Breaking News

new delhi

ಕರ್ನಾಟಕದ ಲಾಕ್‍ಡೌನ್ ಬಗ್ಗೆ ಜಾಗತಿಕ ಮಟ್ಟದ ಅಧ್ಯಯನದಲ್ಲಿ ಮೆಚ್ಚುಗೆ

ನವದೆಹಲಿ, -ಡೆಡ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ಬಿಗಿಯಾದ ಲಾಕ್‍ಡೌನ್ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿಯೊಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಇನ್ಸ್‍ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಎಂಬ ಸಂಸ್ಥೆಯು ನಡೆಸಿದ ಜಾಗತಿಕ ಮಟ್ಟದ ಅಧ್ಯಯನದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಂತಹ ಕೆಲ ರಾಜ್ಯಗಳು ಕೈಗೊಂಡಿರುವ ಬಿಗಿ ಲಾಕ್‍ಡೌನ್‍ನಿಂದ ಸೋಂಕು ತಡೆಗಟ್ಟಲು ಸಹಕಾರಿಯಾಗಿದೆ. ಆದರೆ, ಕೆಲವು ರಾಜ್ಯಗಳು ಇಂತಹ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಶ್ರಮ ವಹಿಸದ ಕಾರಣ ಸಾಂಕ್ರಾಮಿಕ …

Read More »

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಇಂದು ಬೆಳಗ್ಗೆ ನಿಧನರಾದರು.

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಇಂದು ಬೆಳಗ್ಗೆ ನಿಧನರಾದರು. ಆನಂದ್ ಸಿಂಗ್ ಬಿಶ್ತ್ (89) ಅವರು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 10.44ಕ್ಕೆ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯುಪಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, “ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಬೆಳಗ್ಗೆ  ನಿಧನರಾಗಿದ್ದಾರೆ” ಎಂದು …

Read More »

ಲಾಕ್​​ಡೌನ್ ಸ್ವಲ್ಪ ಸಡಿಲಿಕೆ, ಯಾವಕ್ಷೇತ್ರಗಳಿಗೆ ವಿನಾಯಿತಿ..? ಇಲ್ಲಿದೆ ಫುಲ್ ಡೀಟೇಲ್ಸ್ ……

ನವದೆಹಲಿ : ಪ್ರಧಾನಿ ಮೋದಿ ಘೋಷಿಸಿರುವ ಕಟ್ಟುನಿಟ್ಟಿನ ಲಾಕ್​​ಡೌನ್ ನಾಳೆಯಿಂದ ಸ್ವಲ್ಪ ಪ್ರಮಾಣದಲ್ಲಿ ಸಡಿಲಿಕೆಯಾಗಲಿದ್ದು,ಕೆಲ ಕ್ಷೇತ್ರಗಳಿಗೆ ಲಾಕ್ ಡೌನ್ ನಿಂದ ಷರತ್ತು ಬದ್ಧ ವಿನಾಯಿತಿ ನೀಡಿದೆ. ಕೆಲ ಸರ್ಕಾರಿ ಕಾರ್ಯಚಟುವಟಿಕೆಗಳಿಗೆ ಅನುಮತಿ ನೀಡಿದೆ. ಕೇಂದ್ರ ಗೃಹ ಇಲಾಖೆ ಜಾರಿಗೊಳಿಸಲು ಉದ್ದೇಶಿಸಿರುವ ಸೇವೆಗಳು ಹಾಗೂ ಚಟುವಟಿಕೆಗಳಿಗಾಗಿ ವಿಶೇಷ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಒಂದಷ್ಟು ನಿರ್ದೇಶನಗಳನ್ನು ಮತ್ತು ಮಾಹಿತಿಗಳನ್ನು ನೀಡಿದ್ದು, ಕೆಲವು ಕ್ಷೇತ್ರಗಳು ಲಾಕ್ ಡೌನ್ ನಿಂದ …

Read More »

ಕುಟುಂಬದ 26 ಮಂದಿಗೆ ಕೊರೊನಾ ಸೋಂಕು

ನವದೆಹಲಿ: ಇಡೀ ದೇಶ ಲಾಕ್‍ಡೌನ್ ಆಗಿದೆ. ಕೆಲವು ಕಡೆ ಸೀಲ್‍ಡೌನ್ ಕೂಡ ಮಾಡಿದೆ. ಸರ್ಕಾರ ಮನೆಯಿಂದ ಆಚೆ ಬರಬೇಡಿ ಅಂತ ಸಾರಿ ಸಾರಿ ಹೇಳುತ್ತಿದೆ. ಆದರೆ ಜನರು ಮಾತ್ರ ಸರ್ಕಾರದ ಮಾತು ಕೇಳುತ್ತಿಲ್ಲ. ಇದೀಗ ರೆಡ್ ಝೋನ್‍ನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿದ ಇಡೀ ಕುಟುಂಬವೊಂದಕ್ಕೆ ಕೊರೊನಾ ಸಂಕಷ್ಟ ಎದುರಾಗಿದೆ. ದೆಹಲಿಯ ರೆಡ್ ಝೊನ್ ಪ್ರದೇಶವಾಗಿರುವ ಜಹಾಂಗೀರ್ ಪುರಿಯಲ್ಲಿ ಒಂದೇ ಕುಟುಂಬದ 26 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ರೆಡ್ …

Read More »

ರಾಜಮೌಳಿ ನಿರ್ದೇಶನದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆ

ಹೈದರಾಬಾದ್: ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಮಾಡುವುದಾಗಿ ಖ್ಯಾತ ನಿರ್ದೇಶಕ ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ. ಆ ಮೂಲಕ ಟಾಲಿವುಡ್‍ನಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದ್ದ ಕ್ರೇಜಿ ಕಾಂಬಿನೇಷನ್ ಸುದ್ದಿಗಳಿಗೆ ತೆರೆ ಹೇಳಿದಿದ್ದಾರೆ. ಸದ್ಯ ಎನ್‍ಟಿಆರ್, ರಾಮ್ ಚರಣ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಎಂದು ಘೋಷಣೆ ಮಾಡುವ ಮೂಲಕ ಅಭಿಮಾನಿಗಳಲ್ಲಿ …

