Breaking News
Home / new delhi (page 140)

new delhi

ಕಾಂಗ್ರೆಸ್ ಶಾಸಕನಿಗೂ ಕೊರೊನಾ- ಸೋಂಕು ದೃಢ ಪಡುವ ಮುನ್ನ ಸಿಎಂ ಭೇಟಿ

ಅಹ್ಮದಾಬಾದ್: ಗುಜರಾತ್‍ನ ಜಮಾಲ್‍ಪುರ-ಖಾದಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕ್ಷೇತ್ರದಲ್ಲಿ ಆತಂಕ ಸೃಷ್ಟಿಸಿದೆ ಸೋಂಕಿತ ಶಾಸಕನನ್ನು ಎಸ್‍ವಿಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕು ದೃಢ ಪಡುವ ಮುನ್ನ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಬಾಯ್ ಪಟೇಲ್ ಮತ್ತು ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಸೇರಿ ಹಲವು ಗಣ್ಯರನ್ನು ಮಂಗಳವಾರ ಬೆಳಗ್ಗೆ ಗಾಂಧಿನಗರದ ಸಚಿವಾಲಯದಲ್ಲಿ ಸೋಂಕಿತ ಶಾಸಕ ಭೇಟಿಯಾಗಿದ್ದರು. ಈ ಹಿನ್ನೆಲೆ ಸಿಎಂ ಪ್ರಮುಖ ಸಚಿವರು ಹೋಮ್ …

Read More »

ಕೇಂದ್ರ ಸರ್ಕಾರ ಹಳೆ ಮಾರ್ಗಸೂಚಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ

ನವದೆಹಲಿ: ಲಾಕ್‍ಡೌನ್ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಹಳೆ ಮಾರ್ಗಸೂಚಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ನಡುವೆ ಏಪ್ರಿಲ್ 20ರ ಬಳಿಕ ಹೊಸ ಮಾರ್ಗಸೂಚಿ ಬರುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಿಸಿ ಘೋಷಣೆ ಮಾಡಿದ್ದಾರೆ. ಇದಾದ ಬಳಿಕ ಕೇಂದ್ರ ಗೃಹ ಇಲಾಖೆ ಇದರ ಅಧಿಕೃತ ಆದೇಶ ಪ್ರಕಟಿಸಿದ್ದು, ಮೇ 2ವರೆಗೂ ರಾಷ್ಟ್ರೀಯ ತುರ್ತು ನಿರ್ವಹಣೆ …

Read More »

ಏನಿದು ‘ಹೆಲಿಕಾಪ್ಟರ್ ಮನಿ’? ಭಾರತದಲ್ಲಿ ಸಾಧ್ಯವೇ?

ನವದೆಹಲಿ: ಕೊರೊನಾ ಬಂದ ಮೇಲೆ ಬಿಸಿನೆಸ್‍ಗಳು ನೆಲ ಕಚ್ಚಿದೆ. ದೇಶದ ಆರ್ಥಿಕತೆಯ ಮೇಲೆ ಭಾರೀ ಪೆಟ್ಟಾಗಿದೆ. ಈ ಸಂದರ್ಭದಲ್ಲಿ ‘ಹೆಲಿಕಾಪ್ಟರ್ ಮನಿ’ಯನ್ನು ಜಾರಿಗೊಳಿಸಿದರೆ ದೇಶದ ಆರ್ಥಿಕತೆ ಮೇಲಕ್ಕೆ ಎತ್ತಬಹುದು ಎನ್ನುವ ದೇಶದಲ್ಲಿ ಚರ್ಚೆ ಜೋರಾಗಿ ಆರಂಭಗೊಂಡಿದೆ. ಹೌದು. ಕುಸಿಯುತ್ತಿರುವ ಆರ್ಥಿಕತೆಯನ್ನು ದಿಢೀರ್ ಮೇಲಕ್ಕೆ ಎತ್ತುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಆದರೆ ‘ಹೆಲಿಕಾಪ್ಟರ್ ಮನಿ’ಯನ್ನು ಜಾರಿಗೆ ತಂದರೆ ಇದಕ್ಕೆ ಪರಿಹಾರ ಸಿಗಬಹುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಕೇಂದ್ರ …

Read More »

