Breaking News
Home / ರಾಜ್ಯ (page 640)

ರಾಜ್ಯ

ಪಂಚಮಸಾಲಿ ಮೀಸಲಾತಿ | ನಾಳೆ ಹೆದ್ದಾರಿಗಳು, ಗ್ರಾಮ ರಸ್ತೆಗಳು ಬಂದ್‌

ಬೆಂಗಳೂರು: ಹಿಂದುಳಿದ ವರ್ಗಗಳ ‘2ಎ’ ಮೀಸಲಾತಿಗೆ ಪಂಚಮಸಾಲಿ ಸಮಾಜ ಸೇರ್ಪಡೆಗೊಳಿಸಲು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಮಾರ್ಚ್ 4ಕ್ಕೆ 50 ದಿನಗಳನ್ನು ಪೂರೈಸುತ್ತಿದ್ದು, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಪಂಚಮಸಾಲಿ ಸಮಾಜ ನಿರ್ಧರಿಸಿದೆ.   ಮಾರ್ಚ್‌ 4 ರಂದು ಪಂಚಮಸಾಲಿ ಸಮಾಜದ ಜನರು ರಾಜ್ಯದ ಎಲ್ಲೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಗ್ರಾಮ ರಸ್ತೆಗಳನ್ನು ಬಂದ್‌ ಮಾಡಬೇಕು. ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ ಎಂದು …

Read More »

10 ನಿಮಿಷದಲ್ಲೇ ಆಸ್ತಿ ನೋಂದಣಿ: ಕಾವೇರಿ-2ಗೆ ಕಂದಾಯ ಸಚಿವ ಆರ್‌.ಅಶೋಕ್‌ ಚಾಲನೆ

ಬೆಂಗಳೂರು: ಆಸ್ತಿಗಳ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ, ಕೇವಲ 10 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ನಾಗರಿಕ ಸ್ನೇಹಿ ಕಾವೇರಿ-2 ತಂತ್ರಾಂಶಕ್ಕೆ ಕಂದಾಯ ಸಚಿವ ಆರ್‌.ಅಶೋಕ್‌ ಗುರುವಾರ ಚಾಲನೆ ನೀಡಿದರು. ಕಲಬುರಗಿಯ ಚಿಂಚೋಳಿ, ಬೆಳಗಾವಿ ದಕ್ಷಿಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈಗಾಗಲೇ ಆರಂಭವಾಗಿರುವ ಸೇವೆ, ದೇವನಹಳ್ಳಿ, ರಾಮನಗರ ಸೇರಿದಂತೆ ಇನ್ನೂ ಕೆಲ ಕಚೇರಿಗಳಲ್ಲಿ ಇದೇ ತಿಂಗಳು ಸೇವೆ ಲಭ್ಯವಾಗಲಿದೆ. ಮೂರು ತಿಂಗಳ ಒಳಗೆ ರಾಜ್ಯದ ಎಲ್ಲೆಡೆ ಜಾರಿಗೊಳಿಸಲಾಗುವುದು ಎಂದು ಅಶೋಕ್‌ ಹೇಳಿದರು. ನಾಗರಿಕರು …

Read More »

ಗ್ರಾಮದೇವಿಯರ ಭವ್ಯ ಮೆರವಣಿಗೆ; ಅಸಂಖ್ಯಾತ ಭಕ್ತರು ಭಾಗಿ

ಕಲಘಟಗಿ: ಶ್ರೀ ಗ್ರಾಮದೇವಿಯರ 9 ದಿನಗಳ ಕಾಲ ಜರುಗಲಿರುವ ಜಾತ್ರಾ ಮಹೋತ್ಸವದ ದೇವಿಯರ ಮೆರವಣಿಗೆ ಬುಧವಾರ ಮಧ್ಯಾಹ್ನ ಶ್ರೀ ಗ್ರಾಮದೇವಿ ದೇವಸ್ಥಾನದಿಂದ ಆರಂಭಗೊಂಡಿತು. ಅಸಂಖ್ಯಾತ ಭಕ್ತಸಾಗರದ ಮಧ್ಯೆ ಸಾಗಿ ಬಂದ ಶ್ರೀ ದುರ್ಗವ್ವ ಮತ್ತು ಶ್ರೀ ದ್ಯಾಮವ್ವರ ಮೂರ್ತಿಗಳನ್ನು ಅಕ್ಕಿ ಓಣಿಯಲ್ಲಿರುವ ಚೌತ ಮನೆಕಟ್ಟೆಯ ಜಾತ್ರಾ ಮಂಟಪದಲ್ಲಿ ವಿರಾಜಮಾನಗೊಳಿಸಲಾಯಿತು.   ಶ್ರೀ ಗ್ರಾಮದೇವಿಯರನ್ನು ಸಂಭ್ರಮ ಸಡಗರ, ಸಕಲ ಮಂಗಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಜೋಳದ ಓಣಿ, ಮಾರ್ಕೆಟ್‌ ರೋಡ ಮುಖಾಂತರ …

