Breaking News
Home / ಅಂತರಾಷ್ಟ್ರೀಯ (page 260)

ಅಂತರಾಷ್ಟ್ರೀಯ

ಪಿಒಕೆ ಭಾರತದ ಭಾಗವೆಂದ ಪಾಕ್………….

ಇಸ್ಲಾಮಾಬಾದ್: ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶ ತನಗೆ ಸೇರಿದ್ದು ಎಂದು ಮೊಂಡುತನ ತೋರುತ್ತಿದ್ದ ಪಾಕಿಸ್ತಾನವು ಸದ್ಯ ಭಾರತದ ಭಾಗವೆಂದು ಘೋಷಿಸಿದೆ. ಇತ್ತೀಚೆಗೆ ಭಾರತದ ಹವಾಮಾನ ಬುಲೆಟಿನ್‍ನಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಸೇರಿಸಿದಾಗ ಪಾಕಿಸ್ತಾನ ಸಾಕಷ್ಟು ಆಘಾತಕ್ಕೊಳಗಾಗಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತ ತನ್ನ ಹೇಳಿಕೆಯನ್ನು ಅವರು ಪುನರಾವರ್ತಿಸಲು ಪ್ರಾರಂಭಿಸಿತ್ತು. ಜೊತೆಗೆ ಪಾಕ್ ತಮ್ಮ ಹವಾಮಾನ ಬುಲೆಟಿನ್‍ನಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ತಾಪಮಾನವನ್ನು ಹೇಳುವ ಮೂಲಕ ಆಕ್ರೋಶ ಹೊರ ಹಾಕಿತ್ತು. ಆದರೆ ಈಗ ತಾಂತ್ರಿಕ ದೋಷದಿಂದಾಗಿ …

Read More »

ಜಗತ್ತಿನಾದ್ಯಂತ ಅರ್ಧ ಕೋಟಿ ಮಂದಿಗೆ ಕೊರೋನಾ ಅಟ್ಯಾಕ್..! 3,16,732 ಮಂದಿ ಬಲಿ

ವಾಷ್ಟಿಂಗ್ಟನ್/ಮ್ಯಾಡ್ರಿಡ್/ಮಾಸ್ಕೋ, ಮೇ 18-ಕಿಲ್ಲರ್ ಕೊರೊನಾ ಇಡೀ ಜಗತ್ತಿಗೆ ಕಂಟಕವಾಗಿ ಪರಿಣಮಿಸಿದೆ. ವೈರಸ್ ವಿಷವ್ಯೂಹದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಈವರೆಗೆ 3,16,732 ಮಂದಿ ಸಾವಿಗೀಡಾಗಿದ್ದು, 48,05,228 ಸೋಂಕು ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗ ಪೀಡಿತರಲ್ಲಿ 46,000ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಬೀರವಾಗಿರುವ ಆತಂಕಕಾರಿಯಾಗಿದೆ. ವಿಶ್ವವ್ಯಾಪಿ ಸಾವಿನ ಸಂಖ್ಯೆ ಆತಂಕವಿರುವಾಗಲೇ, ಸುಮಾರು 18,60,059 ಮಂದಿ ಸಾಂಕ್ರಾಮಿಕ ರೋಗಗಳು ಚೇತರಿಸಿಕೊಂಡು ಗುಣಮುಖರಾಗಿರುವುದು …

Read More »

ಚೀನಾಗೆ ಬುದ್ದಿಕಲಿಸಲು ಭಾರತದ ಜೊತೆ ಸೇರಿ ಅಮೇರಿಕ ಮಾಸ್ಟರ್ ಪ್ಲಾನ್..!