ಮೋದಿ ಭಾಷಣಕ್ಕೂ ಮೊದಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಸಂದೇಶ

ನವದೆಹಲಿ, ಏ.14-ಮಾರಕ ಕೊರೊನಾ ವೈರಸ್ ಸೃಷ್ಟಿಸಿರುವ ಸಂಕಷ್ಟದಿಂದ ದೇಶ ಶೀಘ್ರವೇ ಮುಕ್ತವಾಗಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜನರಿಗೆ ಅಗತ್ಯವಾದ ಎಲ್ಲ ನೆರವು ನೀಡಲಿದೆ ಎಂದು ಸೋನಿಯಾ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಪಕ್ಷದ ಅಧಿನಾಯಕಿ, ಸದೃಢ ನೈತಿಕ ಸ್ಥೈರ್ಯದಿಂದ ದೇಶವು ಈ ಮಹಾಮಾರಿಯ …

Read More »

ಕೊರೊನಾ ತಡೆಯಲು ಜನತೆಗೆ ಮೋದಿಯ ಸಪ್ತ ಸೂತ್ರ……..

ನವದೆಹಲಿ: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮೂರು ವಾರಗಳ ಲಾಕ್‍ಡೌನ್ ಸಮಯವನ್ನು ವಿಸ್ತರಣೆ ಮಾಡಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ವೇಳೆ ಕೊರೊನಾ ವಿರುದ್ಧ ಮೋದಿ ಸಪ್ತ ಸೂತ್ರಗಳನ್ನು ಸೂಚಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ. ಲಾಕ್‍ಡೌನ್ ಪಾಲನೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತ್ತಷ್ಟು ನಿಯಂತ್ರಿಸಲು ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇನೆ. ನಾವು ಕೊರೊನಾ ವಿರುದ್ಧ ಹೇಗೆ ಹೋರಾಟ ನಡೆಸಬೇಕು. ಜನರ …

Read More »

ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ; ಪ್ರಧಾನಿ ಮೋದಿ ಅಧಿಕೃತ ಘೋಷಣೆ

ನವದೆಹಲಿ (ಏ.14): ಕೊರೋನಾ ವೈರಸ್​ ನಿಯಂತ್ರಣ ಮಾಡಲು ದೇಶದಲ್ಲಿ 21 ದಿನಗಳ ಲಾಕ್​ಡೌನ್​ ಹೇರಲಾಗಿತ್ತು. ಆದಾಗ್ಯೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್​ಡೌನ್​ಅನ್ನು ಮತ್ತೆ  ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ದೇಶ ಉದ್ದೇಶಿಸಿ ಮಾತನಾಡಿದ ಮೋದಿ ಈ ಘೋಷಣೆ ಮಾಡಿದರು. ಮೇ 3ರವರೆಗೆ  ಈ ಲಾಕ್​ಡೌನ್​ ಮುಂದುವರಿಯಲಿದೆ ಎಂದು ಅವರು ಹೇಳಿದರು. “ನಾನು ಲಾಕ್​ಡೌನ್​ ಬಗ್ಗೆ ಎಲ್ಲ ರಾಜ್ಯಗಳ …

Read More »

ಬಿಗ್ ಬ್ರೇಕಿಂಗ್ : ಮೇ.3ರ ವರಗೆ ಲಾಕ್‍ಡೌನ್ ವಿಸ್ತರಣೆ..!

ನವದೆಹಲಿ: ಕರೊನಾ ಸೋಂಕು ಹರಡದಂತೆ ತಡೆಯಲು ಘೋಷಿಸಿದ್ದ 21 ದಿನಗಳ ಲಾಕ್​ಡೌನ್​ ಅವಧಿಯ ಕೊನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಮತ್ತೊಂದು ಚಾಲೆಂಜ್ ನೀಡಿದ್ದಾರೆ. ಮೇ.3ರ ವರಗೆ ಲಾಕ್‍ಡೌನ್ ವಿಸ್ತರಣೆ ಘೋಷಿಸಿರುವ ಪ್ರಧಾನಿ ಕೊರೋನಾ ವಿರುದ್ಧ ಹೋರಾಟವನ್ನು ಮುಂದುವರೆಸಲು ಮನವಿ ಮಾಡಿದ್ದಾರೆ. ಇಂದು ಸರಿಯಾಗಿ 10 ಗಂಟೆಗೆ ಭಾಷಣ ಆರಂಭಸಿದ ಪ್ರಧಾನಿ ನರೇಂದ್ರ ಮೋದಿ , ಬಾಬಾ ಸಾಹೇಬ್ ಡಾಕ್ಟರ್ ಬೀಮ್​ ರಾವ್ ಅಂಬೇಡ್ಕರ್ ಅವರ ಜಯಂತಿ …

