Breaking News
Home / ರಾಜ್ಯ (page 631)

ರಾಜ್ಯ

ಮಾಡಾಳು ಬಂಧನಕ್ಕೆ ರಚಿಸಿದ್ದ 7 ತಂಡ ಸಿಎಂ ಮನೆಯಲ್ಲಿ ಠಿಕಾಣಿ ಹೂಡಿದ್ದವೇ: ಕಿಮ್ಮನೆ

ಶಿವಮೊಗ್ಗ: ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನಕ್ಕೆ ನಿಯೋಜಿಸಿದ್ದ ಲೋಕಾಯುಕ್ತ ಪೊಲೀಸರ ಏಳು ತಂಡಗಳು ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಠಿಕಾಣಿ ಹೂಡಿದ್ದವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.   ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಶುಕ್ರವಾರ ಇಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಮೀನು ಸಿಕ್ಕ ಅರ್ಧ ಗಂಟೆಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಮೆರವಣಿಗೆಯಲ್ಲಿ ಬರುತ್ತಾರೆ. ಪ್ರಕರಣದಲ್ಲಿ ಎ1 ಆರೋಪಿ ಅವರು. ಆದರೂ ಜಾಮೀನು …

Read More »

ಕಿಡ್ನಿ ಆರೋಗ್ಯಕ್ಕೆ ಕಾಳಜಿ ವಹಿಸಿ: ಡಾ.ನಿತಿನ್‌ ಗಂಗಾನೆ

ಬೆಳಗಾವಿ: ‘ಇಡೀ ದೇಹದ ಅಂಗಾಗಂಗಳಲ್ಲಿ ಕಿಡ್ನಿ ಅತ್ಯಂತ ಹೆಚ್ಚು ಕೆಲಸಗಳನ್ನು ಮಾಡುತ್ತದೆ. ಕಿಡ್ನಿ ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಜೀವನಪೂರ್ತಿ ಅನಾರೋಗ್ಯ ಕಾಡುತ್ತದೆ’ ಎಂದು ಕಾಹೆರ್‌ನ ಕುಲಪತಿ ಡಾ.ನಿತಿನ್‌ ಗಂಗಾನೆ ಹೇಳಿದರು.   ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಪ್ರೊಲಾಜಿ ವಿಭಾಗವು ಗುರುವಾರ ಏರ್ಪಡಿಸಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕಿಡ್ನಿ ಆರೋಗ್ಯದ ಕುರಿತು ಸಾಮಾನ್ಯರಿಗೂ ತಿಳಿಯುವ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. …

Read More »

ಮಿಶ್ರ ಬೇಸಾಯದತ್ತ ಒಲವು ಬೆಳೆಸಿಕೊಂಡ ನೇಸರಗಿ ರೈತ ಈಶಪ್ರಭು ಬಾಬಾಗೌಡ ಪಾಟೀಲ, ‘ಬೆವರು ಹರಿಸಿದರೆ, ಒಕ್ಕಲುತನ ಕೈಹಿಡಿಯುತ್ತದೆ’ ಎಂದ

ನೇಸರಗಿ: ಮಿಶ್ರ ಬೇಸಾಯದತ್ತ ಒಲವು ಬೆಳೆಸಿಕೊಂಡ ನೇಸರಗಿ ಹೋಬಳಿ ವ್ಯಾಪ್ತಿಯ ಚಿಕ್ಕಬಾಗೇವಾಡಿ ಗ್ರಾಮದ ರೈತ ಈಶಪ್ರಭು ಬಾಬಾಗೌಡ ಪಾಟೀಲ, ತಮ್ಮ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ‘ಬೆವರು ಹರಿಸಿದರೆ, ಒಕ್ಕಲುತನ ಕೈಹಿಡಿಯುತ್ತದೆ’ ಎಂದು ಸಾರುತ್ತಿದ್ದಾರೆ.   14 ಎಕರೆ ಜಮೀನಿನ ಪೈಕಿ 3 ಎಕರೆಯಲ್ಲಿ ಗೋವಿನಜೋಳ, ಕಡಲೆ, 8 ಎಕರೆ ತೋಟದಲ್ಲಿ ಅಲ್ಫಾನ್ಸೋ ಮಾವು ಬೆಳೆದಿದ್ದಾರೆ. 3 ಎಕರೆಯಲ್ಲಿ ಕಾಜು(ಗೇರು), ಪೇರಲ, ನೆಲ್ಲಿಕಾಯಿ, ಅಂಜೂರ, ದಾಳಿಂಬೆ, …

Read More »