ವಾಷಿಂಗ್ಟನ್, ಮೇ 16-ಕಿಲ್ಲರ್ ಕೊರೊನಾ ವೈರಸ್ ಮೂಲಕ ವಿಶ್ವವನ್ನೇ ಅಲ್ಲೋಲ-ಕಲ್ಲೋಲ ಮಾಡಿ ಅಪಾರ ಸಾವು-ನೋವು ಮತ್ತು ಭಾರೀ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ ಎನ್ನಲಾದ ಚೀನಾಗೆ ತಕ್ಕ ಪಾಠ ಕಲಿಸಲು ಅಮೆರಿಕ ರಣತಂತ್ರ ರೂಪಿಸಿದೆ. ಡ್ರ್ಯಾಗನ್ (ಚೀನಾ) ಸದೆಬಡಿಯಲು 18 ಪ್ರಬಲ ಅಸ್ತ್ರಗಳನ್ನು ಸಿದ್ದಗೊಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಚೀನಾದಿಂದ ಶತಕೋಟಿ ಡಾಲರ್‍ಗಳಷ್ಟು ಮೊತ್ತದ ಪಿಂಚಣಿ ನಿಧಿಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಅಲ್ಲದೇ ಕಮ್ಯೂನಿಸ್ಟ್ ದೇಶದಲ್ಲಿರುವ ಅಮೆರಿಕ ನೆರವಿನ ಇತರ ಯೋಜನೆಗಳಿಗೂ …

Read More »

ಮನೆ ಬಾಗಿಲಿಗೆ ಕೋಲ್ಡ್ ಬಿಯರ್ ತಂದ ಮದ್ಯದ ಕಂಪನಿ ನಿರ್ದೇಶಕ………

ಲಂಡನ್: ಬ್ರಿಟನ್‍ನಲ್ಲಿ ಪಬ್‍ಗಳು ಬಂದ್ ಆಗಿವೆ. ಆದರೆ ಪೂರ್ವ ಲಂಡನ್‍ನ ವ್ಯಕ್ತಿಯೊಬ್ಬ ಬಿಯರ್ ಮಾರಲು ಉಪಾಯ ಹುಡುಕಿದ್ದು, ಕೆಗ್ಸ್ ಗಳನ್ನು ವ್ಯಾನ್‍ನಲ್ಲಿ ಪ್ಯಾಕ್ ಮಾಡಿಕೊಂಡು ಮನೆ ಮನೆಗೆ ಹಂಚುತ್ತಿದ್ದಾನೆ. ವ್ಯಾನ್ ಮೇಲೆ ‘ಟ್ಯಾಕ್ಟಿಕಲ್ ಬಿಯರ್ ರಿಸ್ಪಾನ್ಸ್ ಯುನಿಟ್’ ಎಂದು ಬರೆದುಕೊಂಡು ಫಾರೆಸ್ಟ್ ರೋಡ್ ಬ್ರೇವಿಂಗ್ ಕಂಪನಿಯ ನಿರ್ದೇಶಕ ಪೀಟರ್ ಬ್ರಾವ್ನ್ ಸ್ವತಃ ಬಿಯರ್ ಡೆಲಿವರಿ ಮಾಡಿ ಗ್ರಾಹಕರ ಎಣ್ಣೆ ದಾಹ ತಣಿಸುತ್ತಿದ್ದಾರೆ. ಬಾಕ್ಸ್, ಕ್ಯಾನ್ ಹಾಗೂ ಬಾಟಲಿಗಳ ಬದಲಿಗೆ ಬ್ರಾವ್ನ್ …

Read More »

ನೀವು ಈ ನಿಯಮಗಳನ್ನು ಪಾಲಿಸಿದರೆ ಕೊರೋನಾ ನಿಮ್ಮ ಬಳಿ ಸುಳಿಯಲ್ಲ

ಬೆಂಗಳೂರು, -ಕೋರೋನ ಸೋಂಕಿನ ಹಿನ್ನಲೆಯಲ್ಲಿ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ ಇವುಗಳನ್ನು ಪಾಲಿಸುವ ಮೂಲಕ ಕೊರೋನಾದಿಂದ ಸುರಕ್ಷಿತವಾಗಿರ ಬಹುದು . ಇವುಗಳಲ್ಲಿ ಕೆಲವು ಪ್ರಮುಖ ಅಂಶಗಳನ್ನು ನೀಡಲಾಗಿದೆ. … 1. ಎರಡು ವರ್ಷಗಳ ಕಾಲ ವಿದೇಶ ಪ್ರವಾಸ ಮುಂದೂಡಿ. 2. ಒಂದು ವರ್ಷ ಹೊರಗಿನ ಆಹಾರವನ್ನು ಸೇವಿಸಬೇಡಿ. 3. ಅನಗತ್ಯ ಮದುವೆ / ಇತರೆ ಸಮಾರಂಭಕ್ಕೆ ಹೋಗಬೇಡಿ. 4. ಅನಗತ್ಯ …