Read More »

ದೇಶದಲ್ಲಿ 15 ಸಾವಿರ ದಾಟಿದ ಸೋಂಕಿತರ ಸಂಖ್ಯೆ- ಅಮೆರಿಕದಲ್ಲಿ ಒಂದೇ ದಿನ 4,600 ಸಾವು

ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನ 1,300ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 15,232ಕ್ಕೆ ತಲುಪಿದೆ. ಈ ಪೈಕಿ ತಬ್ಲೀಘಿಗಳ ಪಾಲು 4,200ಕ್ಕೂ ಹೆಚ್ಚು. ಅಂದರೆ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರು ತಬ್ಲಿಘಿಗಳು. ಕಳೆದ 24 ಗಂಟೆಗಳಲ್ಲಿ 43 ಮಂದಿ ಸಾವನ್ನಪ್ಪಿದ್ದು, ಒಟ್ಟು 505 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3,648 ದಾಟಿದ್ದು, ಇಂದು 328 ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‍ನಲ್ಲಿ ಒಂದೇ ದಿನ …

Read More »

ಕೂಲಿ ಕಾರ್ಮಿಕರ ಮಗಳ ಹುಟ್ಟುಹಬ್ಬ ಆಚರಿಸಿದ ಪೊಲೀಸ್……..

ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಏಕಾಏಕಿ ಲಾಕ್‍ಡೌನ್ ಜಾರಿಗೆ ಬಂದಿದೆ. ಇಂತಹ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಂದ ಅನೇಕ ಹೃದಯ ಸ್ಪರ್ಶಿಸು ಪ್ರಸಂಗಗಳು ನಡೆದಿವೆ. ಅಂತೆ ಪೊಲೀಸರ ಪುಟ್ಟ ಸಹಾಯದಿಂದ ಶನಿವಾರ ಕೂಲಿ ಕಾರ್ಮಿಕರ ನಾಲ್ಕು ವರ್ಷದ ಬಾಲಕಿಯೊಬ್ಬಳು ತನ್ನ ಜನ್ಮದಿನವನ್ನು ಆಚರಿಸಿಕೊಳ್ಳಲು ಸಾಧ್ಯವಾಯಿತು. ಫತೇಪುರಿ ಬೇರಿಯ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು …

Read More »

ಅಕ್ಷಯ ಪಾತ್ರೆ ಮೂಲಕ ನಟಿ ರವೀನಾ ಟಂಡನ್ ಸಹಾಯ

ನವದೆಹಲಿ: ಕೆಜಿಎಫ್-2 ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರವೀನಾ ಟಂಡನ್, ತಮ್ಮ ವಿವಿಧ ಕೆಲಸಗಳ ಮೂಲಕ ಸಹ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಸಹಾಯ ಹಸ್ತ ಚಾಚಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಟಿ ರವೀನಾ ಟಂಡನ್ ಲಾಕ್‍ಡೌನ್ ದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು, ಮೊಮ್ಮಕ್ಕಳೊಂದಿಗೆ ಆಟವಾಡುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದಾರೆ. ರವೀನಾ ತಮ್ಮ ಚಟುವಟಿಕೆಗಳ ಕುರಿತು …

Read More »

ಭಾರತೀಯ ನೌಕಾಪಡೆಗೂ ತಟ್ಟಿದ ಕೊರೊನಾ ಭೀತಿ – 21 ಸಿಬ್ಬಂದಿಗೆ ಸೋಂಕು

ಮುಂಬೈ: ಭಾರತೀಯ ನೌಕಾಪಡೆಗೂ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಮುಂಬೈನಲ್ಲಿ ಇರುವ ನೌಕಾನೆಲೆಯ 21 ಮಂದಿ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನೌಕಾಪಡೆಯ 20 ಸೇಲರ್ ಗಳು ಸೇರಿ ಒಟ್ಟು 21 ಮಂದಿ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ಐಎನ್‍ಎಸ್ ಅಶ್ವಿನಿ ನೌಕಾಪಡೆ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ ಮಂದಿಯನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕಿತ ಸೇಲರ್ ಗಳು ಮುಂಬೈನ ಐಎನ್‍ಎಸ್ ಆಂಗ್ರೆಯಲ್ಲಿ …

Read More »

“ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ”..

ಬೀಜಿಂಗ್: ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆಯನ್ನು ಮರೆ ಮಾಡಿತ್ತೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಕೊರೊನಾ ವೈರಸಿನ ಹುಟ್ಟೂರು ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆ ದಿಢೀರ್ ಶೇ.50 ರಷ್ಟು ಹೆಚ್ಚಾಗಿದೆ. ಗುರುವಾರದವರೆಗೆ ವುಹಾನ್ ನಗರದಲ್ಲಿ 2,579 ಜನ ಮೃತಪಟ್ಟಿದ್ದರು. ಆದರೆ ಈಗ ಹೊಸದಾಗಿ 1,290 ಮಂದಿ ಸೇರಿದ್ದು ಒಟ್ಟು ಸಾವನ್ನಪ್ಪಿದ ರೋಗಿಗಳ ಸಂಖ್ಯೆ 3,869ಕ್ಕೆ ಏರಿಕೆಯಾಗಿದೆ. ಅಮೆರಿಕ, ಇಟಲಿಯಲ್ಲಿ ದಿನಕ್ಕೆ …

Read More »