊರೊನಾವೈರಸ್​ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ದೂರ ಸಂಪರ್ಕ ಇಲಾಖೆ ಈ ರೀತಿಯ ವಿಭಿನ್ನ ಪ್ರಯತ್ನ ಮಾಡಿದೆ. ಮೊಬೈಲ್​ ಬಳಕೆದಾರರ …

Read More »

ಬ್ರೇಕಿಂಗ್‌: ಭಾರತದಲ್ಲಿ ಕೊರೊನಾವೈರಸ್‌ಗೆ ಮೊದಲ ಬಲಿ!?

ನವದೆಹಲಿ: ಕೊರೊನಾವೈರಸ್‌ನಿಂದ ಶಂಕಿತ ಸಾವು ವರದಿಯಾಗಿದೆ, ಇದು ವೈರಸ್ ಹರಡಿದ ನಂತರದ ಭಾರತದ ಮೊದಲ ಸಾವಿನ ಪ್ರಕರಣವಾಗಿರಬಹುದು ಎನ್ನಲಾಗುತ್ತಿದೆ. ಭಾನುವಾರ ಬೆಳಿಗ್ಗೆ, ಲಡಾಖ್‌ನ ಸೋನಮ್ ನಾರ್ಬು ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ,ಹೀಗಾಗಿ ಅವರು ಕರೋನವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಲೇಹ್‌ನ ಯೌಕುಮಾ ಚೋಚುಕ್ ಗ್ರಾಮದವರಾಗಿದ್ದ 73 ವರ್ಷದ ಅಲಿ ಮೊಹಮ್ಮದ್ ಅವರು ತೀವ್ರ ಜ್ವರದಿಂದ ಮಾರ್ಚ್ 7 ರಂದು ಆಸ್ಪತ್ರೆಗೆ ದಾಖಲಾಗಿದ್ದರು, ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎನ್ನಲಾಗಿದೆ. …

Read More »

ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲೆಯಾಗಿ ಶಿಶುವಿಗೆ ಜನ್ಮ ನೀಡಿದ್ದಾರೆ.

ರಾಂಚಿ,ಮಾ.2- ರಾಜಕಾರಣಿಗಳು, ದೊಡ್ಡ ದೊಡ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರೂ ಸಹ ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವಂತಹ ಸಂದರ್ಭದಲ್ಲಿ ಇಲ್ಲಿನ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲೆಯಾಗಿ ಶಿಶುವಿಗೆ ಜನ್ಮ ನೀಡಿದ್ದಾರೆ. ಜಾರ್ಖಂಡ್‍ನ ಗೊಡ್ಡಾ ಪ್ರದೇಶದ ಐಎಎಸ್ ಅಧಿಕಾರಿಯಾಗಿರುವ ಗೊಡ್ಡಾ ಡಿಸಿ ಕಿರಣ್‍ಕುಮಾರಿ ಪಾಸಿ ಅವರು ಖಾಸಗಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳದೇ ಸರ್ಕಾರಿ ಆಸ್ಪತ್ರೆಯಲ್ಲೇ ತಮ್ಮ ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವ ಐಎಐಸ್ ಅಧಿಕಾರಿ ತಮ್ಮ …

Read More »