Breaking News

2ನೇ ಹಂತದ ಲಾಕ್​ಡೌನ್​ ವಿಸ್ತರಣೆ; ಪೊಲೀಸ್ ಸಿಬ್ಬಂದಿಗೆ ಮತ್ತಷ್ಟು ಸೂಚನೆಗಳನ್ನು ನೀಡಿದ ಕಮಿಷನರ್ ಭಾಸ್ಕರ್ ರಾವ

Spread the love

 ಎರಡನೇ ಹಂತದ ವಿಸ್ತರಣೆಯ ಲಾಕ್​ಡೌನ್​ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಇಂದು ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಬೆಂಗಳೂರು: ಕೊರೋನಾ ನಿಯಂತ್ರಣ ಸಲುವಾಗಿ ಹೇರಲಾಗಿದ್ದ 21 ದಿನಗಳ ಲಾಕ್​ಡೌನ್ ನಾಳೆಗೆ ಮುಕ್ತಾಯಗೊಳ್ಳಲಿದೆ. ಆದರೂ ಮಾರಕ ಸೋಂಕು ಹತೋಟಿಗೆ ಬಾರದ ಕಾರಣಕ್ಕೆ ಲಾಕ್​ಡೌನ್​ ಈ ತಿಂಗಳ ಕೊನೆಯವರೆಗೂ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ. 

ಎರಡನೇ ಹಂತದ ವಿಸ್ತರಣೆಯ ಲಾಕ್​ಡೌನ್​ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಇಂದು ಕೆಲವು ಸೂಚನೆಗಳನ್ನು ನೀಡಿದ್ದಾರೆ.

 

  • ಎಲ್ಲಾ ಸಿಬ್ಬಂದಿಗಳು ಒಳ್ಳೆಯ ಕೆಲಸ ಮಾಡಿ, ಎಲ್ಲರ ಕಡೆಯಿಂದ ಪ್ರಶಂಸೆ ಪಡೆದಿದ್ದೇವೆ.
  • ಇನ್ನು ಉಳಿದ ದಿನಗಳಲ್ಲಿ ಕೂಡ ನಾವು ಹೀಗೆ ಕೆಲಸ‌ ಮಾಡಬೇಕು, ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು.
  • ಮಾಧ್ಯಮದವರಿಗೆ, ಹಣ್ಣು ತರಕಾರಿ, ದಿನಸಿ ತರುವವರಿಗೆ ಸಮಸ್ಯೆ ಮಾಡಬಾರದು.
  • ಗೂಡ್ಸ್ ವಾಹನಗಳಿಗೆ ಯಾವುದೇ ತೊಂದರೆ ಆಗಬಾರದು, ಖಾಲಿ ವಾಹನ ಇರಲಿ, ತುಂಬಿದ ವಾಹನ ಇರಲಿ. ಅವರಿಗೆ ಸಮಸ್ಯೆ ಮಾಡಬಾರದು.
  • ಮಾರ್ಕೆಟ್​ಗಳಿಗೆ ಬರುವ ಹಮಾಲಿಗಳಿಗೆ ತೊಂದರೆ ಕೊಡಬಾರದು.
  • ಕೆಲವರು ಪಾಸ್ ಇಲ್ಲದೆ ತುರ್ತಾಗಿ ಓಡಾಡಬೇಕಾಗಿರುತ್ತೆ, ಅಂತಾ ಸಮಯದಲ್ಲಿ ಸಾಮಾಜ್ಯಜ್ಞಾನ ಬಳಸಿ ನಿರ್ಧಾರ ಕೈಗೊಳ್ಳಬೇಕು. ಗರ್ಭಿಣಿಯರು, ಅನಾರೋಗ್ಯಕ್ಕೆ ಒಳಗಾದವರು ಬಂದಾಗ ಸಹನೆಯಿಂದ ಮಾತನಾಡಿಸಿ ಸಹಾಯ ಮಾಡಿ.
  • ಎಟಿಎಂ ಕೆಲಸದವರಿಗೆ, ಸರ್ಕಾರಿ ಅಧಿಕಾರಿಗಳು, ಪ್ರವೈಟ್ ಸೆಕ್ಯೂರಿಟಿ ಎಸೆನ್ಸಿಯಲ್ ಸರ್ವಿಸ್ ಅವರಿಗೆ ತೊಂದರೆ ಕೊಡಬಾರದು.
  • ನಕಲಿ‌ ಪಾಸ್ ಮಾಡಿಕೊಂಡು ಓಡಾಡುವರ ವಿರುದ್ದ ಸೂಕ್ತ ಕ್ರಮ‌ ಜರುಗಿಸಿ. ಹಾಗೂ ಲಾಕ್ ಡೌನ್ ಮುಗಿದ ಬಳಿಕ ವಾಹನ ವಾಪಸ್ ನೀಡಲು ದಾಖಲಾತಿಗಳನ್ನು ಮಾಡಿಕೊಳ್ಳಿ.
  • ಸಾರ್ವಜನಿಕರಿಗೆ ನಮ್ಮ‌ ಮೇಲೆ ನೀರಿಕ್ಷೆ ಇದೆ. ನೀವು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೀರ. ನಿಮ್ಮ ಆರೋಗ್ಯ ಕಾಪಾಡಿಕೊಂಡು ಕೆಲಸ ಮಾಡಿ.

 


Spread the love

About Laxminews 24x7

Check Also

ನೀರಿನಲ್ಲಿ ಮುಳುಗಿ ತಾತ ಮತ್ತು ಮೊಮ್ಮಕ್ಕಳ ಜಲಸಮಾಧಿ

Spread the loveಮೈಸೂರು : ನೀರಿನಲ್ಲಿ ಮುಳುಗಿ ತಾತ ಮತ್ತು ಮೊಮ್ಮಕ್ಕಳು ಜಲಸಮಾಧಿಯಾಗಿರುವ ಘಟನೆ ತಿ. ನರಸೀಪುರ ಪಟ್ಟಣದಲ್ಲಿ ನಡೆದಿದೆ. ತಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