Breaking News

new delhi

ಪೆಟ್ರೋಲ್‌ಗಿಂತಲೂ ದುಬಾರಿಯಾದ ಡಿಸೇಲ್ ಬೆಲೆ:

ಹೊಸದಿಲ್ಲಿ: ಕಳೆದ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್‌ ದರಗಳು ಗಗನಮುಖಿಯಾಗಿ ಏರುತ್ತಲೇ ಇವೆ. ಆದರೆ ಬುಧವಾರದ ಬೆಲೆಯೇರಿಕೆಯಲ್ಲಿ ಡೀಸೆಲ್‌ ದರ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿದೆ. ದಿಲ್ಲಿಯಲ್ಲಿ ಬುಧವಾರದ ಡೀಸೆಲ್‌ ದರವು ಪೆಟ್ರೋಲ್‌ ದರಕ್ಕಿಂತ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಪೆಟ್ರೋಲ್‌ ದರಕ್ಕಿಂತಲೂ ಡೀಸೆಲ್ ದರ ಹೆಚ್ಚಳವಾಗಿರುವುದಕ್ಕೆ ದಿಲ್ಲಿ ಜನತೆ ಸಾಕ್ಷಿಯಾಗಿದ್ದಾರೆ. ಸತತ 17 ದಿನಗಳ ಏರಿಕೆ ಬಳಿಕ ಇಂದು ಪೆಟ್ರೋಲ್ ಬೆಲೆ ಯಥಾಸ್ಥಿತಿಯಿದ್ದು ಡಿಸೆಲ್ ಬೆಲೆಯಲ್ಲಿ 48 ಪೈಸೆ …

Read More »

ವಿದ್ಯಾರ್ಥಿಗಳು ಕಂಟೈನ್ಮೆಂಟ್ ಝೋನ್‍ಗೆ ಹೋಗಬಹುದು, ಪರೀಕ್ಷೆ ನಡೆಸಬೇಡಿ: ಎನ್‍ಎಸ್‍ಯುಐ ಆಗ್ರಹ

ನವದೆಹಲಿ: ಸಿಬಿಎಸ್‍ಇ ಮತ್ತು ಯುಜಿಸಿ ನಡೆಸುತ್ತಿರುವ ಎಲ್ಲ ಪರೀಕ್ಷೆಗಳನ್ನು ಮುಂದೂಡವಂತೆ ಆಗ್ರಹಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ ಪೋಖ್ರಿಯಾಲ್ ನಿವಾಸದೆದರು ಎನ್‍ಎಸ್‍ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎನ್‍ಎಸ್‍ಯುಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ ಕರಿಯಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಲಾಯಿತು. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಸಿಬಿಎಸ್‍ಇ ಬೋರ್ಡ್ 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ತಯಾರಿ ಮಾಡಿಕೊಳ್ಳುತ್ತಿದೆ ಜೊತೆಗೆ ಜೆಇಇ ಮುಖ್ಯ ಪರೀಕ್ಷೆ, …

Read More »

ನೇಪಾಳದ ಗಡಿಯನ್ನು ವಶಪಡಿಸಿಕೊಂಡಿದೆ ಚೀನಾ- ಬುದ್ಧಿ ಕಲಿಯದ ನೇಪಾಳ

ನವದೆಹಲಿ: ಚೀನಾ ಕೇವಲ ಭಾರತ ಮಾತ್ರವಲ್ಲ ಇತರೆ ನೆರೆ ದೇಶಗಳ ಗಡಿಗಳನ್ನು ಅತಿಕ್ರಮಿಸಿಕೊಳ್ಳುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳದ ಗೂರ್ಖಾದ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿರುವ ಕುರಿತು ವರದಿಯಾಗಿದೆ. ಆದರೆ ಇದೆಲ್ಲವನ್ನು ಬಿಟ್ಟು ನೇಪಾಳ ಭಾರತದ ಗಡಿ ಕುರಿತು ಇದೀಗ ಹೆಚ್ಚು ಚರ್ಚೆ ನಡೆಸುತ್ತಿದೆ. ಅಲ್ಲದೆ ನೇಪಾಳದ ಜನರಲ್ಲಿ ಭಾರತ ವಿರೋಧಿ ಅಲೆಯನ್ನು ಎಬ್ಬಿಸುತ್ತಿದೆ. ಮ್ಯಾಪ್‍ನಲ್ಲಿ ರುಯಿ ಗೌನ್ ಪ್ರದೇಶ ನೇಪಾಳಕ್ಕೆ ಒಳಪಟ್ಟಿದೆ. ಆದರೆ ಗೂರ್ಖಾದ ರುಯಿ ಭೋಟ್ ಅಧೀನದಲ್ಲಿದ್ದ ರುಯಿ …