Read More »

ಖಗೋಳ ಪ್ರಿಯರಿಗೆ ಗುಡ್‍ನ್ಯೂಸ್. ಇಂದಿನಿಂದ ಮೇ 25ರವರೆಗೆ ನೀವು ಬರಿಗಣ್ಣಿನಲ್ಲಿ ಬೆಳಗಿನ ಜಾವ ಧೂಮಕೇತುವನ್ನು ವೀಕ್ಷಿಸಬಹುದು

ಬೆಂಗಳೂರು: ಖಗೋಳ ಪ್ರಿಯರಿಗೆ ಗುಡ್‍ನ್ಯೂಸ್. ಇಂದಿನಿಂದ ಮೇ 25ರವರೆಗೆ ನೀವು ಬರಿಗಣ್ಣಿನಲ್ಲಿ ಬೆಳಗಿನ ಜಾವ ಧೂಮಕೇತುವನ್ನು ವೀಕ್ಷಿಸಬಹುದು. ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ‘ಸ್ವಾನ್’ ಹೆಸರಿನ ಧೂಮಕೇತು ಭೂಮಿಯ ಸಮೀಪ ಬರುತ್ತಿದೆ. ಆರಂಭದ ದಿನದಲ್ಲಿ ಬೆಳಿಗ್ಗೆ 4.30ರ ವೇಳೆಗೆ `ಸ್ವಾನ್’ ಧೂಮಕೇತು ಕಾಣಿಸಿಕೊಳ್ಳಲಿದೆ ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆರಂಭದ ದಿನಗಳಲ್ಲಿ ಕತ್ತಲಿನಲ್ಲಿ ಇದು ಪ್ರಕಾಶಮಾನವಾಗಿ ಕಾಣುವುದರಿಂದ ಬರಿಗಣ್ಣಿನಲ್ಲಿ ವೀಕ್ಷಿಸಬಹುದು. ಸೂರ್ಯೋದಯದ ನಂತರ …

Read More »

ವಿಶ್ವದಾದ್ಯಂತ ಕೊರೋನಾಗೆ 2.82 ಲಕ್ಷ ಮಂದಿ ಸಾವು, 41.52 ಲಕ್ಷ ಸೋಂಕಿತರು ..!

ವಾಷ್ಟಿಂಗ್ಟನ್/ರೋಮ್/ಪ್ಯಾರಿಸ್, ಮೇ 11-ಕಿಲ್ಲರ್ ಕೊರೊನಾ ಇಡೀ ವಿಶ್ವವನ್ನು ವ್ಯಾಪಿಸಿದ್ದು, ವಿಷವರ್ತುಲ ಆವರಿಸಿ ಭಯ-ಭೀತಿಯ ವಾತಾವರಣ ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಈವರೆಗೆ 2,82,894 ಸಾವು ಮತ್ತು 41.52 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ. ವಿಶ್ವವ್ಯಾಪಿ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಆತಂಕವಿರುವಾಗಲೇ ಸುಮಾರು 14 ಲಕ್ಷ ಸಾಂಕ್ರಾಮಿಕ ರೋಗಗಳು ಚೇತರಿಸಿಕೊಂಡು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ …

Read More »

ಆಸೀಸ್‍ಗೆ ನಂ.1 ರ‍್ಯಾಂಕ್ ಹೇಗೆ ಕೊಟ್ರಿ?- ಐಸಿಸಿ ವಿರುದ್ಧ ಗೌತಮ್ ಗಂಭೀರ್ ಕಿಡಿ….

ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿ ಟಾಪ್ ಸ್ಥಾನವನ್ನು ಪಡೆದುಕೊಂಡಿತ್ತು. ಐಸಿಸಿಯ ಸದಸ್ಯ ರಾಷ್ಟ್ರಗಳ ತಂಡಗಳ ಪ್ರದರ್ಶನದ ಆಧಾರದ ಮೇಲೆ ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ಮೊದಲ ಸ್ಥಾನ ಪಡೆದಿತ್ತು. ಪರಿಣಾಮ 2016 ಅಕ್ಟೋಬರ್ ನಿಂದ ಸತತ 42 ತಿಂಗಳು ನಂ.1 ಟೆಸ್ಟ್ ಶ್ರೇಯಾಂಕ ಸ್ಥಾನದಲ್ಲಿದ್ದ ಟೀಂ ಇಂಡಿಯಾ ತನ್ನ ರ‍್ಯಾಂಕಿಂಗ್ ಕಳೆದುಕೊಂಡಿತ್ತು. ಅಲ್ಲದೇ ಮೂರನೇ ಸ್ಥಾನಕ್ಕೆ ಇಳಿದಿತ್ತು. ಈ ಕುರಿತಂತೆ ಟೀಂ …

Read More »

ವುಹಾನ್ ನಗರದಲ್ಲಿ ಮತ್ತೆ ಸೋಂಕು, ಕ್ಲಸ್ಟರ್ ರಚನೆ – ಶಾಂಘೈ ಡಿಸ್ನಿ ಲ್ಯಾಂಡ್ ಓಪನ್

ಬೀಜಿಂಗ್: ಕೋವಿಡ್ 19 ಮೂಲ ನೆಲೆ ವುಹಾನ್ ನಗರದಲ್ಲಿ ಮತ್ತೆ ಐದು ಮಂದಿಯಲ್ಲಿ ಸೊಂಕು ಕಾಣಿಸಿಕೊಂಡಿದೆ. ಒಂದೇ ಕಾಂಪೌಂಡಿನ 5 ಮಂದಿಯಲ್ಲಿ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಆ ಜಾಗವನ್ನು ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ ವುಹಾನ್ ನಗರದಲ್ಲಿ ಲಾಕೌಡೌನ್ ತೆರೆಯಲಾಗಿತ್ತು. ಈಗ ಮತ್ತೆ 5 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕ್ಲಸ್ಟರ್ ರಚಿಸಲಾಗಿದೆ. ಈ ಹಿಂದೆ ಏಪ್ರಿಲ್ 3 ರಂದು ವುಹಾನ್ ನಗರದಲ್ಲಿ ಕೊನೆಯದಾಗಿ ಸೋಂಕು ಕಾಣಿಸಿಕೊಂಡಿತ್ತು. ಆದಾದ ಬಳಿಕ …

Read More »

1,000 ಕಿ.ಮೀ ಸೈಕಲ್ ಪ್ರಯಾಣ- ತಿಂಡಿ ತಿನ್ನಲು ಕುಳಿತಾಗ ಕಾರು ಡಿಕ್ಕಿಯಾಗಿ ಸಾವು

ಲಕ್ನೋ: ಕೊರೊನಾ ಲಾಕ್‍ಡೌನ್ ಪರಿಣಾಮ ಸಾವಿರಾರು ಕಾರ್ಮಿಕರು ನಡೆದುಕೊಂಡು, ಸೈಕಲ್ ಮೂಲಕ ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಇದೇ ರೀತಿ ಕಾರ್ಮಿಕನೊಬ್ಬ ಸೈಕಲ್ ಮೂಲಕ ತನ್ನೂರಿಕೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಸಘೀರ್ ಅನ್ಸಾರಿ (26). ದೆಹಲಿಯಿಂದ ಬಿಹಾರದ ತನ್ನ ಚಂಪಾರನ್ ಗ್ರಾಮಕ್ಕೆ ಅನ್ಸಾರಿ ಹೋಗುತ್ತಿದ್ದರು. ಆದರೆ ಲಕ್ನೋದಲ್ಲಿ ತಿಂಡಿ ಮಾಡುತ್ತಿದ್ದಾಗ ಕಾರು ಬಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಅನ್ಸಾರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಏನಿದು ಪ್ರಕರಣ? ಕೊರೊನಾ …

Read More »