Read More »

ಬೆಳವಡಿ ಇತಿಹಾಸದ ಸಂಶೋಧನೆ ಅಗತ್ಯ;ಡಾ| ನಿರ್ಮಲಾ ಭಟ್ಟಲ

ಬೈಲಹೊಂಗಲ: ಬೆಳವಡಿ ಸಂಸ್ಥಾನಗಳ ಇತಿಹಾಸ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಇತಿಹಾಸಗಾರರು ಹಾಗೂ ಸರ್ಕಾರ ಬೆಳವಡಿ ಸಂಸ್ಥಾನದ ಸಮಗ್ರ ಇತಿಹಾಸ ಅಧ್ಯಯನ ಮಾಡಿ ಬೆಳವಡಿ ಮಲ್ಲಮ್ಮಳ ಕುರಿತ ಕುರುಹುಗಳ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದು ಬೆಳಗಾವಿ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ನಿರ್ಮಲಾ ಭಟ್ಟಲ ಹೇಳಿದರು.   ಮಲ್ಲಮ್ಮನ ಬೆಳವಡಿ ಗ್ರಾಮದ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಳವಡಿ …

Read More »

ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ : ಈಗ ಹೇಗಿದೆ ಹೆಲ್ತ್‌?

ಮುಂಬೈ: ಮಾಜಿ ವಿಶ್ವಸುಂದರಿ, ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತವಾಗಿರುವ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಎರಡು ದಿನಗಳ ಹಿಂದೆ ಹೃದಯಾಘಾತವಾಗಿದ್ದು ವೈದ್ಯರು ಆಂಜಿಯೋಪ್ಲಾಸ್ಟ್‌ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.   ಸದಾ ಫಿಟ್‌ ಆಗಿರುವ ಸುಶ್ಮಿತಾ ಸೇನ್‌ ಅವರ ಹೃದಯಾಘಾತ ಸುದ್ದಿ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸದ್ಯಕ್ಕೆ ತಾವು ಆರಾಮವಾಗಿರುವುದಾಗಿ ಸುಶ್ಮಿತಾ ಸೇನ್‌ ಹೇಳಿದ್ದಾರೆ. ತಮ್ಮ ದೈಹಿಕ ಆರೋಗ್ಯಕ್ಕೇ ಹೆಚ್ಚು ಒತ್ತು ನೀಡುವ ಸುಶ್ಮಿತಾ ಸೇನ್‌ …

Read More »

‘ಕಾಂಗ್ರೇಸ್ ಪಕ್ಷದಲ್ಲಿ ದುಡ್ಡುಕೊಟ್ಟು ಜನ್ರು ಸೇರಿಸುವ ಪರಂಪರೆ ಇಲ್ಲಾ’

ಯಾದಗಿರಿ : ಕಾಂಗ್ರೇಸ್ ಪಕ್ಷದಲ್ಲಿ ದುಡ್ಡುಕೊಟ್ಟು ಜನ್ರು ಸೇರಿಸುವ ಪರಂಪರೆ ಇಲ್ಲಾ. ಬಿಜೆಪಿಯವರ ಬಗ್ಗೆ ಮಾತನಾಡುವಾಗಿನ ವಿಡಿಯೋ ಅದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ವಿಡಿಯೋ ವೈರಲ್ ಗೆ ಸಂಬಂಧಿಸಿದಂತೆ ಪ್ರಕ್ರಿಯೆ ನೀಡಿದ್ದಾರೆ.   ಈ ಬಗ್ಗೆ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಮುಗಂದಪೂರ ಗ್ರಾಮದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದಸತೀಶ್ ಜಾರಕಿಹೊಳಿ, ಮಾರ್ಚ್ 5ರಂದು ಜೆಡಿಎಸ್ ಶಾಸಕರೊಬ್ಬರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ. ನಂತರ ಹಂತ ಹಂತವಾಗಿ ಜೆಡಿಎಸ್ ಕೆಲವು ಶಾಸಕರು …

Read More »

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಡಿಕೆ ಶಿವಕುಮಾರ್!

