ನವದೆಹಲಿ: ಲಾಕ್‍ಡೌನ್ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಹಳೆ ಮಾರ್ಗಸೂಚಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ನಡುವೆ ಏಪ್ರಿಲ್ 20ರ ಬಳಿಕ ಹೊಸ ಮಾರ್ಗಸೂಚಿ ಬರುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಿಸಿ ಘೋಷಣೆ ಮಾಡಿದ್ದಾರೆ. ಇದಾದ ಬಳಿಕ ಕೇಂದ್ರ ಗೃಹ ಇಲಾಖೆ ಇದರ ಅಧಿಕೃತ ಆದೇಶ ಪ್ರಕಟಿಸಿದ್ದು, ಮೇ 2ವರೆಗೂ ರಾಷ್ಟ್ರೀಯ ತುರ್ತು ನಿರ್ವಹಣೆ ಪರಿಸ್ಥಿತಿ ಕಾಯ್ದೆ ಅಡಿಯಲ್ಲಿ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಉಲ್ಲೇಖಿಸಿದೆ. ಈ ಮಧ್ಯೆ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಬಹುತೇಕ ಹಳೆ ನಿಯಮಗಳನ್ನು ಪಾಲಿಸಲು ಸೂಚನೆ ನೀಡಿದೆ.
ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ, ಗೈಡ್‍ಲೈನ್ಸ್ ಕಳುಸಿದೆ. ಮೇ 3ರ ವರೆಗೂ ಹಳೆಯ ಮಾರ್ಗಸೂಚಿಗಳೇ ಅನ್ವಯ ಆಗಲಿವೆ. ಈ ಹಳೆ ನಿಯಮಗಳ ಪಾಲನೆಯಿಂದಾಗಿ ಮದ್ಯ ಮಾರಾಟ ಅನುಮಾನ ಎನ್ನಲಾಗುತ್ತಿದೆ.
ಲಾಕ್‍ಡೌನ್-2 ಮಾರ್ಗಸೂಚಿ
1. ರಕ್ಷಣೆ, ಕೇಂದ್ರ, ರಾಜ್ಯ ಪೊಲೀಸ್ ಪಡೆಗಳಿಗೆ ವಿನಾಯಿತಿ.
2. ಎಲ್‍ಪಿಜಿ, ವಿದ್ಯುತ್, ನೀರು, ಪೋಸ್ಟ್ ಆಫೀಸ್, ಬ್ಯಾಂಕ್, ಎಟಿಎಂಗಳಿಗೆ ಅವಕಾಶ.
3. ಮದ್ಯ ಮಾರಾಟಕ್ಕೆ ಅವಕಾಶ ಕ್ಷೀಣ.
4. ಬಸ್, ರೈಲು, ವಿಮಾನ ಸಂಚಾರದ ಮೇಲೆ ನಿರ್ಬಂಧ ಮುಂದುವರಿಕೆ.
5. ಸ್ಥಳೀಯ ಸಂಸ್ಥೆಗಳ ಅಗತ್ಯ ಸೇವೆಗಳಿಗೆ ವಿನಾಯಿತಿ.
6. ಸರ್ಕಾರದ ಪರವಾನಗಿ ಹೊಂದಿರುವ ಕೃಷಿ ಉತ್ಪನ್ನಗಳ ಮಂಡಿಗಳಿಗೆ ಅವಕಾಶ.
7. ಕೃಷಿ ಚಟುವಟಿಕೆ, ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ.
8. ರಸಗೊಬ್ಬರ, ಕ್ರಿಮಿನಾಶಕ ಅಂಗಡಿಗೆ ಅವಕಾಶ.
9. ದಿನಸಿ ಅಂಗಡಿ, ಹಣ್ಣು, ತರಕಾರಿ, ಹಾಲು, ಮೀನು, ಮಾಂಸ ಮಾರಾಟಕ್ಕೆ ಅವಕಾಶ.