Breaking News
Home / ರಾಜ್ಯ (page 630)

ರಾಜ್ಯ

ಅಪಘಾತ- ವಾಹನಕ್ಕೆ ವಿಮೆ ಇರದಿದ್ದರೆ ಪರಿಹಾರ ಮಾಲೀಕರ ಹೆಗಲಿಗೆ: ಹೈಕೋರ್ಟ್

ಬೆಂಗಳೂರು: ‘ಅಪಘಾತ ನಡೆದ ಸಂದರ್ಭದಲ್ಲಿ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗಿಲ್ಲ ಎಂದಾದರೆ ನಷ್ಟಕ್ಕೆ ಒಳಗಾದವರಿಗೆ‌ ಮಾಲೀಕರೇ ಪರಿಹಾರ ನೀಡಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ. ‘ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ವಾಹನದ ಮಾಲೀಕರೇ ಪರಿಹಾರ ನೀಡಬೇಕು’ ಎಂಬ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಈ ಆದೇಶ ನೀಡಿದೆ. ‘ಅಪಘಾತ ನಡೆಯುವ ಮುನ್ನವೇ ವಿಮೆ ನವೀಕರಣವಾಗಿದ್ದರೂ, ಅದು …

Read More »

ಯಲ್ಲಮ್ಮನ ಕೊಳ್ಳದಿಂದ ಬನಶಂಕರಿಯವರೆಗೂ ಮಹದಾಯಿ ನೀರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

ಗದಗ, ನರಗುಂದ: ಕಳಸಾ ಬಂಡೂರಿ, ಮಹಾದಾಯಿ ಯೋಜನೆಗೆ ನಮ್ಮ ಪ್ರಧಾನಮಂತ್ರಿಗಳು ಈಗಾಗಲೇ ಡಿಪಿಆರ್ ಗೆ ಒಪ್ಪಿಗೆ ಕೊಟ್ಟಿದ್ದಾರೆ. ಶೀಘ್ರವೇ ಪರಿಸರ ಅನುಮತಿ ದೊರೆಯಲಿದ್ದು, ಯಲ್ಲಮ್ಮನ ಕೊಳ್ಳದಿಂದ ಬನಶಂಕರಿಯವರೆಗೂ ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಸದೇ ನಾವು ವಿಶ್ರಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು. ಇಂದು ನರಗುಂದದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳಸಾ- ಬಂಡೂರಿ, ಮಹದಾಯಿ ಯೋಜನೆಗಾಗಿ ಕಲ್ಲು-ಮುಳ್ಳು, ಹಳ್ಳ ನೋಡದೇ ನಾನು ನರಗುಂದದಲ್ಲಿ …

Read More »

ಲೋಕಾರ್ಪಣೆಗೆ ಸಿದ್ಧಗೊಂಡ ಎಂ.ಬಿ.ಪಾಟೀಲ್ ಕಂಚಿನ ಪ್ರತಿಮೆ

ವಿಜಯಪುರ : ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಕಂಚಿನ ಪುತ್ಥಳಿ ಲೋರ್ಕಾಪಣೆಗೆ ಸಿದ್ಧಗೊಂಡಿದೆ. ಜಲಸಂಪನ್ಮೂಲ ಸಚಿವರಾಗಿ ತಾವು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಿರುವ ಕೃತಜ್ಞತೆಗಾಗಿ ಬಬಲೇಶ್ವರ ತಾಲೂಕಿನ ಸಂಗಾಗಪುರ ಎಸ್.ಎಚ್.ಗ್ರಾಮದ ಜನರು ಎಂ.ಬಿ.ಪಾಟೀಲ ಅವರ ಪುತ್ಥಳಿ ನಿರ್ಮಿಸಲು ಮುಂದಾಗಿದ್ದಾರೆ.   ಈಗಾಗಲೇ ಎಂ.ಬಿ.ಪಾಟೀಲ ಅವರ ಕಂಚಿನ ಪ್ರತಿಮೆ ಪೂರ್ಣಗೊಂಡಿದ್ದು, ಮಾ.17 ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಪುತ್ಥಳಿ ಅನಾವರಣ …

Read More »