ಬೆಂಗಳೂರು : ನಿನ್ನೆ ಕೂಡ ಗ್ಯಾಸ್ ಬೆಲೆ ಏರಿಸಿದ್ದಾರೆ. ಪದೇ ಪದೇ ಏರಿಕೆಯಾಗ್ತಾನೇ ಇದೆ. ಈಗ ಚುನಾವಣೆ ಇದೆ ಅಂತ ಮೋದಿ ಬರುತ್ತಿದ್ದಾರೆ. ಸಾವು, ಪ್ರವಾಹ ಆದಾಗ ರಾಜ್ಯಕ್ಕೆ ಬರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮತ್ತೆ ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದಡಿ.ಕೆ. ಶಿವಕುಮಾರ್, ಈ ಭ್ರಷ್ಟ ಸರ್ಕಾರ ತೆಗೆಯಬೇಕು. ಜನರೇ ಅಂತಹ ತೀರ್ಮಾನ ಮಾಡಿದ್ದಾರೆ. …

Read More »

ಕಂದಾಯ ಇಲಾಖೆ ಎಲ್ಲಾ ನೋಂದಣಿಗಳನ್ನು ಆನ್‌ಲೈನ್‌ ಮಾಡಲಾಗುವುದು: ಆರ್‌.ಅಶೋಕ್‌

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಶ 2.0 ಜಾರಿಗೆ ತಂದಿದ್ದು, ಏಳರಿಂದ ಹತ್ತು ನಿಮಿಷಗಳಲ್ಲಿ ಆಸ್ತಿನೋಂದಣಿ ಮುಗಿಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾವೇರಿ 2.0ತಂತ್ರಾಂಶದ ಕುರಿತು ಮಾತನಾಡಿದ ಸಚಿವರು, ಈ ತಂತ್ರಾಂಶವಿನೂತನ, ನಾಗರೀಕ ಸ್ನೇಹಿಯಾಗಿದೆ. ಮಧ್ಯವರ್ತಿಗಳ ಹಾವಳಿ ಕಡಿಮೆ ಆಗಲಿದೆ. ವರ್ಷದೊಳಗೆ ಕೈಯಲ್ಲಿ ಅರ್ಜಿ ಹಾಕುವುದನ್ನು ತಪ್ಪಿಸಿ, ಆನ್ ಲೈನ್ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಮೂರು ತಿಂಗಳಲ್ಲಿ ಎಲ್ಲಾ ಕಡೆ ಪ್ರಾರಂಭವಾಗಲಿದೆ. ಆಸ್ತಿ, ವಿವಾಹ ಸೇರಿದಂತೆ …

Read More »

ಬೆಳಗಾವಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ​ ಚಾಲನೆ ನೀಡಲಿರುವ ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ ಇಂದು ಬೆಳಗಾವಿ ಜಿಲ್ಲೆ ಎರಡು ಮತಕ್ಷೇತ್ರದಲ್ಲಿ ಪ್ರಚಾರ ಮಾಡಿ ದೆಹಲಿಗೆ ವಾಪಸ್ ಆಗಲಿದ್ದಾರೆ. ನಂತರ ರಾಜ್ಯ ನಾಯಕರಿಂದ ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಎರಡು ಮತಕ್ಷೇತ್ರದಲ್ಲಿ ರೋಡ್ ಶೋ, ಸಂಜೆ ಮೂರನೇ ಮತಕ್ಷೇತ್ರದಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದೆ. ಹೀಗೆ ಕಿತ್ತೂರು ಕರ್ನಾಟಕದ 58 ವಿಧಾನಸಭಾ ಮತಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ. ಸಂಚರಿಸಲಿದೆ. ಬಸವೇಶ್ವರರ ಕರ್ಮ ಭೂಮಿ ಬಸವಕಲ್ಯಾಣಕ್ಕೆ ನಾಳೆ(ಮಾ.03) ಕೇಂದ್ರ ಗೃಹ ಸಚಿವ ಅಮೀತ್ ಶಾ …

Read More »

ಮಹಾರಾಷ್ಟ್ರ: ಕಸ್ಬಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ; ಬಿಜೆಪಿಗೆ ಮುಖಭಂಗ

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ಆಡಳಿತಾರೂಢ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ ಸರಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ತನ್ನ ಭದ್ರಕೋಟೆಯಾದ ಕಸ್ಬಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಪ್ರತಿಷ್ಠೆಯ ಹೋರಾಟದಲ್ಲಿ ಬಿಜೆಪಿ ಸೋಲನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್ ಅವರು ಬಿಜೆಪಿ ಅಭ್ಯರ್ಥಿ ಹೇಮಂತ್ ರಸಾನೆ ಅವರನ್ನು 10,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.   ಕಸ್ಬಾ ಕ್ಷೇತ್ರದಲ್ಲಿ 20ನೇ ಸುತ್ತಿನ ಅಂತ್ಯಕ್ಕೆ ಧಾಂಗೇಕರ್ 72,599 ಮತಗಳನ್ನು ಪಡೆದರೆ, ರಸಾನೆ 61,771 ಮತಗಳನ್ನು …

Read More »