Read More »

ಕೊರೊನಾ ರಣಕೇಕೆ ಮಧ್ಯೆಯೂ ಐತಿಹಾಸಿಕ ಪುರಿಯ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್

ನವದೆಹಲಿ: ಕೊರೊನಾ ರಣಕೇಕೆ ಮಧ್ಯೆಯೂ ಐತಿಹಾಸಿಕ ಪುರಿಯ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಜೂನ್ 23ರಂದು ದೇವಾಲಯದ ಆವರಣದ ಒಳಗಡೆ ಮಾತ್ರ ಯಾತ್ರೆ ನಡೆಸಲು ಅವಕಾಶ ನೀಡಿದೆ. ಯಾತ್ರೆಗೆ ಅವಕಾಶ ನೀಡುವಂತೆ ಇಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು. ಕೋಟ್ಯಂತರ ಜನರ ನಂಬಿಕೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆ ನಡೆಸಲು ಅನುಮತಿ ಕೊಡುವಂತೆ ಅರ್ಜಿಯಲ್ಲಿ ತಿಳಿಸಿತ್ತು. ಪುರಿ ಜಗನ್ನಾಥ ದೇವಾಲಯದ ಆಡಳಿತದ ಅಧ್ಯಕ್ಷರು ಪುರಿಯ ಗಜಪತಿ …

Read More »

ಸತತ 15 ನೇ ದಿನವೂ ಪೆಟ್ರೋಲ್ ಡಿಸೇಲ್ ದರ ಏರಿಕೆ………

ಹೊಸದಿಲ್ಲಿ:  ದೇಶದಲ್ಲಿ ಸತತ 15 ನೇ ದಿನವೂ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗಿದೆ.  ಭಾನುವಾರ  ಪೆಟ್ರೋಲ್ ಗೆ 35 ಪೈಸೆ, ಡಿಸೇಲ್ ಗೆ 60 ಪೈಸೆ ಏರಿಕೆ ದಾಖಲಿಸಿವೆ. ಕಳೆದ ಎರಡು ವಾರಗಳ ಅವಧಿಯಲ್ಲಿ  ಈವರೆಗೂ ಪೆಟ್ರೋಲ್ 7. 97 ರೂ. ಏರಿಕೆಯಾದ್ರೆ, ಡಿಸೇಲ್ 8.88 ರೂ ಹೆಚ್ಚಿಗೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 79.23 ರೂ. ಡೀಸೆಲ್ ದರ 77.67 ದಾಖಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 86.06 …

Read More »

ಪ್ರಧಾನಿ ಮೋದಿ ಸಿಎಂಗಳ ಜೊತೆ ಎರಡನೇ ಹಂತದ ಮೀಟಿಂಗ್-……….

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಮಾತುಕತೆ ನಡೆಸುತ್ತಿದ್ದು ಇಂದು ಎರಡನೇ ಹಂತದ ಸಭೆ ನಡೆಯಲಿದೆ. ಮಧ್ಯಾಹ್ನ ಮೂರು ಗಂಟೆಗೆ ಸಭೆ ನಡೆಯಲಿದ್ದು, ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಹದಿನೈದು ರಾಜ್ಯಗಳ ಮುಖ್ಯಮಂತ್ರಿಗಳು ಜೊತೆ ಮೋದಿ ಸಭೆ ನಡೆಯಲಿದ್ದಾರೆ. ಮಂಗಳವಾರ ಕೇಂದ್ರಾಡಳಿತ ಪ್ರದೇಶಗಳು ಒಳಗೊಂಡಂತೆ ಒಟ್ಟು 21 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದು, ಸೋಂಕು ನಿಯಂತ್ರಣದ …

Read More »

ಭಾರತದ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರೈಜಿ (100) ನಿಧನರಾಗಿದ್ದಾರೆ.