ರಬಕವಿ-ಬನಹಟ್ಟಿ: ನಗರಸಭೆಯ ಕಡತಗಳು ರಸ್ತೆಯಲ್ಲಿ ತಿರುಗಾಡುತ್ತಿವೆ

ರಬಕವಿ-ಬನಹಟ್ಟಿ: ನಗರಸಭೆಯ ಸಿಬ್ಬಂದಿ ವರ್ಗದ ಬೇಜವಾಬ್ದಾರಿಯಿಂದ ಮತ್ತು ಅಸಹಾಯಕತೆಯಿಂದಾಗಿ ನಗರಸಭೆಯ ಪ್ರಮುಖ ಕಡತಗಳು ಇಂದು ರಸ್ತೆಯಲ್ಲಿ ತಿರುಗಾಡುತ್ತಿವೆ. ಮುಂದಿನ ದಿನಗಳಲ್ಲಿ ಈ ಕುರಿತು ಸಿಬ್ಬಂದಿ ವರ್ಗದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ನಗರಸಭೆಯ ಕಡತಗಳು ಸೋರಿಕೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಬಕವಿ ಬನಹಟ್ಟಿ ನಗರಸಭೆಯ ಆಡಳಿತ ಪಕ್ಷದ ಸದಸ್ಯರಾದ ಯಲ್ಲಪ್ಪ ಕಟಗಿ, ಅರುಣ ಬುದ್ನಿ, ಪ್ರಭಾಕರ ಮುಳೇದ ಮತ್ತು ಶಿವಾನಂದ ಬುದ್ನಿ ಅಧಿಕಾರಿಗಳಿಗೆ ತಿಳಿಸಿದರು.   ಶುಕ್ರವಾರ ನಡೆದ …

Read More »

ದೇವಲತ್ತಿ ಲೋಕೋಳಿ- ಲಕ್ಕೇಬೈಲ್ ಮಾರ್ಗದಿಂದ ವಿದ್ಯುತ್ ಸರಬರಾಜು:ಡಾ. ಸೋನಾಲಿ

ಬೆಳಗಾವಿ: ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮದ ಜನರ ಬಹುದಿನಗಳ ಬೇಡಿಕೆಯನ್ನು ಕೊನೆಗೂ ಈಡೇರಿಸಿ ಕೊಡುವಲ್ಲಿ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಯಶಸ್ವಿಯಾಗಿದ್ದಾರೆ. ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಆಗುತ್ತಿದ್ದರೂ ಈ ಮಾರ್ಗ ಪದೇ ಪದೇ ದುರಸ್ತಿಗೆ ಈಡಾಗುತ್ತಿರುವುದರಿಂದ ದೇವಲತ್ತಿ ಗ್ರಾಮದವರು ತೀವ್ರ ಸಮಸ್ಯೆ ಅನುಭವಿಸುವಂತಾಗಿತ್ತು. ಈ ಭಾಗದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಪಡಿಪಾಟಲು ಪಡುವಂತಾಗಿತ್ತು. ಹಾಗಾಗಿ ಈ ಜನರ ಸಮಸ್ಯೆ ಬಗ್ಗೆ ತಿಳಿದು ಜನರ ನೋವಿಗೆ ಸ್ಪಂದಿಸಿದ …

Read More »

ಸಂಜಯ್ ಗೂಡಾವತ್ ಗ್ರೂಪ್ ವತಿಯಿಂದ ಉಚಿತ ಅಡಿಗೆ ಎಣ್ಣೆ ಪೂರೈಕೆ

ಸಂಜಯ ಗೂಡಾವಥ ಗ್ರೂಪ್ 2013 ರಿಂದ ಪ್ರಾರಂಭವಾಗಿದ್ದು ತನ್ನ ಗ್ರಾಹಕ ಕೇಂದ್ರ ವ್ಯಾಪಾರ ನೀತಿಗಳ ಮೂಲಕ ಸಂಸ್ಥೆ ಲಕ್ಷಾಂತರ ಜನರಿಗೆ ಪ್ರೀಯವಾಗಿದೆ. ಈ ಸಂಸ್ಥೆಯಿಂದ ಕರ್ನಾಟಕ ದಲ್ಲಿ ಕಿರಾಣಿ ಅಂಗಡಿಗಳ ಸಮಕಾಲೀನ ವ್ಯಾಪಾರಿಗಳು ಹಾಗೂ ಲೇಔಟ್ ಮೂಲಕ ತನ್ನ ಉತ್ಪನ್ನಗಳ ಲಾಭ ಆಗುವಂತೆ ಮಾಡುವ ಜಿಸಿಎಲ್ ತನ್ನ ಗ್ರಾಹಕರ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲು ಉದ್ದೇಶಿಸಿದೆ, ಜಿ ಸಿ ಎಲ್ ನಿರಂತರ ಉತ್ಪನ್ನ ನಾಮಿನೇತೇ ಸ್ಪರ್ಧಾತಕ ಬೆಲೆ ಮತ್ತು ಗುಣಮಟ್ಟವನ್ನು ಸೃಷ್ಟಿಸುವ …