ಹಿಂಡಲಗಾ: ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ

ಬೆಳಗಾವಿ: ‘ಜಗತ್ತು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಂತೆ ಅದಕ್ಕೆ ಪೂರಕವಾಗಿ ನಾವೂ ನಮ್ಮನ್ನು ಹೊಂದಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಸ್ಮಾರ್ಟ್ ಕ್ಲಾಸ್‌ ವ್ಯವಸ್ಥೆ ಮೂಲಕ ಶಿಕ್ಷಣ ಒದಗಿಸಲು ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.   ಹಿಂಡಲಗಾ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಹಣ ಮಂಜೂರು ಮಾಡಿಸಿದ ಅನುದಾನದಲ್ಲಿ ನಿರ್ಮಿಸಲಾದ ನೂತನ ಸ್ಮಾರ್ಟ್ ಕ್ಲಾಸ್ …

Read More »

ಬೆಳಗಾವಿ: ಎಟಿಎಂ ಕಾರ್ಡ್ ಬದಲಿಸಿ ಹಣ ಲೂಟಿ- ಇಬ್ಬರ ಬಂಧನ

ಬೆಳಗಾವಿ: ಬೇರೆಯವರ ಎಟಿಎಂ ಕಾರ್ಡ್ ಬದಲಾಯಿಸಿ, ಹಣ ತೆಗೆದುಕೊಂಡ ಮಹಾರಾಷ್ಟ್ರದ ಇಬ್ಬರು ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್‌ ತಾಲ್ಲೂಕಿನ ನೇಸರಿಯ ಅಮೋಲ್ ಶೆಂಡೆ, ಸೊಲ್ಲಾಪುರ ಜಿಲ್ಲೆಯ ಕೇದಾರನಾಥ ನಗರದ ಶ್ರವಣ ಮಿನಜಗಿ ಬಂಧಿತರು.   ಇವರಿಬ್ಬರೂ ಬೆಳಗಾವಿಯ ನಿವಾಸಿ ಸೋಮಲಿಂಗ ಅಮ್ಮಣಗಿ ಅವರ ಎಟಿಎಂ ಕಾರ್ಡ್‌ ಬದಲಿಸಿ, ₹4.03 ಲಕ್ಷ ಹಣ ತೆಗೆದುಕೊಂಡಿದ್ದರು. ಈ ಬಗ್ಗೆ ‌2022ರ ನ.29ರಂದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ …

Read More »

ರೈತ ಯುವಕರ ಮದುವೆ ಆದ್ರೆ 2 ಲಕ್ಷ ರೂ. ಪ್ರೋತ್ಸಾಹಧನ: ಎಚ್‌.ಡಿ.ಕುಮಾರಸ್ವಾಮಿ

ಹಾಸನ: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನು ವಿವಾಹವಾಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು. ಹಾಸನ ಜಿಲ್ಲೆಗೆ ಪಂಚರತ್ನ ಯಾತ್ರೆ ಪ್ರವೇಶ ಮಾಡಿದ ಅರಸೀಕೆರೆ ತಾಲೂಕು ಕರಗುಂದ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಕಂಕಣಭಾಗ್ಯ ಕೂಡಿ ಬರಲಿ ಎಂದು ಅವಿವಾಹಿತ ರೈತ ಸಮುದಾಯದ ಯುವಕರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ …

Read More »

ರಾಜ್ಯಾದ್ಯಂತ ಕಾಂಗ್ರೆಸ್‌ ಪರ ಗಾಳಿ. ಪುಟ್ಟಣ್ಣ ಕಾಂಗ್ರೆಸ್‌ ಸೇರಿರುವುದೇ ಸಾಕ್ಷಿ: ಸಿದ್ದು

ಬೆಂಗಳೂರು: ರಾಜ್ಯಾದ್ಯಂತ ಕಾಂಗ್ರೆಸ್‌ ಪರ ಗಾಳಿ ಬೀಸುತ್ತಿದ್ದು, ಬಿಜೆಪಿ ಹಿರಿಯ ಮುಖಂಡ ಪುಟ್ಟಣ್ಣ ಅವರು 4 ವರ್ಷದ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿರುವುದೇ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.   ಕೆಪಿಸಿಸಿ ಕಚೇರಿಯಲ್ಲಿ ಪುಟ್ಟಣ್ಣ ಅವರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿ ಮಾತನಾಡಿದ ಅವರು, 4 ಬಾರಿ ಪರಿಷತ್‌ ಸದಸ್ಯರಾಗಿ, ಉಪಸಭಾಪತಿಯಾಗಿರುವ ಪುಟ್ಟಣ್ಣ ಅತ್ಯಂತ ಹಿರಿಯ ಹಾಗೂ ಅನುಭವಿ. ಶಿಕ್ಷಕರು, ಪದವೀಧರರು ಸೇರಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ …

Read More »

A.P.M.C. ಪೊಲೀಸರ ಕಾರ್ಯಾಚರಣೆ ಕುಖ್ಯಾತ ಅಂತರರಾಜ್ಯ ವಂಚಕರಬಂಧನ

ಬೆಳಗಾವಿ : ಎಪಿಎಮ್‌ಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಅಂತರರಾಜ್ಯ ವಂಚಕರನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು ರೂ.೬,೦೯,೦೦೦ ಮೌಲ್ಯದ ಬಂಗಾರ, ನಗದು & ಮೋಟರ್ ಸೈಕಲ್‌ಗಳನ್ನು ಜಪ್ತಿ ಮಾಡಿದ್ದಾರೆ. ದಿನಾಂಕ. ೨೯/೧೧/೨೦೨೨ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮುರಳಿಧರ ಕಾಲನಿಯ ಸೋಮಲಿಂಗ ಅಮ್ಮಣಗಿರವರ ಎ.ಟಿ.ಎಮ್ ಕಾರ್ಡನ್ನು ಬದಲಾಯಿಸಿಕೊಂಡು ಅವರ ಎ.ಟಿ.ಎಮ್ ಕಾರ್ಡಿಂದ ೪,೦೩,೭೮೯/- ರೂಗಳನ್ನು ತೆಗೆದುಕೊಂಡು ಮೋಸ ಮಾಡಿದ ಬಗ್ಗೆ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಪಿಐ ರಮೇಶ …

Read More »

170 ಕ್ಷೇತ್ರಗಳ ಅಭ್ಯರ್ಥಿ ಕುರಿತು ಚರ್ಚೆ ಮಾಡಲಾಗಿದ್ದು, ಇನ್ನು 50 ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಬಾಕಿ ಇದೆ ಎಂದ ಡಿ.ಕೆ.ಶಿ.

ಬೆಂಗಳೂರು: ಪಕ್ಷದ ಸ್ಕ್ರೀನಿಂಗ್ ಕಮಿಟಿ ಕಳೆದ ಮೂರು ದಿನಗಳಿಂದ ಸಭೆ ನಡೆಸುತ್ತಿದ್ದು, ಸುಮಾರು 170  ಕ್ಷೇತ್ರಗಳ ಅಭ್ಯರ್ಥಿ ಕುರಿತು ಚರ್ಚೆ ಮಾಡಲಾಗಿದ್ದು, ಇನ್ನು 50 ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಬಾಕಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. ಚರ್ಚೆಯಾಗಿರುವ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಿಕೊಟ್ಟಿದ್ದೇವೆ. ಎಲ್ಲ ಕಡೆಗಳಲ್ಲಿ ಒಮ್ಮತದ ತೀರ್ಮಾನವನ್ನು ತೆಗೆದುಕೊಂಡಿದ್ದು, ಎಲ್ಲ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದೆ. ಪಕ್ಷದಲ್ಲಿ ನಾಯಕರ ಸಂದಾನ ವಿಚಾರವಾಗಿ ಕೇಳಿದ …

Read More »

B,J,P,ಮೊದಲ ವಿಕೆಟ್ ಪತನ; M.L.C. ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಬಿಜೆಪಿಯ ಹಾಲಿ ಎಂಎಲ್ ಸಿ ಪುಟ್ಟಣ್ಣ ಅವರು ಇಂದು ತಮ್ಮ ಎಂ ಎಲ್ ಸಿ ಸ್ಥಾನಕ್ಕೆ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪಕ್ಷ ಸೇರಲು ಇಚ್ಛಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಪುಟ್ಟಣ್ಣ ಅವರ ಕೊಡುಗೆ ಅಪಾರವಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಸತತ ನಾಲ್ಕು ಬಾರಿ ಗೆಲವು ಸಾಧಿಸಿದ್ದಾರೆ. ಇನ್ನು ಕೆಲವು ವರ್ಷಗಳ ಕಾಲ ಅಧಿಕಾರವಿದ್ದರೂ ಬಿಜೆಪಿ ಆಡಳಿತಕ್ಕೆ ಬೇಸತ್ತು, ತಮ್ಮ ಕ್ಷೇತ್ರದ ಜನರಿಗೆ ನ್ಯಾಯ …

Read More »