ಹೊಸದಿಲ್ಲಿ: ಭಾರತದ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರೈಜಿ (100) ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ವಯೋಸಹಜ ಕಾರಣದಿಂದ ರೈಜಿ ಅವರು ಇಂದು ಬೆಳಗ್ಗಿನ ಜಾವ 2.20 ರ ಸುಮಾರಿಗೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ. ರೈಜಿ ಅವರು 1940 ರಲ್ಲಿ 9 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದಾರೆ. ಒಟ್ಟು 277 ರನ್ ಗಳಿಸಿದ್ದಾರೆ. 68 ಗರಿಷ್ಠ ವೈಯಕ್ತಿಕ ರನ್ ಗಳಿಸಿದ್ದಾರೆ. 1939 ರಲ್ಲಿ …

Read More »

ಕೊರೋನಾ ಚಿಕಿತ್ಸೆಗೆ ಪ್ರೈವೇಟ್ ಆಸ್ಪತ್ರೆಗಳಿಂದ ರೇಟ್ ಲಿಸ್ಟ್ ಜಾರಿ: ರೇಟ್ ಕೇಳಿ ನಿಜಕ್ಕೂ ತಲೆ ತಿರುಗುತ್ತೆ

ನವದೆಹಲಿ: ಕರೋನಾ ವೈರಸ್ ಸೋಂಕು ವೇಗವಾಗಿ‌ ಹಬ್ಬುತ್ತಿರುವ ಕಾರಣ ಚಿಕಿತ್ಸೆಗಾಗಿ ಯಾವ ಆಸ್ಪತ್ರೆಗೆ ದಾಖಲಿಸಬೇಕು ಎಂಬ ಸಮಸ್ಯೆ ಎದುರಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದಾಗಿ, ರೋಗಿಗಳನ್ನು ದಾಖಲಿಸಲಾಗುತ್ತಿಲ್ಲ. ದೆಹಲಿಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹಠಾತ್ ಕ್ರಿಯಾಶೀಲತೆ ಹೆಚ್ಚಾಗಿದೆ ಎಂದೇ ಹೇಳಬಹುದು. ಕರೋನಾಗೆ ಚಿಕಿತ್ಸೆ ನೀಡುವ ನೆಪದಲ್ಲಿ ಲಕ್ಷಾಂತರ ಬಿಲ್‌ಗಳನ್ನ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಆಸ್ಪತ್ರೆಗಳು ಸಹ ಈಗ ಜಾಗರೂಕರಾಗಿವೆ. ಅದೇ ಸಮಯದಲ್ಲಿ, ಖಾಸಗಿ ಆಸ್ಪತ್ರೆಗಳು ಕರೋನಾದ ಚಿಕಿತ್ಸೆಗೆ ಸಂಬಂಧಿಸಿದ …

Read More »

ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ: ಮತ್ತೆ ಲಾಕ್‌ಡೌನ್ ಆಗುತ್ತಾ?

ನವದೆಹಲಿ :ದೇಶದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದೆ. ಈ ಹಿನ್ನೆಲೆ ರಾಜ್ಯದ ಸ್ಥಿತಿಗತಿ ಹಾಗೂ ಕೋವಿಡ್ 19 ಸೋಂಕನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ಜೂನ್ 16 ಹಾಗೂ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ಅಂದು ಲಾಕ್ ಡೌನ್ ಹಾಗೂ ಕೊರೊನಾ …

Read More »

ತೀವ್ರ ಜ್ವರ, ಗಂಟಲು ನೋವು – ಸಿಎಂ ಕೇಜ್ರಿವಾಲ್‍ಗೆ ಕೊರೊನಾ ಟೆಸ್ಟ್………..

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಾಳೆ ಬೆಳಗ್ಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ. ಭಾನುವಾರದಿಂದ ಕೇಜ್ರಿವಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರ ಸಲಹೆ ಹಿನ್ನೆಲೆ ನಾಳೆ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ. ಕೇಜ್ರಿವಾಲ್ ತೀವ್ರ ಜ್ವರ, ಗಂಟಲು ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಬಳಿಕವೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕೊರೊನಾ ಪರೀಕ್ಷೆ ನಡೆಸಲು ತಿರ್ಮಾನಿಸಲಾಗಿದೆ.ಕೊರೊನಾ ಹೋರಾಟದ ಮುನ್ನಲೆಯಲ್ಲಿರುವ ಅರವಿಂದ ಕೇಜ್ರಿವಾಲ್, ಪ್ರತಿ ನಿತ್ಯ ಅಧಿಕಾರಗಳ ಸಭೆ ನಡೆಸುತ್ತಿದ್ದಾರೆ. ಜ್ವರ ಕಾಣಿಸಿಕೊಂಡ …

Read More »