Read More »

ಕುಮಟಳ್ಳಿಗೆB,J,P. ಟಿಕೆಟ್ ಸಿಗದಿದ್ದರೆ ನಾನು ಗೋಕಾಕ ನಲ್ಲಿ ಸ್ಪರ್ಧಿಸಲ್ಲ: ರಮೇಶ್ ಜಾರಕಿಹೊಳಿ

ವಿಜಯಪುರ: ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಮಹೇಶ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ನಾನು ಗೋಕಾಕ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.   ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ವಿಜಯಪುರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಥಣಿ ಕ್ಷೇತ್ರದಿಂದ ಮಹೇಶ ಕುಮಟಳ್ಳಿ ಟಿಕೆಟ್ ನೀಡಲೇಬೇಕು ಎಂದು ಪರೋಕ್ಷವಾಗಿ ಕೇಸರಿ ವರಿಷ್ಠರಿಗೆ ಸಂದೇಶ …

Read More »

ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ರಚನೆ: ಬೊಮ್ಮಾಯಿ ಅಧ್ಯಕ್ಷ, ಬಿಎಸ್‌ವೈ ಸದಸ್ಯ

ಬೆಂಗಳೂರು: ಬಿಜೆಪಿ ವಿಧಾನಸಭಾ ಚುನಾವಣಾ ಪ್ರಚಾರ ಸಮಿತಿಯನ್ನು ರಚಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ.   ಚುನಾವಣಾ ಪ್ರಚಾರ ಸಮಿತಿಯ ಸದಸ್ಯರು: ಬಿ.ಎಸ್‌.ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್, ಡಿ.ವಿ.ಸದಾನಂದಗೌಡ, ಜಗದೀಶಶೆಟ್ಟರ್‌, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ,ಬಿ.ಶ್ರೀರಾಮುಲು, ಆರ್‌.ಅಶೋಕ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಪ್ರಭು ಚವ್ಹಾಣ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಟಿ.ರವಿ, ವಿ.ಶ್ರೀನಿವಾಸಪ್ರಸಾದ್, …

Read More »

ಮಾಡಾಳು ಬಂಧನಕ್ಕೆ ರಚಿಸಿದ್ದ 7 ತಂಡ ಸಿಎಂ ಮನೆಯಲ್ಲಿ ಠಿಕಾಣಿ ಹೂಡಿದ್ದವೇ: ಕಿಮ್ಮನೆ

ಶಿವಮೊಗ್ಗ: ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನಕ್ಕೆ ನಿಯೋಜಿಸಿದ್ದ ಲೋಕಾಯುಕ್ತ ಪೊಲೀಸರ ಏಳು ತಂಡಗಳು ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಠಿಕಾಣಿ ಹೂಡಿದ್ದವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.   ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಶುಕ್ರವಾರ ಇಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಮೀನು ಸಿಕ್ಕ ಅರ್ಧ ಗಂಟೆಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಮೆರವಣಿಗೆಯಲ್ಲಿ ಬರುತ್ತಾರೆ. ಪ್ರಕರಣದಲ್ಲಿ ಎ1 ಆರೋಪಿ ಅವರು. ಆದರೂ ಜಾಮೀನು …

Read More »

ಕಿಡ್ನಿ ಆರೋಗ್ಯಕ್ಕೆ ಕಾಳಜಿ ವಹಿಸಿ: ಡಾ.ನಿತಿನ್‌ ಗಂಗಾನೆ

ಬೆಳಗಾವಿ: ‘ಇಡೀ ದೇಹದ ಅಂಗಾಗಂಗಳಲ್ಲಿ ಕಿಡ್ನಿ ಅತ್ಯಂತ ಹೆಚ್ಚು ಕೆಲಸಗಳನ್ನು ಮಾಡುತ್ತದೆ. ಕಿಡ್ನಿ ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಜೀವನಪೂರ್ತಿ ಅನಾರೋಗ್ಯ ಕಾಡುತ್ತದೆ’ ಎಂದು ಕಾಹೆರ್‌ನ ಕುಲಪತಿ ಡಾ.ನಿತಿನ್‌ ಗಂಗಾನೆ ಹೇಳಿದರು.   ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಪ್ರೊಲಾಜಿ ವಿಭಾಗವು ಗುರುವಾರ ಏರ್ಪಡಿಸಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕಿಡ್ನಿ ಆರೋಗ್ಯದ ಕುರಿತು ಸಾಮಾನ್ಯರಿಗೂ ತಿಳಿಯುವ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. …

Read More »