Read More »

ಡಿಸ್ಚಾರ್ಜ್ ಆಗಿದ್ದ ಇಬ್ಬರಿಗೆ ಮತ್ತೆ ಸೋಂಕು

ನವದೆಹಲಿ: ಡಿಸ್ಚಾರ್ಜ್ ಆಗಿದ್ದ ಕೊರೊನಾ ರೋಗಿಗಳಿಗೆ ಮತ್ತೆ ಸೋಂಕು ಬಂದಿದ್ದು ಆತಂಕ ಎದುರಾಗಿದೆ. ದೆಹಲಿ ಹೊರವಲಯದ ನೋಯ್ಡಾ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆದು ಶುಕ್ರವಾರ ಡಿಸ್ಚಾರ್ಜ್ ಆಗಿದ್ದರು. ಡಿಸ್ಚಾರ್ಜ್ ಆಗುವ ಮುನ್ನ 24 ಗಂಟೆಯಲ್ಲಿ ಎರಡು ಬಾರಿ ಪರೀಕ್ಷೆ ಮಾಡಿದ್ದು ನೆಗೆಟಿವ್ ಬಂದಿತ್ತು. ಇದಾದ ಬಳಿಕ ಗಂಟಲಿನ ದ್ರವನ್ನು ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಪರೀಕ್ಷಿಸಿದ ಬಳಿಕ ವರದಿಯನ್ನು ಕೇಂದ್ರ …

Read More »

ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ಶ್ವಾನ, ಮಾನವ

ಲಕ್ನೋ: ಕೊರೊನಾ ವೈರಸ್ ಹರಡದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವೊಂದು ಮನಕಲಕುವ ಘಟನೆಗಳು ನಡೆದಿದೆ. ಇದರಲ್ಲಿ ಆಗ್ರಾದಲ್ಲಿ ನಡೆದ ಘಟನೆ ಕೂಡ ಒಂದು. ರಸ್ತೆಯಲ್ಲಿ ಚೆಲ್ಲಿದ ಹಾಲಿಗಾಗಿ 4 ಶ್ವಾನಗಳು ಹಾಗೂ ವ್ಯಕ್ತಿ ಮುಗಿಬಿದ್ದ ಘಟನೆ ನೋಡಿದರೆ ಎಂಥವರ ಮನಸ್ಸು ಕರಗದೇ ಇರದು. ಹೌದು. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲೂ ಆಹಾರ ಸಿಗುತ್ತಿಲ್ಲ. ಕೆಲವು ಮಾನವೀಯ ಹೃದಯವಿದ್ದವರು ಬಡವರಿಗೆ ಮೂರು ಹೊತ್ತು ಆಹಾರ ಹಂಚುತ್ತಿದ್ದಾರೆ. …

Read More »

2ನೇ ಹಂತದ ಲಾಕ್​ಡೌನ್​ ವಿಸ್ತರಣೆ; ಪೊಲೀಸ್ ಸಿಬ್ಬಂದಿಗೆ ಮತ್ತಷ್ಟು ಸೂಚನೆಗಳನ್ನು ನೀಡಿದ ಕಮಿಷನರ್ ಭಾಸ್ಕರ್ ರಾವ

 ಎರಡನೇ ಹಂತದ ವಿಸ್ತರಣೆಯ ಲಾಕ್​ಡೌನ್​ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಇಂದು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಬೆಂಗಳೂರು: ಕೊರೋನಾ ನಿಯಂತ್ರಣ ಸಲುವಾಗಿ ಹೇರಲಾಗಿದ್ದ 21 ದಿನಗಳ ಲಾಕ್​ಡೌನ್ ನಾಳೆಗೆ ಮುಕ್ತಾಯಗೊಳ್ಳಲಿದೆ. ಆದರೂ ಮಾರಕ ಸೋಂಕು ಹತೋಟಿಗೆ ಬಾರದ ಕಾರಣಕ್ಕೆ ಲಾಕ್​ಡೌನ್​ ಈ ತಿಂಗಳ ಕೊನೆಯವರೆಗೂ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.  ಎರಡನೇ …

Read More »