Breaking News
Home / ರಾಜಕೀಯ / ರಬಕವಿ-ಬನಹಟ್ಟಿ: ನಗರಸಭೆಯ ಕಡತಗಳು ರಸ್ತೆಯಲ್ಲಿ ತಿರುಗಾಡುತ್ತಿವೆ

ರಬಕವಿ-ಬನಹಟ್ಟಿ: ನಗರಸಭೆಯ ಕಡತಗಳು ರಸ್ತೆಯಲ್ಲಿ ತಿರುಗಾಡುತ್ತಿವೆ

Spread the love

ಬಕವಿ-ಬನಹಟ್ಟಿ: ನಗರಸಭೆಯ ಸಿಬ್ಬಂದಿ ವರ್ಗದ ಬೇಜವಾಬ್ದಾರಿಯಿಂದ ಮತ್ತು ಅಸಹಾಯಕತೆಯಿಂದಾಗಿ ನಗರಸಭೆಯ ಪ್ರಮುಖ ಕಡತಗಳು ಇಂದು ರಸ್ತೆಯಲ್ಲಿ ತಿರುಗಾಡುತ್ತಿವೆ. ಮುಂದಿನ ದಿನಗಳಲ್ಲಿ ಈ ಕುರಿತು ಸಿಬ್ಬಂದಿ ವರ್ಗದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ನಗರಸಭೆಯ ಕಡತಗಳು ಸೋರಿಕೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಬಕವಿ ಬನಹಟ್ಟಿ ನಗರಸಭೆಯ ಆಡಳಿತ ಪಕ್ಷದ ಸದಸ್ಯರಾದ ಯಲ್ಲಪ್ಪ ಕಟಗಿ, ಅರುಣ ಬುದ್ನಿ, ಪ್ರಭಾಕರ ಮುಳೇದ ಮತ್ತು ಶಿವಾನಂದ ಬುದ್ನಿ ಅಧಿಕಾರಿಗಳಿಗೆ ತಿಳಿಸಿದರು.

 

ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆಯ ಸದಸ್ಯ ಯಲ್ಲಪ್ಪ ಕಟಗಿ ಮಾತನಾಢುತ್ತ, ನಗರಸಭೆಯ ಕಡತ ಒಂದನ್ನು ಒಬ್ಬ ವ್ಯಕ್ತಿ ತನ್ನ ಕೈಯಲ್ಲಿಟ್ಟುಕೊಂಡು ನಗರಸಭೆಯ ಕಾರ್ಯಾಲಯದಲ್ಲಿ ಮತ್ತು ರಸ್ತೆಯ ಮೇಲೆ ತಿರುಗಾಡಿದ ಕುರಿತು ವಿಡಿಯೋವನ್ನು ನಗರಸಭೆಯ ಅಧಿಕಾರಿಗಳಿಗೆ, ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರ ಗಮನಕ್ಕೆ ತರುವುದರ ಜೊತೆಗೆ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯ ಕುರಿತು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಬಸವರಾಜ ಗುಡೋಡಗಿ ಮಾತನಾಡಿ, ನಗರಸಭೆಯ ಕಡತಗಳು ಹೊರಡಗೆ ದೊರೆಯುತ್ತಿದ್ದು, ಅಂಥವರ ಮೇಲೆ ಸೂಕ್ತ ಕ್ರಮವನ್ನು ಜರುಗಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.

ಈ ಘಟನೆಯ ಕುರಿತು ಈಗಾಗಲೇ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನೂ ಇದರಲ್ಲಿ ಭಾಗಿಯಾದವರ ಕುರಿತು ಪರಿಶೀಲಿಸಿ ಅವರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷ ಸಂಜಯ ತೆಗ್ಗಿ ತಿಳಿಸಿದರು. ಪೌರಾಯುಕ್ತ ಅಶೋಕ ಗುಡಿಮನಿ ಮಾತನಾಡಿ, ನಗರಸಭೆಯ ಆವಕ ಮತ್ತು ಜಾವಕ ಸಿಬ್ಬಂದಿ ವರ್ಗಕ್ಕೆ ಸೂಕ್ತ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ನಂತರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ನಗರಸಭೆಯ ವಾಹನಗಳ ನಿರ್ವಹಣೆ ಬೇಕಾಬಿಟ್ಟಿಯಾಗಿದೆ. ಇವುಗಳಿಗೆ ಕೂಡಲೇ ಜಿಪಿಎಸ್ ಅಳವಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ನಗರಸಭೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯಾವುದೆ ವಿಷಯವು ಸದಸ್ಯರ ಗಮನಕ್ಕೆ ಬರುತ್ತಿಲ್ಲ. ನಗರಸಭೆಯ 31 ಜನ ಸದಸ್ಯರ ಜೊತೆಗೆ ಚರ್ಚೆ ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ನಗರಸಭೆಯ ಸಾಮಾನ್ಯ ಸಭೆ ವಿವಿಧ ವಿಷಯಗಳಿಗೆ ಅನುಮೋದನೆ ನೀಡುವುದರ ಜೊತೆಗೆ ಹೆಚ್ಚಾಗಿ ಲೋಪದೋಷಗಳ ಕುರಿತು ಚರ್ಚೆ ಮಾತ್ರ ಬಿರುಸಿನಿಂದ ನಡೆಯಿತು.

ಕಾರ್ಮಿಕರ ನೇಮಕಾತಿಯಲ್ಲಿ ದೋಷಗಳ ಕುರಿತು ಸದಸ್ಯರಾದ ಯಲ್ಲಪ್ಪ ಕಟಗಿ ಮತ್ತು ಅರುಣ ಬುದ್ನಿ ಸಭೆಯ ಗಮನಕ್ಕೆ ತಂದರು. ಸದಸ್ಯರ ಪ್ರಶ್ನೆಗೆ ಪೌರಾಯುಕ್ತ ಅಶೋಕ ಗುಡಿಮನಿ ಉತ್ತರಿಸಿದರೂ ಸದಸ್ಯರು ಮಾತ್ರ ಉತ್ತರಕ್ಕೆ ತೃಪ್ತಿಯಾಗಲಿಲ್ಲ.

ನೌಕರರ ಹಾಜರಾತಿಯಲ್ಲಿ ಆಕ್ರಮ: ಕುರಿತು ಸದಸ್ಯ ಶ್ರೀಶೈಲ ಬೀಳಗಿ ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಅಧಿಕಾರಿಗಳಲ್ಲಿರುವ ಮಾಹಿತಿಯ ಕೊರತೆ ಎದ್ದು ಕಾಣುತ್ತಿತ್ತು.

ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಹಲವಾರು ಆರೋಪಗಳಿಗೆ ಒಳಗಾದರು.

ಸಭೆಯಲ್ಲಿ ಉಪಾಧ್ಯಕ್ಷೆ ವಿದ್ಯಾ ಧಬಾಡಿ, ಸ್ಥಾಯಿ ಸಮಿತಿಯ ಕಾರ್ಯಾಧ್ಯಕ್ಷ ಸದಾಶಿವ ಪರೀಟ ಸೇರಿದಂತೆ ನಗರಸಭೆಯ ಅಧಿಕಾರಿಗಳು ಇದ್ದರು.

 


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