Home / new delhi / ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ; ಪ್ರಧಾನಿ ಮೋದಿ ಅಧಿಕೃತ ಘೋಷಣೆ

ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ; ಪ್ರಧಾನಿ ಮೋದಿ ಅಧಿಕೃತ ಘೋಷಣೆ

Spread the love

ನವದೆಹಲಿ (ಏ.14): ಕೊರೋನಾ ವೈರಸ್​ ನಿಯಂತ್ರಣ ಮಾಡಲು ದೇಶದಲ್ಲಿ 21 ದಿನಗಳ ಲಾಕ್​ಡೌನ್​ ಹೇರಲಾಗಿತ್ತು. ಆದಾಗ್ಯೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್​ಡೌನ್​ಅನ್ನು ಮತ್ತೆ  ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ದೇಶ ಉದ್ದೇಶಿಸಿ ಮಾತನಾಡಿದ ಮೋದಿ ಈ ಘೋಷಣೆ ಮಾಡಿದರು. ಮೇ 3ರವರೆಗೆ  ಈ ಲಾಕ್​ಡೌನ್​ ಮುಂದುವರಿಯಲಿದೆ ಎಂದು ಅವರು ಹೇಳಿದರು. “ನಾನು ಲಾಕ್​ಡೌನ್​ ಬಗ್ಗೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಮಾತನಾಡಿದ್ದೇನೆ.  ಈ ವೇಳೆ ಅವರು ಲಾಕ್​ಡೌನ್​ ಮುಂದುವರಿಸಬೇಕು ಎಂದು ಕೋರಿದ್ದರು. ಜನಸಾಮಾನ್ಯರು ಕೂಡ ಇದೇ ಅಭಿಪ್ರಾಯ ಹೊರಹಾಕಿದ್ದರು. ಹೀಗಾಗಿ, ಲಾಕ್​ಡೌನ್​ ಆದೇಶ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದೇನೆ,” ಎಂದು ಮೋದಿ ಹೇಳಿದರು.

21 ದಿನಗಳ ಲಾಕ್​ಡೌನ್​ನಿಂದಾಗಿ ದೇಶದ ಸಾಮಾನ್ಯ ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ಆದಾಗ್ಯೂ ದೇಶದ ಒಳಿತಿಗೋಸ್ಕರ ಅದನ್ನು ಸಹಿಸಿಕೊಂಡ ಎಲ್ಲರಿಗೂ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

“ಬೇರೇ ರಾಷ್ಟ್ರಗಳಲ್ಲಿ ಕೊರೋನಾ ತುಂಬಾನೇ ಭೀಕರವಾಗಿ ಹರಡುತ್ತಿದೆ. ಆದರೆ, ಭಾರತದಲ್ಲಿ ಇದರ ನಿಯಂತ್ರಣವಾಗುತ್ತಿದೆ. ಆರಂಭದಲ್ಲಿ ಭಾರತದಲ್ಲಿ ಒಂದೇ ಒಂದೇ ಪ್ರಕರಣವೂ ಇರಲಿಲ್ಲ. ಆದಾಗ್ಯೂ, ಕೊರೋನಾ ವೈರಸ್​ ಅಂಟಿದ ರಾಷ್ಟ್ರಗಳಿಂದ ಬರಲು ನಾವು ಅವಕಾಶ ನೀಡಿದೆವು. ಹೀಗೆ ಬಂದವರ ಸ್ಕ್ರೀನಿಂಗ್​ ಕೂಡ ಮಾಡಲಾಯಿತು. ಮಾಲ್​ ಕೂಡ ಬಂದ್​ ಮಾಡಲಾಯಿತು. ಆದಾಗ್ಯೂ ಕೊರೋನಾ ಹಬ್ಬಿದೆ,” ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

ಆರಂಭದಲ್ಲಿ ಭಾರತ ಹಾಗೂ ಕೆಲ ರಾಷ್ಟ್ರಗಳಲ್ಲಿ ಕೊರೋನಾ ಪ್ರಕರಣಗಳು ಸಮವಾಗಿ ಇತ್ತು. ಆದರೆ, ಇಂದು ಅಲ್ಲಿ ಕೊರೋನಾ ಭೀಕರವಾಗಿದೆ. ಭಾರತದಲ್ಲಿ ನಿಯಂತ್ರಣದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ​ 121ನೇ ಜನ್ಮದಿನ. ಮೋದಿ ತಮ್ಮ ಭಾಷಣದಲ್ಲಿ ಅಂಬೇಡ್ಕರ್​ ಅವರನ್ನು ನೆನೆದರು.

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದರು. ಈ ವೇಳೆ ಬಹುತೇಕ ಸಿಎಂಗಳು ಲಾಕ್​ಡೌನ್​ ವಿಸ್ತರಣೆ ಮಾಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಮಾರಕ ಕೋವಿಡ್​​-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 50 ಮಂದಿ ಈ ಕೊರೋನಾಗೆ ಬಲಿಯಾಗಿದ್ದಾರೆ. ಜತೆಗೆ ಸುಮಾರು 796 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಮೃತರ ಸಂಖ್ಯೆ 324 ಮತ್ತು ಸೋಂಕಿತರ ಸಂಖ್ಯೆಯೂ 9300ರ ಗಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