ತ್ರಿಶೂರ್: ನಮ್ಮ ಆಸ್ಪತ್ರೆಗೆ ಕೊರೊನಾ ಶಂಕಿತನೊಬ್ಬ ಬಂದಿದ್ದ ಎಂದು ಹೇಳಿದ್ದ ವೈದ್ಯೆಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ತಳಿಕುಳಂ ನಲ್ಲಿ ನಡೆದಿದೆ.
ಡಾ.ಶಿನು ಶ್ಯಾಮಲನ್ ಕೆಲಸ ಕಳೆದುಕೊಂಡಿರುವ ವೈದ್ಯೆಯಾಗಿದ್ದು, ಈಕೆ ಕೊರೊನಾ ವೈರಸ್ ಇದೆ ಎಂದು ಶಂಕಿತ ವ್ಯಕ್ತಿಯೋರ್ವ ನಮ್ಮ ಆಸ್ಪತ್ರೆಗೆ ಬಂದಿದ್ದ. ಬಳಿಕ ಆ ವ್ಯಕ್ತಿ ಕತಾರ್ ಗೆ ಹೋಗಿದ್ದ ಎಂದು ಶಿನು ಶ್ಯಾಮಲನ್ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದೆ, ಈ ಬಗ್ಗೆ ಹೇಳಿದಕ್ಕೆ ನನ್ನ ಕೆಲಸದಿಂದ ತೆಗೆದುಹಾಕಲಾಗಿದೆ ಅಂಥ ಹೇಳಿಕೊಂಡಿದ್ದಾರೆ
