Breaking News

ಕೊರೊನಾ ಆತಂಕದಿಂದ ಶೇಕ್ ಹ್ಯಾಂಡ್ ಬದಲು ‘ನಮಸ್ತೆ’ಗೆ ಹೊರೆಹೋದ ಟ್ರಂಪ್

Spread the love

ವಾಷಿಂಗ್ಟನ್, ಮಾ.13- ವಿಶ್ವವನ್ನು ಕಂಗೆಡಿಸಿರುವ ಮಾರಕ ಕೊರೊನಾ ಆತಂಕದಿಂದ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಹೆದರಿ ಕಂಗಾಲಾಗಿದೆ. ಇದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹೊರತಾಗಿಲ್ಲ. ತಮ್ಮನ್ನು ಭೇಟಿ ಮಾಡುವ ವಿವಿಧ ದೇಶಗಳ ಅಧಿಪತಿಗಳು ಮತ್ತು ಗಣ್ಯಾತಿಗಣ್ಯರನ್ನು ಟ್ರಂಪ್ ಹಸ್ತಲಾಂಘವ ಮಾಡಿ ಆಲಂಗಿಸಿಕೊಳ್ಳುವ ಪರಿಪಾಠವಿತ್ತು.
ಆದರೆ, ಕೊರೊನಾ ವೈರಾಣು ಆತಂಕದಿಂದಾಗಿ ಟ್ರಂಪ್ ಮಹಾಶಯರು ಈಗ ಶೇಕ್‍ಹ್ಯಾಂಡ್ ಮಾಡುವ ಬದಲು ಭಾರತೀಯ ಶೈಲಿಯ ನಮಸ್ತೆ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ.
ನಿನ್ನೆ ತಮ್ಮನ್ನು ಭೇಟಿ ಮಾಡಿದ ಐರ್ಲೆಂಡ್‍ನ ಭಾರತೀಯ ಮೂಲದ ಪ್ರಧಾನಮಂತ್ರಿ ಲಿಯೋ ವರದ್ಕರ್ ಅವರಿಗೆ ಹಸ್ತಲಾಂಘವ ಮಾಡುವ ಬದಲು ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡಿದರು. ವರದ್ಕರ್ ಕೂಡ ಅದಕ್ಕೆ ಪ್ರತಿಯಾಗಿ ಟ್ರಂಪ್‍ಗೆ ನಮಸ್ತೆ ಹೇಳಿದರು.

ಮೊನ್ನೆಯಷ್ಟೇ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯೂಯಲ್ ಮ್ಯಾಕ್ರೋನ್ ಅವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಭಾವಿತರಾಗಿ ಸ್ಪೇನ್ ದೇಶದ ರಾಜ ದಂಪತಿಗಳಿಗೆ ನಮಸ್ಕಾರ ಮಾಡಿ ಸ್ವಾಗತಿಸಿದ್ದರು.


Spread the love

About Laxminews 24x7

Check Also

ಉಕ್ಕಿ ಹರಿಯುತ್ತಿದೆ ವೇದಗಂಗಾ ನದಿ

Spread the love ನಿಪ್ಪಾಣಿ: ವೇದಗಂಗಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುನ್ನರಗಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನವೇ ಪ್ರವಾಹದ ಪರಿಸ್ಥಿತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